ವೀಡಿಯೊ..| ಕಳೆದ ವರ್ಷ ಅಕ್ಟೋಬರ್ 7ರ ದಾಳಿ ಮೊದಲು ಹಮಾಸ್ ಮುಖ್ಯಸ್ಥ ಸಿನ್ವಾರ್ ಗಾಜಾದ ಭೂಗತ ಸುರಂಗಕ್ಕೆ ಹೋದ ವೀಡಿಯೊ ಹಂಚಿಕೊಂಡ ಇಸ್ರೇಲ್

ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಸಾಮೂಹಿಕವಾಗಿ ಜನರನ್ನು ಹತ್ಯೆ ನಡೆಸಿದ ಹಮಾಸ್‌ ಗುಂಪಿನ ದಾಳಿಯ ಸಂಚಿನ ರೂವಾರಿ ಎಂದೇ ಇಸ್ರೇಲಿನಿಂದ ಬಿಂಬಿತವಾಗಿರುವ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಈ ದಾಳಿ ನಡೆಸುವ ಕೆಲವೇ ಗಂಟೆಗಳ ಮುನ್ನ ಗಾಜಾದ ಭೂಗತ ಸುರಂಗಕ್ಕೆ ತನ್ನ ಕುಟುಂಬ ಹಾಗೂ ವಸ್ತುಗಳನ್ನು ಸಾಗಿಸುತ್ತಿರುವ ದೃಶ್ಯವನ್ನು ಇಸ್ರೇಲ್ ಶನಿವಾರ ಬಿಡುಗಡೆ ಮಾಡಿದೆ. … Continued

ವೀಡಿಯೊ..| ಹಮಾಸ್ ಮುಖ್ಯಸ್ಥನ ಹತ್ಯೆಯ ನಂತರ ಇಸ್ರೇಲ್ ಪ್ರಧಾನಿ ಮನೆ ಮೇಲೆ ಹಿಜ್ಬೊಲ್ಲಾ ಡ್ರೋನ್ ದಾಳಿ ವಿಫಲಗೊಳಿಸಿದ ಭದ್ರತಾ ಸಿಬ್ಬಂದಿ

ಟೆಲ್ ಅವೀವ್: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಗೆ ಪ್ರತಿಕಾರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆ ಮೇಲೆ ಡ್ರೋನ್ ದಾಳಿ ನಡೆಸಿರುವ ಹಿಜ್ಬೊಲ್ಲಾ ಉಗ್ರಸಂಘಟನೆ ಪ್ರಯತ್ನವನ್ನು ಇಸ್ರೇಲ್‌ ಭದ್ರತಾ ಸಿಬ್ಬಂದಿ ಇದನ್ನು ವಿಫಲಗೊಳಿಸಿವೆ. ಅವರು ಡ್ರೋನ್ ಹೊಡೆದುರುಳಿಸುವ ಮೂಲಕ‌ ಹತ್ಯೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸವನ್ನು … Continued

ವೀಡಿಯೊ: ಹಮಾಸ್ ಮುಖ್ಯಸ್ಥನನ್ನು ಸಾಯಿಸಿದ ಟ್ಯಾಂಕ್ ದಾಳಿಯ ವೀಡಿಯೊ ಹಂಚಿಕೊಂಡ ಇಸ್ರೇಲ್

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರನ್ನು ದಕ್ಷಿಣ ಗಾಜಾದ ರಫಾದಲ್ಲಿ ನಡೆಸಿದ ಭೂ ದಾಳಿಯಲ್ಲಿ ಇಸ್ರೇಲ್‌ ಕೊಂದು ಹಾಕಿದೆ. ಇಸ್ರೇಲ್‌ನ 828 ನೇ ಬ್ರಿಗೇಡ್ “ಗುಪ್ತಚರ ಆಧಾರಿತ ದಾಳಿಗಳನ್ನು” ನಡೆಸಿದ ವೇಳೆ ಸಿನ್ವಾರ್‌ ಕೊಲ್ಲಲ್ಪಟ್ಟಿದ್ದಾರೆ. ರಫಾದಲ್ಲಿನ ಹಮಾಸ್ ಮುಖ್ಯಸ್ಥನ ಅಡಗುತಾಣದ ಮೇಲೆ ಇಸ್ರೇಲಿ ಟ್ಯಾಂಕ್ ನಡೆಸಿದ ದಾಳಿಯ ವೀಡಿಯೊವನ್ನು ಐಡಿಎಫ್‌ (IDF) ಹಂಚಿಕೊಂಡಿದೆ. ಡ್ರೋನ್ ಫೂಟೇಜ್ … Continued

ತಲೆಯೊಳಗೆ ಗುಂಡು, ಕತ್ತರಿಸಲ್ಪಟ್ಟ ಬೆರಳು….: ಹಮಾಸ್‌ ಮುಖ್ಯಸ್ಥನ ಶವಪರೀಕ್ಷೆಯ ವಿವರಗಳು

ಇಸ್ರೇಲ್ ನಡೆಸಿದ ಶವಪರೀಕ್ಷೆಯಲ್ಲಿ ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ತಲೆಗೆ ಗುಂಡೇಟು ತಗುಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಕಂಡುಬಂದಿದೆ. ಇಸ್ರೇಲ್ ನ್ಯಾಷನಲ್ ಸೆಂಟರ್ ಆಫ್ ಫೋರೆನ್ಸಿಕ್ ಮೆಡಿಸಿನ್‌ನ ಪರಿಣಿತರು ಹಮಾಸ್ ನಾಯಕನ ಮೃತದೇಹವು ಕೈ ಬೆರಳನ್ನು ಕತ್ತರಿಸಿದ ಸ್ಥಿತಿಯಲ್ಲಿ ತಮ್ಮಲ್ಲಿಗೆ ಬಂದಿತ್ತು ಎಂದು ಹೇಳಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಡಿಎನ್‌ಎ ವಿಶ್ಲೇಷಣೆಗಾಗಿ ಸಿನ್ವಾರ್‌ನ ಬೆರಳನ್ನು ಕತ್ತರಿಸಿದೆ … Continued

ʼಸಿಖ್‌ ಫಾರ್ ಜಸ್ಟಿಸ್ʼ ಸಂಘಟನೆ ಕೆನಡಾ ಪ್ರಧಾನಿ ಕಚೇರಿಯೊಂದಿಗೆ 3 ವರ್ಷಗಳಿಂದ ಸಂಪರ್ಕದಲ್ಲಿದೆ : ಒಪ್ಪಿಕೊಂಡ ಖಲಿಸ್ತಾನಿ ಭಯೋತ್ಪಾದಕ ಪನ್ನುನ್

ಖಲಿಸ್ತಾನಿ ಭಯೋತ್ಪಾದಕ ಗುರ್ಪತವಂತ್ ಸಿಂಗ್ ಪನ್ನುನ್, ತನ್ನ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ತನ್ನ ಸಹಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತದ ವಿರುದ್ಧ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ. ಕೆನಡಾದ ಬ್ರಾಡ್‌ಕಾಸ್ಟರ್ ಸಿಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಲಾಗಿದೆ. ಪನ್ನುನ್ ಅವರು … Continued

ಪಾಕಿಸ್ತಾನದಲ್ಲಿ 5 ದಿನ ಲಾಕ್‌ಡೌನ್‌.. ಶಾಲಾ-ಕಾಲೇಜು ಬಂದ್‌; ಮದುವೆ-ಸಮಾರಂಭ ಬ್ಯಾನ್‌, ಭದ್ರತೆ ಸೇನೆ ನಿಯಂತ್ರಣಕ್ಕೆ

ಇಸ್ಲಾಮಾಬಾದ್: ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯ ಭದ್ರತೆಗಾಗಿ ಸೇನೆಯನ್ನು ನಿಯೋಜಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 15 ಮತ್ತು 16 ರಂದು ಎಸ್‌ಸಿಒ ಶೃಂಗಸಭೆ ನಡೆಯಲಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ಪ್ರಧಾನಿ ಲಿ ಕಿಯಾಂಗ್ ಸೇರಿದಂತೆ ವಿಶ್ವದ ಹಲವು ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಮ್ರಾನ್ ಖಾನ್ ಅವರ ಪಕ್ಷದ ಬೆಂಬಲಿಗರ … Continued

ಮೂವರಿಗೆ ಈ ವರ್ಷದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ

ಸ್ಟಾಕ್ಹೋಮ್ (ಸ್ವೀಡನ್‌): 2024ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಡಾರೊನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ಎ. ರಾಬಿನ್ಸನ್ ಅವರಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಡೇರಾನ್ ಅಸೆಮೊಗ್ಲು ಮತ್ತು ಸೈಮನ್ ಜಾನ್ಸನ್ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದರೆ, ಜೇಮ್ಸ್ ರಾಬಿನ್ಸನ್ ಚಿಕಾಗೋ ವಿಶ್ವವಿದ್ಯಾಲಯದಲ್ಲಿದ್ದಾರೆ. “ಸಂಸ್ಥೆಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಸಮೃದ್ಧಿಯ ಮೇಲೆ … Continued

ಮೊದಲನೇ ಅಲೆ ಕೋವಿಡ್-19 ಸೋಂಕುಗಳಿಂದ ಹೃದಯಾಘಾತ, ಪಾರ್ಶ್ವವಾಯು ಅಪಾಯ ಹೆಚ್ಚಳ ; ಹೊಸ ಅಧ್ಯಯನ

ಸಾಂಕ್ರಾಮಿಕ ರೋಗದ ಆರಂಭಿಕ ಅಲೆಯಲ್ಲಿ ತೀವ್ರವಾದ ಕೋವಿಡ್ -19 ಸೋಂಕಿಗೆ ಒಳಗಾದ ವ್ಯಕ್ತಿಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಎರಡು ಪಟ್ಟು ಅಪಾಯ ಎದುರಿಸಬೇಕಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಆರ್ಟೆರಿಯೊಸ್ಕ್ಲೆರೋಸಿಸ್, ಥ್ರಂಬೋಸಿಸ್ ಮತ್ತು ನಾಳೀಯ ಜೀವಶಾಸ್ತ್ರದ ಜರ್ನಲ್‌ನಲ್ಲಿ ಈ ವಾರ ಪ್ರಕಟವಾದ ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಿಂದ ಬೆಂಬಲಿತವಾದ ಸಂಶೋಧನೆಯು ಹೆಚ್ಚಿದ ಅಪಾಯವು … Continued

ಸೈಬರ್‌ ಕ್ಯಾಬ್ ವೀಡಿಯೊ… | ಟೆಸ್ಲಾದಿಂದ ಚಾಲಕರಹಿತ ಕಾರು ʼರೋಬೊ ಟ್ಯಾಕ್ಸಿʼ ಅನಾವರಣ ; ಇದರ ವೈಶಿಷ್ಟ್ಯವೇನು..?

ಲಾಸ್‌ ಏಂಜಲೀಸ್‌ : ಸ್ಟೀರಿಂಗ್ ಚಕ್ರಗಳು ಅಥವಾ ಪೆಡಲ್‌ಗಳಂತಹ ಸಾಂಪ್ರದಾಯಿಕ ನಿಯಂತ್ರಣಗಳಿಲ್ಲದೆ ವಿನ್ಯಾಸಗೊಳಿಸಲಾದ ಸಂಪೂರ್ಣ ಆಟೊಮೆಟಿಕ್‌ ವಾಹನ “ಸೈಬರ್‌ಕ್ಯಾಬ್” ಅನ್ನು ಅನಾವರಣಗೊಳಿಸುವ ಮೂಲಕ ಮಸ್ಕ್ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದ್ದಾರೆ. ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ ಅಭಿವೃದ್ಧಿಪಡಿಸಿರುವ ಚಾಲಕರಹಿತ ರೋಬೊ ಟ್ಯಾಕ್ಸಿಯನ್ನು ಹಾಲಿವುಡ್‌ ಸ್ಟುಡಿಯೊದಲ್ಲಿ ಅನಾವರಣ ಮಾಡಲಾಗಿದ್ದು, ‘ಕಂಪನಿಯು 2026ರಿಂದ ರೋಬೊ ಟ್ಯಾಕ್ಸಿಗಳ … Continued

ಜಪಾನಿನ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಗೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ

ಓಸ್ಲೋ : ಜಪಾನ್‌ನ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪರಮಾಣು ಶಸ್ತ್ರಾಸ್ತ್ರ ಮುಕ್ತ ಜಗತ್ತನ್ನು ನಿರ್ಮಿಸಲು ದಣಿವರಿಯದ ಪ್ರಯತ್ನಗಳಿಗಾಗಿ ಈ ಬಹುಮಾನವನ್ನು ನೀಡಲಾಗಿದೆ ಎಂದು ನೊಬೆಲ್ ಸಮಿತಿಯ ಅಧ್ಯಕ್ಷ ಜಾರ್ಗೆನ್ ವಾಟ್ನೆ ಫ್ರೈಡ್ನೆಸ್ ತಿಳಿಸಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನಕ್ಕಾಗಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ … Continued