‘ಎಐ ಸಮಿಟ್’ ಪ್ರತಿಭಟನೆ | ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನದ ನಂತ್ರ ಹೈಡ್ರಾಮಾ ; ಪೊಲೀಸ್‌ vs ಪೊಲೀಸ್‌

ನವದೆಹಲಿ: ಕಳೆದ ವಾರ ದೆಹಲಿಯಲ್ಲಿ ನಡೆದ ‘ಎಐ ಸಮಿಟ್’ (AI Summit) ವೇಳೆ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಬಂಧನದ ವಿಚಾರವಾಗಿ, ಶಿಮ್ಲಾದಲ್ಲಿ ಬುಧವಾರ ತಡರಾತ್ರಿ ದೆಹಲಿ ಮತ್ತು ಹಿಮಾಚಲ ಪ್ರದೇಶ ಪೊಲೀಸರ ನಡುವೆ ಅಸಾಧಾರಣ ಜಟಾಪಟಿ ನಡೆದಿದೆ. ಅಂತರರಾಜ್ಯ ಪೊಲೀಸ್ ಕಾರ್ಯಾಚರಣೆಯಾಗಿ ಆರಂಭವಾದ ಈ ಘಟನೆ, ವಾಹನಗಳ ತಡೆ, ವಾಗ್ವಾದ … Continued

ವೀಡಿಯೊ…| ಆಸ್ಪತ್ರೆಯಿಂದ ಕತ್ತರಿಸಿದ ಮಾನವನ ಕಾಲು ಕಚ್ಚಿಕೊಂಡು ಓಡಿದ ಬೀದಿ ನಾಯಿ…!

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ, ಬೀದಿ ನಾಯಿಯೊಂದು ಕತ್ತರಿಸಿದ ಮಾನವನ ಕಾಲನ್ನು ಕಚ್ಚಿಕೊಂಡು ಓಡಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ಘಟನೆಯು ಶಿಮ್ಲಾದ ಅಟಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೂಪರ್ ಸ್ಪೆಷಾಲಿಟಿಸ್‌ ಆಸ್ಪತ್ರೆಯ ಹೊರಗಡೆ ನಡೆದಿದೆ. ನಾಯಿಯೊಂದು ಮನುಷ್ಯನ ಕತ್ತರಿಸಿದ ಕಾಲನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡುತ್ತಿರುವ … Continued

ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಮುನ್ನ ಭಾರತ ತಂಡ ಸೇರಿಕೊಳ್ಳಲಿರುವ ಬ್ಯಾಟರ್‌ ರಿಂಕು ಸಿಂಗ್

ಚೆನ್ನೈ: ಫೆಬ್ರವರಿ 25, ಬುಧವಾರ ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಬ್ಯಾಟಿಂಗ್ ಕೋಚ್ ನೀಡಿದ ಮಾಹಿತಿ ಪ್ರಕಾರ, ರಿಂಕು ಸಿಂಗ್ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ. ಗುರುವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಸೂಪರ್ 8 ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಕುಟುಂಬದ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ … Continued

1917ರಲ್ಲಿ ಭಾರತದ ಉದ್ಯಮಿಯಿಂದ 35000 ರೂ. ಸಾಲ ಪಡೆದಿದ್ದ ಬ್ರಿಟಿಷ್‌ ಸರ್ಕಾರ ; 109 ವರ್ಷಗಳ ಬಳಿಕ ವಾಪಸ್ ಕೇಳಿದ ಮೊಮ್ಮಗ…!

ಭೋಪಾಲ್: ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಸೂರ್ಯ ಮುಳುಗದ ಸಾಮ್ರಾಜ್ಯ ಎಂದುಕರೆಯಲಾಗುತ್ತಿತ್ತು. ಆದರೆ, ಅದೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಂದು ಕಾಲದಲ್ಲಿ ಭಾರತದ ಸಾಮಾನ್ಯ ಉದ್ಯಮಿಯೊಬ್ಬರು ಸಾಲ ನೀಡಿದ್ದರು ಎಂದರೆ ನಂಬಲು ಅಸಾಧ್ಯ. ಮಧ್ಯಪ್ರದೇಶದ ಸೆಹೋರ್ ಪಟ್ಟಣದ ಶ್ರೀಮಂತ ಉದ್ಯಮಿಯೊಬ್ಬರು ಬ್ರಿಟಿಷರಿಗೆ ನೀಡಿದ್ದ ಸಾಲದ ವಿಚಾರ ಈಗ ಒಂದು ಶತಮಾನದ ನಂತರ ಮುನ್ನೆಲೆಗೆ ಬಂದಿದೆ. ಸುಮಾರು 109 … Continued

ನಕಲಿ ಕಾನೂನು ಪದವಿ ಸರ್ಟಿಫಿಕೆಟ್‌ ಬಳಸಿ ಪಾಕಿಸ್ತಾನ ಹೈಕೋರ್ಟ್‌ನಲ್ಲಿ 5 ವರ್ಷ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ

ಇಸ್ಲಾಮಾಬಾದ್: ಕಾನೂನು ಪದವಿಯೇ ಇಲ್ಲದ ವ್ಯಕ್ತಿಯೊಬ್ಬ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಐದು ವರ್ಷಗಳ ಕಾಲ ತೀರ್ಪುಗಳನ್ನು ನೀಡಿದ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ,  ಇಸ್ಲಾಮಾಬಾದ್ ಹೈಕೋರ್ಟ್‌ನ (IHC) ನ್ಯಾಯಮೂರ್ತಿಯಾಗಿದ್ದ ತಾರಿಕ್ ಮಹಮೂದ್ ಜಹಾಂಗೀರಿ ಅವರ ಕಾನೂನು ಪದವಿ ನಕಲಿ ಎಂದು ಸಾಬೀತಾಗಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಿ ನ್ಯಾಯಾಲಯ ಆದೇಶಿಸಿದೆ. … Continued

ಯಲ್ಲಾಪುರ : ಶಿರಸಿ ಮಾರಿಜಾತ್ರೆಯಲ್ಲಿ ಕಳ್ಳತನಕ್ಕೆ ಯೋಜಿಸಿದ್ದ ಅಂತಾರಾಜ್ಯ ಕಳ್ಳರ ಬಂಧನ

ಯಲ್ಲಾಪುರ : ಇಲ್ಲಿ ದರೋಡೆ ನಡೆಸಿ ಮುಂದೆ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ದರೋಡೆ ಮಾಡಲು ಯೋಜಿಸಿದ್ದ ಎಂಟು ಜನ ಅಂತಾರಾಜ್ಯ ದರೋಡೆಕೋರರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ ಬಳಿಯ  ಕೆ ಮಿಲನ್ ಹೋಟೆಲ್ ಹತ್ತಿರ ಬುಧವಾರ ಬೆಳಗಿನ ಜಾವ ಪೋಲಿಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.  ಪಿಎಸ್ಐ ಸಿದ್ದಪ್ಪ ಗುಡಿ ತಮ್ಮ ತಂಡದೊಂದಿಗೆ … Continued

ವೀಡಿಯೊ | ಕರ್ನಾಟಕದ ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಆರಂಭ : ಗದ್ದುಗೆಯಲ್ಲಿ ದೇವಿ ವಿರಾಜಮಾನ

ಶಿರಸಿ: ಕರ್ನಾಟಕದ ಅತಿದೊಡ್ಡ ಜಾತ್ರೆಯಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ರಥೋತ್ಸವ ಬುಧವಾರ ಅತ್ಯಂತ ಸಡಗಡ ಸಂಭ್ರಮದಿಂದ ಚಾಲನೆಗೊಂಡಿತು. ರಥದಲ್ಲಿ ಆಗಮಿಸಿದ ಭಕ್ತರ ಆರಾಧ್ಯ ದೈವ ಮಾರಿಕಾಂಬಾ ದೇವಿಯು  ಜಾತ್ರಾ  ಗದ್ದುಗೆಗೆ ಆಗಮಿಸಿ ಬುಧವಾರ ಪ್ರತಿಷ್ಠಾಪನೆಗೊಂಡಿದ್ದಾಳೆ..  ಶ್ರೀ ಮಾರಿಕಾಂಬೆಯ ದರ್ಶನಕ್ಕಾಗಿ ಆಗಮಿಸಿದ ಲಕ್ಷಾಂತರ ಭಕ್ತರು ಈ ರಥೋತ್ಸವಕ್ಕೆ ಸಾಕ್ಷಿಯಾಗುವ ಮೂಲಕ … Continued

ಮದುವೆ ನಡೆಯುತ್ತಿದ್ದಾಗಲೇ ಮದುಮಗಳ ಮೇಲೆ ಗುಂಡಿನ ದಾಳಿ

ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ, ‘ಜೈಮಾಲಾ’ ಕಾರ್ಯಕ್ರಮದ ವೇಳೆ ವಧುವಿನ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಪರಾರಿಯಾದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯು ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೌಸಾ ನಗರ ಪಂಚಾಯತ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವರನ ಕಡೆಯವರು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಿಂದ ಮೆರವಣಿಗೆಯೊಂದಿಗೆ … Continued

ವೀಡಿಯೊ | ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ : ಕರ್ನಾಟಕ ಆಟಗಾರನಿಗೆ ತಲೆಯಿಂದ ಡಿಚ್ಚಿ ಹೊಡೆದ ಜಮ್ಮು ತಂಡದ ನಾಯಕ

ಹುಬ್ಬಳ್ಳಿ: ಇಲ್ಲಿನ ಕೆ.ಎಸ್.ಸಿ.ಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಿನ 2025-26ರ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನದಂದು ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಜಮ್ಮು-ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಅವರು ಕರ್ನಾಟಕದ ಫೀಲ್ಡರ್ ಕೆ.ವಿ. ಅನೀಶ್ ಅವರಿಗೆ ತಲೆಯಿಂದ ಡಿಚ್ಚಿ ಹೊಡೆದ (Headbutt) ಪ್ರಸಂಗ ನಡೆದಿದೆ. ಜಮ್ಮು-ಕಾಶ್ಮೀರ ಇನಿಂಗ್ಸ್‌ನ 101ನೇ … Continued

ವೀಡಿಯೊ ವೀಕ್ಷಿಸಿ | ವಿಶ್ವದಾಖಲೆ ಬರೆದ ಈ 181 ಅಡಿ ಉದ್ದದ ಚಾಕೊಲೇಟ್ ರೈಲು ; ಇದು ಒಲಿಂಪಿಕ್ ಈಜುಕೊಳಕ್ಕಿಂತ ಉದ್ದವಿದೆ…!

ನಾವು ಸಾಮಾನ್ಯವಾಗಿ ಚಾಕೊಲೇಟ್ ಎಂದರೆ ಪುಟ್ಟ ಬಾರ್‌ಗಳು, ಟ್ರಫಲ್ಸ್ ಅಥವಾ ಸುಂದರವಾದ ಕೇಕ್‌ಗಳನ್ನು ಕಲ್ಪಿಸಿಕೊಳ್ಳುತ್ತೇವೆ. ಆದರೆ, ಇಟಲಿಯ ಮಿಲನ್‌ನಲ್ಲಿ ಚಾಕೊಲೇಟ್ ಕೇವಲ ತಿನ್ನುವ ವಸ್ತುವಾಗಿ ಉಳಿಯದೆ, ಒಂದು ಬೃಹತ್ ಕಲಾಕೃತಿಯಾಗಿ ರೂಪಾಂತರಗೊಂಡಿದೆ. ಹೌದು, ಬರೋಬ್ಬರಿ 55.27 ಮೀಟರ್ (181 ಅಡಿ 3 ಇಂಚು) ಉದ್ದದ ಚಾಕೊಲೇಟ್ ರೈಲು ಈಗ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ! ಗಿನ್ನೆಸ್ … Continued