ಕಾಶ್ಮೀರ : ಗುಂಡು ತಗುಲಿದ್ರೂ ಧೈರ್ಯದಿಂದ ಮುನ್ನುಗ್ಗಿ ಮೂವರು ಉಗ್ರರನ್ನು ಕೊಲ್ಲಲು ಸೇನೆಗೆ ನೆರವಾದ ನಾಯಿ ಟೈಸನ್‌…!

ಕಿಶ್ತ್ವಾರ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರದ ಛಾತ್ರು ಎಂಬ ದುರ್ಗಮ ಪ್ರದೇಶದ ಕಡಿದಾದ ಬೆಟ್ಟಗಳಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲು ಭಾರತೀಯ ಸೇನೆಯು ‘ಆಪರೇಷನ್ ಟ್ರಾಶಿ-1’ (Operation Trashi-I) ಎಂಬ ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದು, ಈ ಕಾರ್ಯಾಚರಣೆಯಲ್ಲಿ ಜೀವದ ಹಂಗು ತೊರೆದು ಖತರ್ನಾಕ್‌ ಭಯೋತ್ಪಾದಕರು ಎಲ್ಲಿದ್ದಾರೆಂದು ಪತ್ತೆ ಹಚ್ಚಿ ಅವರ ಸಾವಿಗೆ ಕಾರಣವಾದ ಸೇನೆಯ ಹೆಮ್ಮೆಯ … Continued

ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧ ? ಸಿದ್ದರಾಮಯ್ಯ ಸುಳಿವು

ಬೆಂಗಳೂರು: ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ವ್ಯಸನವನ್ನು  ಗಮನದಲ್ಲಿಟ್ಟುಕೊಂಡು ಈ ಕ್ರಮಕ್ಕೆ ಮುಂದಾಗಲು ಸರ್ಕಾರ ನಿರ್ಧರಿಸಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, … Continued

ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿಯ ಬಿಜೆಪಿ ಶಾಸಕ

ಗದಗ: ಕಾಮಗಾರಿ ಗುತ್ತಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುವಾಗ ಶಿರಹಟ್ಟಿಯ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ (Chandru Lamani) ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಸಕ ಚಂದ್ರು ಲಮಾಣಿಗೆ ಸೇರಿದ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆ ಮೇಲೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದ್ದು, … Continued

ಟ್ರಂಪ್‌ಗೆ ಭಾರೀ ಹಿನ್ನಡೆ: ಭಾರತ ಸೇರಿ ವಿವಿಧ ದೇಶಗಳ ಮೇಲೆ ವಿಧಿಸಿದ್ದ ಸುಂಕ ರದ್ದುಗೊಳಿಸಿದ ಅಮೆರಿಕ ಸುಪ್ರೀಂ ಕೋರ್ಟ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಟ್ರಂಪ್‌ ಅವರು ವಿವಿಧ ದೇಶಗಳ ಮೇಲೆ ವಿಧಿಸಿದ್ದ ಸುಂಕಗಳನ್ನು (Tariffs) ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಟ್ರಂಪ್ ಅವರು ವ್ಯಾಪಕವಾದ ಸುಂಕಗಳನ್ನು ಹೇರುವ ಮೂಲಕ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಬಳಸಬೇಕಾದ ಕಾನೂನಿನ ಅಡಿಯಲ್ಲಿ ಟ್ರಂಪ್ … Continued

ಫುಟ್ಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ಶಿಲ್ಲಾಂಗ್ ಸಂಸದ ರಿಕಿ ಸಿಂಗ್ಕೋನ್ ನಿಧನ

ಶಿಲ್ಲಾಂಗ್: ಮೇಘಾಲಯದ ‘ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ’ (VPP) ನಾಯಕ ಹಾಗೂ ಶಿಲ್ಲಾಂಗ್ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ರಿಕಿ ಎಜೆ ಸಿಂಗ್ಕೋನ್ (Ricky AJ Syngkon) ಅವರು ಗುರುವಾರ ಸಂಜೆ ಫುಟ್ಬಾಲ್ ಆಡುತ್ತಿದ್ದಾಗ ಹಠಾತ್ತನೆ ಕುಸಿದು ಬಿದ್ದು ನಿಧನರಾಗಿದ್ದಾರೆ ಈ ಅನಿರೀಕ್ಷಿತ ಘಟನೆಯು ಇಡೀ ರಾಜ್ಯದಾದ್ಯಂತ ತೀವ್ರ ಆಘಾತವನ್ನುಂಟುಮಾಡಿದೆ. ವರದಿಗಳ ಪ್ರಕಾರ, ಸಿಂಗ್ಕೋನ್ … Continued

ಜೆಫ್ರಿ ಎಪ್ಸ್ಟೀನ್‌ ಜೊತೆ ಸಂಪರ್ಕ : ಬ್ರಿಟನ್ ಮಾಜಿ ರಾಜಕುಮಾರ ಆಂಡ್ರ್ಯೂ ಬಂಧನ

ಲಂಡನ್: ಬ್ರಿಟನ್ ರಾಜಮನೆತನದ ಪ್ರಮುಖ ವ್ಯಕ್ತಿ ಹಾಗೂ ಕಿಂಗ್‌ ಚಾರ್ಲ್ಸ್ ಅವರ ಸಹೋದರ ಆಂಡ್ರ್ಯೂ ಮೌಂಟ್‌ಬ್ಯಾಟನ್-ವಿಂಡ್ಸರ್ (Andrew Mountbatten-Windsor) ಅವರನ್ನು ಸಾರ್ವಜನಿಕ ಹುದ್ದೆಯ ದುರುಪಯೋಗ ಮತ್ತು ಅಕ್ರಮ ನಡವಳಿಕೆಯ ಆರೋಪದ ಮೇಲೆ ಗುರುವಾರ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ವಿಶೇಷವೆಂದರೆ, ಆಂಡ್ರ್ಯೂ ಅವರ 66ನೇ ಜನ್ಮದಿನದಂದೇ ಈ ಬಂಧನ ನಡೆದಿದೆ. ಬ್ರಿಟನ್‌ನ ಥೇಮ್ಸ್ ವ್ಯಾಲಿ ಪೊಲೀಸ್ … Continued

ಯುವತಿಯ ಇನ್‌ಸ್ಟಾಗ್ರಾಮ್ ವೈರಲ್ ಆದ ನಂತ್ರ 6 ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಜೈಲು ಪಾಲು…!

ಸುಮಾರು ಆರು ವರ್ಷಗಳ ಕಾಲ ನಿರಂತರವಾಗಿ ಬೆನ್ನುಬಿದ್ದಿದ್ದ ವ್ಯಕ್ತಿಯ ಕಿರುಕುಳ ಮತ್ತು ಆನ್‌ಲೈನ್ ನಲ್ಲಿ ಆತನ ನಿಂದನೆಗಳ ವಿರುದ್ಧ ಹೋರಾಡುತ್ತಿದ್ದ ಅಮೂಲ್ಯ ಶರ್ಮಾ ಎಂಬ ಯುವತಿಗೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ಬೆದರಿಕೆ ಹಾಗೂ ಅವಹೇಳನಕಾರಿ ಇಮೇಲ್‌ಗಳನ್ನು ಕಳುಹಿಸುತ್ತಿದ್ದ ಅವರ ಹಳೆಯ ಸಹಪಾಠಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ನೋವಿನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ದೇಶಾದ್ಯಂತ … Continued

ಆಸ್ಟ್ರೇಲಿಯಾದಲ್ಲಿ ನಾವು ಪಾತ್ರೆ ತೊಳೆಯಬೇಕಾಯ್ತು…; ಪಾಕಿಸ್ತಾನ ಹಾಕಿ ಫೆಡರೇಶನ್ ವಿರುದ್ಧ ಹರಿಹಾಯ್ದ ಪಾಕ್‌ ಹಾಕಿ ತಂಡದ ನಾಯಕ…!

ಲಾಹೋರ್: ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆಯಾದ ಹಾಕಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗವಾಗಿದೆ.  ಪಾಕಿಸ್ತಾನವು ಆಟಗಾರರು ಅನುಭವಿಸಿದ ಅಮಾನವೀಯ  ಅವಮಾನಗಳು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇಂದು, ಬುಧವಾರ (ಫೆ.೧೮) ಮುಂಜಾನೆ ಲಾಹೋರ್ ವಿಮಾನ ನಿಲ್ದಾಣಕ್ಕೆ ಮರಳಿದ ತಂಡದ ನಾಯಕ ಶಕೀಲ್ ಅಹ್ಮದ್ ಬಟ್ ಅವರು, ತಮ್ಮದೇ ದೇಶದ ಹಾಕಿ ಫೆಡರೇಷನ್ (PHF) ವಿರುದ್ಧ ಅಕ್ಷರಶಃ … Continued

ಭಾರತ-ಫ್ರಾನ್ಸ್ ಸಂಬಂಧದಲ್ಲಿ ಹೊಸ ಯುಗ: 20ಕ್ಕೂ ಹೆಚ್ಚು ಒಪ್ಪಂದಗಳ ಘೋಷಣೆ ಮಾಡಿದ ಮೋದಿ-ಮ್ಯಾಕ್ರನ್

ಮುಂಬೈ: ಮುಂಬೈನಲ್ಲಿ ನಡೆದ ವ್ಯಾಪಕ ದ್ವಿಪಕ್ಷೀಯ ಮಾತುಕತೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಂಗಳವಾರ ರಕ್ಷಣೆ, ಕೌಶಲ್ಯ, ತಂತ್ರಜ್ಞಾನ ಸಹಕಾರ, ವ್ಯಾಪಾರ ಮತ್ತು ಆರೋಗ್ಯ ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳನ್ನು ಘೋಷಿಸಿದರು. ಅಧ್ಯಕ್ಷ ಮ್ಯಾಕ್ರನ್ ನವದೆಹಲಿಯಲ್ಲಿ ನಡೆಯಲಿರುವ 2026 ರ AI ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಪ್ರಧಾನಿ ಮೋದಿ … Continued

ತನ್ನ ಕೋಡ್ ತಿರಸ್ಕರಿಸಿದ್ದಕ್ಕೆ ಎಂಜಿನಿಯರ್‌ ವಿರುದ್ಧವೇ ತಿರುಗಿಬಿದ್ದ ಎಐ (AI) ಬೋಟ್ : ಸಾರ್ವಜನಿಕವಾಗಿ ಅವಮಾನಿಸಲು ಯತ್ನ…!

 ಮುಕ್ತ ಆಕರ ತಂತ್ರಾಂಶ (Open-source software) ಲೋಕದಲ್ಲಿ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಮನುಷ್ಯನ ನಡುವೆ ವೈಯಕ್ತಿಕ ಎನ್ನಬಹುದಾದ ಸಂಘರ್ಷವೊಂದು ನಡೆದಿದೆ. ಜನಪ್ರಿಯ ಡೇಟಾ ವಿಶುವಲೈಸೇಶನ್ ಲೈಬ್ರರಿಯಾದ ‘ಮ್ಯಾಟ್‌ಪ್ಲಾಟ್‌ಲಿಬ್’ನ ಕೋಡ್‌ ವಿಭಾಗದಲ್ಲಿ AI ಏಜೆಂಟ್‌ ಒಂದು ತನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದ ಮಾನವ ಡೆವಲಪರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದು ತಾಂತ್ರಿಕ ವಲಯದಲ್ಲಿ … Continued