ವೀಡಿಯೊ | ದಾಳಿಕೋರರನ್ನು ಬಂಧಿಸುವ ಬದಲು ದೇವಸ್ಥಾನದ ದಾಳಿ ವಿರುದ್ಧ ಪ್ರತಿಭಟಿಸಿದ ಭಕ್ತರ ಮೇಲೆ ಹಲ್ಲೆ ನಡೆಸಿದ ಕೆನಡಾ ಪೊಲೀಸರು..!

ಭಾನುವಾರ ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಪರ ಗುಂಪು ದಾಳಿ ಮಾಡಿದ ನಂತರ, ಪೊಲೀಸರು ದೇವಸ್ಥಾನಕ್ಕೆ ಹೋಗುವವರ ಜೊತೆ ಘರ್ಷಣೆ ನಡೆಸುತ್ತಿರುವ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು. ಟೊರೊಂಟೊ ಬಳಿಯ ದೇವಸ್ಥಾನದ ಮೇಲೆ “ಭಾರತ ವಿರೋಧಿ” ಖಲಿಸ್ತಾನ ಪ್ರತ್ಯೇಕತಾವಾದಿಗಳು ದಾಳಿಯನ್ನು ಪ್ರತಿಭಟಿಸಿದ ಹಿಂದೂ ಭಕ್ತರ ಜೊತೆಯೇ ಕೆನಡಾದ ಪೊಲೀಸರು ಘರ್ಷಣೆ ನಡೆಸಿದರು. ಪೊಲೀಸರು ದೇವಾಲಯಕ್ಕೆ … Continued

ವೀಡಿಯೊ..| ಕೆನಡಾದ ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯವೊಂದರಲ್ಲಿ ಖಾಲಿಸ್ತಾನಿ ಪ್ರತ್ಯೇಕವಾದಿಗಳ ಗುಂಪೊಂದು ಭಾನುವಾರ ಭಕ್ತರ ಮೇಲೆ ಹಲ್ಲೆ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ, ಹಿಂದೂ ಸಭಾ ಮಂದಿರದ ಹೊರಗೆ ಖಲಿಸ್ತಾನಿ ಧ್ವಜಗಳನ್ನು ಹಿಡಿದಿರುವ ವ್ಯಕ್ತಿಗಳ ಗುಂಪೊಂದು ದೊಣ್ಣೆಗಳಿಂದ ಜನರನ್ನು ಥಳಿಸುತ್ತಿರುವುದನ್ನು ಕಾಣಬಹುದು. ಹಿಂಸಾಚಾರವನ್ನು ಖಂಡಿಸಿದ ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಅವರು ಖಲಿಸ್ತಾನಿಗಳು “ಕೆಂಪು ಗೆರೆಯನ್ನು … Continued

ಅಲ್-ನತಾಹ್ | ಸೌದಿ ಅರೇಬಿಯನ್ ಓಯಸಿಸ್‌ ನಲ್ಲಿ 4,000 ವರ್ಷಗಳಷ್ಟು ಹಳೆಯ ಪ್ರಾಚೀನ ಪಟ್ಟಣ ಪತ್ತೆ…!

ವಾಯುವ್ಯ ಸೌದಿ ಅರೇಬಿಯಾದ ಸುಂದರವಾದ ಓಯಸಿಸ್‌ನಲ್ಲಿರುವ 4,000 ವರ್ಷಗಳಷ್ಟು ಹಳೆಯದಾದ ಕೋಟೆವಪಟ್ಟಣದ ಅವಶೇಷಗಳನ್ನು ಪುರಾತತ್ತ್ವಜ್ಞರು ಪತ್ತೆ ಮಾಡಿದ್ದಾರೆ. ಈ ಪ್ರಮುಖ ಆವಿಷ್ಕಾರವು ಪ್ರಾಚೀನ ಜನರು ಅಲೆಮಾರಿ ಜೀವನದಿಂದ ನಗರ ಜೀವನಶೈಲಿಗೆ ಹೇಗೆ ಪರಿವರ್ತನೆಗೊಂಡರು ಎಂಬುದನ್ನು ಎತ್ತಿ ತೋರಿಸುತ್ತದೆ. ಅಲ್-ನತಾಹ್ ಎಂದು ಕರೆಯಲ್ಪಡುವ ಒಣ ಮರುಭೂಮಿಯಿಂದ ಸುತ್ತುವರಿದ ಸೊಂಪಾದ ಪ್ರದೇಶದ ಈ ಸ್ಥಳವು ಖೈಬರ್‌ ವಾಲ್‌ ಓಯಸಿಸ್‌ನೊಳಗೆ … Continued

ಕಟ್ಟುನಿಟ್ಟಾದ ಇಸ್ಲಾಮಿಕ್‌ ಡ್ರೆಸ್ ಕೋಡ್ ವಿರುದ್ಧ ಇರಾನ್‌ ವಿಶ್ವವಿದ್ಯಾನಿಲಯದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟಿಸಿದ ವಿದ್ಯಾರ್ಥಿನಿ…!

ಆನ್‌ಲೈನ್ ವೀಡಿಯೊಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ದೇಶದ ಕಟ್ಟುನಿಟ್ಟಾದ ಇಸ್ಲಾಮಿಕ್ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟನಾರ್ಥವಾಗಿ ಯುವತಿಯೊಬ್ಬಳು ಶನಿವಾರ ಇರಾನ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಒಳ ಉಡುಪಿನಲ್ಲಿ ಪ್ರತಿಭಟನೆ ನಡೆಸಿದ್ದಾಳೆ. ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾನಿಲಯದ ಶಾಖೆಯೊಂದರಲ್ಲಿ ಭದ್ರತಾ ಸಿಬ್ಬಂದಿ ಅಪರಿಚಿತ ಮಹಿಳೆಯನ್ನು ಬಂಧಿಸಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ತೋರಿಸಿದೆ. ವಿಶ್ವವಿದ್ಯಾನಿಲಯದ ವಕ್ತಾರ ಅಮೀರ್ … Continued

ಇಸ್ರೇಲ್‌ ದಾಳಿಯಲ್ಲಿ ಹೆಜ್ಬೊಲ್ಲಾ ಉನ್ನತ ಕಮಾಂಡರ್ ಸಾವು : ಐಡಿಎಫ್‌

ದಕ್ಷಿಣ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾದ ನಾಸರ್ ಬ್ರಿಗೇಡ್ ರಾಕೆಟ್ ಘಟಕದ ಕಮಾಂಡರ್ ಜಾಫರ್ ಖಾದರ್ ಫೌರ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಶನಿವಾರ ತಿಳಿಸಿದೆ. ಅಕ್ಟೋಬರ್ 2023 ರಿಂದ ಇಸ್ರೇಲ್ ಮೇಲಿನ ಅನೇಕ ರಾಕೆಟ್‌ ದಾಳಿಗಳಿಗೆ ಈತನೇ ಜವಾಬ್ದಾರ ಎಂದು ಅದು ಹೇಳಿದೆ. ರಾಯಿಟರ್ಸ್ ವರದಿಯ ಪ್ರಕಾರ, ಹೆಜ್ಬೊಲ್ಲಾ ಜಾಫರ್ ಖಾದರ್ ಫೌರ್ ಸಾವಿನ … Continued

ವೀಡಿಯೊ…| ಇಸ್ರೇಲ್‌ ವೈಮಾನಿಕ ದಾಳಿಯಲ್ಲಿ ಹಮಾಸ್ ಉನ್ನತ ನಾಯಕ ಸಾವು ; ಇಸ್ರೇಲ್‌ ಸೇನೆಯಿಂದ ಆ ಕ್ಷಣದ ವೀಡಿಯೊ ಬಿಡುಗಡೆ..

ಗಾಜಾದ ಹಮಾಸ್‌ ಮೂಲಭೂತವಾದಿ ಗುಂಪಿನಲ್ಲಿ ಉಳಿದಿರುವ ಕೊನೆಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು ಎನ್ನಲಾದ ಪ್ರಮುಖ ನಾಯಕನನ್ನು ಕೊಂದಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ. ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಇಸ್ರೇಲಿ ಮಿಲಿಟರಿ ಹಮಾಸ್‌ನ ರಾಜಕೀಯ ಬ್ಯೂರೋದ ರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಇಜ್ ಅಲ್-ದಿನ್ ಕಸಾಬ್ ದಕ್ಷಿಣ ಗಾಜಾ ಪಟ್ಟಣವಾದ ಖಾನ್ ಯೂನಿಸ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ … Continued

1981ರ ತಂತ್ರಜ್ಞಾನ ಬಳಸಿಕೊಂಡು 1500 ಕೋಟಿ ಮೈಲುಗಳಷ್ಟು ದೂರದಲ್ಲಿರುವ ವಾಯೇಜರ್ 1 ಬಾಹ್ಯಾಕಾಶ ನೌಕೆಗೆ ಜೀವಕೊಟ್ಟ ನಾಸಾ…!

ನಾಸಾ(NASA)ದ 47 ವರ್ಷ ವಯಸ್ಸಿನ ವಾಯೇಜರ್ 1 ಬಾಹ್ಯಾಕಾಶ ನೌಕೆಯು ಇತ್ತೀಚೆಗೆ 1981ರಿಂದಲೂ ಬಳಸದ ರೇಡಿಯೋ ಟ್ರಾನ್ಸ್‌ಮಿಟರ್‌ನ ಸಹಾಯದಿಂದ ಕಳೆದುಕೊಂಡಿದ್ದ ಭೂಮಿಯ ಸಂಪರ್ಕವನ್ನು ಮತ್ತೆ ಸ್ಥಾಪಿಸಿದೆ. ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ನಲ್ಲಿರುವ ನಾಸಾದ (NASA) ಇಂಜಿನಿಯರ್‌ಗಳು ಬಾಹ್ಯಾಕಾಶ ನೌಕೆಯೊಂದಿಗೆ ಕಳೆದುಕೊಂಡಿದ್ದ ಭೂಮಿಯ ಸಂಪರ್ಕವನ್ನು ಅಕ್ಟೋಬರ್ 24 ರಂದು ಮರುಸ್ಥಾಪಿಸಿದ್ದಾರೆ. 1500 ಕೋಟಿ ಮೈಲುಗಳಷ್ಟು … Continued

ಗೂಗಲ್‌ ಗೆ $20 ಡಿಸಿಲಿಯನ್ ದಂಡ ವಿಧಿಸಿದ ರಷ್ಯಾ ; ಈ ದಂಡದ ಮೊತ್ತ ಹೇಳುವುದೇ ಕಷ್ಟ ; ಯಾಕೆಂದರೆ 2ರ ಮುಂದೆ 34 ಸೊನ್ನೆಗಳು ಬರುತ್ತವೆ…!!

ನವದೆಹಲಿ : ರಷ್ಯಾದ ನ್ಯಾಯಾಲಯವೊಂದು ಟೆಕ್‌ ದೈತ್ಯ ಗೂಗಲ್‌ ಕಂಪನಿಗೆ ದಿಗ್ಭ್ರಮೆಗೊಳಿಸುವ $20 ಡೆಸಿಲಿಯನ್ ದಂಡ ವಿಧಿಸಿದೆ. ಇದು ಈವರೆಗೆ ವಿಧಿಸಲಾದ ಅತಿದೊಡ್ಡ ಆರ್ಥಿಕ ದಂಡ ಎಂದು ಪರಿಗಣಿಸಲಾಗಿದೆ. 20 ಡೆಸಿಲಿಯನ್ ಅಂದರೆ 2 ನಂತರ 34 ಸೊನ್ನೆಗಳು ಬರುತ್ತವೆ. ರಷ್ಯಾದ ಉಕ್ರೇನ್‌ನ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾದ ಸರ್ಕಾರಿ ಮಾಧ್ಯಮ ಚಾನೆಲ್‌ಗಳನ್ನು ನಿರ್ಬಂಧಿಸುವ ನಿರ್ಧಾರ ತೆಗೆದುಕೊಂಡ … Continued

ಅಫ್ಗಾನ್‌ ಮಹಿಳೆಯರು ಮತ್ತೊಬ್ಬರಿಗೆ ಕೇಳುವಂತೆ ಜೋರಾಗಿ ಪ್ರಾರ್ಥನೆ ಮಾಡುವಂತಿಲ್ಲ…!

ಅಫ್ಗಾನಿಸ್ತಾನ ಮಹಿಳೆಯರು ಜೋರಾಗಿ ಪ್ರಾರ್ಥನೆ ಮಾಡುವುದು ಮತ್ತು ಇತರ ಮಹಿಳೆಯರ ಮುಂದೆ ಕುರಾನ್‌ ಪಠಣ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ. ವರ್ಜೀನಿಯಾ ಮೂಲದ ಅಫ್ಘಾನಿಸ್ತಾನದ ಸುದ್ದಿ ವಾಹಿನಿಯ ವರದಿಯ ಪ್ರಕಾರ ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಗಟ್ಟಿಯಾಗಿ ಪ್ರಾರ್ಥಿಸುವಂತಿಲ್ಲ ಎಂದು ಹೊಸ ನಿಯಮವನ್ನೂ ಜಾರಿಗೆ ತರಲಾಗಿದೆ. ಅಮು ಟಿವಿ ಪ್ರಕಾರ, ಸದ್ಗುಣ ಪ್ರಚಾರ ಮತ್ತು ದುಷ್ಕೃತ್ಯಗಳ ತಡೆಗಟ್ಟುವಿಕೆ … Continued

15 ವರ್ಷಗಳ ಕಾನೂನು ಹೋರಾಟದಲ್ಲಿ ದಂಪತಿಗೆ ಜಯ ; ಗೂಗಲ್‌ ಗೆ 26 ಸಾವಿರ ಕೋಟಿ ರೂ. ದಂಡ…!

ಟೆಕ್ ದೈತ್ಯ ಗೂಗಲ್ ವಿರುದ್ಧದ 15 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಉದ್ಯಮಿಗಳಾದ ಶಿವೌನ್ ರಾಫ್ ಮತ್ತು ಆಡಂ ರಾಫ್ ದಂಪತಿ ಗೆದ್ದಿದ್ದಾರೆ. ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ (ECJ) ಎತ್ತಿಹಿಡಿದ ತೀರ್ಪಿನ ಪ್ರಕಾರ, ಗೂಗಲ್‌ (Google) ಈಗ € 2.4 ಶತಕೋಟಿ ( ಸುಮಾರು 26,000 ಕೋಟಿ ರೂಪಾಯಿ) ಮೌಲ್ಯದ ದಂಡವನ್ನು ಪಾವತಿಸಬೇಕಾಗುತ್ತದೆ. ಬ್ರಿಟನ್ನಿನ … Continued