ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಾಂಬರ್ʼ ನ ಮಾಸ್ಕ್ ರಹಿತ ರೇಖಾಚಿತ್ರ ಬಿಡಿಸಿದ ಕಲಾವಿದ

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಕೈಗೆತ್ತಿಕೊಂಡಿರುವ ಎನ್​ಐಎ ತಂಡ ತನಿಖೆ ಚುರುಕುಗೊಳಿಸಿದೆ. ಶಂಕಿತ ಉಗ್ರನ ಸುಳಿವು ನೀಡಿದವರಿಗೆ 10 ಲಕ್ಷ ರೂ.ನಗದು ಬಹುಮಾನ ನೀಡುವುದಾಗಿ ಘೋಷಿಸಿ ಬಾಂಬರ್‌ನ ಸಿಸಿಟಿವಿ ಫೋಟೋವೊಂದನ್ನು ಎನ್‌ಐಎ ಬುಧವಾರ ಬಿಡುಗಡೆ ಮಾಡಿತ್ತು. ಈಗ ಇದೇ ಫೋಟೋವನ್ನ ಆಧಾರವಾಗಿಟ್ಟುಕೊಂಡು ಕಲಾವಿದ ಹರ್ಷ ಎಂಬವರು ಬಾಂಬರ್’ನ ರೇಖಾ ಚಿತ್ರವನ್ನು … Continued

ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಲಕ್ನೋ : ಉತ್ತರ ಪ್ರದೇಶದ ಜೌನ್‌ಪುರದ ಬೋಧಾಪುರ ಗ್ರಾಮದಲ್ಲಿ ಗುರುವಾರ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಭಾರತೀಯ ಜನತಾ ಪಕ್ಷದ ನಾಯಕ ಪ್ರಮೋದ ಯಾದವ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಬಿಜೆಪಿ ನಾಯಕನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಅವರು ಮಾರ್ಗದ ಮಧ್ಯೆಯೇ ಮೃತಪಟ್ಟಿದ್ದಾರೆ ವೈದ್ಯರು ಪ್ರಕಟಿಸಿದರು. ಪ್ರಮೋದಯಾದವ್ ಅವರು 2012 … Continued

ಇ.ಡಿ.ಸಮನ್ಸ್‌ಗೆ ಡೋಂಟ್‌ ಕೇರ್‌ : ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್ ಜಾರಿ

ನವದೆಹಲಿ : ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಪದೇಪದೇ ಸಮನ್ಸ್ ನೀಡಿದರೂ ಸ್ಪಂದಿಸದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಈಗ ಸ್ವತಃ ದೆಹಲಿ ನ್ಯಾಯಾಲಯದಿಂದಲೇ ಸಮನ್ಸ್ ಜಾರಿ ಮಾಡಲಾಗಿದೆ. ಮಾರ್ಚ್ 16ಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಕೋರ್ಟ್ ಸೂಚಿಸಿದೆ. ತಾನು 8 ಬಾರಿ ಸಮನ್ಸ್ ನೀಡಿದರೂ ಕೇಜ್ರಿವಾಲ್ ಸ್ಪಂದಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯವು … Continued

ಮತ್ತೆ ಎನ್‌ಡಿಎಗೆ ಸೇರುವ ಸುಳಿವು ನೀಡಿದ 15 ವರ್ಷಗಳ ಹಿಂದೆ ಮೈತ್ರಿ ಮುರಿದುಕೊಂಡಿದ್ದ ಬಿಜೆಡಿ

ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಸಂಭಾವ್ಯ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದೆ. ಬುಧವಾರ, ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರ ಅಧಿಕೃತ ನಿವಾಸ ನವೀನ ನಿವಾಸ್‌ನಲ್ಲಿ ಬಿಜೆಡಿ ನಾಯಕರು ಸಭೆ ನಡೆಸಿದರು. ಅದೇ ಸಮಯದಲ್ಲಿ, ಬಿಜೆಪಿಯ ರಾಜ್ಯ ಘಟಕದ … Continued

ಮಾಲ್ಡೀವ್ಸ್-ಚೀನಾಕ್ಕೆ ತಿರುಗೇಟು: ಮಾಲ್ಡೀವ್ಸ್ ಸಮೀಪವೇ ಇರುವ ಲಕ್ಷದ್ವೀಪದಲ್ಲಿ ಹೊಸ ನೌಕಾ ನೆಲೆ ಕಾರ್ಯಾರಂಭ

ನವದೆಹಲಿ: ಮಾಲ್ಡೀವ್ಸ್‌ಗೆ ಸಮೀಪವಿರುವ ಹಿಂದೂ ಮಹಾಸಾಗರದಲ್ಲಿರುವ ತನ್ನ ಲಕ್ಷ ದ್ವೀಪದಲ್ಲಿ ಭಾರತವು ಬುಧವಾರ ಹೊಸ ನೌಕಾ ನೆಲೆಯನ್ನು ಉದ್ಘಾಟಿಸಿದೆ. ಮಾಲ್ಡೀವ್ಸ್‌ ಜೊತೆಗಿನ ಸಂಬಂಧಗಳು ಹಳಸಿದ ನಂತರ ಹಾಗೂ ಚೀನಾ ಮಾಲ್ಡೀವ್ಸ್‌ಗೆ ಹತ್ತಿರವಾದ ನಂತರ ಭಾರತದಿಂದ ಈ ಕ್ರಮವು ಬಂದಿದೆ. ಭಾರತದ ಲಕ್ಷದ್ವೀಪ ದ್ವೀಪಸಮೂಹದಲ್ಲಿರುವ ಮಿನಿಕಾಯ್ ದ್ವೀಪದ ಹೊಸ ನೆಲೆಯಾದ INS ಜಟಾಯು ವರ್ಷಗಳ ಕಾಲ ನಿರ್ಮಾಣ … Continued

ಏಜೆಂಟ್‌ ಮೋಸದಾಟ : ಉಕ್ರೇನ್‌ ಯುದ್ಧದಲ್ಲಿ ಬಲವಂತವಾಗಿ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಯುವಕ ಸಾವು

ಹೈದರಾಬಾದ್‌/ ನವದೆಹಲಿ : ಬಲವಂತದಿಂದ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಇಬ್ಬರು ಯುವಕರ ಪೈಕಿ ಒಬ್ಬ ರಷ್ಯಾ-ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಡಿದಿದ್ದಾನೆ. ಹೈದರಾಬಾದ್‌ನ ಹಳೆನಗರದ ಬಜಾರ್ ಘಾಟ್‌ನ ಮೊಹಮ್ಮದ್ ಅಸ್ಫಾನ್ (30) ಮತ್ತು ನಾರಾಯಣಪೇಟೆಯ ಮೊಹಮ್ಮದ್ ಸೂಫಿಯಾನ್ ಅವರು ರಷ್ಯಾ ಸೇನೆಯಲ್ಲಿ ಸಹಾಯಕರಾಗಿ ಕೆಲಸ ಮಾಡಲು ತೆರಳಿದ್ದರು. ಇದರಲ್ಲಿ ಅಸ್ಫಾನ್ ಮೃತಪಟ್ಟಿರುವುದಾಗಿ ವಿದೇಶಾಂಗ … Continued

ಲೋಕಸಭೆ ಚುನಾವಣೆ : ತಮಿಳುನಾಡಿನಲ್ಲಿ ನಟ ಶರತ್ ಕುಮಾರ ನೇತೃತ್ವದ ಎಐಎಸ್‌ಎಂಕೆ-ಬಿಜೆಪಿ ಮೈತ್ರಿ

ಚೆನ್ನೈ : ಖ್ಯಾತ ನಟ ಆರ್ ಶರತ್ ಕುಮಾರ ನೇತೃತ್ವದ ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (ಎಐಎಸ್‌ಎಂಕೆ) ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾತುಕತೆಯನ್ನು ಪೂರ್ಣಗೊಳಿಸಲಾಗಿದೆ ಮತ್ತು ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ‘ಜಂಟಿಯಾಗಿ’ ಕೆಲಸ … Continued

ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್ ಆದೇಶದ ನಂತರ ಸಂದೇಶ್‌ಖಾಲಿ ಪ್ರಕರಣದ ಆರೋಪಿ ಶೇಖ್ ಷಹಜಹಾನ್ ಸಿಬಿಐಗೆ ಹಸ್ತಾಂತರ

ಸಂದೇಶ್‌ಖಾಲಿ ಪ್ರಕರಣದ ಉಚ್ಛಾಟಿತ ಟಿಎಂಸಿ ನಾಯಕ ಮತ್ತು ಆರೋಪಿ ಶೇಖ್ ಷಹಜಹಾನ್ ನನ್ನು ಕೋಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಬಂಗಾಳ ಸರ್ಕಾರಕ್ಕೆ ಬುಧವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿದೆ. ಬುಧವಾರ ಮುಂಜಾನೆ, ಹೈಕೋರ್ಟ್ ಪಶ್ಚಿಮ ಬಂಗಾಳ ಸಿಐಡಿಗೆ ನಿಂದನೆ ನೋಟಿಸ್ ಜಾರಿಗೊಳಿಸಿತು ಮತ್ತು ಷಹಜಹಾನ್‌ನನ್ನು ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಲು ವಿಫಲವಾದ ನಂತರ ಎರಡು … Continued

ವೀಡಿಯೊ..| ಏನು ಧೈರ್ಯ-ಸಮಯಪ್ರಜ್ಞೆ ; ಹಾಲ್‌ ಒಳಗೆ ನುಗ್ಗಿದ ಚಿರತೆ ನೋಡಿ ಗಾಬರಿಯಾಗದೆ ಲಾಕ್ ಮಾಡಿ ಬಂಧಿಸಿದ ದಿಟ್ಟ ಬಾಲಕ…!

ಮಾಲೆಗಾಂವ್ : ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಅಪ್ರಾಪ್ತ ಬಾಲಕನೊಬ್ಬ ತಾನು ಕುಳಿತಿದ್ದ ಬ್ಯಾಂಕ್ವೆಟ್ ಹಾಲ್‌ಗೆ ಚಿರತೆ ನುಗ್ಗಿದ ನಂತರ ಪವಾಡ ಸದೃಶವೆಂಬಂತೆ ಪಾರಾದ ವೀಡಿಯೊ ವೈರಲ್ ಆಗಿದೆ. 12 ವರ್ಷದ ಬಾಲಕ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಮದುವೆ ಹಾಲ್‌ನ ಮುಖ್ಯ ಬಾಗಿಲು ತೆರೆದಿತ್ತು.ಚಿರತೆ ಕೋಣೆಗೆ ನುಗ್ಗಿದ್ದನ್ನು ಕಂಡ ತಕ್ಷಣ ಬಾಲಕ ಕೂಗಿಕೊಳ್ಳದೆ ಸಮಯಪ್ರಜ್ಞೆ … Continued

ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರಿನೊಳಗಿನ ಮೆಟ್ರೊ ಉದ್ಘಾಟಿಸಿದ ಪ್ರಧಾನಿ ಮೋದಿ : ಇದರ ವಿಶೇಷತೆ ಏನು..?

ಕೋಲ್ಕತ್ತಾ : ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋ ಮಾರ್ಗವನ್ನು ಅನಾವರಣಗೊಳಿಸಿದರು. ಉದ್ಘಾಟನೆಯ ವೇಳೆ ಪ್ರಧಾನಿಯವರು ಮೆಟ್ರೋದಲ್ಲಿ ಸವಾರಿ ಮಾಡುವಾಗ ಮೆಟ್ರೋ ಸಿಬ್ಬಂದಿ ಹಾಗೂ ಮಕ್ಕಳೊಂದಿಗೆ ಮಾತನಾಡಿದರು. “ಭಾರತದ ಯಾವುದೇ ದೊಡ್ಡ ನದಿಯ ತಳದ ಅಡಿಯಲ್ಲಿ ಮೊದಲ ಸಾರಿಗೆ ಸುರಂಗ ರೈಲು ಹೊಂದಿರುವ ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ ಯೋಜನೆಯ … Continued