ವೀಡಿಯೊ…| ನೇಪಾಳದಲ್ಲಿ ಜನರ ಆಕ್ರೋಶಕ್ಕೆ ಹೆದರಿ ಸೇನಾ ಹೆಲಿಕಾಪ್ಟರ್‌ ಹಗ್ಗಕ್ಕೆ ಜೋತು ಬಿದ್ದು ಸಚಿವರು-ಕುಟುಂಬಸ್ಥರ ಪಲಾಯನ…!

ಹಿಂಸಾಚಾರ ಪೀಡಿತ ನೇಪಾಳದಿಂದ ಹೊರಹೊಮ್ಮಿದ ಕೆಲವು ವೀಡಿಯೊ ದೃಶ್ಯಗಳಲ್ಲಿ, ಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರು ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡ ಪಲಾಯನ ಮಾಡಲು ಸೇನಾ ಹೆಲಿಕಾಪ್ಟರ್‌ನ ರಕ್ಷಣಾ ಜೋಲಿ ಹಿಡಿದುಕೊಂಡು ನೇತಾಡಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ಅಲ್ಪಾವಧಿಯ ನಿಷೇಧವು ಕಠ್ಮಂಡುವಿನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದ್ದು, ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿ ಸುರಕ್ಷಿತ … Continued

ವೀಡಿಯೊಗಳು…| ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಮೇಲೆ ಗುಂಡು ಹಾರಿಸಿ ಹತ್ಯೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಚಾರ್ಲಿ ಕಿರ್ಕ್ ಅವರನ್ನು ಬುಧವಾರ ಉತಾಹ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಇದು ಅಮೆರಿಕದಾದ್ಯಂತ ರಾಜಕೀಯ ಹಿಂಸಾಚಾರದ ಬೆದರಿಕೆ ಬಗ್ಗೆ ಕಳವಳ ಉಂಟು ಮಾಡಿದೆ. ಶಂಕಿತ ಶೂಟರ್ ನನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಉತಾಹ್‌ನ ಒರೆಮ್‌ನ ಮೇಯರ್ ಡೇವಿಡ್ ಯಂಗ್ ಹೇಳಿದ್ದಾರೆ. ಉತಾಹ್ ವ್ಯಾಲಿ … Continued

ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಿಸಿದ ಜನರಲ್-ಝಡ್ ಪ್ರತಿಭಟನಾಕಾರರು

ಕಠ್ಮಂಡು: ಕಠ್ಮಂಡು: ನೇಪಾಳದಲ್ಲಿ ಮಂಗಳವಾರ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ಅವರ ಸರ್ಕಾರವನ್ನು ಪದಚ್ಯುತಗೊಳಿಸಿದ ಜನರಲ್-ಝಡ್ ಪ್ರತಿಭಟನಾಕಾರರ ನೇತೃತ್ವದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ, ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ. ಸುಶೀಲಾ ಕರ್ಕಿ ಅವರು ಬಾಲೆನ್ ಶಾ ಗಿಂತ ಹೆಚ್ಚಿನ … Continued

ಎಲೋನ್ ಮಸ್ಕ್ ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಲ್ಯಾರಿ ಎಲಿಸನ್ ; ಅವರ ಸಂಪತ್ತು ಎಷ್ಟು ಗೊತ್ತೆ…?

ನವದೆಹಲಿ : ಲ್ಯಾರಿ ಎಲಿಸನ್ ಮೊದಲ ಬಾರಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಸುಮಾರು ಒಂದು ವರ್ಷದಿಂದ ವಿಶ್ವದ ನಂ.1 ಶ್ರೀಮಂತರಾಗಿದ್ದ ಎಲೋನ್ ಮಸ್ಕ್ ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಒರಾಕಲ್ ಕಾರ್ಪ್ ನಿರೀಕ್ಷೆಗಳನ್ನು ಮೀರಿ ತ್ರೈಮಾಸಿಕ ಲಾಭ ಕಂಡ ನಂತರ ಮತ್ತು ಇನ್ನೂ ಹೆಚ್ಚಿನ ಬೆಳವಣಿಗೆ ಬರಲಿದೆ ಎಂದು ಮುನ್ಸೂಚನೆ ಸಿಕ್ಕ ನಂತರ … Continued

ನೇಪಾಳದ ಮಾಜಿ ಪ್ರಧಾನಿ ಜಲನಾಥ ಖನಾಲ್ ಮನೆಗೆ ಪ್ರತಿಭಟನಾಕಾರರಿಂದ ಬೆಂಕಿ ; ಪತ್ನಿ ಸಾವು

ಕಠ್ಮಂಡು : ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುMದುವರಿದಿದ್ದು, ನೇಪಾಳದ ಮಾಜಿ ಪ್ರಧಾನಿ ಜಲನಾಥ ಖಾನಲ್ ಅವರ ಮನೆಗೆ ಬೆಂಕಿ ಹಚ್ಚಲಾಗಿದ್ದು, ಮನೆಯಲ್ಲಿದ್ದ ಅವರ ಪತ್ನಿ ಪತ್ನಿ ರಾಜ್ಯಲಕ್ಷ್ಮೀ ಚಿತ್ರಾಕರ ಮಂಗಳವಾರ ಸಜೀವವಾಗಿ ಧಹನವಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ತೀವ್ರವಾಗಿ ಗಾಯಗೊಂಡ ಚಿತ್ರಾಕರ ಅವರನ್ನು ಕೀರ್ತಿಪುರ ಬರ್ನ್ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು … Continued

ತೀವ್ರ ಪ್ರತಿಭಟನೆಗಳ ನಡುವೆ ನೇಪಾಳ ಪ್ರಧಾನಿ ಹುದ್ದೆಗೆ ಓಲಿ ರಾಜೀನಾಮೆ ; ಸೇನಾ ಮುಖ್ಯಸ್ಥರ ಸೂಚನೆಯ ನಂತರ ಘೋಷಣೆ

ಕಠ್ಮಂಡು : ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಮತ್ತು ಅದನ್ನು ರಾಜಕೀಯವಾಗಿ ಪರಿಹರಿಸಲು ಸಹಾಯ ಮಾಡುವುದಕ್ಕಾಗಿ ತಾವು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಓಲಿ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಅವರ ಸಹಾಯಕ ಪ್ರಕಾಶ ಸಿಲ್ವಾಲ್ ರಾಜೀನಾಮೆಯನ್ನು ದೃಢಪಡಿಸಿದ್ದಾರೆ. ನೇಪಾಳದಲ್ಲಿ ಫೇಸ್‌ಬುಕ್‌, ಟ್ವಿಟರ್‌ … Continued

ಪ್ರತಿಭಟನೆ ವೇಳೆ 19 ಮಂದಿ ಸಾವು : ನೇಪಾಳ ಗೃಹ ಸಚಿವ ರಮೇಶ ಲೇಖಕ್ ರಾಜೀನಾಮೆ

ಕಠ್ಮಂಡು : ಸೋಮವಾರ ನಡೆದ ಹಿಂಸಾತ್ಮಕ ಜನರಲ್-ಝಡ್ ಪ್ರತಿಭಟನೆಗಳಲ್ಲಿ 19 ಜನರ ಜನರು ಸಾವಿಗೀಡಾದ ಘಟನೆಗೆ ನೈತಿಕ ಹೊಣೆ ಹೊತ್ತು ನೇಪಾಳದ ಗೃಹ ಸಚಿವ ರಮೇಶ ಲೇಖಕ್ ರಾಜೀನಾಮೆ ನೀಡಿದ್ದಾರೆ. ಸೋಮವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಅವರು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. … Continued

ವೀಡಿಯೊಗಳು | ಸಾಮಾಜಿಕ ಮಾಧ್ಯಮ ನಿಷೇಧ ; ನೇಪಾಳದಲ್ಲಿ ಬೃಹತ್ ಪ್ರತಿಭಟನೆ, 16 ಸಾವು, 100 ಜನರಿಗೆ ಗಾಯ

ಕಠ್ಮಂಡು : ಕೆಪಿ ಶರ್ಮಾ ಓಲಿ ಸರ್ಕಾರದಲ್ಲಿನ ಭ್ರಷ್ಟಾಚಾರ ಮತ್ತು 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸುವ ಈ ಸರ್ಕಾರದ ಇತ್ತೀಚಿನ ಕ್ರಮದ ವಿರುದ್ಧ ನೇಪಾಳದಲ್ಲಿ ಬಹತ್‌ ಪ್ರತಿಭಟನೆ ನಡೆಯುತ್ತಿದೆ. ಆನ್‌ಲೈನ್‌ನಲ್ಲಿ ಪ್ರಾರಂಭವಾದ ಪ್ರತಿಭಟನೆ ಸೋಮವಾರ ಬೀದಿಗಳಲ್ಲಿ ಹರಡಿತು, ಪ್ರತಿಭಟನಾಕಾರರು ಸಂಸತ್ತಿನ ಬಳಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಭದ್ರತಾ ಪಡೆಗಳು ಗುಂಡು ಹಾರಿಸಿದ ಪರಿಣಾಮವಾಗಿ ಕನಿಷ್ಠ … Continued

ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ ಜಪಾನ್ ಪ್ರಧಾನಿ ಶಿಗೇರು ಇಶಿಬಾ

ಟೋಕಿಯೊ : ಜಪಾನ್ ಪ್ರಧಾನಿ ಶಿಗೇರು ಇಶಿಬಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್‌ ಅನ್ನು ಯಾರು ಮುನ್ನಡೆಸುತ್ತಾರೆ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಯುದ್ಧಾನಂತರದ ಹೆಚ್ಚಿನ ಅವಧಿಗೆ ಜಪಾನ್ ನಲ್ಲಿ ಆಡಳಿತ ನಡೆಸಿದ ಇಶಿಬಾ ಅವರ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‌ಡಿಪಿ) ಮತ್ತು ಅದರ … Continued

ವೀಡಿಯೊ…| ಹುಂಡೈ ಘಟಕದ ಮೇಲೆ ಅಮೆರಿಕದ ಭದ್ರತಾ ಸಂಸ್ಥೆ ಸಿಬ್ಬಂದಿ ದಾಳಿ; ಅನೇಕ ವಲಸೆ ಕೊರಿಯನ್ನರಿಗೆ ಕೈಕೋಳ

ಅಮೆರಿಕದ ಜಾರ್ಜಿಯಾದಲ್ಲಿ ನಿರ್ಮಾಣವಾಗುತ್ತಿರುವ ಹುಂಡೈ-ಎಲ್‌ಜಿ ಸ್ಥಾವರದ ಮೇಲೆ ನಡೆದ ದಾಳಿಯಲ್ಲಿ ಬಂಧಿಸಲ್ಪಟ್ಟ 475 ಜನರಲ್ಲಿ ಹೆಚ್ಚಿನವರು ದಕ್ಷಿಣ ಕೊರಿಯನ್ನರು ಎಂದು ಶಂಕಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರೋಧಿ ಅಭಿಯಾನದ ಭಾಗವಾಗಿ ಇದುವರೆಗೆ ನಡೆಸಲಾದ ಅತಿದೊಡ್ಡ ಏಕ ಘಟಕದ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಮದು ಮಾಡಿಕೊಂಡ ಸರಕುಗಳ ಮೇಲೆ ಸುಂಕ ವಿಧಿಸುವುದರ … Continued