ವೀಡಿಯೊ..| ಭಯೋತ್ಪಾದಕರಿಗೆ ಆಹಾರ-ಆಶ್ರಯ ನೀಡಿದ್ದ ಆರೋಪಿ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಮುಳುಗಿ ಸಾವು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ್ದ ವ್ಯಕ್ತಿಯೊಬ್ಬ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವಾಗ ನದಿಗೆ ಹಾರಿದ ನಂತರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು 23 ವರ್ಷದ ಇಮ್ತಿಯಾಜ್ ಅಹ್ಮದ್ ಮಗ್ರೆ ಎಂದು ಗುರುತಿಸಲಾಗಿದ್ದು, ಭಯೋತ್ಪಾದಕ ಸಂಘಟನೆ ಎಲ್‌ಇಟಿಗಾಗಿ ಕೆಲಸ ಮಾಡುತ್ತಿದ್ದ ಆತನನ್ನು ಬಂಧಿಸಿದ ನಂತರ, … Continued

ಗಣಿಗಾರಿಕೆ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳದೇ ಇರಲು 20 ಲಕ್ಷ ರೂ. ಲಂಚ ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಾಸಕ…!

ಜೈಪುರ: ರಾಜಸ್ತಾನ ವಿಧಾನಸಭೆಯಲ್ಲಿ ಮೂರು ಪ್ರಶ್ನೆಗಳನ್ನು ಕೇಳುವುದನ್ನು ಕೈಬಿಡಲು 20 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಭಾರತ್ ಆದಿವಾಸಿ ಪಕ್ಷದ ಶಾಸಕ ಜೈಕೃಷ್ಣ ಪಟೇಲ್ ಅವರನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ACB) ಭಾನುವಾರ ಬಂಧಿಸಿದೆ ಎಂದು ಹಿರಿಯ ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜಸ್ಥಾನದ ಎಸಿಬಿ (ACB) ಇತಿಹಾಸದಲ್ಲಿ ಶಾಸಕರೊಬ್ಬರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ … Continued

ಪಾಕಿಸ್ತಾನಕ್ಕೆ ಫಿರಂಗಿ, ಮದ್ದು ಗುಂಡುಗಳ ಕೊರತೆ ; ಭಾರತದ ಜೊತೆ ಪಾಕಿಸ್ತಾನ ಕೇವಲ 4 ದಿನ ಮಾತ್ರ ಯುದ್ಧ ಮಾಡಬಹುದು…!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಲ್ಬಣಗೊಂಡ ನಡುವೆಯೇ ಪಾಕಿಸ್ತಾನ ಸೇನೆಯು ನಿರ್ಣಾಯಕ ಫಿರಂಗಿ ಮದ್ದುಗುಂಡುಗಳ ತೀವ್ರ ಕೊರತೆ ಎದುರಿಸುತ್ತಿದೆ ಹಾಗೂ ಅದರ ಯುದ್ಧ ಸಾಮರ್ಥ್ಯವು ಕೇವಲ ನಾಲ್ಕು ದಿನಗಳವರೆಗೆ ಇರುತ್ತದೆ ಎಂದು ವರದಿಗಳು ತಿಳಿಸಿವೆ. ಉಕ್ರೇನ್‌ ಜೊತೆ ಇತ್ತೀಚಿನ ಶಸ್ತ್ರಾಸ್ತ್ರ ಒಪ್ಪಂದಗಳಿಂದಾಗಿ ಪಾಕಿಸ್ತಾನವು ಫಿರಂಗಿ ಮದ್ದುಗುಂಡುಗಳ ತೀವ್ರ … Continued

ವೀಡಿಯೊ…| ಭಯೋತ್ಪಾದಕ ದಾಳಿಯ ನಂತರ ತಲ್ಲಣಗೊಂಡ ಪಹಲ್ಗಾಮ್ ಮಾರುಕಟ್ಟೆಯ ಹೊಸ ಸಿಸಿಟಿವಿ ದೃಶ್ಯ ವೈರಲ್‌…

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬೈಸರನ್ ಕಣಿವೆಯ ಸುಂದರವಾದ ಪಹಲ್ಗಾಮ್ ಹುಲ್ಲುಗಾವಲಿನಿಂದ ಇಳಿಜಾರಿನಲ್ಲಿರುವ ಮಾರುಕಟ್ಟೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಭಯೋತ್ಪಾದಕ ದಾಳಿ ಪ್ರಾರಂಭವಾದ ಒಂದು ಗಂಟೆಯ ನಂತರ, ಮಕ್ಕಳು ಸೇರಿದಂತೆ ಕೆಲ ಪ್ರವಾಸಿಗರು ಓಡುತ್ತಿರುವುದನ್ನು ಮತ್ತು ವಾಹನಗಳು ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ದೃಶ್ಯಗಳ ಸಮಯ ಏಪ್ರಿಲ್ 22 ರಂದು ಸಮಯಕ್ಕೆ ಹೊಂದಿಕೆಯಾಗುತ್ತದೆ, ಅಂದರೆ ಗಡಿಯಾಚೆಗಿನ ಸಂಪರ್ಕ … Continued

ಪಹಲ್ಗಾಮ್ ದಾಳಿ: ಭೂಸೇನೆ, ನೌಕಾಪಡೆ ಮಾಹಿತಿ ಪಡೆದ ನಂತರ ವಾಯುಪಡೆ ಮುಖ್ಯಸ್ಥರ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ಹದಗೆಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಲೋಕ ಕಲ್ಯಾಣ ಮಾರ್ಗದ 7ರಲ್ಲಿರುವ … Continued

ಭಾರತದಿಂದ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ; ಸಿಂಧೂ ಜಲ ಒಪ್ಪಂದ ಸ್ಥಗಿತದ ಬಳಿಕ ಈಗ ಮತ್ತೆರಡು ಅಣೆಕಟ್ಟುಗಳ ನೀರು ಬಂದ್…!

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾದ ನಡುವೆಯೇ ಭಾರತವು ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿದೆ. ಈಗಾಗಲೇ ಸಿಂಧೂ ನದಿಯ ನೀರು ಸ್ಥಗಿತ ಮಾಡಿರುವ ಭಾರತ ಈಗ ಮಹತ್ವದ ಮತ್ತೊಂದು ಕ್ರಮವೊಂದರಲ್ಲಿ, ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಎರಡು ಅಣೆಕಟ್ಟುಗಳ ನೀರನ್ನು ಸ್ಥಗಿತಗೊಳಿಸಿದೆ. ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ … Continued

ಐಎಂಎಫ್‌ನಿಂದ ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೆ.ವಿ. ಸುಬ್ರಮಣಿಯಮ್ ವಜಾ

ನವದೆಹಲಿ: ಏಪ್ರಿಲ್ 30ರ ಆದೇಶದ ಪ್ರಕಾರ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (IMF) ಕಾರ್ಯನಿರ್ವಾಹಕ ನಿರ್ದೇಶಕ (ಭಾರತ) ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಸೇವೆಗಳನ್ನು ಸರ್ಕಾರ ಅಧಿಕೃತವಾಗಿ ವಜಾಗೊಳಿಸಿದೆ. ಸಿಬ್ಬಂದಿ ಸಚಿವಾಲಯ ಹೊರಡಿಸಿದ ಹೇಳಿಕೆಯ ಮೂಲಕ ಶುಕ್ರವಾರ ಈ ಘೋಷಣೆ ಮಾಡಲಾಗಿದೆ. “ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಭಾರತ) ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಸೇವೆಗಳನ್ನು … Continued

ವೀಡಿಯೊ..| ಐಪಿಎಲ್‌ 2025ರ ಅತ್ಯಂತ ದುಬಾರಿ ಓವರ್‌ ; ಒಂದೇ ಓವರ್‌ನಲ್ಲಿ 6,6,4,6,6,4 ರನ್‌ ಚಚ್ಚಿದ ಆರ್‌ಸಿಬಿ ಆಟಗಾರ-ವೀಕ್ಷಿಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ರೊಮಾರಿಯೊ ಶೆಫರ್ಡ್, 2025 ರ ಐಪಿಎಲ್ ಪಂದ್ಯದ 19 ನೇ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವೇಗಿ ಖಲೀಲ್ ಅಹ್ಮದ್ ಅವರ ಒಂದೇ ಓವರ್‌ನಲ್ಲಿ 33 ರನ್‌ಗಳನ್ನು ಚಚ್ಚಿದ್ದಾರೆ. ಈ ಪಂದ್ಯದಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರು ಐಪಿಎಲ್‌ -2025ರ ಋತುವಿನಲ್ಲಿ ಅತ್ಯಂತ … Continued

ಭಾರತದ ಗಡಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನಿ ರೇಂಜರ್‌ ನನ್ನು ಬಂಧಿಸಿದ ಬಿಎಸ್‌ಎಫ್

ಶ್ರೀಗಂಗಾನಗರ (ರಾಜಸ್ಥಾನ): ಶನಿವಾರ (ಮೇ 3) ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಪಾಕಿಸ್ತಾನಿ ರೇಂಜರ್ ಒಬ್ಬರನ್ನು ಬಂಧಿಸಿದ್ದಾರೆ. ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದ್ದು, ಹತ್ತಿರದ ಪ್ರದೇಶಗಳಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾಗ ಬಹಾವಲ್ಪುರ ವಲಯದಿಂದ ಪಾಕಿಸ್ತಾನಿ ರೇಂಜರ್ ನನ್ನು ಬಿಎಸ್‌ಎಫ್ ಬಂಧಿಸಿದೆ ಎಂದು ಹೇಳಲಾಗಿದೆ. ಬಿಎಸ್‌ಎಫ್ ಕಾನ್‌ಸ್ಟೆಬಲ್ ಒಬ್ಬರು ವಾರಕ್ಕೂ ಹೆಚ್ಚು … Continued

ಪಹಲ್ಗಾಮ್ ದಾಳಿ | ಭಾರತದ ಜತೆ ಯುದ್ಧಕ್ಕೆ ಪಾಕ್‌ ಸೈನಿಕರ ಹಿಂಜರಿಕೆ ವರದಿಯ ಮಧ್ಯೆ ಪಿಒಕೆಯಲ್ಲಿ ಸ್ಥಳೀಯರಿಗೆ ಗನ್‌ ತರಬೇತಿ ವೀಡಿಯೊ ವೈರಲ್‌

ನವದೆಹಲಿ: 26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ಹದಗೆಡುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಭಾರತ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದು, ಭಾರತದದಾಳಿಯ ಭೀತಿ ಎದುರಿಸುತ್ತಿರುವ ಪಾಕಿಸ್ತಾನವು ತನ್ನ ರಕ್ಷಣೆ ಬಲಪಡಿಸಲು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸ್ಥಳೀಯರಿಗೆ ಪಾಕಿಸ್ತಾನಿ ಸೇನೆ … Continued