ಪೊಲಿಸ್‌ ಎನ್‌ಕೌಂಟರ್‌ ನಲ್ಲಿ ಉನ್ನತ ಕಮಾಂಡರ್‌ ಸೇರಿ 7 ನಕ್ಸಲರು ಸಾವು

ಹೈದರಾಬಾದ್‌: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಂದು, ಭಾನುವಾರ ಬೆಳಗ್ಗೆ ಪೊಲೀಸರು ಎನ್‌ಕೌಂಟರ್‌ನಲ್ಲಿ ಏಳು ಮಾವೋವಾದಿಗಳು (Naxal Encounter). ಹೊಡೆದುರುಳಿಸಿದ್ದಾರೆ. ಪೊಲೀಸ್ ಮಾಹಿತಿ ನೀಡುತ್ತಿದ್ದರು ಎಂಬ ಅನುಮಾನದ ಮೇಲೆ ಇಬ್ಬರು ಬುಡಕಟ್ಟು ಜನರನ್ನು ಮಾವೋವಾದಿಗಳು ಬರ್ಬರವಾಗಿ ಕೊಂದ ನಂತರ ನಕ್ಸಲ್‌ ವಿರೋಧಿ ಕಾರ್ಯಾಚರಣೆ ಚುರುಕುಗೊಂಡಿತ್ತು ಚಲ್ಬಾಕ್‌ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ … Continued

‘ಕ್ರಿಕೆಟ್ ಗೆಲ್ಲಬೇಕು, ಅದು ಅತ್ಯಂತ ಮುಖ್ಯ’: ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುವ ಬಗ್ಗೆ ಸುಳಿವು ನೀಡಿದ ಪಿಸಿಬಿ ಮುಖ್ಯಸ್ಥ

ನವದೆಹಲಿ: ಶನಿವಾರ ನಡೆದ ಐಸಿಸಿಯ ವರ್ಚುವಲ್ ಸಭೆಯ ನಂತರ 2025 ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿರುವ ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಐಸಿಸಿ ಯಾವುದೇ ಮಾಹಿತಿ ನೀಡಿಲ್ಲ. ಇಡೀ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸುವ ನಿಲುವು ತಳೆದಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಈಗ … Continued

ಮಹಾರಾಷ್ಟ್ರ : ಮುಖ್ಯಮಂತ್ರಿ ಹುದ್ದೆ ಬಿಜೆಪಿಗೆ, ಮಿತ್ರಪಕ್ಷಗಳಿಂದ ಇಬ್ಬರು ಉಪಮುಖ್ಯಮಂತ್ರಿಗಳು ; ಅಜಿತ ಪವಾರ್‌

ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಬಿಜೆಪಿಯಿಂದ ಆಗುತ್ತಾರೆ ಎಂದು ಬಿಜೆಪಿ ಮಿತ್ರ ಪಕ್ಷ ಎನ್‌ಸಿಪಿ ಮುಖ್ಯಸ್ಥ ಅಜಿತ ಪವಾರ್ ಶನಿವಾರ ಹೇಳಿದ್ದಾರೆ. ಇಬ್ಬರು ಉಪಮುಖ್ಯಮಂತ್ರಿಗಳು ಮೈತ್ರಿಕೂಟದ ಉಳಿದ ಅಂಗಪಕ್ಷಗಳಿಂದ ಆಯ್ಕೆಯಾಗಲಿದ್ದಾರೆ ಎಂದು ಅವರು ಹೇಳಿದರು. ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಮಹಾಯುತಿ ಮೈತ್ರಿಕೂಟದಲ್ಲಿ ಮೂರು … Continued

ಹಣ ಸುಲಿಗೆ ಪ್ರಕರಣ ; ದೆಹಲಿ ಎಎಪಿ ಶಾಸಕ ನರೇಶ ಬಲ್ಯಾನ್ ಬಂಧನ

ನವದೆಹಲಿ : ಕಳೆದ ವರ್ಷ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ನರೇಶ ಬಲ್ಯಾನ್ ಅವರನ್ನು ಶನಿವಾರ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಉತ್ತಮ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ನರೇಶ ಬಲ್ಯಾನ್ ಅವರನ್ನು ವಿಚಾರಣೆಗಾಗಿ ಆರ್ ಕೆ ಪುರಂನಲ್ಲಿರುವ ದೆಹಲಿ ಪೊಲೀಸರ ಅಪರಾಧ ವಿಭಾಗದ ಕಚೇರಿಗೆ ಕರೆಸಲಾಯಿತು ಮತ್ತು ನಂತರ … Continued

ಮಹಾರಾಷ್ಟ್ರ | ಸರ್ಕಾರ ರಚನೆಗೆ ಮುಂದುವರಿದ ಬಿಕ್ಕಟ್ಟು : ಆದ್ರೆ ಸಚಿವ ಸಂಪುಟದ ಪ್ರಮಾಣ ವಚನದ ದಿನಾಂಕ ಪ್ರಕಟಿಸಿದ ಬಿಜೆಪಿ…!

ಮುಂಬೈ: ಮಹಾರಾಷ್ಟ್ರದ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕವನ್ನು ಬಿಜೆಪಿ ಪ್ರಕಟಿಸಿದೆ. ಆದರೆ ಮುಖ್ಯಮಂತ್ರಿ ಹೆದ್ದೆಯನ್ನು ಯಾರು ಅಲಂಕರಿಸುತ್ತಾರೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಡಿಸೆಂಬರ್ 5 ರಂದು ಸಂಜೆ 5 ಗಂಟೆಗೆ ಮುಂಬೈನ ಐಕಾನಿಕ್ ಆಜಾದ್ ಮೈದಾನದಲ್ಲಿ ಸಮಾರಂಭ ನಡೆಯಲಿದೆ. ಪ್ರಮಾಣ … Continued

ವೀಡಿಯೊ…| ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಮೇಲೆ ದ್ರವ ಎರಚಿದ ವ್ಯಕ್ತಿ…!

ನವದೆಹಲಿ: ದೆಹಲಿಯ ಗ್ರೇಟರ್ ಕೈಲಾಶ ಪ್ರದೇಶದಲ್ಲಿ ಶನಿವಾರ ಹೈ ಡ್ರಾಮಾ ನಡೆದಿದ್ದು, ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬ ದ್ರವ ಎಸೆದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಕೇಜ್ರಿವಾಲ್‌ ಅವರನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ತೋರಿಸಿದೆ. ಕೇಜ್ರಿವಾಲ್ ಅವರ ಮೇಲೆ ದ್ರವವನ್ನು ಎಸೆದ … Continued

ಬಾಂಗ್ಲಾದೇಶದಲ್ಲಿ ‘ಹಿಂದೂಗಳ ಮೇಲೆ ದೌರ್ಜನ್ಯ, ಭಾರತಕ್ಕೆ ಅವಮಾನ ; ಆ ದೇಶದ ರೋಗಿಗಳಿಗೆ ಚಿಕಿತ್ಸೆ ನೀಡಲ್ಲ ಎಂದ ಕೋಲ್ಕತ್ತಾ ಆಸ್ಪತ್ರೆ…

ಕೋಲ್ಕತ್ತಾ : ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಆಸ್ಪತ್ರೆಯೊಂದು ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದೆ. ಬಾಂಗ್ಲಾದೇಶಿ ಪ್ರಜೆಗಳು ಭಾರತೀಯ ಧ್ವಜಕ್ಕೆ ಮಾಡಿದ ಅವಮಾನದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳುವ ಅನಿವಾರ್ಯತೆ ಬಂದಿದೆ ಎಂದು ಉತ್ತರ ಕೋಲ್ಕತ್ತಾದ ಮಾಣಿಕ್ತಾಲಾ ಪ್ರದೇಶದ ಜೆ.ಎನ್. ರೇ … Continued

ಚಾಂಪಿಯನ್ಸ್ ಟ್ರೋಫಿ | “ಹೈಬ್ರಿಡ್ ಮಾದರಿ ಒಪ್ಪಿಕೊಳ್ಳಿ ಅಥವಾ…” : ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಂತಿಮ ಅವಕಾಶ ನೀಡಿದ ಐಸಿಸಿ…!

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಪಾಕಿಸ್ತಾನಕ್ಕೆ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿಯನ್ನು ನಡೆಸಲು ಗಡುವು ನೀಡಿದೆ ಎಂದು ವರದಿಯಾಗಿದೆ. ಭಾರತದ ಆಟಗಳನ್ನು ಬೇರೆಡೆ ನಡೆಸಲಾಗುವುದು ಅಥವಾ ಇದಕ್ಕೆ ಒಪ್ಪದಿದ್ದರೆ ನೀವು ಮುಂಬರುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವಿರಿ ಎಂದು ಐಸಿಸಿ ಎಚ್ಚರಿಸಿದೆ ಎಂದು ವರದಿ ಹೇಳಿದೆ. ಭಾರತದ ತಂಡವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ … Continued

1000 ಮೆಟ್ರಿಕ್ ಟನ್‌ಗಳು : 7020084207400 ರೂ. ಮೌಲ್ಯದ ಈವರೆಗಿನ ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪ ಪತ್ತೆ…!

ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುವ ಸಮಯದಲ್ಲೇ ಗಮನಾರ್ಹವಾದ ಸಂಶೋಧನೆಯಲ್ಲಿ, ಚೀನಾದ ಹುನಾನ್ ಪ್ರಾಂತ್ಯದಲ್ಲಿ ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ವರದಿಯಾಗಿದೆ. ಚೀನಾದ ಸರ್ಕಾರಿ ಮಾಧ್ಯಮದ ಪ್ರಕಾರ, ಹುನಾನ್ ಪ್ರಾಂತ್ಯದ ಪಿಂಗ್ಜಿಯಾಂಗ್ ಕೌಂಟಿಯಲ್ಲಿ $83 ಶತಕೋಟಿ ಮೌಲ್ಯದ ಸುಮಾರು 1,000 ಮೆಟ್ರಿಕ್ ಟನ್‌ಗಳಷ್ಟು ಉತ್ತಮ ಗುಣಮಟ್ಟದ ಅದಿರು ಕಂಡುಬಂದಿದೆ, ಇದು ಇತಿಹಾಸದಲ್ಲಿ ಇದುವರೆಗೆ ಕಂಡುಹಿಡಿದ … Continued

ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ನಾಟ್‌ ಓಕೆ..? ಆಪ್ ಜೊತೆ ಮೈತ್ರಿ ಇಲ್ಲ ; ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿ ಸ್ಪರ್ಧೆ

ನವದೆಹಲಿ: ಕಾಂಗ್ರೆಸ್‌ ಪಕ್ಷವು ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಗಿನ ಮೈತ್ರಿಯನ್ನು ತಳ್ಳಿಹಾಕಿದ್ದು, ಏಕಾಂಗಿಯಾಗಿ ಸ್ಪರ್ಧಿವುದಾಗಿ ಶುಕ್ರವಾರ ಪ್ರಕಟಿಸಿದೆ. ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 70 ಸ್ಥಾನಗಳಲ್ಲಿ ಪಕ್ಷವು ಸ್ವಂತವಾಗಿ ಸ್ಪರ್ಧಿಸಲಿದೆ ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಹೇಳಿದ್ದಾರೆ. ಚುನಾವಣೆಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ … Continued