ಅಡಕೆ ಎಂದು ಭಾವಿಸಿ ಜಜ್ಜಿದಾಗ ಸಿಡಿಮದ್ದು ಸ್ಫೋಟ, ಮಹಿಳೆಗೆ ತೀವ್ರ ಗಾಯ

ಮೈಸೂರು: ಮನೆ ಬಳಿ ರಸ್ತೆಯಲ್ಲಿ ಬಿದ್ದಿದ್ದ ಸಿಡಿಮದ್ದನ್ನು ಅಡಕೆ ಎಂದು ಭಾವಿಸಿ ಚೂರು ಮಾಡಲು ಕಲ್ಲಿನಿಂದ ಜಜ್ಜಿದಾಗ ಅದು ಸ್ಫೋಟಗೊಂಡು ಮಹಿಳೆಯೊಬ್ಬರು ತೀವ್ರ ಗಾಯಗೊಂಡ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹುಲ್ಯಾಳು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗ್ರಾಮದ ಕಮಲಮ್ಮ (55) ಎಂಬವರು ಗಾಯಗೊಂಡವರು. ಶುಕ್ರವಾರ ಬೆಳಗ್ಗೆ ಜಮೀನಿನಿಂದ ಮನೆಗೆ ಬರುತ್ತಿದ್ದ ವೇಳೆ … Continued

ಡೈವರ್‌ಗಳ ಗುಂಪಿನ ಮೇಲೆ ಅಪಾಯಕಾರಿ ಶಾರ್ಕ್ ದಾಳಿ : ಒಬ್ಬನಿಗೆ ಕಚ್ಚಿ ತೀವ್ರ ಗಾಯ ; ದೃಶ್ಯ ವೀಡಿಯೊದಲ್ಲಿ ಸೆರೆ

ಹಾಲಿವುಡ್‌ನ ಫ್ಲೋರಿಡಾ ಬೀಚ್‌ನಲ್ಲಿ ಶಾರ್ಕ್ ದಾಳಿಯಲ್ಲಿ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಶಾರ್ಕ್ ಕಡಿತದಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, 40 ವರ್ಷ ವಯಸ್ಸಿನವರೆಂದು ಹೇಳಲಾಗುವ ಈ ವ್ಯಕ್ತಿಯ ತೋಳಿನ ಮೇಲ್ಭಾಗಕ್ಕೆ ಗಾಯವಾಗಿದೆ. ಮಂಗಳವಾರ ಮಧ್ಯಾಹ್ನ ಹಾಲಿವುಡ್ ಅಗ್ನಿಶಾಮಕ ದಳಕ್ಕೆ ಕರೆ ಬಂತು. ಸಹಾಯ ಮಾಡಲು ಧಾವಿಸಿದಾಗ ಗಾಯಗೊಂಡ ವ್ಯಕ್ತಿ ನೀರಿನಿಂದ ಹೊರಗಿದ್ದರು. … Continued

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಂದಿಸಿದ ಆರೋಪ: ಸೂಲಿಬೆಲೆ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಕಾಂಗ್ರೆಸ್‌  ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಯೋಗ್ಯ ಎಂದು ಜರೆದ ಆರೋಪಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ ಮತ್ತು ಎನ್ ಕೋಟಿಶ್ವರ ಸಿಂಗ್ ಅವರಿದ್ದ ಪೀಠ ಈ ತೀರ್ಪು ನೀಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ. ನಮೋ … Continued

ಕರ್ನಾಟಕಕ್ಕೆ 42,517 ಕೋಟಿ ರೂ. ವೆಚ್ಚದ 25 ರೈಲ್ವೆ ಯೋಜನೆಗಳು ಮಂಜೂರು : ರೈಲ್ವೆ ಸಚಿವ ಅಶ್ವಿನಿ ವೈಷ್ಣವ

ನವದೆಹಲಿ: ಕರ್ನಾಟಕದಲ್ಲಿ ರೈಲು ಸಂಪರ್ಕವನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆದಾಗ್ಯೂ, ಭೂಸ್ವಾಧೀನದ ವಿಳಂಬದಿಂದಾಗಿ ಅನೇಕ ಯೋಜನೆಗಳು ವಿಳಂಬವಾಗುತ್ತಿವೆ. ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಅಜಯ್ ಮಾಕನ್ ಅವರ ನಕ್ಷತ್ರ ಚಿಹ್ನೆಯ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಕರ್ನಾಟಕದಲ್ಲಿ ರೈಲ್ವೆ ಸಂಪರ್ಕವನ್ನು ಹೆಚ್ಚಿಸಲು, ಭಾರತೀಯ ರೈಲ್ವೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. … Continued

₹5.4 ಕೋಟಿ ವಿಮೆ ಪಡೆಯಲು ತನ್ನ ಕಾಲುಗಳನ್ನು ತಾನೇ ಕತ್ತರಿಸಿಕೊಂಡ ವೈದ್ಯ…!

ಬ್ರಿಟನ್‌ನ ನಾಳೀಯ ಶಸ್ತ್ರಚಿಕಿತ್ಸಕ(vascular surgeon)ರೊಬ್ಬರು 500,000 ಪೌಂಡ್‌ಗಳ ( ₹5.4 ಕೋಟಿ) ವಿಮಾ ಪರಿಹಾರ ಪಡೆಯಲು ತನ್ನ ಎರಡೂ ಕಾಲುಗಳನ್ನು ಕತ್ತರಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಕಾರ್ನ್‌ವಾಲ್‌ನ 49 ವರ್ಷದ ನೀಲ್ ಹಾಪರ್, ಸೆಪ್ಸಿಸ್‌ನಿಂದಾಗಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದೇನೆಯೇ ಹೊರತು ತಾನೇ ಸ್ವಯಂ ಮಾಡಿಕೊಂಡಿದ್ದಲ್ಲ ಎಂದು ಹೇಳಿಕೊಂಡಿದ್ದಾರೆ. ನ್ಯಾಯಾಲಯದ ಸಾಕ್ಷ್ಯದ ಪ್ರಕಾರ, ಅವರು ಒಂದು ವಿಮಾದಾರ – … Continued

ಭಾರತ-ಪಾಕ್ ಕದನ ವಿರಾಮಕ್ಕೆ ಯಾವುದೇ ದೇಶ ಮಧ್ಯಸ್ಥಿಕೆ ವಹಿಸಿಲ್ಲ: ಸಂಸತ್ತಿಗೆ ತಿಳಿಸಿದ ಸರ್ಕಾರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಕದನ ವಿರಾಮಕ್ಕೆ ಅಮೆರಿಕದ ಮಧ್ಯಪ್ರವೇಶ ಕಾರಣ ಎಂಬ ಹೇಳಿಕೆಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಲೋಕಸಭೆಯಲ್ಲಿನ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ, ವಿದೇಶಾಂಗ ಸಚಿವಾಲಯವು ಮೇ 10ರಂದು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ನೇರ ಸಂಪರ್ಕದ ಫಲಿತಾಂಶವಾಗಿದೆ ಎಂದು ಹೇಳಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರ … Continued

ಮೈ ಜುಂ ಎನ್ನುವ ವೀಡಿಯೊ..|ಹೆದ್ದಾರಿಗೆ ಅಪ್ಪಳಿಸಿದ ಪತನ; ಭೀಕರ ಸ್ಫೋಟ, ಇಬ್ಬರು ಸಾವು

ಉತ್ತರ ಇಟಲಿಯ ಬ್ರೆಸಿಯಾದಲ್ಲಿ ಸಣ್ಣ ವಿಮಾನವೊಂದು ಅಪ್ಪಳಿಸಿ ಹೆದ್ದಾರಿಗೆ ಇಬ್ಬರು ಸಾವಿಗೀಡಾಗಿದ್ದಾರೆ. ಫ್ರೆಸಿಯಾ ಆರ್‌ಜಿ ಅಲ್ಟ್ರಾಲೈಟ್ ವಿಮಾನವು ಮೂಗು ತೂರಿಸಿ ರಸ್ತೆಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ, ಇದರಿಂದಾಗಿ ಭಾರಿ ಬೆಂಕಿ ಮತ್ತು ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿತು. ಮೃತರನ್ನು ಮಿಲನ್‌ನ 75 ವರ್ಷದ ವಕೀಲ ಮತ್ತು ಪೈಲಟ್ ಸೆರ್ಗಿಯೊ ರಾವಗ್ಲಿಯಾ ಮತ್ತು ಅವರ … Continued

ಕುಮಟಾ : ಜುಲೈ 27ರಂದು ಗುರು ವಂದನೆ ಸಂಗೀತ ಕಾರ್ಯಕ್ರಮ

ಕುಮಟಾ : ಗುರು ಪೂರ್ಣಿಮೆ ಅಂಗವಾಗಿ ಪಂಡಿತ ಷಡಕ್ಷರಿ ಗವಾಯಿ ಅಕಾಡೆಮಿ ಕೂಳ್ಳಿ ವತಿಯಿಂದ ಗುರು ವಂದನೆ ಸಂಗೀತ ಕಾರ್ಯಕ್ರಮವನ್ನು ಕುಮಟಾದ ಗಿಬ್‌ ಹೈಸ್ಕೂಲಿನ ಆರ್‌.ಪಿ.ಸಭಾಂಗಣದಲ್ಲಿ ಜುಲೈ 27ರಂದು ಮಧ್ಯಾಹ್ನ 3ರಿಂದ ಆಯೋಜಿಸಲಾಗಿದೆ. ಹಲವಾರು ಉದ್ಯೋನ್ಮುಖ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಗೌರೀಶ ಯಾಜಿ ಶಿಷ್ಯವೃಂದ ಮತ್ತು ಕುಮಟಾದ … Continued

ವಿಪರೀತ ಮಳೆ ಮುನ್ಸೂಚನೆ ; ಉತ್ತರ ಕನ್ನಡ ಜಿಲ್ಲೆ 5 ತಾಲೂಕುಗಳ ಎಲ್ಲ ಶಾಲಾ-ಕಾಲೇಜುಗಳಿಗೆ ಜುಲೈ 26ರಂದು ರಜೆ ಘೋಷಣೆ

ಕಾರವಾರ : ಹವಾಮಾನ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ, ವಿಶೇಷವಾಗಿ ಕರಾವಳಿ ತಾಲೂಕುಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದ್ದು, ‘ರೆಡ್ ಅಲರ್ಟ್’ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡಜಿಲ್ಲೆಯ ಐದು ತಾಲೂಕುಗಳ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಶುಕ್ರವಾರ, ಶನಿವಾರ ಜುಲೈ 26ರಂದು ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ … Continued

ಥೈಲ್ಯಾಂಡ್-ಕಾಂಬೋಡಿಯಾ ದೇಶಗಳ ನಡುವಿನ ಸಂಘರ್ಷದ ಕೇಂದ್ರಬಿಂದು 1000 ವರ್ಷಗಳ ಹಿಂದಿನ ʼಹಿಂದೂ ದೇವಾಲಯʼಗಳು…!

ನವದೆಹಲಿ: ಸುಮಾರು 1,000 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯಗಳನ್ನು ಹೊಂದಿರುವ ಐತಿಹಾಸಿಕವಾಗಿ ವಿವಾದಿತ ಎಮರಾಲ್ಡ್ ಪ್ರದೇಶದ ಕುರಿತು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಘರ್ಷಣೆಗಳು ಈಗ ಎರಡು ದೇಶಗಳ ಸಂಬಂಧಗಳನ್ನು ಕೆಳಮಟ್ಟಕ್ಕೆ ತಂದಿವೆ. ಶಿವನಿಗೆ ಸಮರ್ಪಿತವಾದ ಸುಮಾರು 1,000 ವರ್ಷಗಳಷ್ಟು ವರ್ಷ ಹಳೆಯ ಪ್ರೀಹ್ ವಿಹಾರ ದೇವಾಲಯವು ಕಾಂಬೋಡಿಯಾದ ಡಾಂಗ್ರೆಕ್ ಪರ್ವತಗಳಲ್ಲಿ 525 ಮೀಟರ್ ಎತ್ತರದ … Continued