ವೀಡಿಯೊ..| ಓಲಾ ಸರ್ವೀಸ್‌ ಕೇಂದ್ರ ಕೊಟ್ಟ ಬಿಲ್‌ ನೋಡಿ ಶೋ ರೂಂ ಮುಂದೆಯೇ ಓಲಾ ಇ-ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ ಗ್ರಾಹಕ…!

ಕೋಪಗೊಂಡ ಓಲಾ ಎಲೆಕ್ಟ್ರಿಕ್ ಗ್ರಾಹಕರೊಬ್ಬರು ಕಂಪನಿಯ ಶೋರೂಂ ಮುಂದೆಯೇ ಸುತ್ತಿಗೆಯಿಂದ ಬಡಿದು ತನ್ನ ಓಲಾ ಸ್ಕೂಟರ್ ಅನ್ನು ಒಡೆದು ಹಾಕಿದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಹನವನ್ನು ಖರೀದಿಸಿದ ಕೇವಲ ಒಂದು ತಿಂಗಳ ನಂತರ ಸೇವಾ ಕೇಂದ್ರವು ನೀಡಿದ 90,000 ರೂ.ಗಳ ಬೃಹತ್ ಬಿಲ್‌ ನೋಡಿ ಹತಾಶೆಯಿಂದ ವ್ಯಕ್ತಿಯ ಆಕ್ರೋಶವು ಸ್ಪೋಟಗೊಂಡಿದೆ ಎಂದು … Continued

ವೀಡಿಯೊ…| ಚುನಾವಣೆಯಲ್ಲಿ ಗೆಲುವು ; ವಿಜಯೋತ್ಸವದ ವೇಳೆ ಒಮ್ಮೆಗೇ ಹೊತ್ತಿ ಉರಿದ ಬೆಂಕಿ, ಹಲವರಿಗೆ ಗಾಯ

ಬೆಳಗಾವಿ: ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಾಜಿ ಪಾಟೀಲ ಅವರ ವಿಜಯೋತ್ಸವದ ವೇಳೆ ಅವಘಡ ಸಂಭವಿಸಿದೆ. ಅವಘಡದಲ್ಲಿ ಮೆರವಣಿಗೆಯಲ್ಲಿದ್ದ ಕೆಲ ಮಹಿಳೆಯರಿಗೂ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಗಡಿಭಾಗವಾದ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದ … Continued

ವೀಡಿಯೊ..| ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಹಾವನ್ನು ನೀರಿನಿಂದ ಜಿಗಿದು ಕಚ್ಚಿ ಹಿಡಿದು ಮೀನು ; ಮತ್ತೊಂದು ಮೀನಿನ ಎಂಟ್ರಿ : ಮುಂದೇನಾಯ್ತು…ಅಚ್ಚರಿ !

ಪ್ರತಿಯೊಂದು ಜೀವಿಗೂ ಪ್ರಕೃತಿ ವಿಶೇಷತೆಯನ್ನು ನೀಡಿದೆ. ಇದರಿಂದಾಗಿಯೇ ಪ್ರತಿಯೊಂದು ಜೀವಿಯು ಇನ್ನೊಂದಕ್ಕಿಂತ ಭಿನ್ನವಾಗಿ ಕಾಣುತ್ತದೆ. ಒಂದು ಪ್ರಾಣಿಗೆ ಬೇಟೆಗಾರನಾಗಿ ಪರಿಣಮಿಸುವ ಪ್ರಾಣಿ ಮತ್ತೊಂದು ಪ್ರಾಣಿಯ ಬೇಟೆಗೆ ತಾನೇ ಬಲಿಯಾಗುತ್ತದೆ. ಇದು ಪ್ರಕೃತಿಯ ನಿಯಮವಾಗಿದೆ. ಇದರಲ್ಲಿ ಕೇವಲ ಬಲಶಾಲಿ ಮಾತ್ರವಾದರೆ ಸಾಲದು. ಬಲದ ಜೊತೆಗೆ ಬುದ್ಧಿವಂತಿಕೆಯೂ ಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಅದರ ಮೂಲಕ … Continued

ವೀಡಿಯೊ..| ಮಹಾಯುದ್ಧದ ಭೀತಿ ; ಮೊದಲ ಬಾರಿಗೆ ತನ್ನ ಮೇಲೆ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ರಷ್ಯಾ : ಉಕ್ರೇನ್‌

ಇದೇ ಮೊದಲ ಬಾರಿಗೆ ರಷ್ಯಾದಿಂದ ಪರಮಾಣು ಅಲ್ಲದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ICBM) ಉಡಾವಣೆಯಾಗುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಹೊರಹೊಮ್ಮಿದೆ. ಇದು ಯುದ್ಧದಲ್ಲಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯ ಮೊದಲ ಬಳಕೆ ಎಂದು ಹೇಳಲಾಗಿದೆ. ಇದು ರಷ್ಯಾ ಮತ್ತು ಉಕೇನ್‌ ನಡುವೆ ನಡೆಯುತ್ತಿರುವ ಸಂಘರ್ಷದ ಉಲ್ಬಣವನ್ನು ಸೂಚಿಸುತ್ತದೆ. ಉಕ್ರೇನ್‌ನ ಕೇಂದ್ರ ನಗರವಾದ ದ್ನಿಪ್ರೊವನ್ನು ಗುರಿಯಾಗಿಟ್ಟುಕೊಂಡು ಪರಮಾಣು ಸಿಡಿತಲೆ ಹೊತ್ತೊಯ್ಯುವ … Continued

ವೀಡಿಯೊ…| ಒಂದೇ ಬೈಕ್‌ನಲ್ಲಿ 8 ಜನರ ಪ್ರಯಾಣ; ಬೈಕ್‌ ತಡೆದ ಪೊಲೀಸರೇ ಶಾಕ್‌…!

ಶಹಜಹಾನಪುರ : ಅಚ್ಚರಿಯ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ಕುಟುಂಬದ ಏಳು ಜನರೊಂದಿಗೆ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಸವಾರಿಯನ್ನು ಸ್ಥಳೀಯ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ನಿಲ್ಲಿಸಿದ್ದು, ಬೈಕಿನಲ್ಲಿ ಎಂಟು ಜನ ಹೋಗುತ್ತಿರುವುದನ್ನು ನೋಡಿ ಪೊಲೀಸ್‌ ಅಧಿಕಾರಿಯೇ ಗಬರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಹಜಹಾನಪುರದ ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಿಂದ … Continued

ವೀಡಿಯೊ…| ಸೈಕಲ್ ಮೇಲಿದ್ದ 5 ವರ್ಷದ ಬಾಲಕನ ಮೇಲೆ ಓಡಿದ ಕಾರು ; ಪವಾಡ ಸದೃಶರೀತಿಯಲ್ಲಿ ಪಾರಾದ ಬಾಲಕ…!

ಸೈಕಲ್ ಮೇಲೆ ಕುಳಿತು ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದ ಕಾರು ಆತನ ಮೇಲೆ ಹತ್ತಿ ಹೋದರೂ ಆತ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಮಧ್ಯಪ್ರದೇಶದ ಬೇತುಲ್‌ ಎಂಬಲ್ಲಿ ನಡೆದಿದೆ. ಈ ಘಟನೆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೇತುಲ್ ಜಿಲ್ಲೆಯ ಕೊತ್ವಾಲಿ ಪೊಲೀಸ್ … Continued

ವೀಡಿಯೊ…| ಗರ್ಭಿಣಿ ಸಾಗಿಸುತ್ತಿದ್ದ ಆಂಬುಲೆನ್ಸ್‌ ಏಕಾಏಕಿ ಸ್ಫೋಟ ; ಹತ್ತಿರದ ಮನೆಗಳ ಕಿಟಕಿಗಳು ಛಿದ್ರ…!

ಮುಂಬೈ: ಮಹಾರಾಷ್ಟ್ರದ ಜಲ್ಗಾಂವ್‌ ಜಿಲ್ಲೆಯಲ್ಲಿ ಅಂಬ್ಯುಲೆನ್ಸ್‌ಗೆ ಬೆಂಕಿ ತಗುಲಿದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಆಂಬುಲೆನ್ಸ್‌ ಸ್ಫೋಟಗೊಂಡಿದೆ. ಅದರಲ್ಲಿದ್ದ ಗರ್ಭಿಣಿ ಮತ್ತು ಅವರ ಕುಟುಂಬದವರು ಪವಾಡ ಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಆಂಬುಲೆನ್ಸ್‌ ಸ್ಫೋಟದ ತೀವ್ರತೆಯ ಪರಿಣಾಮದಿಂದ ಹತ್ತಿರದ ಮನೆಗಳ ಕಿಟಕಿಗಳು ಸಹ ಛಿದ್ರಗೊಂಡಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ , ಪ್ರಾಣಹಾನಿ ಸಂಭವಿಸಿಲ್ಲ ಎಂದು … Continued

ವೀಡಿಯೊ…| ಅಪಾಯಕಾರಿ ಹೈ-ವೋಲ್ಟೇಜ್ ಎಲೆಕ್ಟ್ರಿಕ್ ಟವರ್ ಏರಿದ ವ್ಯಕ್ತಿ ; ಅದರ ಮೇಲೆಯೇ ನೃತ್ಯ…!

ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಹೈವೋಲ್ಟೇಜ್ ಎಲೆಕ್ಟ್ರಿಕ್ ಟವರ್ ಅನ್ನು ಏರಿ ಹಲವರ ಆತಂಕಕ್ಕೆ ಕಾಣವಾದ ಘಟನೆ ಭಾನುವಾರ ನಡೆದಿದೆ. ದೆಹಲಿ ಸಮೀಪದ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 113 ರಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಹೈಟೆನ್ಷನ್ ಟವರ್‌ ಅನ್ನು ಹತ್ತಿ ಅದರ ಮೇಲೆ ಡ್ಯಾನ್ಸ್‌ … Continued

ವೀಡಿಯೊ…| ಹಳೆಯ ಕಾರಿಗೆ 4 ಲಕ್ಷ ರೂ. ವೆಚ್ಚದಲ್ಲಿ ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ ; ಕಾರ್ಯಕ್ರಮದಲ್ಲಿ 1500 ಜನ ಭಾಗಿ…!

ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ ನಡೆದ ವರದಿಯಾಗಿದೆ. ಮಾರುತಿ ಸುಜುಕಿ ವ್ಯಾಗನ್ ಆರ್ ಮಾಲೀಕರೊಬ್ಬರು ತಮ್ಮ ಪ್ರೀತಿಯ ಕಾರಿಗೆ ‘ಸಮಾಧಿ ಸಮಾರಂಭ’ ಅಥವಾ ಅಂತ್ಯಕ್ರಿಯೆ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ…! ಈ ಅಂತ್ಯಕ್ರಿಯೆಯಲ್ಲಿ ಬರೋಬ್ಬರಿ 1,500 ಜನರ ಬೃಹತ್ ಜನಸ್ತೋಮ ಸೇರಿತ್ತು. ಕಾರಿನ ಮಾಲೀಕರ ಪ್ರಕಾರ, ವ್ಯಾಗನ್ ಆರ್ 12 ವರ್ಷಗಳಿಂದ ಅವರ ಬಳಿ … Continued

ವೀಡಿಯೊ..| ಪಾಕಿಸ್ತಾನದ ರೈಲು ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ; ಸಾವಿನ ಸಂಖ್ಯೆ 24ಕ್ಕೆ ಏರಿಕೆ; ಸ್ಫೋಟದ ಕ್ಷಣ ಸಿಸಿಟಿವಿಯಲ್ಲಿ ಸೆರೆ

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ರೈಲು ನಿಲ್ದಾಣದ ಬಳಿ ನಡೆದ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ ಮತ್ತು 46 ಜನರು ಗಾಯಗೊಂಡಿದ್ದಾರೆ. ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (BLA) ದಾಳಿಯ ಹೊಣೆ ಹೊತ್ತುಕೊಂಡಿದೆ. ರೈಲು ತನ್ನ ಪ್ಲಾಟ್‌ಫಾರ್ಮ್‌ಗೆ ಬರುವ ಮುನ್ನವೇ ರೈಲ್ವೆ ನಿಲ್ದಾಣದ ಬುಕಿಂಗ್ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪಾಕಿಸ್ತಾನದ … Continued