ವೀಡಿಯೊ..| ಮಗುವನ್ನು ಎದೆಗವಚಿಕೊಂಡು ಲಾಠಿ ಹಿಡಿದು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ನಿಯಂತ್ರಿಸುತ್ತಿರುವ ಮಹಿಳಾ ಕಾನ್​ಸ್ಟೆಬಲ್…!

ನವದೆಹಲಿ: ರೈಲ್ವೆ ಸಂರಕ್ಷಣಾ ವಿಶೇಷ ಪಡೆ (ಆರ್‌ಪಿಎಸ್‌ಎಫ್) ಮಹಿಳಾ ಕಾನ್‌ಸ್ಟೆಬಲ್ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಎದೆಗವಚಿಕೊಂಡು ಪ್ರಯಾಣಿಕರ ರಕ್ಷಣೆಗಾಗಿ ಗಸ್ತು ತಿರುಗುತ್ತಿರುವ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಮಗುವನ್ನು ಎದೆಗಚಿಕೊಂಡು ಒಂದು ಕೈಯಲ್ಲಿ ಲಾಠಿ ಹಿಡಿದು ಜನಸಂದಣಿಯನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. “ಅವಳು ಕೆಲಸ ಮಾಡುತ್ತಾಳೆ, ಅವಳು ಪೋಷಿಸುತ್ತಾಳೆ, ಅವಳು ಎಲ್ಲವನ್ನೂ ಮಾಡುತ್ತಾಳೆ… ತಾಯಿ, … Continued

ವೀಡಿಯೊಗಳು…| ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಮಗುಚಿ ಬಿದ್ದ ಡೆಲ್ಟಾ ವಿಮಾನ; 19 ಮಂದಿಗೆ ಗಾಯ

ಹಿಮಪಾತದ ನಂತರ ಸೋಮವಾರ ಕೆನಡಾದ ಟೊರೊಂಟೊ ಪಿಯರ್‌ಸನ್ ವಿಮಾನ ನಿಲ್ದಾಣದ ಹಿಮದಿಂದ ಆವೃತವಾದ ರನ್‌ವೇಯಲ್ಲಿ ಇಳಿಯುವಾಗ ಡೆಲ್ಟಾ ಏರ್‌ಲೈನ್ಸ್ ಜೆಟ್ ತಲೆಕೆಳಗಾಗಿ ಪಲ್ಟಿಯಾಗಿದ್ದು, ಅದರಲ್ಲಿದ್ದ 80 ಜನರಲ್ಲಿ 19 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಿನ್ನಿಯಾಪೋಲಿಸ್‌ ಡೆಲ್ಟಾ ವಿಮಾನದಲ್ಲಿ “ಘಟನೆ” ಸಂಭವಿಸಿದೆ ಎಂದು ವಿಮಾನನಿಲ್ದಾಣವು ಎಕ್ಸ್‌ ಪೋಸ್ಟ್‌ನಲ್ಲಿ ದೃಢಪಡಿಸಿದೆ. ಗಾಯಗೊಂಡವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು … Continued

ಇದು ಪೈಸೆ ವಾಲಿ ಕಾರ್‌ | ಒಂದು ರೂಪಾಯಿ ನಾಣ್ಯದಿಂದಲೇ ಕಾರನ್ನು ಅಲಂಕರಿಸಿದ ವ್ಯಕ್ತಿ ; ವೀಡಿಯೊ ವೈರಲ್

ಈಗಿನ ಕಾಲಘಟ್ಟದಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಏನಾದರೂ ವಿಚಿತ್ರವಾದದ್ದನ್ನು ಮಾಡಲು ಯೋಚಿಸುತ್ತಾರೆ. ಈಗ ಇದೇ ತರಹ ಕಾರಿಗೆ ಸಂಬಂಧಿಸಿದ ವಿಡಿಯೋವೊಂದು ಹೊರಬಿದ್ದಿದೆ. ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ಸಂಪೂರ್ಣ ಕಾರನ್ನು ಒಂದು ರೂ. ನಾಣ್ಯಗಳಿಂದ ಅಲಂಕರಿಸಿದ್ದಾರೆ. ಒಂದು ರೂಪಾಯಿ ನಾಣ್ಯದಿಂದ ಅಲಂಕರಿಸಲಾದ ಈ ಕಾರಿನ ವಿನ್ಯಾಸವನ್ನು ನೋಡಿದ ಜನರು ಅಚ್ಚರಿಪಟ್ಟಿದ್ದಾರೆ, ಇದಕ್ಕೆ ಕಾರಣ ನಾಣ್ಯಗಳನ್ನು … Continued

ವೀಡಿಯೊ…| ಬೃಹತ್‌ ತಿಮಿಂಗಿಲ ತನ್ನ ಮಗನನ್ನು ನುಂಗಿದ ಭಯಾನಕ ಕ್ಷಣ ವೀಡಿಯೊ ಮಾಡುತ್ತಿದ್ದ ತಂದೆ…! ಮುಂದಾಗಿದ್ದು ಮಾತ್ರ…..ವೀಕ್ಷಿಸಿ

ಚಿಲಿಯ ಬಹಿಯಾ ಎಲ್ ಅಗುಯಿಲಾ ಎಂಬಲ್ಲಿ 24 ವರ್ಷದ ವ್ಯಕ್ತಿ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ ಬೃಹತ್‌ ಹಂಪ್‌ಬ್ಯಾಕ್ ತಿಮಿಂಗಿಲವು ಆತನನ್ನು ಹಳದಿ ಬಣ್ಣದ ದೋಣಿ ಸಮೇತವಾಗಿ ನುಂಗಿದ್ದು, ನಂತರ ಹೊರಕ್ಕೆ ಉಗುಳಿದ ಅಪರೂಪದ ಘಟನೆ ನಡೆದಿದೆ. ಚಿಲಿಯ ದಕ್ಷಿಣದ ಪ್ಯಾಟಗೋನಿಯಾ ಪ್ರದೇಶದ ಮೆಗೆಲ್ಲನ್ ಜಲಸಂಧಿಯ ಸ್ಯಾನ್ ಇಸಿಡ್ರೊ ಲೈಟ್‌ಹೌಸ್ ಬಳಿ ಶನಿವಾರ ಈ ಘಟನೆ … Continued

ವೀಡಿಯೊ…| ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌‌ ಸ್ಫೋಟ; ಆಸ್ಪತ್ರೆಗೆ ದಾಖಲು ; ಆಘಾತಕಾರಿ ದೃಶ್ಯ ವೈರಲ್‌

ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಸ್ಥಳೀಯ ದಿನಸಿ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಪ್ಯಾಂಟಿನ ಹಿಂದಿನ ಜೇಬಿನಲ್ಲಿದ್ದ ಸ್ಮಾರ್ಟ್‌ಫೋನ್ ಸ್ಫೋಟಗೊಂಡಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರೆಜಿಲ್‌ನ ಅನಾಪೊಲಿಸ್‌ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಆಕೆ ತನ್ನ ಪತಿಯೊಂದಿಗೆ ದಿನಸಿ ಅಂಗಡಿಗೆ ಬಂದಿದ್ದರು. ಇದ್ದಕ್ಕಿದ್ದಂತೆ, ಅವರ ಪ್ಯಾಂಟ್‌ನಿಂದ ಹೊಗೆ ಹೊರಹೊಮ್ಮಲು ಪ್ರಾರಂಭಿಸಿತು, ನಂತರ ಅವರು ಬೆನ್ನಿನ ಕೆಳಭಾಗದಿಂದ ಜ್ವಾಲೆಯು … Continued

ವೀಡಿಯೊಗಳು…| ಮದುವೆ ಮಂಟಪಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಚಿರತೆ ; ಅರಣ್ಯ ಸಿಬ್ಬಂದಿ ಮೇಲೆ ದಾಳಿ-ಗಾಯ

ಮದುವೆ ಮನೆಗೆ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಲಕ್ನೋದ ಪಾರಾ ಪ್ರದೇಶದಲ್ಲಿ ನಡೆದಿದೆ. ಲಕ್ನೋ ನಗರದ ಬುದ್ಧೇಶ್ವರ ರಿಂಗ್ ರಸ್ತೆಯ ಎಂಎಂ ಲಾನ್‌ನಲ್ಲಿ ಬುಧವಾರ ರಾತ್ರಿ 11: 40 ರ ಸುಮಾರಿಗೆ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಮದುವೆಗೆ ಬಂದ ನೂರಾರು ಅತಿಥಿಗಳು ಗಾಬರಿಗೊಂಡು ಪಾರಾಗಲು ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಚಿರತೆ ದಾಳಿಯಿಂದ … Continued

ಆಘಾತಕಾರಿ ವೀಡಿಯೊ…| ಮಣಿಪುರದಲ್ಲಿ ಎಕೆ-47 ರೈಫಲ್‌ ಗಳನ್ನು ಹಿಡಿದು ಮೈದಾನದಲ್ಲಿ ಫುಟ್ಬಾಲ್ ಆಡಿದ ಆಟಗಾರರು..! ವೀಡಿಯೊ ವೈರಲ್

ಫುಟ್​ಬಾಲ್ ಪಂದ್ಯದ ವೇಳೆ ಆಟಗಾರರು ರೈಫಲ್ ಹಿಡಿದು ಕಣಕ್ಕಿಳಿದ ಘಟನೆ ನಡೆದಿದೆ. ಈ ವಿದ್ಯಮಾನ ಭಾರತದಲ್ಲಿಯೇ ನಡೆದಿದ್ದು, ನಡೆದಿರುವುದು ಮಣಿಪುರದಲ್ಲಿ ನಡೆದ ಫುಟ್​ಬಾಲ್ ಪಂದ್ಯದ ವೇಳೆ ತಂಡವೊಂದರ ಆಟಗಾರರು ಎಕೆ-47 ರೈಫಲ್‌ಗಳನ್ನು ಹಿಡಿದು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹಸಿರು ಫುಟ್‌ಬಾಲ್ ಜರ್ಸಿ, ಮೊಣಕಾಲು ಎತ್ತರದ ಸಾಕ್ಸ್ ಮತ್ತು ಶಾರ್ಟ್ಸ್ ಧರಿಸಿದ ವ್ಯಕ್ತಿಯೊಬ್ಬ ಧೂಳಿನ ಮೈದಾನದಲ್ಲಿ ಫುಟ್‌ಬಾಲ್ ಪಂದ್ಯಕ್ಕೆ … Continued

ವೀಡಿಯೊ..| ಹಿಮ ತುಂಬಿದ ಕಾಡಿನಲ್ಲಿ ಕಾಣಿಸಿಕೊಂಡ ಅಪರೂಪದ ಬಿಳಿ ಬಣ್ಣದ ಜಿಂಕೆ ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಜಿಂಕೆ ಎಂದರೆ ಮೈ ತುಂಬಾ ಚುಕ್ಕಿ ಇರುವ ಮುದ್ದಾದ ಪ್ರಾಣಿ ಎಂದೇ ಹೆಚ್ಚಾಗಿ ಭಾವಿಸುತ್ತಾರೆ. ಆದರೆ ಅಪರೂಪದ ಬಳಿ ಬಣ್ಣದ ಅಲ್ಬಿನೋ ಜಿಂಕೆ ಹಿಮಭರಿತ ಕಾಡಿನಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೈರಲ್ ಆಗಿರುವ ವೀಡಿಯೊದಲ್ಲಿ ಹಿಮ ತುಂಬಿದ ಕಾಡಿನಲ್ಲಿ ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಸಂಪೂರ್ಣವಾಗಿ ಬಿಳಿ ಬಣ್ಣದ ಜಿಂಕೆ ನಿಂತುಕೊಂಡಿತ್ತು. ನಂತರ ಸ್ವಲ್ಪ ಸಮಯದ … Continued

ವೀಡಿಯೊ | ಬೇಟೆಯಲ್ಲಿ ಎಡವಟ್ಟು ; ಕಾಡುಹಂದಿ ಸಮೇತ ಬಾವಿಗೆ ಬಿದ್ದ ಬೃಹತ್‌ ಹುಲಿ…! ಬಾವಿಯೊಳಗೆ ಥಂಡಾ ಥಂಡಾ…ಕೂಲ್‌ ಕೂಲ್‌..!

ಸಿಯೋನಿ: ಅಪರೂಪದ ವಿದ್ಯಮಾನವೊಂದರಲ್ಲಿ ಕಾಡುಹಂದಿಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದ ಹುಲಿಯೊಂದು ಹಂದಿ ಸಮೇತ ಬಾವಿಗೆ ಬಿದ್ದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಕಾಡು ಹಂದಿಯನ್ನು ಬೇಟೆಯಾಡುವ ಭರಾಟೆಯಲ್ಲಿ ಹುಲಿ ನಿಯಂತ್ರಣ ಕಳೆದುಕೊಂಡು ಹಂದಿ ಜೊತೆಗೇ ಬಾವಿಗೆ ಬಿದ್ದಿದ್ದು, ನಂತರ ಹುಲಿ ಮತ್ತೆ ಹಂದಿ ಒಟ್ಟಿಗೆ … Continued

ವೀಡಿಯೊ…| ಪಂದ್ಯ ಸೋತ ನಂತರ ರೆಫರಿ ಎದೆಗೆ ಒದ್ದ ಕುಸ್ತಿಪಟು….! ವೀಡಿಯೊ ವೈರಲ್‌

ಮುಂಬೈ : 67ನೇ ‘ಮಹಾರಾಷ್ಟ್ರ ಕೇಸರಿ’ ಕುಸ್ತಿ ಸ್ಪರ್ಧೆಯ ಅಂತಿಮ ಪಂದ್ಯವು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ಸೋತ ಕುಸ್ತಿಪಟು ರೆಫರಿಯ ಎದೆಯ ಮೇಲೆ ಒದ್ದ ಘಟನೆ ನಡೆದಿದೆ. ಮತ್ತು ಇನ್ನೊಬ್ಬ ಕುಸ್ತಿಪಟು ಅಂಕಗಳನ್ನು ಕಳೆದುಕೊಂಡಿದ್ದಕ್ಕಾಗಿ ರೆಫರಿಯನ್ನು ನಿಂದಿಸಿದ ವಿದ್ಯಮಾನವೂ ನಡೆದಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ್ ಮತ್ತು ಕೇಂದ್ರ ಸಚಿವ ಮುರಳೀಧರ ಮೊಹೋಲ್ ಅವರ ಸಮ್ಮುಖದಲ್ಲಿ … Continued