ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ‘ಮಹಾ ವಿಕಾಸ್‌ ಅಘಾಡಿ’ ಭಿನ್ನಮತ ಬಹಿರಂಗ…!

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟವಾದ ಮಹಾ ವಿಕಾಸ್‌ ಅಘಾಡಿಯಲ್ಲಿನ ಭಿನ್ನಮತ ಬಹಿರಂಗವಾಗಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರೊಂದಿಗೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸುವುದಿಲ್ಲ ಎಂದು ಶಿವಸೇನೆ ಹೇಳಿದೆ. ಇದರ … Continued

ಶರದ್ ಪವಾರ್ ಮಹಾರಾಷ್ಟ್ರ ಸಿಎಂ ಆಗಿದ್ದಾಗ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದರು ; ಪ್ರಕಾಶ ಅಂಬೇಡ್ಕರ್ ಸ್ಫೋಟಕ ಹೇಳಿಕೆ

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್‌ ಪವಾರ್) ಮುಖ್ಯಸ್ಥ ಶರದ್ ಪವಾರ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ದಾವೂದ್ ಇಬ್ರಾಹಿಂ ಅವರನ್ನು ದುಬೈನಲ್ಲಿ ಭೇಟಿಯಾಗಿದ್ದರು ಎಂದು ವಂಚಿತ ಬಹುಜನ ಆಘಾಡಿ (ವಿಬಿಎ) ಪಕ್ಷದ ಮುಖ್ಯಸ್ಥ ಪ್ರಕಾಶ ಅಂಬೇಡ್ಕರ್ ಶುಕ್ರವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಶರದ್ ಪವಾರ್ ಅವರು ಮುಖ್ಯಮಂತ್ರಿಯಾಗಿದ್ದಾಗ ದುಬೈನಲ್ಲಿ ದಾವೂದ್ ಇಬ್ರಾಹಿಂ ಅವರನ್ನು ಭೇಟಿ ಮಾಡಲು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ ; ಎಎಪಿ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್‌ ಅವರಿಗೆ ದೆಹಲಿ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಜಾರಿ ನಿರ್ದೇಶನಾಲಯವು ಜೈನ್‌ ಅವರನ್ನು ಮೇ 2022ರಂದು ಬಂಧಿಸಿತ್ತು. ಈ ನಡುವೆ ಜೈನ್‌ ಅವರು 2023ರ ಮೇ ಹಾಗೂ 2024ರ ಮಾರ್ಚ್‌ ನಡುವೆ ವೈದ್ಯಕೀಯ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದರು. … Continued

ರತನ್ ಟಾಟಾ ಉಯಿಲು (will) ಕಾರ್ಯಗತಗೊಳಿಸುವವರು ಯಾರು..? ಈ ನಾಲ್ವರಿಗೆ ಜವಾಬ್ದಾರಿ ವಹಿಸಿರುವ ಟಾಟಾ

ಅಕ್ಟೋಬರ್ 9 ರಂದು 86ನೇ ವಯಸ್ಸಿನಲ್ಲಿ ನಿಧನರಾದ ರತನ್ ಟಾಟಾ ಅವರು ಸಾವಿರಾರು ಕೋಟಿ ರೂ ಮೌಲ್ಯದ ವೈಯಕ್ತಿಕ ಸಂಪತ್ತನ್ನೂ ಬಿಟ್ಟುಹೋಗಿದ್ದಾರೆ. ಅವರ ಷೇರುಪಾಲುಗಳೆಲ್ಲವನ್ನೂ ಸೇರಿಸಿದರೆ ಅವರ ಸಂಪತ್ತಿನ ಮೌಲ್ಯ 7,900 ಕೋಟಿ ರೂ ಆಗುತ್ತದೆ ಎಂದು ಅಂದಾಜಿಸಲಾಗಿದೆ. ವರದಿಗಳ ಪ್ರಕಾರ, ಅವರು ತಮ್ಮ ಸಂಪತ್ತಿಗೆ ಉಯಿಲು (will) ಬರೆದಿಟ್ಟಿದ್ದಾರೆ. ದಿ ಎಕನಾಮಿಕ್ ಟೈಮ್ಸ್‌ನ ವರದಿಯ … Continued

ಬಿಹಾರದ ಕಳ್ಳಬಟ್ಟಿ ದುರಂತ ; ಸಾವಿನ ಸಂಖ್ಯೆ 35ಕ್ಕೆ ಏರಿಕೆ

ಪಾಟ್ನಾ: ಬಿಹಾರದ ಸಿವಾನ್ ಮತ್ತು ಸರನ್ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಸೇವಿಸಿದ ಹತ್ತು ಮಂದಿ ಸಾವಿಗೀಡಾಗಿದ್ದು ಈ ಕಳ್ಳಬಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಸರನ್ ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ನೀಲೇಶಕುಮಾರ ಶುಕ್ರವಾರ ಮಾತನಾಡಿ, ಸಿವಾನ್ 28 ಸಾವುಗಳಿಗೆ ಕಾರಣವಾಗಿದ್ದರೆ, ಸರನ್‌ ಜಿಲ್ಲೆಯಿಂದ ಏಳು ಸಾವುಗಳು … Continued

ಸದ್ಗುರು ಜಗ್ಗಿ ವಾಸುದೇವಗೆ ದೊಡ್ಡ ರಿಲೀಫ್‌ : ಈಶಾ ಫೌಂಡೇಷನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ ಅವರ ಆಶ್ರಮ ಸೇರುವಂತೆ ತನ್ನ ಇಬ್ಬರು ಹೆಣ್ಣುಮಕ್ಕಳನ್ನು “ಬ್ರೇನ್‌ ವಾಶ್‌” ಮಾಡಿ ಅವರನ್ನು ಬಲವಂತವಾಗಿ ಬಂಧಿಸಿ ಇರಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಈಶಾ ಫೌಂಡೇಷನ್ ವಿರುದ್ಧ ನೀಡಿದ್ದ ದೂರಿನ ಅಡಿಯಲ್ಲಿ ನಡೆಯುತ್ತಿದ್ದ ಎಲ್ಲ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದ ಸದ್ಗುರು ಜಗ್ಗಿ … Continued

ಚೀನಾ ವೀಸಾ ಹಗರಣ ; ಕಾರ್ತಿ ಚಿದಂಬರಂ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ

ನವದೆಹಲಿ : ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ (Karti Chidambaram) ಮತ್ತು ಇತರರ ವಿರುದ್ಧ ಚೀನಾ ವೀಸಾ ಪ್ರಕರಣದಲ್ಲಿ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. 2011ರಲ್ಲಿ ಅವರ ತಂದೆ ಪಿ ಚಿದಂಬರಂ ಗೃಹ ಸಚಿವರಾಗಿದ್ದಾಗ ವಿದ್ಯುತ್ ಕಂಪನಿಗೆ ಚೀನೀ ಪ್ರಜೆಗಳನ್ನು ಕರೆತರಲು ವೀಸಾ ಪ್ರಕ್ರಿಯೆ ನಡೆಸಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿದ … Continued

ವೀಡಿಯೊ…| ತನ್ನ ದಾಳಿಯಲ್ಲಿ ಸಾಯುವ ಮೊದಲು ಹಮಾಸ್ ಮುಖ್ಯಸ್ಥನ ಅಂತಿಮ ಕ್ಷಣದ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್‌

ಇಸ್ರೇಲಿ ಪಡೆಗಳು ಡ್ರೋನ್ ದೃಶ್ಯಗಳನ್ನು ಬಿಡುಗಡೆ ಮಾಡಿದ್ದು, ಇದು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಇಸ್ರೇಲಿ ದಾಳಿಯಲ್ಲಿ ಸಾಯುವ ಮೊದಲು ಅವರ ಅಂತಿಮ ಕ್ಷಣಗಳನ್ನು ತೋರಿಸುತ್ತದೆ ಎಂದು ಇಸ್ರೇಲಿ ಪಡೆಗಳು ಹೇಳಿಕೊಂಡಿದೆ. ಶೆಲ್ ದಾಳಿಯಿಂದ ಗೋಡೆಗಳು ಹಾರಿಹೋಗಿರುವ ಪಾಳುಬಿದ್ದ ಗಾಜಾ ಅಪಾರ್ಟ್‌ಮೆಂಟ್‌ನಲ್ಲಿ ಗಾಯಗೊಂಡಿರುವ ಸಿನ್ವಾರ್ ‘ಸೋಫಾದ ಮೇಲೆ ಕುಳಿತುಕೊಂಡಿರುವುದನ್ನು’ ಇದು ತೋರಿಸುತ್ತದೆ. ಅವರ ಬಲಗೈಗೆ ತೀವ್ರವಾಗಿ … Continued

ನೀವು ಜೀವಂತವಾಗಿ ಇರಬೇಕೆಂದರೆ ₹ 5 ಕೋಟಿ ನೀಡಿ ; ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಗೆ ಮತ್ತೆ ಜೀವ ಬೆದರಿಕೆ…!

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ‘ಹಗೆತನವನ್ನು ಕೊನೆಗಾಣಿಸಲು’ ಈಗ ₹ 5 ಕೋಟಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರಿಗೆ ಕಳುಹಿಸಲಾದ ವಾಟ್ಸಾಪ್ ಸಂದೇಶದಲ್ಲಿ ಹಣವನ್ನು ಪಾವತಿಸದಿದ್ದರೆ, ನಟ ಸಲ್ಮಾನ್ ಖಾನ್‌ ಭವಿಷ್ಯವು ಇತ್ತೀಚೆಗೆ ಬಿಷ್ಣೋಯ್ ಗ್ಯಾಂಗ್ ಸದಸ್ಯರಿಂದ ಹತ್ಯೆಗೀಡಾದ ಮಹಾರಾಷ್ಟ್ರದ ಮಾಜಿ … Continued

ಗಾಜಾ ಕಾರ್ಯಾಚರಣೆ ವೇಳೆ ಹಮಾಸ್ ಮುಖ್ಯಸ್ಥನನ್ನು ಸಾಯಿಸಿದ್ದೇವೆ : ಇಸ್ರೇಲ್ ವಿದೇಶಾಂಗ ಸಚಿವ

ಜೆರುಸಲೇಂ : ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಅವರನ್ನು ಗುರುವಾರ ಗಾಜಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಸ್ರೇಲಿ ಪಡೆಗಳು ಕೊಂದು ಹಾಕಿವೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಅವರು ಪ್ರಕಟಿಸಿದ್ದಾರೆ. “ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ … Continued