ಇರಾನ್ ಯುದ್ಧದ ಮಧ್ಯೆಯೇ ‘ಒಪೆಕ್’ಗೆ ಗುಡ್‌ಬೈ ಹೇಳಿದ ಯುಎಇ : ತೈಲ ಮಾರುಕಟ್ಟೆಯಲ್ಲಿ ಭಾರಿ ಸಂಚಲನ

ಅಬುಧಾಬಿ : ಜಾಗತಿಕ ಇಂಧನ ಕ್ಷೇತ್ರದಲ್ಲಿ ಭಾರಿ ಭೌಗೋಳಿಕ ಬದಲಾವಣೆಯೊಂದು ಸಂಭವಿಸಿದೆ. ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟವಾದ ‘ಒಪೆಕ್’ (OPEC) ಮತ್ತು ‘ಒಪೆಕ್ ಪ್ಲಸ್’ (OPEC+) ಮೈತ್ರಿಕೂಟದಿಂದ ಅಧಿಕೃತವಾಗಿ ಹೊರಬರುವುದಾಗಿ ಘೋಷಿಸಿದೆ. ಮಂಗಳವಾರ ಈ ನಿರ್ಧಾರ ಹೊರಬಿದ್ದಿದ್ದು, ಮೇ 1, 2026 … Continued

ಅಮೆರಿಕ ಜೊತೆ ಶಾಂತಿ ಮಾತುಕತೆ ವ್ಯತ್ಯಯವಾದ ಬೆನ್ನಲ್ಲೇ ʼಹಾರ್ಮುಜ್ʼ ಬಗ್ಗೆ ಓಮನ್ ಜೊತೆ ಮಹತ್ವದ ಒಪ್ಪಂದಕ್ಕೆ ಬಂದ ಇರಾನ್

ಮಸ್ಕತ್ : ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಉನ್ನತ ಮಟ್ಟದ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಓಮನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ “ಕೆಲವು ಒಪ್ಪಂದಗಳಿಗೆ ಬರಲಾಗಿದೆ” ಎಂದು ಸೋಮವಾರ ತಿಳಿಸಿದ್ದಾರೆ. ವಾರದ ಕೊನೆಯಲ್ಲಿ ಪಾಕಿಸ್ತಾನ ಮತ್ತು ಓಮನ್‌ನಂತಹ ಪ್ರಮುಖ ಮಧ್ಯಸ್ಥಿಕೆ … Continued

ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಆಪ್ತನ ಹತ್ಯೆ

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಹಿರಿಯ ನಾಯಕ ಶೇಖ್ ಅಫ್ರಿದಿ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇದು ವ್ಯವಸ್ಥಿತವಾಗಿ ನಡೆದ ಟಾರ್ಗೆಟ್ಟೆಡ್‌ ಹತ್ಯೆ (Targeted Killing) ಎನ್ನಲಾಗಿದೆ. ಶೇಖ್ ಅಫ್ರಿದಿ ಲಷ್ಕರ್ ಸಂಘಟನೆಯ ಸ್ಥಾಪಕ ಹಫೀಜ್ ಸಯೀದ್‌ನ ಅತ್ಯಂತ ಆಪ್ತ ಸಹಚರನಾಗಿದ್ದ. ಖೈಬರ್ … Continued

ವೀಡಿಯೊ | ಟ್ರಂಪ್‌ ಪಾಲ್ಗೊಂಡಿದ್ದ ಅಮೆರಿಕ ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ದಾಳಿ ; ದಾಳಿ ಮಾಡಲು ಬಂದಿದ್ದ ವ್ಯಕ್ತಿ ಯಾರು ?

 ವಾಷಿಂಗ್ಟನ್:  ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ  ವರದಿಗಾರರ ವಾರ್ಷಿಕ ಔತಣಕೂಟ ಕಾರ್ಯಕ್ರಮದಲ್ಲಿ ಹಠಾತ್ ಶೂಟೌಟ್ ಸದ್ದು ಕೇಳಿಬಂದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷಿತವಾಗಿ ಅಧಿಕಾರಿಗಳು ಸ್ಥಳಾಂತರಿಸಿದ ಘಟನೆ ನಡೆಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಭಾಗವಹಿಸಿದ್ದ ಹೈ-ಪ್ರೊಫೈಲ್ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ … Continued

10 ವರ್ಷದ ರಹಸ್ಯ ಯೋಜನೆ..ಗೋಣಿಚೀಲದಲ್ಲಿ ಅಡಗಿದ ಮಕ್ಕಳು..ಸಾವಿನ ದಾರಿಯಲ್ಲಿ ಸ್ವಾತಂತ್ರ್ಯದ ಹುಡುಕಾಟ ; ಉತ್ತರ ಕೊರಿಯಾದಿಂದ ಕಿಮ್ ಕುಟುಂಬ ತಪ್ಪಿಸಿಕೊಂಡಿದ್ದು ಹೇಗೆ..?

ಸಿಯೋಲ್: ಕತ್ತಲ ರಾತ್ರಿ, ಕಾಲಡಿ ಇಟ್ಟರೆ ಸಿಡಿಯುವ ಮೈನ್‌ಫೀಲ್ಡ್‌ಗಳು, ರಾಡಾರ್ ಕಣ್ಣು ತಪ್ಪಿಸಿ ಸಾಗಬೇಕಾದ ಭೋರ್ಗರೆಯುವ ಸಮುದ್ರ, ಮತ್ತು ಗೋಣಿಚೀಲದೊಳಗೆ ಉಸಿರು ಬಿಗಿಹಿಡಿದು ಮಲಗಿರುವ ಕಂದಮ್ಮಗಳು… ಇದು ಯಾವುದೋ ರೋಮಾಂಚಕಾರಿ ಸಿನಿಮಾದ ದೃಶ್ಯವಲ್ಲ ; ಉತ್ತರ ಕೊರಿಯಾದ ಸರ್ವಾಧಿಕಾರಿ ಆಡಳಿತದಿಂದ ತಪ್ಪಿಸಿಕೊಳ್ಳಲು ಕಿಮ್ ಕುಟುಂಬ ನಡೆಸಿದ ನೈಜ ಹೋರಾಟ. ತಮ್ಮ ದಿವಂಗತ ತಂದೆಯ ಹತ್ತು ವರ್ಷಗಳ … Continued

ಸುಟ್ಟ ಮುಖ, ಕೃತಕ ಕಾಲು, ಬೇಕಿದೆ ಪ್ಲಾಸ್ಟಿಕ್ ಸರ್ಜರಿ..: ಗಂಭೀರ ಸ್ಥಿತಿಯಲ್ಲಿ ಇರಾನ್‌ ಪರಮೋಚ್ಚ ನಾಯಕ: ಆಡಳಿತ ಯಾರ ಕೈಯಲ್ಲಿ..?

ವಾಷಿಂಗ್ಟನ್: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ಜೀವಂತವಾಗಿದ್ದಾರೆ ಮತ್ತು ಪ್ರಜ್ಞಾವಸ್ಥೆಯಲ್ಲಿದ್ದಾರೆ. ಆದರೆ, ತೀವ್ರ ಸ್ವರೂಪದ ಗಾಯಗಳಿಂದಾಗಿ ಅವರು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದು, ಸದ್ಯಕ್ಕೆ ಮಾತನಾಡಲು ಅಥವಾ ಓಡಾಡಲು ಅಶಕ್ತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಕೊಲ್ಲಲ್ಪಟ್ಟರು. ಈ … Continued

ಹಾರ್ಮುಜ್ ಜಲಸಂಧಿಯಲ್ಲಿ ಸ್ಫೋಟಕ ಇರಿಸುವ ಇರಾನ್ ಬೋಟ್‌ ಕಂಡರೆ ಹೊಡೆದುರುಳಿಸಿ: ಅಮೆರಿಕ ನೌಕಾಪಡೆಗೆ ಟ್ರಂಪ್ ಆದೇಶ

ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಇರಾನ್ ಸ್ಫೋಟಕಗಳನ್ನು (Mines) ಅಳವಡಿಸುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಂತಹ ಕೃತ್ಯದಲ್ಲಿ ತೊಡಗಿರುವ ಯಾವುದೇ ಇರಾನಿ ಬೋಟ್‌ಗಳನ್ನು ಕಂಡ ಕೂಡಲೇ ‘ಹೊಡೆದುರುಳಿಸಲು’ (Shoot and Kill) ಅಮೆರಿಕ ನೌಕಾಪಡೆಗೆ ಗುರುವಾರ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಸಾಮಾಜಿಕ ಮಾಧ್ಯಮದಲ್ಲಿ … Continued

ವೇಗದ ಬೋಟ್, ಮಾಸ್ಕ್‌ ಧರಿಸಿ ರೈಫಲ್ ಹಿಡಿದ ಸೈನಿಕರು…: ಭಾರತಕ್ಕೆ ಬರುತ್ತಿದ್ದ ಹಡಗು ವಶಕ್ಕೆ ಪಡೆದ ವಿಡಿಯೋ ಹಂಚಿಕೊಂಡ ಇರಾನ್ ಸೈನಿಕರು

ತೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬುಧವಾರ ಹಾರ್ಮುಜ್ ಜಲಸಂಧಿಯಲ್ಲಿ ಹಾದುಹೋಗುತ್ತಿದ್ದ ಎಂಎಸ್‌ಸಿ (MSC) ಫ್ರಾನ್ಸೆಸ್ಕಾ ಮತ್ತು ಎಪಾಮಿನೋಂಡಾಸ್ ಎಂಬ ಎರಡು ಬೃಹತ್ ಸರಕು ಹಡಗುಗಳನ್ನು ತಡೆಹಿಡಿದ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಹಡಗುಗಳು ಹಾರ್ಮುಜ್‌ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಇರಾನ್ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಅಲ್ಲಿನ ಸರ್ಕಾರಿ … Continued

ವಿಡಿಯೋ…| ಸರ್ಕಸ್ ಪ್ರದರ್ಶನ ವೇಳೆ ಸೇಫ್ಟಿ ನೆಟ್ ದಾಟಿ ಪ್ರೇಕ್ಷಕರತ್ತ ನುಗ್ಗಿದ ಹುಲಿ

ದಕ್ಷಿಣ ರಷ್ಯಾದ ರೋಸ್ಟೋವ್-ಆನ್-ಡಾನ್ ನಗರದಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಸೇಫ್ಟಿ ನೆಟ್ ಕುಸಿದುಬಿದ್ದ ನಂತರ ಹುಲಿಯೊಂದು ಪ್ರೇಕ್ಷಕರತ್ತ ನುಗ್ಗಿದ ಆಘಾತಕಾರಿ ಘಟನೆ ಕಳೆದ ಭಾನುವಾರ ನಡೆದಿದೆ. ‘ದ ಮಾಸ್ಕೋ ಟೈಮ್ಸ್’ ವರದಿಯ ಪ್ರಕಾರ, ಮೂರು ಹುಲಿಗಳು ಮತ್ತು ಇಬ್ಬರು ತರಬೇತುದಾರರಿದ್ದ ಪ್ರದರ್ಶನದ ವೇಳೆ ಈ ಅವಘಡ ಸಂಭವಿಸಿದೆ. ಪ್ರಾಣಿಗಳು ಮತ್ತು ಪ್ರೇಕ್ಷಕರ ನಡುವೆ ಇದ್ದ … Continued

ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದ ಇರಾನ್‌

ತೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ವಿಸ್ತರಿಸಿದ ಬೆನ್ನಲ್ಲೇ, ಇರಾನ್‌ನ ಅರೆಸೇನಾ ಪಡೆ ‘ರೆವಲ್ಯೂಷನರಿ ಗಾರ್ಡ್’ ಬುಧವಾರ ಹಾರ್ಮುಜ್ ಜಲಸಂಧಿಯಲ್ಲಿ ಮೂರು ವಿದೇಶಿ ಹಡಗುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಇರಾನ್ ಸರ್ಕಾರಿ ಸ್ವಾಮ್ಯದ ದೂರದರ್ಶನದ … Continued