ಬಾಂಗ್ಲಾದೇಶದ ಚಟ್ಟೋಗ್ರಾಮದಲ್ಲಿ 3 ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ಹಾನಿ ಮಾಡಿದ ಗುಂಪು..

ಢಾಕಾ: ಹಿಂದೂ ಧಾರ್ಮಿಕ ನಾಯಕ ಚಿನ್ಮಯ ಕೃಷ್ಣ ದಾಸ್‌ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿದಾಗಿನಿಂದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಬಾಂಗ್ಲಾದೇಶದ ಚಟ್ಟೋಗ್ರಾಮದಲ್ಲಿ ಶುಕ್ರವಾರ ಮೂರು ಹಿಂದೂ ದೇವಾಲಯಗಳಿಗೆ ಹಾನಿ ಮಾಡಲಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ಬಂದರು ನಗರದ ಹರೀಶ್ ಚಂದ್ರ ಮುನ್ಸೆಫ್ ಲೇನ್‌ನಲ್ಲಿ ಮಧ್ಯಾಹ್ನ ಶುಕ್ರವಾರ 2:30 ರ ಸುಮಾರಿಗೆ ದಾಳಿ ನಡೆದಿದ್ದು, … Continued

ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌

ಢಾಕಾ : ಬಾಂಗ್ಲಾದೇಶದ ಹೈಕೋರ್ಟ್ ಗುರುವಾರ ದೇಶದಲ್ಲಿ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಕೃಷ್ಣ ಕಾನ್ಶಿಯಸ್ನೆಸ್ (ISKCON) ಚಟುವಟಿಕೆಗಳನ್ನು ನಿಷೇಧಿಸಲು ನಿರಾಕರಿಸಿದೆ. ಇದರಿಂದಾಗಿ ಇಸ್ಕಾನ್ ಧಾರ್ಮಿಕ ಮೂಲಭೂತವಾದಿ ಸಂಘಟನೆಯಾಗಿದ್ದು, ಇದು ದೇಶಕ್ಕೆ ಅಪಾಯಕಾರಿ ಎಂದು ಆರೋಪಿಸಿ ಇಸ್ಕಾನ್‌ ಸಂಸ್ಥೆಯನ್ನು ನಿಷೇಧಿಸಲು ಮುಂದಾಗಿದ್ದ ಬಾಂಗ್ಲಾದೇಶ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಇಸ್ಕಾನ್ ಅನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ … Continued

ವೀಡಿಯೊ..| ಪಾಕಿಸ್ತಾನ | ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು 25 ಅಡಿ ಎತ್ತರದ ಕಂಟೈನರ್‌ ನಿಂದ ಕೆಳಕ್ಕೆ ದೂಡಿದ ಸೇನೆ

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆತಂಕಕಾರಿ ಘಟನೆಯೊಂದರಲ್ಲಿ ಭದ್ರತಾ ಪಡೆಗಳು ಪ್ರಾರ್ಥನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು 25 ಅಡಿ ಎತ್ತರದ ಸರಕು ಸಾಗಣೆ ಕಂಟೈನರ್‌ ನಿಂದ ವ್ಯಕ್ತಿಯೊಬ್ಬನನ್ನು ಕೆಳಕ್ಕೆ ತಳ್ಳಿವೆ. ತನ್ನ ಅಧಿಕಾರಾವಧಿಯಲ್ಲಿ 140 ಮಿಲಿಯನ್ ರೂಪಾಯಿಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ 2023 ರ ಆಗಸ್ಟ್‌ನಿಂದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು … Continued

ತನ್ನ ಮಾಜಿ ಗೆಳೆಯನ 5900 ಕೋಟಿ ರೂ. ಮೌಲ್ಯದ ಬಿಟ್‌ ಕಾಯಿನ್ ಸಂಪತ್ತಿನ ಹಾರ್ಡ್‌ ಡ್ರೈವ್‌ ಅನ್ನು ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದ ಮಹಿಳೆ….!

ಮಹಿಳೆಯೊಬ್ಬರು ತನ್ನ ಮಾಜಿ ಗೆಳೆಯ ಜೇಮ್ಸ್ ಹೋವೆಲ್ಸ್ ಕಳೆದುಕೊಂಡ ಬಿಟ್‌ಕಾಯಿನ್ ಸಂಪತ್ತನ್ನು ಹೊಂದಿದ್ದ ಹಾರ್ಡ್ ಡ್ರೈವ್ ಅನ್ನು ಆಕಸ್ಮಿಕವಾಗಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈಗ ಆ ಬಿಟ್‌ಕಾಯಿನ್‌ಗಳ ಮಾರುಕಟ್ಟೆಯ ಮೌಲ್ಯ 5,900 ಕೋಟಿ ರೂಪಾಯಿ (569 ಮಿಲಿಯನ್ ಪೌಂಡ್‌ಗಳು)  ಎಂದು ಹೇಳಲಾಗಿದೆ. ಜೇಮ್ಸ್ ಹೋವೆಲ್ಸ್ ಅವರ ಇಬ್ಬರು ಹದಿಹರೆಯದ ಪುತ್ರರ ತಾಯಿಯಾದ ಹಾಲ್ಫಿನಾ ಎಡ್ಡಿ-ಇವಾನ್ಸ್ ಸುಮಾರು ಒಂದು … Continued

ಇಸ್ಕಾನ್ ಮೂಲಭೂತವಾದಿ ಸಂಘಟನೆ : ನ್ಯಾಯಾಲಯಕ್ಕೆ ತಿಳಿಸಿದ ಬಾಂಗ್ಲಾದೇಶ ಸರ್ಕಾರ…!

ನವದೆಹಲಿ: ಬಾಂಗ್ಲಾದೇಶವು ಆ ದೇಶದ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇಸ್ಕಾನ್ ಅನ್ನು “ಧಾರ್ಮಿಕ ಮೂಲಭೂತವಾದಿ” ಸಂಘಟನೆ ಎಂದು ಕರೆದಿದೆ. ಆಗಸ್ಟ್‌ನ ವಿದ್ಯಾರ್ಥಿಗಳ ನೇತೃತ್ವದ ದಂಗೆ ಆಗಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಅಧಿಕಾರದಲ್ಲಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ “ಇಸ್ಕಾನ್ ಬಗ್ಗೆ ಪರಿಶೀಲನೆ ನಡೆಸುತ್ತಿದೆ ” ಎಂದು ಹೇಳಿದರು. ಇದು ಸೋಮವಾರದಂದು ಹಿಂದೂ ಸ್ವಾಮೀಜಿ … Continued

ವೀಡಿಯೊ…| ಬಾಂಗ್ಲಾದೇಶದ ಬಂಧಿತ ಹಿಂದೂ ಧಾರ್ಮಿಕ ಸಂತನ ಬೆಂಬಲಿಗರನ್ನು ನ್ಯಾಯಾಲಯದ ಹೊರಗೆ ಥಳಿಸಿದ ಪೊಲೀಸರು…

ಚಟ್ಟೋಗ್ರಾಮ (ಬಾಂಗ್ಲಾದೇಶ) : ಮಂಗಳವಾರ ಬಾಂಗ್ಲಾದೇಶದ ಚಟ್ಟೋಗ್ರಾಮದ ನ್ಯಾಯಾಲಯದ ಹೊರಗೆ ಬಂಧಿತ ಹಿಂದೂ ಸಂತ ಚಿನ್ಮಯ ಕೃಷ್ಣ ದಾಸ ಅವರ ಬೆಂಬಲಿಗರು ಮತ್ತು ಪೊಲೀಸರು ನಡುವೆ ಘರ್ಷಣೆಗಳು ನಡೆದವು. ಅಲ್ಪಸಂಖ್ಯಾತ ಹಿಂದೂ ಸಮುದಾಯದವರು ಎಂದು ನಂಬಲಾದ ನೂರಾರು ಜನರು, ಇಸ್ಕಾನ್ ಸ್ವಾಮೀಜಿ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಿರುವುದನ್ನು ವಿರೋಧಿಸಿ ನ್ಯಾಯಾಲಯದ ಆವರಣದ ಹೊರಗೆ ಜಮಾಯಿಸಿದ್ದರು. ಬಾಂಗ್ಲಾದೇಶ … Continued

ವೀಡಿಯೊ…| ಭೂಮಿಯೊಳಗೆ 200 ಅಡಿ ಆಳದಲ್ಲಿ 15 ಅಂತಸ್ತಿನ ಬೃಹತ್‌ ಕಟ್ಟಡ ನಿರ್ಮಾಣ; ಇದರಲ್ಲಿದೆ ಸೂಪರ್ ಮಾರ್ಕೆಟ್…ಈಜುಕೊಳ…ಜಿಮ್‌…

ರಾಷ್ಟ್ರಗಳ ನಡುವಿನ ಘರ್ಷಣೆಗಳು ಹೆಚ್ಚು ಸಾಮಾನ್ಯವಾಗಿರುವ ಈ ಕಾಲಘಟ್ಟದಲ್ಲಿ ಬಾಂಬ್ ಸ್ಫೋಟ, ಕ್ಷಿಪಣಿ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಬಂಕರ್‌ಗಳನ್ನು ನಿರ್ಮಿಸುತ್ತಾರೆ. ಅಲ್ಲದೆ, ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯಿಂದ ಪಾರಾಗಲು ಬಂಕರ್‌ಗಳನ್ನು (15 ಅಡಿ ಆಳದಲ್ಲಿ) ಅಮೆರಿಕದಲ್ಲಿ ನಿರ್ಮಿಸಲಾಗಿದೆ. ಆದರೆ ಇದು ಕೇವಲ ಬಂಕರ್‌ ಅಲ್ಲ, 15 ಅಂತಸ್ತಿನ ಕಟ್ಟಡವನ್ನೇ ಭೂಮಿಯ ಕೆಳಗೆ ನಿರ್ಮಿಸಲಾಗಿದೆ…! ಪರಮಾಣು ದಾಳಿಯಿಂದ ರಕ್ಷಿಸಿಕೊಳ್ಳಲು … Continued

ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯಲ್ಲಿ ಮೋದಿ-ದೋವಲ್‌ ಕೈವಾಡದ ಆರೋಪ : ತಮ್ಮದೇ ಅಧಿಕಾರಿಗಳನ್ನು ‘ಅಪರಾಧಿಗಳು’ ಎಂದು ಕರೆದ ಪ್ರಧಾನಿ ಟ್ರೂಡೊ…!

ಟೊರೊಂಟೊ: ಭಾರತ ಮತ್ತು ಕೆನಡಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸಂಕಷ್ಟ ಕಡಿಮೆಯಾಗುತ್ತಿಲ್ಲ. ಈಗ ಮತ್ತೊಂದು ಪ್ರಸಂಗದಲ್ಲಿ ಟ್ರೂಡೊ ಮತ್ತೆ ಮುಜುಗರಕ್ಕೆ ಒಳಗಾಗಿದ್ದು, ಮುಜುಗರ ತಪ್ಪಿಸಿಕೊಳ್ಳಲು ತಮ್ಮದೇ ದೇಶದ ಗುಪ್ತಚರ ಸಂಸ್ಥೆ ಅಧಿಕಾರಿಗಳನ್ನು ‘ಅಪರಾಧಿಗಳು’ ಎಂದು ಕರೆದಿದ್ದಾರೆ. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ತಮ್ಮದೇ ದೇಶದ ರಾಷ್ಟ್ರೀಯ … Continued

ಪಾಕಿಸ್ತಾನದಲ್ಲಿ ಹತ್ಯಾಕಾಂಡ | ಬಂದೂಕುಧಾರಿಗಳಿಂದ ಪ್ರಯಾಣಿಕರ ವಾಹನದ ಮೇಲೆ ಗುಂಡಿನ ದಾಳಿ ; ಕನಿಷ್ಠ 50 ಮಂದಿ ಸಾವು

ಕುರ್ರಂ (ಪಾಕಿಸ್ತಾನ) : ವಾಯವ್ಯ ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ವಾಹನಗಳ ಮೇಲೆ ಬಂದೂಕುಧಾರಿಗಳು ಗುರುವಾರ ಯದ್ವಾತದ್ವಾ ಗುಂಡು ಹಾರಿಸಿದ್ದರಿಂದ ಕನಿಷ್ಠ 50 ಜನರು ಸಾವಿಗೀಡಾಗಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಡೆದ ಅತ್ಯಂತ ಮಾರಣಾಂತಿಕ ದಾಳಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ … Continued

ವೀಡಿಯೊ..| ಮಹಾಯುದ್ಧದ ಭೀತಿ ; ಮೊದಲ ಬಾರಿಗೆ ತನ್ನ ಮೇಲೆ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ರಷ್ಯಾ : ಉಕ್ರೇನ್‌

ಇದೇ ಮೊದಲ ಬಾರಿಗೆ ರಷ್ಯಾದಿಂದ ಪರಮಾಣು ಅಲ್ಲದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ICBM) ಉಡಾವಣೆಯಾಗುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಹೊರಹೊಮ್ಮಿದೆ. ಇದು ಯುದ್ಧದಲ್ಲಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯ ಮೊದಲ ಬಳಕೆ ಎಂದು ಹೇಳಲಾಗಿದೆ. ಇದು ರಷ್ಯಾ ಮತ್ತು ಉಕೇನ್‌ ನಡುವೆ ನಡೆಯುತ್ತಿರುವ ಸಂಘರ್ಷದ ಉಲ್ಬಣವನ್ನು ಸೂಚಿಸುತ್ತದೆ. ಉಕ್ರೇನ್‌ನ ಕೇಂದ್ರ ನಗರವಾದ ದ್ನಿಪ್ರೊವನ್ನು ಗುರಿಯಾಗಿಟ್ಟುಕೊಂಡು ಪರಮಾಣು ಸಿಡಿತಲೆ ಹೊತ್ತೊಯ್ಯುವ … Continued