ಜನನಿಬಿಡ ಬೀದಿಯಲ್ಲಿ ಮಹಿಳೆ-ಮಕ್ಕಳ ಮೇಲೆ ದಾಳಿ ಮಾಡಿದ ತಪ್ಪಿಸಿಕೊಂಡ ಸಾಕಿದ ಸಿಂಹ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪಾಕಿಸ್ತಾನದ ಲಾಹೋರಿನ ಜನನಿಬಿಡ ಬೀದಿಯಲ್ಲಿ ತಪ್ಪಿಸಿಕೊಂಡ ಸಾಕಿದ ಸಿಂಹವೊಂದು ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಬೆನ್ನಟ್ಟಿ, ಗೋಡೆ ಹಾರಿ, ಅವರ ಮೇಲೆ ದಾಳಿ ಮಾಡಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪೊಲೀಸರು ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗುರುವಾರ ರಾತ್ರಿ ಸಿಂಹವು ತನ್ನ ಮನೆಯ ಸುತ್ತಲಿನ ತಡೆಗೋಡೆಯನ್ನು ಹಾರಿ, ಶಾಪಿಂಗ್‌ಗೆ ತನ್ನ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಹಿಳೆಯನ್ನು … Continued

ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

ಗುಜರಾತ್‌ನ ಗಿರ್ ಪ್ರದೇಶದ ಗಿರ್‌ ಸೋಮನಾಥ ಜಿಲ್ಲೆಯ ಹೆದ್ದಾರಿಯ ಮೇಲೆ ಸಿಂಹಗಳ ಗುಂಪೊಂದು ಓಡಾಡುತ್ತಿದ್ದುದರಿಂದ ಕೆಲಕಾಲ ವಾಹನಗಳು  ನಿಲ್ಲಬೇಕಾಯಿತು. ಕೋಡಿನಾರ್ ಬಳಿಯ ರೋಂಜ್ ರಾಜ್ಯ ಹೆದ್ದಾರಿಯಲ್ಲಿ ಎರಡು ಸಿಂಹಗಳು ಮತ್ತು ಎಂಟು ಮರಿಗಳನ್ನು ಒಳಗೊಂಡ ಸಿಂಹಗಳ ಕುಟುಂಬ ಕಾಣಿಸಿಕೊಂಡಿತು. ಇವು ಕಾಡುಗಳಿಂದ ಹೊರಬಂದು ರಸ್ತೆ ಮೇಲೆ ಓಡಾಡುತ್ತಿದ್ದವು. ಇದು ವಿಶ್ವದ ಏಕೈಕ ಏಷ್ಯನ್ ಸಿಂಹಗಳ ಆವಾಸಸ್ಥಾನವಾದ … Continued

ಅಧಿಕಾರಿಯನ್ನು ಕಚೇರಿಯಿಂದ ಹೊರಗೆಳೆದು ಥಳಿತ, ಮುಖಕ್ಕೆ ಒದ್ದು ಹಲ್ಲೆ : ಮೂವರ ಬಂಧನ-ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭುವನೇಶ್ವರ: ಭುವನೇಶ್ವರ ಮಹಾನಗರ ಪಾಲಿಕೆ (ಬಿಎಂಸಿ) ಕಚೇರಿಯಲ್ಲಿ ಹಿರಿಯ ಅಧಿಕಾರಿಯ ಮೇಲೆ ಗುಂಪೊಂದು ಸೋಮವಾರ ಹಲ್ಲೆ ನಡೆಸಿದ ನಂತರ ಭಾರೀ ನಾಟಕೀಯ ವಾತಾವರಣ ನಿರ್ಮಾಣವಾಯಿತು. ಆಘಾತಕಾರಿ ವಿಡಿಯೋದಲ್ಲಿ, ಬಿಎಂಸಿಯ ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರನ್ನು ಆ ವ್ಯಕ್ತಿಗಳು ತಮ್ಮ ಕಚೇರಿಯಿಂದ ಹೊರಗೆ ಎಳೆದುಕೊಂಡು ಹೋಗಿ, ಪದೇ ಪದೇ ಹೊಡೆದು, ಮುಖಕ್ಕೆ ಒದೆಯುತ್ತಿರುವುದು ಕಂಡುಬಂದಿದೆ. ಕುಂದುಕೊರತೆ … Continued

ಮೈ ಜುಂ ಎನ್ನುವ ವೀಡಿಯೊ : ಒಮ್ಮೆಗೇ ಧುಮ್ಮಿಕ್ಕಿದ ನೀರಿನ ಝರಿಯಲ್ಲಿ ಜಾರಿಬಿದ್ದ 6 ಮಹಿಳೆಯರು ಸ್ವಲ್ಪದರಲ್ಲೇ ಪಾರು…!

ಗಯಾ: ಬಿಹಾರದ ಗಯಾ ಜಿಲ್ಲೆಯ ಲಂಗುರಿಯಾ ಬೆಟ್ಟದ  ದೊಡ್ಡ ಝರಿಯಲ್ಲಿ ಹಠಾತ್‌ ಹೆಚ್ಚಾದ ನೀರಿನ ರಭಸಕ್ಕೆ ಜಾರಿದ ಆರು ಮಹಿಳೆಯರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ನಡೆದ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜಲಮೂಲಗಳ ಬಳಿ ಮಳೆಗಾಲದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಜ್ಞಾಪನೆಯೂ ಆಗಿದೆ. ಸುಮಾರು ಎರಡು … Continued

ಕ್ರಿಕೆಟ್‌ ಪಂದ್ಯ | ಸಿಕ್ಸರ್‌ ಹೊಡೆದ ತಕ್ಷಣ ಪಿಚ್‌ ಮೇಲೆ ಕುಸಿದುಬಿದ್ದು ಬ್ಯಾಟರ್‌ ಸಾವು : ದೃಶ್ಯ ವೀಡಿಯೊದಲ್ಲಿ ಸೆರೆ

ಕ್ರಿಕೆಟ್ ಪಂದ್ಯವೊಂದರಲ್ಲಿ ಸಿಕ್ಸರ್ ಹೊಡೆದ ತಕ್ಷಣ ಬ್ಯಾಟ್ಸ್‌ಮನ್ ಸಾವಿಗೀಡಾದ ಹೃದಯವಿದ್ರಾವಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಪಂಜಾಬಿನ ಫಿರೋಜ್‌ಪುರದಲ್ಲಿ ನಡೆದ ಕ್ರಿಕೆಟ್ ಪಂದ್ಯದ ಸಮಯದಲ್ಲಿ, ಬ್ಯಾಟರ್‌ ಸಿಕ್ಸರ್‌ ಹೊಡೆದ ನಂತರ ಇದ್ದಕ್ಕಿದ್ದಂತೆ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಫಿರೋಜ್‌ಪುರದ ಡಿಎವಿ (DAV) ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು … Continued

ಎದೆ ಝಲ್‌ ಎನ್ನುವ ವೀಡಿಯೊ…| ಪಾಕಿಸ್ತಾನದ ಪ್ರವಾಹದಲ್ಲಿ ಕೊಚ್ಚಿಹೋದ ಒಂದೇ ಕುಟುಂಬದ 9 ಜನ ; ದುರಂತವಾದ ಪಿಕ್ನಿಕ್‌

ಪಾಕಿಸ್ತಾನದಲ್ಲಿ ಸ್ವಾತ್ ನದಿಯ ಹಠಾತ್ ಪ್ರವಾಹದಲ್ಲಿ ಕುಟುಂಬದ 18 ಜನರಲ್ಲಿ ಒಂಬತ್ತು ಮಂದಿ ಕೊಚ್ಚಿಹೋಗಿ ಸಾವಿಗೀಡಾದ ನಂತರ, ಕುಟುಂಬಕ್ಕೆ ಪಿಕ್ನಿಕ್ ಪ್ರವಾಸವು ದುರಂತವಾಗಿ ಪರಿಣಮಿಸಿತು. ಶುಕ್ರವಾರ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದೆ. ಮೈ ಜುಂ ಎನ್ನುವ ವೀಡಿಯೊದಲ್ಲಿ, ಬಲವಾದ ಪ್ರವಾಹದ ಮಧ್ಯೆ ನದಿ ಉಕ್ಕಿ ಹರಿಯುತ್ತಿದ್ದು, ಅದರ ಮಧ್ಯದಲ್ಲಿ ದಿನ್ನೆಯಂತೆ ಕಾಣುವ ಸ್ಥಳದಲ್ಲಿ … Continued

ಮೈ ಜುಂ ಎನ್ನುವ ವೀಡಿಯೊ | ಕಾರು ಚಲಾಯಿಸುವಾಗ ನಿದ್ದೆಗೆ ಜಾರಿದ ಎಂಜಿನಿಯರ್‌ ; ರಸ್ತೆ ಬದಿ ನಿಂತಿದ್ದ ಇಬ್ಬರಿಗೆ ಡಿಕ್ಕಿ : ಒಬ್ಬ ಸಾವು

ವಾಹನ ಚಲಾಯಿಸುವಾಗ ಗುರುಗ್ರಾಮದ ಸಿವಿಲ್ ಎಂಜಿನಿಯರ್ ಒಬ್ಬರು ನಿದ್ದೆಗೆ ಜಾರಿದ್ದರಿಂದ ವಾಹನ ಇಬ್ಬರಿಗೆ ಡಿಕ್ಕಿ ಹೊಡೆದು, ಒಬ್ಬ ಕಾನೂನು ವಿದ್ಯಾರ್ಥಿ ಸಾವಿಗೀಡಾಗಿದ್ದಾರೆ ಹಾಗೂ ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದು, ಸಿವಿಲ್ ಎಂಜಿನಿಯರ್ ನನ್ನು ಬಂಧಿಸಲಾಗಿದೆ. ಜೂನ್ 24 ರಂದು ಹರ್ಷ ಮತ್ತು ಮೋಕ್ಷ ಎಂದು ಗುರುತಿಸಲಾದ ವಿದ್ಯಾರ್ಥಿಗಳು ದೆಹಲಿ-ಜೈಪುರ ಹೆದ್ದಾರಿಯಲ್ಲಿರುವ ಚಂಚಲ್ ಧಾಬಾವನ್ನು ಬೆಳಗಿನ ಜಾವ 3 … Continued

ವಿದ್ಯುತ್ ಇಲ್ಲ ಎಂದು ಹೇಳಲು ಹೋದ ವಸತಿ ಸಮುಚ್ಚಯದ ನಿವಾಸಿಗಳಿಗೆ ದೊಣ್ಣೆಯಿಂದ ಹೊಡೆದ ಕಾವಲುಗಾರರು, ಸಿಬ್ಬಂದಿ ; ವೀಡಿಯೊ ವೈರಲ್‌

ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ಬಹುಮಹಡಿ ವಸತಿ ಸಮುಚ್ಚಯದಲ್ಲಿ ವಾಸಿಸುವ ನಿವಾಸಿಗಳು ವಿದ್ಯುತ್ ಕಡಿತದ ಬಗ್ಗೆ ದೂರು ನೀಡಿದ ನಂತರ ಅವರನ್ನು ಒದ್ದು, ದೊಣ್ಣೆಯಿಂದ ಹೊಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಗುರುವಾರ ರಾತ್ರಿ ಇಕೋವಿಲೇಜ್-1 ಸೊಸೈಟಿಯಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ವಾಚ್‌ಮೆನ್‌ಗಳು ಮತ್ತು ಇತರ … Continued

ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಸೋಮವಾರ ಉತ್ತರಪ್ರದೇಶದ ಲಖಿಂಪುರ ಖೇರಿಯ ಧೌರಪುರ ಅರಣ್ಯ ಪ್ರದೇಶದ ಜುಗ್ನುಪುರದ ಇಟ್ಟಂಗಿ ತಯಾರಿಕೆ ಘಟಕದ ಕೆಲಸಗಾರರ ಮೇಲೆ ಕಪ್ಪು ಚಿರತೆಯೊಂದು ದಾಳಿ ನಡೆಸಿದೆ. ನಾಟಕೀಯ ಹಾಗೂ ಅಪರೂಪದ ವಿದ್ಯಮಾನದಲ್ಲಿ ಹೆದರದ ಯುವಕನೊಬ್ಬ ಚಿರತೆಯನ್ನು ಕೆಡವಿ ಬಾಯಿಯನ್ನು ಹಿಡಿದು ನೆಲಕ್ಕೆ ಒತ್ತಿ ಹಿಡಿದು ಅದನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾನೆ. ಗದ್ದಲದಿಂದ ಎಚ್ಚೆತ್ತ ಗ್ರಾಮಸ್ಥರು ಒಟ್ಟುಗೂಡಿ ಚಿರತೆಯ ಮೇಲೆ ಇಟ್ಟಿಗೆಗಳು … Continued

ವೀಡಿಯೊ…| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

ನವದೆಹಲಿ: ದೆಹಲಿ-ಭೋಪಾಲ್ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ತನ್ನ ಸೀಟನ್ನು ಬಿಜೆಪಿ ಶಾಸಕನಿಗೆ ಬದಲಾಯಿಸಿಕೊಳ್ಳಲು ಒಪ್ಪದ ಕಾರಣಕ್ಕೆ ಆತನನ್ನು ಥಳಿಸಿದ ಘಟನೆ ಗುರುವಾರ (ಜೂನ್‌ 19) ನಡೆದಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಝಾನ್ಸಿಯ ಶಾಸಕ ರಾಜೀವ ಸಿಂಗ್ ತಮ್ಮ ಪತ್ನಿ ಮತ್ತು ಮಗನೊಂದಿಗೆ ತಮ್ಮ ಕ್ಷೇತ್ರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಶಾಸಕರು … Continued