ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ ದಾಸ್ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ ದಾಸ್ ಅವರನ್ನು ಭಾನುವಾರ ಸಂಜೆ ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ಅವರು ಕೃಷ್ಣ ಜನ್ಮಾಷ್ಟಮಿಗೆ ಮಥುರಾದಲ್ಲಿದ್ದರು, ಅವರ ಆರೋಗ್ಯ ಹದಗೆಟ್ಟಿತು. ಮೂತ್ರ ಮತ್ತು ಆಹಾರದ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಅವರನ್ನು ಗ್ವಾಲಿಯರ್‌ನಲ್ಲಿ ತಪಾಸಣೆಗೆ ಒಳಪಡಿಸಲಾಯಿತು, ಆದರೆ ಅವರ ಸ್ಥಿತಿ … Continued

ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ನವದೆಹಲಿ: ನಟರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗೆ ಸೆಪ್ಟೆಂಬರ್ 8 ರ ಭಾನುವಾರ ಹೆಣ್ಣು ಮಗು ಜನಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಗಣೇಶನ ಹಬ್ಬದ ದಿನವಾದ ಸೆಪ್ಟೆಂಬರ್ 7 ರಂದು ಸಂಜೆ 5 ಗಂಟೆ ಸುಮಾರಿಗೆ ದೀಪಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ನಟಿ ದೀಪಿಕಾ ಅವರನ್ನು ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. … Continued

ಭಾರತದಲ್ಲಿ ಮೊದಲ ಮಂಕಿಪಾಕ್ಸ್​​ (Mpox) ಪ್ರಕರಣ ಪತ್ತೆ…!

ನವದೆಹಲಿ: ವಿಶ್ವದ ಅನೇಕ ದೇಶಗಳಲ್ಲಿ ತಲ್ಲಣ ಸೃಷ್ಟಿಸಿರುವ ಮಂಕಿಪಾಕ್ಸ್​​ (Mpox) ಶಂಕಿತ ಪ್ರಕರಣ ಭಾರತದಲ್ಲೂ ಪತ್ತೆಯಾಗಿದೆ. ಮಂಕಿ ಪಾಕ್ಸ್‌ ಪೀಡಿತ ದೇಶದಿಂದ ಇತ್ತೀಚೆಗೆ ಭಾರತಕ್ಕೆ ಹಿಂದಿರುಗಿರುವ ವ್ಯಕ್ತಿಯಲ್ಲಿ ಶಂಕಿತ ಮಂಕಿಪಾಕ್ಸ್​​ ಪ್ರಕರಣ ಗುರುತಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆ ವ್ಯಕ್ತಿಯಲ್ಲಿ ಎಂಪಾಕ್ಸ್‌ (mpox) ಇರುವಿಕೆಯನ್ನು ಖಚಿತಪಡಿಸಲು ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು ಪರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ … Continued

ಹೃದಯ ಸ್ತಂಭನ : 48ನೇ ವಯಸ್ಸಿನಲ್ಲಿ ಜನಪ್ರಿಯ ಹಿಂದಿ ಕಿರುತೆರೆ ನಟ ವಿಕಾಸ್ ಸೇಥಿ ನಿಧನ

ಮುಂಬೈ: 48ರ ವಯಸ್ಸಿನಲ್ಲೇ ಖ್ಯಾತ ಕಿರುತೆರೆ ನಟ ನಟ ವಿಕಾಸ್ ಸೇಥಿ (Vikas Sethi) ನಿಧನರಾಗಿದ್ದಾರೆ. ಅವರು ಹೃದಯ ಸ್ತಂಭನದಿಂದ ಭಾನುವಾರ(ಸೆ.8ರಂದು) ಮಲಗಿದ್ದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರು ಪತ್ನಿ ಜಾನ್ವಿ ಸೇಥಿ ಮತ್ತು ಅವರ ಅವಳಿ ಮಕ್ಕಳನ್ನು ಅಗಲಿದ್ದಾರೆ. 2000 ಇಸವಿಯ ಆರಂಭದಲ್ಲಿ ಹಿಂದಿ ಕಿರುತೆರೆಯಲ್ಲಿ … Continued

ಟಿಎಂಸಿಗೆ ಆಘಾತ | ಮಮತಾ ಸರ್ಕಾರ ಕೋಲ್ಕತ್ತಾ ಪ್ರತಿಭಟನೆ ನಿಭಾಯಿಸಿದ ರೀತಿಗೆ ಅಸಮಾಧಾನ ; ಟಿಎಂಸಿ ಸಂಸದ ರಾಜೀನಾಮೆ

ಕೋಲ್ಕತ್ತಾ : ಟಿಎಂಸಿ ರಾಜ್ಯಸಭಾ ಸಂಸದ ಜವಾಹರ ಸರ್ಕಾರ್ ಅವರು ಭಾನುವಾರ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಆರ್‌.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಮಮತಾ ಸರ್ಕಾರವು ಪ್ರತಿಭಟನೆಗಳನ್ನು ನಿಭಾಯಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಿರುವ ರಾಜೀನಾಮೆ … Continued

ಪ್ಯಾರಾಲಿಂಪಿಕ್ಸ್ 2024: ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ಭಾರತದ ನವದೀಪ್

ಪ್ಯಾರಿಸ್‌ : ಸೆಪ್ಟೆಂಬರ್ 7 ರಂದು ನಡೆದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ 7 ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಜಾವೆಲಿನ್ ಎಸೆತಗಾರ ನವದೀಪ್ ಅವರು 47.32 ಮೀಟರ್‌ಗಳಷ್ಟು ದೂರ ಎಸೆದು ಪ್ಯಾರಾಲಿಂಪಿಕ್ ದಾಖಲೆಯನ್ನು ಮುರಿಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. 2021 ರಲ್ಲಿ ಟೋಕಿಯೊದಲ್ಲಿ ಚೀನಾದ ಪೆಂಗ್‌ಕ್ಸಿಯಾಂಗ್ ಸನ್ ಅವರು ನಿರ್ಮಿಸಿದ್ದ ಹಿಂದಿನ ದಾಖಲೆಯನ್ನು … Continued

ಯೂ ಟ್ಯೂಬ್ ವೀಡಿಯೊ ನೋಡಿ ಶಸ್ತ್ರಚಿಕಿತ್ಸೆ ; ಬಾಲಕ ಸಾವು…

ಪಾಟ್ನಾ: ಯೂಟ್ಯೂಬ್ ವೀಡಿಯೊ ನೆಚ್ಚಿಕೊಂಡ ವೈದ್ಯನೊಬ್ಬ ಪಿತ್ತಕೋಶದಿಂದ ಕಲ್ಲು ತೆಗೆಯಲು ಆಪರೇಷನ್ ಮಾಡಿ 15 ವರ್ಷದ ಬಾಲಕ ಸಾವಿಗೀಡಾಗಿರುವ ಘಟನೆ ಬಿಹಾರದ ಸರನ್ ನಲ್ಲಿ ನಡೆದಿದೆ. ಬಾಲಕನ ಪರಿಸ್ಥಿತಿ ಹದಗೆಡುತ್ತಿದ್ದಂತೆ, ರಾಜ್ಯ ರಾಜಧಾನಿ ಪಾಟ್ನಾದ ಆಸ್ಪತ್ರೆಗೆ ಆತನನ್ನು ಸಾಗಿಸಲು ‘ವೈದ್ಯರು’ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದು, ಆತನೊಂದಿಗೆ ಇದ್ದ ‘ವೈದ್ಯ’ ಮತ್ತು ಇತರರು … Continued

ವೀಡಿಯೊ..| ಖ್ಯಾತಿ ಪಡೆಯಲು ಜೀವಂತ ನಾಗರ ಹಾವಿನ ತಲೆ ಬಾಯಿಯೊಳಗೆ ಇಟ್ಟು ವೀಡಿಯೊ ಮಾಡಿದ ವ್ಯಕ್ತಿಯ ಪ್ರಾಣವೇ ಹೋಯ್ತು…!

ವೀಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ ಖ್ಯಾತಿಗಳಿಸಲು ನಾಗರ ಹಾವಿನ ತಲೆಯನ್ನು ಬಾಯಿಗೆ ಹಾಕಿಕೊಂಡ ವ್ಯಕ್ತಿಯೊಬ್ಬ ಈ ದುಸ್ಸಾಹಸದ ವೇಳೆ ಸಾವಿಗೀಡಾಗಿದ್ದಾನೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು 20 ವರ್ಷದ ಶಿವರಾಜ ಎಂದು ಗುರುತಿಸಲಾಗಿದೆ. ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಿವರಾಜ ರಸ್ತೆಯ ಮಧ್ಯದಲ್ಲಿ ನಿಂತು ನಾಗರಹಾವನ್ನು ಬಾಯಿಗೆ … Continued

ವೀಡಿಯೊ…| ಯುದ್ಧ ನಡೆದು 25 ವರ್ಷಗಳ ನಂತರ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ ಸೇನೆ…!

ರಾವಲ್ಪಿಂಡಿ : 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೇನೆ ತಾನು ಭಾಗಿಯಾಗಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು, ಪಾಕಿಸ್ತಾನದ ರಕ್ಷಣಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ 1965, 1971 ಮತ್ತು 1999 ರಲ್ಲಿ ಕಾರ್ಗಿಲ್‌ನಲ್ಲಿ ಯುದ್ಧಗಳನ್ನು ನಡೆಸುವಾಗಹಲವಾರು ಸೈನಿಕರು ಪ್ರಾಣ ತ್ಯಾಗ … Continued

ಕಾರಾಗೃಹದಲ್ಲೇ ಸನ್ಯಾಸ ದೀಕ್ಷೆ ಪಡೆದ ಭೂಗತ ಪಾತಕಿ ಪ್ರಕಾಶ ಪಾಂಡೆ….!

ಡೆಹ್ರಾಡೂನ್‌ (ಉತ್ತರಾಖಂಡ) : ಉತ್ತರಾಖಂಡದ ಅಲ್ಮೋರಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಭೂಗತ ಪಾತಕಿ ಪ್ರಕಾಶ್ ಪಾಂಡೆ ಅಲಿಯಾಸ್​ ಪಿಪಿ ಎಂಬಾತ ಸನ್ಯಾಸ ದೀಕ್ಷೆ ತೆಗೆದುಕೊಂಡಿದ್ದು, ಈಗ ಪ್ರಕಾಶಾನಂದ ಗಿರಿ ಎಂಬ ಹೊಸ ನಾಮಾಂಕಿತ ಪಡೆದಿದ್ದಾನೆ. ಉತ್ತರಾಖಂಡದ ಅಲ್ಮೋರಾ ಜೈಲಿನಲ್ಲಿರುವ ಭೂಗತ ಪಾತಕಿ ಪ್ರಕಾಶ್ ಪಾಂಡೆಯನ್ನು ಇಲ್ಲಿಯ ಶ್ರೀ ಪಂಚ ದಶನಂ ಜುನಾ ಅಖಾರಾ … Continued