ವೀಡಿಯೊ..| ಅಮೃತಸರದ ಸ್ವರ್ಣ ಮಂದಿರದ ಬಳಿ ಮಾಜಿ ಡಿಸಿಎಂ ಸುಖ​ಬೀರ್​ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನ

ಚಂಡೀಗಢ: ಸಿಕ್ಖ್ ಧಾರ್ಮಿಕ ಸಂಸ್ಥೆ ಅಕಾಲ್‌ ತಖ್ತ್‌ನಿಂದ ಧರ್ಮದ್ರೋಹಕ್ಕಾಗಿ ಶಿಕ್ಷಿತರಾಗಿರುವ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ಬಾದಲ್‌(Sukhbir Singh Badal) ಮೇಲೆ ಬುಧವಾರ ಬೆಳಗ್ಗೆ ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದ ಬಳಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವುದಾಗಿ ವರದಿಯಾಗಿದೆ. ಸ್ಥಳದಲ್ಲೇ ಇದ್ದ ಜನರಿಂದ ಶೂಟರ್ ಮೇಲೆ ಹಲ್ಲೆ ನಡೆದಿದೆ. ಸುಖಬೀರ್ ಸಿಂಗ್ … Continued

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬ್ರಿಟನ್‌ ಸಂಸದರು

ಲಂಡನ್: ಬಾಂಗ್ಲಾದೇಶದಲ್ಲಿನ ಚಿಂತಾಜನಕ ಪರಿಸ್ಥಿತಿಯ ಕುರಿತು ಬ್ರಿಟನ್‌ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಂಗಳವಾರ ‘ತುರ್ತು’ ವಿಷಯವನ್ನು ಮಂಡಿಸಲಾಯಿತು. ಸಂಸತ್ತಿನ ಸದಸ್ಯರು ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ದೇಶದಲ್ಲಿ ಮಧ್ಯಂತರ ಸರ್ಕಾರವು ಹಿಂದೂ ಸನ್ಯಾಸಿಗಳ ಮೇಲಿನ ಧಾರ್ಮಿಕ ದಮನದ ಬಗ್ಗೆಯೂ ಚರ್ಚಿಸಿದರು. ಲೇಬರ್ ಪಕ್ಷದ ಸಂಸದ ಬ್ಯಾರಿ … Continued

ರಾಮಾಯಣ’ ನಾಟಕ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿ ಕೊಂದು ತಿಂದ ರಾಕ್ಷಸನ ಪಾತ್ರಧಾರಿ…!

ಗಂಜಾಮ್​(ಒಡಿಶಾ): ರಾಮಾಯಣ ನಾಟಕದ ಪ್ರದರ್ಶನದ ವೇಳೆ ಪಾತ್ರಧಾರಿಯೊಬ್ಬ ಹಂದಿಯನ್ನು ವೇದಿಕೆ ಮೇಲೆಯೇ ಕೊಂದು, ಹಸಿ ಮಾಂಸವನ್ನು ಭಕ್ಷಿಸಿದ ಆಘಾತಕಾರಿ ಘಟನೆ ಒಡಿಶಾದ ಗಂಜಾಮ್​ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗಂಜಾಮ್​ ಜಿಲ್ಲೆಯ ರಾಲಾಬ್ ಎಂಬ ಗ್ರಾಮದಲ್ಲಿ ನವೆಂಬರ್​ 25ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‘ರಾಮಾಯಣ ನಾಟಕ’ದ ವೇದಿಕೆಯಲ್ಲಿ ಜೀವಂತ ಹಂದಿಯನ್ನು ಕೊಂದು ತಿಂದಿದ್ದಲ್ಲದೇ, … Continued

ಮದುವೆಗೆ ಮುಂಚೆ ಮದುಮಗ ನಾಪತ್ತೆ, ಪೊಲೀಸರು ಹುಡುಕಿದ ನಂತ್ರ ಆತನನ್ನು ಒತ್ತೆಯಾಳಾಗಿಟ್ಟುಕೊಂಡ ವಧುವಿನ ಕುಟುಂಬ…! ಏನಿದರ ಹಕೀಕತ್ತು..?

ಅಮೇಥಿ : ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದ ಮದುವೆಯೊಂದು ವಿಲಕ್ಷಣ ತಿರುವು ಪಡೆದಿದ್ದು, ವಧುವಿನ ಕುಟುಂಬದ ಸದಸ್ಯರು ವರನನ್ನು ಒತ್ತೆಯಾಳಾಗಿಟ್ಟುಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರನಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ವಧುವಿನ ಮನೆಯವರು ಮದುವೆಯನ್ನು ರದ್ದುಗೊಳಿಸಿದ್ದಾರೆ. ವಧುವಿನ ಕುಟುಂಬವು ಮದುವೆ ಸಿದ್ಧತೆಗೆ ಆದ ಖರ್ಚನ್ನು ವಾಪಸ್‌ ಕೊಡಬೇಕು ಎಂದು ಪಟ್ಟು ಹಿಡಿದು … Continued

ವೀಡಿಯೊ..| ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕನ ಮೇಲೆ ಹರಿದ ಬಸ್‌ ; ಪವಾಡಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕ…!

ಕೇರಳದ ಟರ್ಮಿನಲ್ ಬಸ್‌ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಾಗ ಬಸ್ ಡಿಕ್ಕಿ ಹೊಡೆದರೂ ಯುವಕನೊಬ್ಬ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಡುಕ್ಕಿ ಜಿಲ್ಲೆಯ ಕುಮಲಿ ಮೂಲದ ವಿಷ್ಣು ಎಂದು ಗುರುತಿಸಲಾದ ವ್ಯಕ್ತಿ ಡಿಸೆಂಬರ್ 1 ರಂದು ಕಟ್ಟಪ್ಪನ ಹೊಸ ಬಸ್ ನಿಲ್ದಾಣ ಟರ್ಮಿನಲ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ವೀಡಿಯೋದಲ್ಲಿ, … Continued

ವೀಡಿಯೊ..| ಚಂಡಮಾರುತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ತಮಿಳುನಾಡು ಸಚಿವರ ಮೇಲೆ ಕೆಸರು ಎರಚಿದ ಜನರು…!

ಚೆನ್ನೈ: ಫೆಂಗಲ್ ಚಂಡಮಾರುತದ ನಂತರ “ಅಸಮರ್ಪಕ” ಪರಿಹಾರ ಕ್ರಮಗಳ ವಿರುದ್ಧ ಪ್ರತಿಭಟಿಸಿದ ಜನರು ವಿಲ್ಲುಪುರಂ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ತಮಿಳುನಾಡು ಕ್ಯಾಬಿನೆಟ್ ಸಚಿವ ಕೆ. ಪೊನ್ಮುಡಿ ಅವರ ಮೇಲೆ ಕೆಸರು ಎರಚಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ತಿರುಚಿರಾಪಳ್ಳಿ-ಚೆನ್ನೈ ರಸ್ತೆಯ ಇರುವೇಲ್ಪಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೋಪಗೊಂಡ … Continued

ವೀಡಿಯೊಗಳು..| ಫೆಂಗಲ್‌ ಚಂಡಮಾರುತಕ್ಕೆ ತಿರುವಣ್ಣಾಮಲೈನಲ್ಲಿ ಭೂ ಕುಸಿತ ; ಮನೆಗಳ ಮಧ್ಯೆಯೇ ಕೆಸರಿನ ಪ್ರವಾಹ: ಸಿಕ್ಕಿದ್ದನ್ನು ಕೊಚ್ಚೊಯ್ದ ಮಳೆ ನೀರು

ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದಲ್ಲಿ ಫೆಂಗಲ್ ಚಂಡಮಾರುತದ ನಂತರ ಮಣ್ಣು ಕುಸಿದಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ವೀಡಿಯೊದಲ್ಲಿ ಕೆಸರು, ನೀರು ಮತ್ತು ಅವಶೇಷಗಳ ಮಿಶ್ರಣವು ಮೆಟ್ಟಿಲುಗಳ ಕೆಳಗೆ ಹರಿಯುವುದು ಮತ್ತು ಜನರ ಮನೆಗಳಿಗೆ ಪ್ರವೇಶಿಸುವುದು ಕಂಡುಬಂದಿದೆ. ಕೆಸರು ನೀರಿನ ಪ್ರವಾಹ ದುರ್ಬಲಗೊಳ್ಳುವ ವರೆಗೂ ಅದು ತನ್ನ ದಾರಿಯಲ್ಲಿ ಬರುವ ಪ್ರತಿಯೊಂದು ವಸ್ತುವನ್ನು ತನ್ನೊಂದಿಗೆ ಎಳೆದೊಯ್ಯುವುದನ್ನು ಕಾಣಬಹುದು. … Continued

ಫೆಂಗಲ್ ಚಂಡಮಾರುತದಿಂದ ಭಾರಿ ಮಳೆ ; ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿತ

ಮಂಗಳೂರು : ಫೆಂಗಲ್ ಚಂಡಮಾರುತ ಪರಿಣಾಮದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೂಳೂರು ರಸ್ತೆ ಕುಸಿದಿದೆ. ರಸ್ತೆ ಅಗೆದ ಕಾರಣದಿಂದ ಗುಂಡಿಯಲ್ಲಿ ಮಳೆ ನೀರು ಶೇಖರಣೆಯಾಗಿ ಹೆದ್ದಾರಿ ಕುಸಿದಿದೆ ಎಂದು ಹೇಳಲಾಗಿದೆ. ಬೈಕ್, ಕಾರು, ಲಾರಿಗಳು ಸಂಚರಿಸುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ರಸ್ತೆ ಕುಸಿದಿದೆ. ಭಾರೀ ಅನಾಹುತ ತಪ್ಪಿದೆ … Continued

ಚುನಾವಣಾ ಬಾಂಡ್ ಪ್ರಕರಣ: ನಡ್ಡಾ, ನಿರ್ಮಲಾ ಸೀತಾರಾಮನ್‌, ಕಟೀಲು ನಿರಾಳ

ಬೆಂಗಳೂರು : ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನಕುಮಾರ ಕಟೀಲು ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ಘಟಕಗಳು ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡು ಸುಲಿಗೆ ಮಾಡಿರುವ … Continued

ಇಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಹಗರಣ : ಕೆಇಎ ಸಿಬ್ಬಂದಿ ಸೇರಿ 8 ಆರೋಪಿಗಳ ಬಂಧನ

ಬೆಂಗಳೂರು: ಎಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಹಗರಣಕ್ಕೆ (Engineering seat blocking) ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಬ್ಬಂದಿ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. 2024-25ನೇ ಸಾಲಿಗಾಗಿ ವಿವಿಧ ಎಂಜಿನಿಯರಿಂಗ್ ಕೋರ್ಸ್ ಪ್ರವೇಶದ ವೇಳೆಯಲ್ಲಿ ಕೆಇಎ ಅಧಿಕಾರಿಯೊಬ್ಬರು ಸೀಟು ಬ್ಲಾಕಿಂಗ್ ಅನುಮಾನದ ಮೇಲೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ನವೆಂಬರ್ … Continued