ಕೊರೆಯುವ ಚಳಿಯಲ್ಲಿ ರಸ್ತೆಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ ; ಸುತ್ತ ಕುಳಿತು ರಾತ್ರಿಯಿಡೀ ಕಾವಲು ಕಾಯ್ದ ಬೀದಿ ನಾಯಿಗಳು…!

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಈ ನಬದ್ವೀಪ ಎಂಬ ನದಿದಂಡೆಯ ಪಟ್ಟಣವು ಚಳಿಗಾಲದ ಚಳಿಯಲ್ಲಿ ಮುಳುಗಿದ್ದಾಗ, ರೈಲ್ವೆ ನೌಕರರ ವಸತಿ ಸಮುಚ್ಚಯದ ಶೌಚಾಲಯದ ಹೊರಗೆ ನವಜಾತ ಶಿಶುವನ್ನು ಯಾರೋ ನಿರ್ದಯವಾಗಿ ಬಿಟ್ಟು ಹೋಗಿದ್ದರು. ಕೇವಲ ಕೆಲವೇ ಗಂಟೆಗಳ ಜನಿಸಿದ್ದ ಈ ಮಗುವಿನ ದೇಹದ ಮೇಲೆ ಹೆರಿಗೆಯ ರಕ್ತದ ಗುರುತುಗಳಿದ್ದವು. ಹೊದಿಕೆ ಇಲ್ಲ, ಯಾವುದೇ ಪತ್ರ ಇಲ್ಲ, … Continued

ಸಂಸತ್ತಿಗೆ ನಾಯಿ ಕರೆತಂದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ; ವಿವಾದಕ್ಕೆ ನಾಂದಿ

ನವದೆಹಲಿ : ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸೋಮವಾರ (ಡಿಸೆಂಬರ್‌ 1) ರಕ್ಷಿಸಿದ ಒಂದು ಬೀದಿ ನಾಯಿಯನ್ನು ತಮ್ಮ ಕಾರಿನಲ್ಲಿ ಸಂಸತ್ತಿಗೆ ಕರೆತಂದಿರುವುದು ವಿವಾದಕ್ಕೆ ಕಾರಣವಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಚೌಧರಿ ಇಂದು ಸಂಸತ್ತಿಗೆ ಆಗಮಿಸಿದಾಗ ಅಚ್ಚರಿಯಾಗುವಂತೆ, ಅವರ ಜೊತೆ ಒಂದು ನಾಯಿಮರಿಯೂ ಇತ್ತು. ಅವರು ನಾಯಿಮರಿಯನ್ನು ತಮ್ಮ ಕಾರಿನಲ್ಲಿ ಮನೆಗೆ ಕಳುಹಿಸಿದರೂ, ಆ … Continued

ವೀಡಿಯೊ…| ಕಾರಿನೊಳಗಿದ್ದ ಇಲಿ ಹಿಡಿಯಲು ಕಾರಿನ ಬಂಪರ್ ಅನ್ನೇ ಕಚ್ಚಿ ಎಳೆದು ಕಿತ್ತು ಹಾಕಿದ ನಾಯಿ ; ಮುಂದಾಗಿದ್ದು..

ಉತ್ತರ ಗೋವಾದ ಒಂದು ಸಣ್ಣ ಘಟನೆ ಇದೀಗ ಆನ್‌ಲೈನ್‌ನಲ್ಲಿ ಎಲ್ಲರ ಚರ್ಚಾ ವಿಷಯವಾಗಿದೆ. ಬೀದಿ ನಾಯಿಯೊಂದು (Stray Dog) ಅನಿರೀಕ್ಷಿತವಾದ ಕೆಲಸವನ್ನು ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಾರಿನೊಳಗಿದ್ದ ಇಲಿಯನ್ನು ಹಿಡಿಯಲು ಅದರ ಪಟ್ಟು ಹಿಡಿದ ಪ್ರಯತ್ನದಿಂದಾಗಿ ಇಡೀ ಕಾರಿನ ಬಂಪರ್ ಕಿತ್ತುಬಂದಿದ್ದು, ಈ ವೀಡಿಯೊ ವೈರಲ್‌ ಆಗಿದೆ. ನಾಯಿಯ ಈ ಭಾರಿ ಏಕಾಗ್ರತೆ ಹಾಗೂ ಪಟ್ಟು … Continued

ಎರಡು ಬಾರಿ ಕಚ್ಚುವ ಬೀದಿ ನಾಯಿಗಳಿಗೆ ಜೀವಾವಧಿ ಶಿಕ್ಷೆ …! ಏನಿದು ಆದೇಶ…?

ಲಕ್ನೋ: ನಾಯಿ ಕಡಿತದ ಘಟನೆಗಳನ್ನು ನಿಯಂತ್ರಿಸಲು ಉತ್ತರ ಪ್ರದೇಶ ಸರ್ಕಾರವು ನೂತನ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರ್ದೇಶನದ ಮೇರೆಗೆ, ಜನರನ್ನು ಎರಡು ಬಾರಿ ಕಚ್ಚುವ ಯಾವುದೇ ಬೀದಿ ನಾಯಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ, ಇದು ಬೀದಿ ನಾಯಿಗಳ ಹೆಚ್ಚುತ್ತಿರುವ ಉಪಟಳವನ್ನು ತಡೆಯುವ ಉದ್ದೇಶ ಹೊಂದಿರುವ ಹೊಂದಿರುವ ವಿವಾದಾತ್ಮಕ ಹೆಜ್ಜೆಯಾಗಿದೆ. … Continued

ಆಸ್ಪತ್ರೆಯಲ್ಲಿ ಶಿಶುವಿನ ತಲೆ ಹೊತ್ತೊಯ್ದ ನಾಯಿ…! ತನಿಖೆಗೆ ಆದೇಶ

ನಾಯಿಯೊಂದು ಶಿಶುವಿನ ತಲೆಯನ್ನು ಹೊತ್ತೊಯ್ದ ಆಘಾತಕಾರಿ ಘಟನೆಗೆ ಪಂಜಾಬ್‌ನ ಪಟಿಯಾಲದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಡೆದಿದೆ. ಈ ಸಂಬಂಧ ಆರೋಗ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ, ಆದರೆ ವೈದ್ಯಕೀಯ ಅಧೀಕ್ಷಕರು ಶಿಶುವಿನ ಶವವನ್ನು ಹೊರಗಿನಿಂದ ಆವರಣದಲ್ಲಿ ಎಸೆಯಲಾಗಿದೆ ಎಂದು ಹೇಳಿದ್ದಾರೆ. ಪಟಿಯಾಲದ ರಾಜೀಂದ್ರ ಆಸ್ಪತ್ರೆಯ ವಾರ್ಡ್ ಸಂಖ್ಯೆ 4 ರ ಬಳಿ ಮಂಗಳವಾರ ಸಂಜೆ 5:30 ರ ಸುಮಾರಿಗೆ … Continued

ಬಿಹಾರ ಚುನಾವಣೆ 2025 ; ‘ಕುತ್ತಾ ಬಾಬು’ವಿನ ಪುತ್ರ ʼಡಾಗ್ ಬಾಬು’ ಎಂಬ ನಾಯಿಗೂ ನಿವಾಸಿ ಪ್ರಮಾಣ ಪತ್ರ ನೀಡಿದ್ದು ಬೆಳಕಿಗೆ..!

ಪಾಟ್ನಾ : ಬಿಹಾರದಲ್ಲಿ ರಾಜ್ಯ ಗುರುತಿನ ನೋಂದಣಿ (State Identification Registry-SIR ) ಉಪಕ್ರಮದ ಅಡಿಯಲ್ಲಿ ನಾಗರಿಕ ದಾಖಲೆಗಳನ್ನು ಪರಿಷ್ಕರಣೆ ನಡೆಸುತ್ತಿರುವ ಅಭಿಯಾನದ ಭಾಗವಾಗಿ, ನಿವಾಸಿಗಳಿಗೆ ತಮ್ಮ ಅಧಿಕೃತ ದಾಖಲೆಗಳನ್ನು ಪರಿಶೀಲಿಸಲು ಮತ್ತು ಸರಿಪಡಿಸಲು ಸೂಚಿಸಲಾಗಿದೆ. ಆದಾಗ್ಯೂ, ಈ ಪರಿಷ್ಕರಣೆಯ ಪ್ರಕ್ರಿಯೆಯ ವೇಳೆ ಅಪನಂಬಿಕೆಗೆ ಕಾರಣವಾದ ವಿಲಕ್ಷಣ ನಿವಾಸಿ ಪ್ರಮಾಣ ಪತ್ರ ನೀಡಿರುವುದು ಕಂಡುಬಂದಿದೆ. ‘ಡಾಗ್ … Continued

ಬೀದಿ ನಾಯಿ ʼಪಿಕಾಚುʼ ಗೌರವಾರ್ಥ ಹೃದಯಸ್ಪರ್ಶಿ ಭಿತ್ತಿಚಿತ್ರ ಕೆತ್ತಿಸಿದ ಬೆಂಗಳೂರು ನಿವಾಸಿಗಳು…!

ಬೆಂಗಳೂರು : ಬೆಂಗಳೂರಿನ ಜೆ.ಪಿ. ನಗರದ ಡಾಲರ್ ಕಾಲೋನಿಯ ನಿವಾಸಿಗಳು ʼಪಿಕಾಚುʼ ಎಂಬ ಪ್ರೀತಿಯ ಬೀದಿ ನಾಯಿಯ ನೆನಪಿಗಾಗಿ ಒಂದು ಭಿತ್ತಿಚಿತ್ರವನ್ನು ಕಲ್ಲಿನಲ್ಲಿ ಕೆತ್ತಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. . ಪೋಕ್ಮನ್ ಪಾತ್ರದ ಹೆಸರಿನಿಂದ ಕರೆಯಲ್ಪಡುವ ಪಿಕಾಚು ಎಂಬ ಬೀದಿ ನಾಯಿಯನ್ನು ನಿವಾಸಿಗಳು ಅಪಾರವಾಗಿ ಪ್ರೀತಿಸುತ್ತಿದ್ದರು ಮತ್ತು ಈಗ ಕಲ್ಲಿನಲ್ಲಿ ಕೆತ್ತಿದ ಈ ನಾಯಿಯ ಭಿತ್ತಿಚಿತ್ರವು … Continued

ಭೂ ಕುಸಿತದಿಂದ ಗ್ರಾಮವೇ ನಾಶವಾದ್ರೂ ಅಪಾಯದ ಬಗ್ಗೆ ಮಧ್ಯರಾತ್ರಿ ಎಚ್ಚರಿಸಿ 67 ಜನರ ಜೀವ ಉಳಿಸಿದ ನಾಯಿ..!

ನವದೆಹಲಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ಭಾರತದ ವಿವಿಧ ಭಾಗಗಳಲ್ಲಿ ಭೂ ಕುಸಿತ, ಹಠಾತ್ ಪ್ರವಾಹ ಮತ್ತು ಮೇಘಸ್ಫೋಟಗಳು ಸಂಭವಿಸುತ್ತಿವೆ. ಇದರ ಮಧ್ಯೆ ಹಿಮಾಚಲ ಪ್ರದೇಶದ ನಾಯಿಯೊಂದು ಅನೇಕರ ಜೀವ ಉಳಿಸುವ ಕೆಲಸ ಮಾಡುವ ಮೂಲಕ ಸುದ್ದಿಯಲ್ಲಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಿಯಾಥಿ ಗ್ರಾಮದಲ್ಲಿ ಭೀಕರ ಭೂಕುಸಿತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು, ಹಳ್ಳಿಯ ನಾಯಿಯೊಂದು … Continued

ಚರಂಡಿಯಲ್ಲಿ ಬಿದ್ದಿದ್ದ ನಾಯಿಮರಿ ರಕ್ಷಿಸುವಾಗ ಕಚ್ಚಿ ಗಾಯ ; ನಿರ್ಲಕ್ಷ್ಯ ಮಾಡಿದ್ದಕ್ಕೆ ಖ್ಯಾತ ಕಬಡ್ಡಿ ಆಟಗಾರ ರೇಬೀಸ್ ನಿಂದ ಸಾವು…!

ನವದೆಹಲಿ : ರಾಜ್ಯಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ ಸೋಲಂಕಿ ಉತ್ತರ ಪ್ರದೇಶದ ಬುಲಂದಶಹರದಲ್ಲಿ ರೇಬೀಸ್‌ನಿಂದ ಸಾವಿಗೀಡಾಗಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ, ಬ್ರಿಜೇಶ ಅವರು ಕಾಪಾಡಿದ್ದ ನಾಯಿಮರಿಯೊಂದು ಅವರನ್ನು ಕಚ್ಚಿತ್ತು. ಆದಾಗ್ಯೂ, ಅವರು ಅದನ್ನು ಸಣ್ಣ ಗಾಯವೆಂದು ನಿರ್ಲಕ್ಷ್ಯ ಮಾಡಿದ್ದರು ಮತ್ತು ರೇಬೀಸ್ ಇಂಜೆಕ್ಷನ್ ತೆಗೆದುಕೊಳ್ಳಲಿಲ್ಲ. ಅವರ ಸಾವಿಗೆ ಕೆಲವು ದಿನಗಳ ಮೊದಲು ಚಿತ್ರೀಕರಿಸಲಾದ ಬ್ರಿಜೇಶ … Continued

ಕಂಪನಿಯ ಚೀಫ್‌ ಹ್ಯಾಪಿನೆಸ್‌ ಆಫೀಸರ್‌ ಆಗಿ ನೇಮಕಗೊಂಡ ನಾಯಿ…! ಇದು ವಿಶೇಷ ಹುದ್ದೆಯಂತೆ…!! ಏನಿದರ ಕೆಲಸ..?

ಪ್ರತಿಯೊಂದು ಕಚೇರಿಯಲ್ಲೂ ಉತ್ಸಾಹ ಹೆಚ್ಚಿಸುವುದು ಮತ್ತು ʼನಗುʼ ಹೆಚ್ಚು ಸಮಯ ಇರುವಂತೆ ಮಾಡುವವರು ಯಾರಾದರೂ ಇದ್ದಿದ್ದರೆ… ಎಂದು ಊಹಿಸಿಕೊಂಡರೇ ಖುಷಿಯಾಗುತ್ತದೆ. ಈಗ ಹೈದರಾಬಾದ್‌ನಲ್ಲಿರುವ ಒಂದು ಕಂಪನಿಯು ಇದನ್ನೇ ಮಾಡಲು ಹೊರಟಿದೆ. ಹಲವರು ಇದನ್ನು ಇಷ್ಟಪಟ್ಟಿದ್ದಾರೆ. ಉದ್ಯಮಿ ರಾಹುಲ್ ಅರೆಪಾಕ ಎಂಬವರು ಇತ್ತೀಚೆಗೆ ತಮ್ಮ ಕಂಪನಿಯಲ್ಲಿ ಹೊಸದಾಗಿ ನೇಮಕಗೊಂಡ ವಿಶೇಷ ಉದ್ಯೋಗಿಯೊಬ್ಬರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ … Continued