ಇದೆಂಥ ಕ್ರೌರ್ಯ : ಸಹೋದರನ ಮೇಲೆ 8 ಬಾರಿ ಟ್ರ್ಯಾಕ್ಟರ್ ಓಡಿಸಿ ಸಾಯಿಸಿದ ವ್ಯಕ್ತಿ | ಅಪರಾಧದ ವೀಡಿಯೊ ಹಂಚಿಕೊಂಡ ದುರುಳರು

ರಾಜಸ್ಥಾನದ ಭರತಪುರದಲ್ಲಿ ಜಮೀನು ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿದ್ದು, ವ್ಯಕ್ತಿಯೊಬ್ಬನನ್ನು ಆತನ ಸಹೋದರ ಟ್ರ್ಯಾಕ್ಟರ್‌ ಹತ್ತಿಸಿ ಬರ್ಬರವಾಗಿ ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ದಾಮೋದರ ಎಂಬಾತ ತನ್ನ ಸಹೋದರ ನಿರ್ಪತ್ ಮೇಲೆ ಸಾಯುವವರೆಗೂ ಎಂಟು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಓಡಿಸಿದ್ದಾನೆ ಎಂದು ಹೇಳಲಾಗಿದ್ದು, ದಾಮೋದರನನ್ನು … Continued

ಗರ್ಬಾ ಕಾರ್ಯಕ್ರಮದಲ್ಲಿ 11 ವರ್ಷದ ಹುಡುಗಿ ಎರಡು ಬಹುಮಾನ ಗೆದ್ದರೂ ಕೊಟ್ಟಿದ್ದು ಒಂದು : ಪ್ರಶ್ನಿಸಿದ್ದಕ್ಕೆ ಹುಡುಗಿಯ ತಂದೆಯನ್ನೇ ಬಡಿದು ಕೊಂದರು..!

ಪೋರಬಂದರ್: ಎರಡು ಬಹುಮಾನ ಗೆದ್ದರೂ ತನಗೆ ಒಂದು ಬಹುಮಾನ ನೀಡಲಾಯಿತು ಎಂದು 11 ವರ್ಷದ ಮಗಳು ಹೇಳಿದ ನಂತರ ಈ ಬಗ್ಗೆ ಪ್ರಶ್ನಿಸಿದ 40 ವರ್ಷದ ವ್ಯಕ್ತಿಯೊಬ್ಬನನ್ನು ‘ಗರ್ಬಾ’ ಕಾರ್ಯಕ್ರಮದ ಆಯೋಜಕರು ಹೊಡೆದು ಸಾಯಿಸಿದ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ. ಗುಜರಾತಿನಲ್ಲಿ ಪೋರಬಂದರ್‌ನ ಕೃಷ್ಣಾ ಪಾರ್ಕ್ ಸೊಸೈಟಿ ಬಳಿ ಮಂಗಳವಾರ ಬೆಳಗಿನ ಜಾವ … Continued

ವೈದ್ಯಕೀಯ ಪವಾಡ…: ಅಪಘಾತದಿಂದ ಪ್ರಜ್ಞಾಹೀನಳಾಗಿ ವೆಂಟಿಲೇಟರ್‌ನಲ್ಲಿದ್ದಾಗಲೇ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ…!

ನವದೆಹಲಿ : ವೈದ್ಯಕೀಯ ಪವಾಡವೊಂದರಲ್ಲಿ, ಮಾರಣಾಂತಿಕ ರಸ್ತೆ ಅಪಘಾತದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವೆಂಟಿಲೇಟರ್‌ನಲ್ಲಿದ್ದ ಮಹಿಳೆಯೊಬ್ಬರು ಕಳೆದ ವಾರ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಏಮ್ಸ್) ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ನಂದಿನಿ ತಿವಾರಿ (22) ಅವರನ್ನು ಅಕ್ಟೋಬರ್ 17 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಮಹಿಳೆ … Continued

ಉದ್ಧವ್‌ ಠಾಕ್ರೆ ಸ್ವಾರ್ಥ ಸಾಧನೆಗಾಗಿ ಹಮಾಸ್ ಜೊತೆಯೂ ಕೈಜೋಡಿಸಬಹುದು : ದಸರಾ ಸಮಾವೇಶದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಾಗ್ದಾಳಿ

ಮುಂಬೈ : ಉದ್ಧವ್ ಠಾಕ್ರೆ ಮತ್ತು ಅವರ ಶಿವಸೇನೆ ಬಣವು ತಮ್ಮ ಸ್ವಾರ್ಥ ಸಾಧಿಸಲು ಭಯೋತ್ಪಾದಕ ಗುಂಪುಗಳಾದ ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾ ಜೊತೆಯೂ ಕೈಜೋಡಿಸಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ಆಜಾದ್ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ರ್ಯಾಲಿಯಲ್ಲಿ ಮಾತನಾಡಿದ ಶಿಂಧೆ, “ತಮ್ಮ ಸ್ವಾರ್ಥಕ್ಕಾಗಿ ಅವರು ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾದೊಂದಿಗೂ … Continued

ನೋಂದಣಿಯಾಗದ ಮದರಸಾಗಳು ದಿನಕ್ಕೆ ₹10 ಸಾವಿರ ದಂಡ ಪಾವತಿಸಬೇಕು : ಉತ್ತರಪ್ರದೇಶ ಶಿಕ್ಷಣ ಇಲಾಖೆ

ಮುಜಾಫರ್‌ನಗರ : ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ದಿನಕ್ಕೆ ₹10 ಸಾವಿರ ದಂಡ ವಿಧಿಸಲಾಗುವುದು ಎಂದು ಉತ್ತರಪ್ರದೇಶದ ಶಿಕ್ಷಣ ಇಲಾಖೆ ಹೇಳಿದೆ. ದಾಖಲೆಗಳಿಲ್ಲದೆ ಮುಜಾಫರ್‌ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಿಗೆ ಪ್ರಾಥಮಿಕ ಶಿಕ್ಷಣ ಇಲಾಖೆ ನೋಟಿಸ್‌ ಜಾರಿ ಮಾಡಿದ್ದು, ನೋಟಿಸ್‌ ತಲುಪಿದ ಮೂರು ದಿನಗಳೊಳಗೆ ಸರಿಯಾದ ದಾಖಲೆಗಳನ್ನು ಸಲ್ಲಿಸಬೇಕು ಇಲ್ಲವೇ ಕ್ರಮ ಎದುರಿಸಬೇಕು ‘ ಎಂದು ಸೂಚನೆ ನೀಡಲಾಗಿದೆ. … Continued

ತೆಲಂಗಾಣ ವಿಧಾನಸಭಾ ಚುನಾವಣೆ : ಬಿಆರ್‌ ಎಸ್‌-ಕಾಂಗ್ರೆಸ್‌ ಜಿದ್ದಾಜಿದ್ದಿಯಲ್ಲಿ ಯಾರು ಗೆಲ್ತಾರೆ..? ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ ಏನು ಹೇಳುತ್ತದೆ..?

ತೆಲಂಗಾಣದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲು ಕಂಡುಬಂದಿದೆ. 119 ಅಸೆಂಬ್ಲಿ ಸ್ಥಾನಗಳ ವಿಧಾನಸಭೆಯಲ್ಲಿ ಭಾರತ ರಾಷ್ಟ್ರ ಸಮಿತಿ (BRS ) ಕಳೆದ ಚುನಾವಣೆಯಲ್ಲಿ ಗೆದ್ದಿದ್ದ 88 ಸ್ಥಾನಗಳಿಗೆ ಹೋಲಿಸಿದರೆ 70 … Continued

ಚಹಾ ಮಾರುವ ಸೂಪರ್‌ ಸ್ಟಾರ್‌ ರಜನಿಕಾಂತ : ದಂಗಾದ ಅಭಿಮಾನಿಗಳು ; ನಿಜವಾದ ವಿಷ್ಯ ಏನಂದ್ರೆ… | ವೀಡಿಯೊ ವೀಕ್ಷಿಸಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್‌ ಆಗಿತ್ತು. ಎಲ್ಲಿಯವರೆಗೆ ಅಂದರೆ ಅನೇಕರು ಇದು ರಜನಿಕಾಂತ್ ಅವರ ಚಿತ್ರೀಕರಣದ ವೇಳೆಗಿನ ವೀಡಿಯೊ ಎಂದುಕೊಂಡಿದ್ದರು. ಮುಖ, ಕೂದಲು, ನೋಟ, ಹಾವಭಾವ ಎಲ್ಲವೂ ರಜಿನಿಕಾಂತ ರಂತೆಯೇ ಇತ್ತು. ಹಾಗಾಗಿ ಇದು ರಜನಿಕಾಂತ್‌ ಎಂದೇ ಬಹುತೇಕರು ಭಾವಿಸಿದ್ದರು. ನಂತರ ಅವರು ಕೇರಳದ ಕೊಚ್ಚಿನ್‌ನಲ್ಲಿರುವ ವೆಂಕಟೇಶ್ವರ ಹೋಟೆಲ್‌ ಮಾಲೀಕ ಸುಧಾಕರ ಪ್ರಭು ಎಂದು … Continued

ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಗಡಿಪಾರಾದವರಿಗೆ ʼಪಂದ್ಯ ಆಟಗಾರʼ ಪ್ರಶಸ್ತಿ ಅರ್ಪಣೆ : ಅಫ್ಘಾನಿಸ್ತಾನ ಬ್ಯಾಟರ್ ಇಬ್ರಾಹಿಂ ಜದ್ರಾನ್ ಬಹುದೊಡ್ಡ ಹೇಳಿಕೆ

ಚೆನ್ನೈ: ಭಾರತದಲ್ಲಿ ನಡೆಯುತ್ತಿರುವ 2023ರ ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವಿನ ಬ್ಯಾಟಿಂಗ್‌ ಮಾಡಿದ ನಂತರ, ಅಫ್ಘಾನಿಸ್ತಾನ ಬ್ಯಾಟರ್ ಇಬ್ರಾಹಿಂ ಝದ್ರಾನ್ 87 ರನ್‌ಗಳ ಭರ್ಜರಿ ಬ್ಯಾಟಿಂಗ್‌ಗಾಗಿ ಪಂದ್ಯ ಪುರುಷ (POTM) ಪ್ರಶಸ್ತಿಗೆ ಭಾಜನರಾದ ನಂತರ ಬಹುದೊಡ್ಡ ಹೇಳಿಕೆ ನೀಡಿದ್ದಾರೆ. ಝದ್ರಾನ್ ತಮ್ಮ ಪಂದ್ಯ ಪುರುಷ ಪ್ರಶಸ್ತಿಯನ್ನು ಪಾಕಿಸ್ತಾನದಿಂದ ಗಡಿಪಾರು ಮಾಡಿದ ಆಫ್ಘನ್ನರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. … Continued

” ಅಫಿಡವಿಟ್ ಗೆ ನಾನೇ ಸಹಿ ಮಾಡಿದ್ದು ” : ಮಹುವಾ ಮೊಯಿತ್ರಾ ಆರೋಪ ನಿರಾಕರಿಸಿದ ಉದ್ಯಮಿ ದರ್ಶನ್ ಹಿರಾನಂದಾನಿ

ನವದೆಹಲಿ: ಉದ್ಯಮಿ ದರ್ಶನ್ ಹಿರಾನಂದಾನಿ ಅವರು ತಮ್ಮ ಸ್ಫೋಟಕ ಅಫಿಡವಿಟ್ ಕುರಿತು ಸೋಮವಾರ ಮೌನ ಮುರಿದಿದ್ದಾರೆ ಹಾಗೂ ತಾವು ಅದನ್ನು ಯಾವುದೇ ಒತ್ತಡದಲ್ಲಿ ಅದನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ” ಪ್ರಶ್ನೆ ಕೇಳಿದ್ದಕ್ಕಾಗಿ ಹಣ” ಪಡೆದ ಆರೋಪಗಳ ವಿರುದ್ಧ ಹೋರಾಡುತ್ತಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ದರ್ಶನ್‌ ಹಿರಾನಂದಾನಿ ಒತ್ತಡದಲ್ಲಿ ಸಹಿ … Continued

ಸತತ ಮೂರನೇ ಸೋಲು : ಪಾಕಿಸ್ತಾನ ವಿಶ್ವಕಪ್ 2023ರ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದೇ ? ಪಾಕಿಸ್ತಾನಕ್ಕಿರುವ ಸವಾಲುಗಳು…

ಚೆನ್ನೈ : ಸೋಮವಾರ ಚೆನ್ನೈನಲ್ಲಿ ನಡೆದ ಮೂರನೇ ಸತತ ಸೋಲುಂಡು ಪಾಕಿಸ್ತಾನವು ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರೀ ಆಘಾತ ಅನುಭವಿಸಿತು. ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧದ ಸೋಲಿನ ನಂತರ ಈಗ ಬಾಲಂಗೋಚಿ ತಂಡ ಎಂದು ಪರಿಗಣಿಸಲ್ಪಟ್ಟಿದ್ದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತಿತು. ಸೆಮಿಫೈನಲ್ಲಿಗೆ ಹೋಗುವ ತಮ್ಮ ಅವಕಾಶಗಳನ್ನು ಹೆಚ್ಚಿಸಲು ಅಫ್ಘಾನಿಸ್ತಾನದ ವಿರುದ್ಧ … Continued