ಬಾರ್ಕ್‌ ವಿಜ್ಞಾನಿ ಸೋಗಿನಲ್ಲಿ ಇರಾನ್‌ ಗೆ ನ್ಯೂಕ್ಲಿಯರ್ ವಿನ್ಯಾಸ ಮಾರಾಟಕ್ಕೆ ಯತ್ನ: ಬಂಧನ

ಮುಂಬೈ: ಬಾಬಾ ಅಣು ಸಂಶೋಧನಾ ಕೇಂದ್ರದ (BARC) ವಿಜ್ಞಾನಿ ಎಂದು ನಟಿಸಿ ಇರಾನ್‌ನಲ್ಲಿರುವ ಕಂಪನಿಗಳಿಗೆ ಪರಮಾಣು ಸಂಬಂಧಿತ ವಿನ್ಯಾಸವನ್ನು “ವೈಜ್ಞಾನಿಕ ಸಹಯೋಗ” ಮತ್ತು “ಸಂಶೋಧನಾ ಸಹಭಾಗಿತ್ವ”ದ ನೆಪದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ 60 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತನ ಸಹೋದರನನ್ನೂ ಸಹ ಬಂಧಿಸಲಾಗಿದೆ. ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಅಖ್ತರ್ ಹುಸೇನಿ ಕುತ್ಬುದ್ದೀನ್ … Continued

ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಮುಂಬೈ : ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸೆಂಬರ್ 8ರಂದು ತಮ್ಮ 90ನೇ ವರ್ಷಕ್ಕೆ ಕಾಲಿಡುತ್ತಿರುವ ಅವರು ರೂಟೀನ್‌ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಸದ್ಯಕ್ಕೆ ಅವರು ವೈದ್ಯರ ನಿಗಾದಲ್ಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ವರದಿಗಳ ಪ್ರಕಾರ, ಧರ್ಮೇಂದ್ರ ಅವರ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರು … Continued

ಮುಂಬೈ | 17 ಮಕ್ಕಳನ್ನು ಒತ್ತೆ ಇರಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ಗುಂಡಿಗೆ ಬಲಿ ; ಮಕ್ಕಳ ರಕ್ಷಣೆ

ಮುಂಬೈ: ಮುಂಬೈನ ಪೊವಾಯಿ ಪ್ರದೇಶದಲ್ಲಿ ಗುರುವಾರ 17 ಮಕ್ಕಳನ್ನು ಒತ್ತೆ ಇರಿಸಿದ್ದ ಆರೋಪಿ ರೋಹಿತ್ ಆರ್ಯ ಎಂಬಾತ, ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ಕಾರ್ಯಾಚರಣೆಯ ಮೂಲಕ ಒತ್ತೆಯಲ್ಲಿದ್ದ ಎಲ್ಲಾ ಮಕ್ಕಳನ್ನು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ಟುಡಿಯೋದಲ್ಲಿ ನಾಟಕೀಯ ಘಟನೆ ಈ ನಾಟಕೀಯ ಘಟನೆಯು ‘ಆರ್.ಎ. ಸ್ಟುಡಿಯೋಸ್’ (RA Studios) ಎಂಬ … Continued

ವಿಶ್ವದ ಅತ್ಯಂತ ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ದೆಹಲಿ ನಂ.1, ಕೋಲ್ಕತ್ತಾ, ಮುಂಬೈ ಕೂಡ ಟಾಪ್ 10 ಪಟ್ಟಿಯಲ್ಲಿ

 ನವದೆಹಲಿ: ಭಾರತದಲ್ಲಿನ ವಾಯುಮಾಲಿನ್ಯದ ಸಮಸ್ಯೆ ಮತ್ತೊಮ್ಮೆ ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಸ್ವಿಟ್ಜರ್ಲೆಂಡ್ ಮೂಲದ ವಾಯು ಗುಣಮಟ್ಟ ಸಂಸ್ಥೆ IQAir ಇತ್ತೀಚೆಗೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಭಾರತದ ರಾಜಧಾನಿ ದೆಹಲಿಯು ವಿಶ್ವದ ಅತ್ಯಂತ ಮಾಲಿನ್ಯ ಹೊಂದಿದ ನಗರ ಎಂಬ ಕುಖ್ಯಾತಿ ಪಡೆದುಕೊಂಡಿದೆ. ವಾಯು ಗುಣಮಟ್ಟದ ನೈಜ ಸಮಯದ ಆಧಾರದ ಮೇಲೆ ನಗರಗಳನ್ನು ಶ್ರೇಣೀಕರಿಸಿರುವ ಈ ವರದಿಯಲ್ಲಿ, … Continued

1977ರಲ್ಲಿ ಗೆಳತಿಗೆ ಇರಿದ ವ್ಯಕ್ತಿಯನ್ನು 48 ವರ್ಷಗಳ ನಂತರ ಬಂಧಿಸಿದ ಪೊಲೀಸರು-ಜಾಮೀನು ; 81ನೇ ವಯಸ್ಸಿಗೆ ವಿಚಾರಣೆ…

ಮುಂಬೈ: ತನ್ನ ಗೆಳತಿಗೆ ಚಾಕುವಿನಿಂದ ಇರಿದ ಆರೋಪಿಗೆ ಘಟನೆ ನಡೆದ 48 ವರ್ಷಗಳ ನಂತರ ವಿಚಾರಣೆ ಎದುರಿಸಲಿದ್ದಾರೆ. ದಕ್ಷಿಣ ಮುಂಬೈನ ಕೊಲಾಬಾದಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ 1977 ರಿಂದ “ತಲೆಮರೆಸಿಕೊಂಡಿದ್ದ” 81 ವರ್ಷದ ಚಂದ್ರಶೇಖರ ಮಧುಕರ ಕಾಳೇಕರ ಅವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಾಸಿಕ್ಯೂಷನ್‌ನ ಪ್ರಕಾರ, ಕಾಳೇಕರ … Continued

ದೇಶದಲ್ಲೇ ಅತಿದೊಡ್ಡ ಸೈಬರ್‌ ವಂಚನೆ ; ₹58 ಕೋಟಿ ಮೊತ್ತದ ‘ಡಿಜಿಟಲ್ ಅರೆಸ್ಟ್’ ಪ್ರಕರಣ ಭೇದಿಸಿದ ಪೊಲೀಸರು…!

ಮುಂಬೈ : ಮುಂಬೈನಲ್ಲಿ ನಡೆದ ಬರೋಬ್ಬರಿ 58.13 ಕೋಟಿ ರೂಪಾಯಿ ಮೌಲ್ಯದ ‘ವರ್ಚುವಲ್ ಅರೆಸ್ಟ್’ (ಕಲ್ಪಿತ ಬಂಧನ) ಹಗರಣವನ್ನು ಮಹಾರಾಷ್ಟ್ರ ಸೈಬರ್ ಪೊಲೀಸರು ಭೇದಿಸಿದ್ದು, ಈ ಸಂಬಂಧ ಏಳು ಜನರನ್ನು ಬಂಧಿಸಿದ್ದಾರೆ. ಇದು ದೇಶದಲ್ಲಿ ಇತ್ತೀಚೆಗೆ ವರದಿಯಾದ ಇಂತಹ ಅತಿ ದೊಡ್ಡ ಸೈಬರ್‌ ವಂಚನೆ ಪ್ರಕರಣ ಎಂದು ಹೇಳಲಾಗಿದೆ. ಮುಂಬೈನ 72 ವರ್ಷದ ಹಿರಿಯ ನಾಗರಿಕರೊಬ್ಬರಿಗೆ … Continued

ಹಿರಿಯ ನಟ, ಜನಪ್ರಿಯ ಧಾರಾವಾಹಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರಧಾರಿ ಪಂಕಜ ಧೀರ್ ನಿಧನ

ಮುಂಬೈ: ಬಿ.ಆರ್. ಚೋಪ್ರಾ ಅವರ 1988 ರ ಟಿವಿ ಸರಣಿ ‘ಮಹಾಭಾರತ’ದಲ್ಲಿ ‘ಕರ್ಣ’ನ ಪಾತ್ರದ ಮೂಲಕ ಮನೆ ಮಾತಾಗಿದ್ದ ನಟ ಪಂಕಜ ಧೀರ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಂಕಜ ಧೀರ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಪಂಕಜ ಧೀರ್ ಅವರು ‘ಚಂದ್ರಕಾಂತಾ’, … Continued

ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅಕ್ಟೋಬರ್ 8-9ರಂದು ಭಾರತಕ್ಕೆ ಮೊದಲ ಅಧಿಕೃತ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಅಕ್ಟೋಬರ್ 8-9ರಂದು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಪ್ರಕಟಿಸಿದೆ. ಎರಡು ದಿನಗಳ ಭೇಟಿಯ ಸಮಯದಲ್ಲಿ, ಇಬ್ಬರು ನಾಯಕರು ಭಾರತ-ಬ್ರಿಟನ್‌ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ … Continued

ಆನ್‌ ಲೈನ್‌ ಗೇಮ್‌ ಆಡುವಾಗ ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ…’ ಆನ್‌ಲೈನ್‌ ಗೇಮ್‌ ಭಯಾನಕತೆ ಬಿಚ್ಚಿಟ್ಟ ನಟ ಅಕ್ಷಯಕುಮಾರ

ಮುಂಬೈ: ಮಕ್ಕಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧದ ಪ್ರವೃತ್ತಿಯ ಬಗ್ಗೆ ಎತ್ತಿ ತೋರಿಸಲು ಬಾಲಿವುಡ್‌ ನಟ ಅಕ್ಷಯಕುಮಾರ ತಮ್ಮ 13 ವರ್ಷದ ಮಗಳು ವೀಡಿಯೊ ಗೇಮ್ ಆಡುತ್ತಿದ್ದಾಗಿನ ಘಟನೆಯನ್ನು ಶುಕ್ರವಾರ ನೆನಪಿಸಿಕೊಂಡಿದ್ದಾರೆ. ಕೆಲತಿಂಗಳ ಹಿಂದೆ ತಮ್ಮ ಮಗಳು ಆನ್‌ಲೈನ್‌ ವೀಡಿಯೊ ಗೇಮ್‌ ಆಡುತ್ತಿದ್ದಾಗ, ಅನಾಮಿಕ ವ್ಯಕ್ತಿಯೊಬ್ಬ ಆನ್‌ಲೈನ್‌ಗೆ ಬಂದು ಆಕೆಯ ಚಿತ್ರವನ್ನು ಕಳಿಸುವಂತೆ ಹೇಳಿದ್ದ ಎಂದು ಅಕ್ಷಯಕುಮಾರ … Continued

ಬೆಂಗಳೂರು-ಮುಂಬೈ ಮಧ್ಯೆ ನೂತನ ಸೂಪರ್‌ ಫಾಸ್ಟ್ ರೈಲು ಆರಂಭಕ್ಕೆ ಗ್ರೀನ್‌ ಸಿಗ್ನಲ್‌

ಬೆಂಗಳೂರು : ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವಾಲಯವು ಅನುಮೋದನೆ ನೀಡಿದೆ. ಇದರಿಂದ ಸುಮಾರು 30 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆ ಬಹುತೇಕ ಈಡೇರುವ ಹಂತಕ್ಕೆ ಬಂದುನಿಂತಂತಾಗಿದೆ. ಬಿಜೆಪಿ ನಾಯಕ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ ಈ ವಿಷಯ ಪ್ರಕಟಿಸಿದ್ದಾರೆ. ಸಂಸತ್ತು, … Continued