ಇರಾನಿನ ವಿದ್ಯುತ್ ಸ್ಥಾವರಗಳ ಮೇಲೆ ಸದ್ಯ ದಾಳಿ ಮಾಡಲ್ಲ ಎಂದ ಟ್ರಂಪ್‌ ; ಜಾಗತಿಕ ತೈಲ ಬೆಲೆಯಲ್ಲಿ 14% ಕುಸಿತ…!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಬೇಕಿದ್ದ ಮಿಲಿಟರಿ ದಾಳಿಯನ್ನು ಕನಿಷ್ಠ ಐದು ದಿನಗಳ ಕಾಲ ಮುಂದೂಡುವಂತೆ ಅಮೆರಿಕ ಸೇನೆಗೆ ಸೂಚನೆ ನೀಡಿದ ಬೆನ್ನಲ್ಲೇ ಸೋಮವಾರ ಜಾಗತಿಕ ಕಚ್ಚಾ ತೈಲ ಬೆಲೆಗಳು ಶೇಕಡಾ 14 ರಷ್ಟು ಭಾರಿ ಕುಸಿತ ಕಂಡಿವೆ. ಕಳೆದ ಎರಡು ದಿನಗಳಿಂದ … Continued

ಇರಾನಿನ ಕರೆನ್ಸಿ ಮೌಲ್ಯ ಪಾತಾಳಕ್ಕೆ ; ಹೊಸ 1 ಕೋಟಿ ರಿಯಾಲ್ ನೋಟಿನ ಬೆಲೆ ಭಾರತದ 650 ರೂ.ಗಳಿಗೆ ಸಮ‌…!

ತೆಹ್ರಾನ್: ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರದಿಂದ ಕಂಗಾಲಾಗಿರುವ ಇರಾನ್ ಸರ್ಕಾರ, ಇದೀಗ ದೇಶದ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮುಖಬೆಲೆಯ 10 ಮಿಲಿಯನ್ (1 ಕೋಟಿ) ರಿಯಾಲ್ ನೋಟನ್ನು ಚಲಾವಣೆಗೆ ತಂದಿದೆ. ಆದರೆ, ಆಶ್ಚರ್ಯದ ಸಂಗತಿಯೆಂದರೆ ಈ ಬೃಹತ್ ಮೊತ್ತದ ನೋಟಿನ ಅಂತಾರಾಷ್ಟ್ರೀಯ ಮೌಲ್ಯ ಕೇವಲ ಅಂದಾಜು 650 ರೂಪಾಯಿ (7 ಡಾಲರ್) ಮಾತ್ರ…! ಇದು … Continued

ಲಷ್ಕರ್ ಉಗ್ರ ಸಂಘಟನೆ ಕಮಾಂಡರ್‌ ಬಿಲಾಲ್ ಆರಿಫ್ ಹತ್ಯೆ : ಕುಟುಂಬ ಸದಸ್ಯರಿಂದಲೇ ಚಾಕು ಇರಿತ, ಗುಂಡೇಟು

ನವದೆಹಲಿ: ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸರಫಿಯನ್ನು ಶನಿವಾರ ಪಾಕಿಸ್ತಾನದಲ್ಲಿ ಈದ್ ಪ್ರಾರ್ಥನೆಯ ನಂತರ ಆತನ ಕುಟುಂಬ ಸದಸ್ಯರೇ ಚಾಕುವಿನಿಂದ ಇರಿದಿದ್ದಾರೆ ಮತ್ತು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ಹಲವು ವರದಿಗಳು ತಿಳಿಸಿವೆ. ಈ ಘಟನೆಯು ಮುರಿದ್ಕೆಯ ಮರ್ಕಜ್ ಬಳಿಯಿರುವ ಧ್ವಂಸಗೊಂಡ ಲಷ್ಕರ್-ಎ-ತೈಬಾ ಪ್ರಧಾನ ಕಚೇರಿಯ ಸಮೀಪ ನಡೆದಿದೆ ಎಂದು ವರದಿಯಾಗಿದೆ. … Continued

ಅತಿ ಸುದೀರ್ಘ ಕಾಲ ಸರ್ಕಾರ ಮುನ್ನಡೆಸಿದ ಭಾರತದ ಮೊದಲ ನಾಯಕರಾದ ಪ್ರಧಾನಿ ಮೋದಿ…!

ನವದೆಹಲಿ: ಭಾರತೀಯ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚುನಾಯಿತ ಸರ್ಕಾರವೊಂದರ ಮುಖ್ಯಸ್ಥರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಸಿಕ್ಕಿಂ ಮುಖ್ಯಮಂತ್ರಿಯಾಗಿ 8,930 ದಿನಗಳ ಕಾಲ ಅಧಿಕಾರದಲ್ಲಿದ್ದ ಪವನಕುಮಾರ ಚಾಮ್ಲಿಂಗ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನಮಂತ್ರಿಯಾಗಿ ಅವರ ಒಟ್ಟು … Continued

ಹೊಟೇಲ್‌, ರೆಸ್ಟೋರೆಂಟ್​​ಗಳಿಗೆ ಗುಡ್ ನ್ಯೂಸ್: ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಹೆಚ್ಚಳ ಮಾಡಿದ ಕೇಂದ್ರ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶದ ಇಂಧನ ಭದ್ರತೆ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಪೂರೈಕೆಯಲ್ಲಿ ರಾಜ್ಯಗಳಿಗೆ ಹೆಚ್ಚುವರಿ ಶೇ. 20ರಷ್ಟು ಸಿಲಿಂಡರ್‌ಗಳನ್ನು ನೀಡಲು ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಒಟ್ಟಾರೆ ಹಂಚಿಕೆಯು ಶೇ. 50ಕ್ಕೆ ಏರಿಕೆಯಾಗಲಿದೆ. … Continued

ಉನ್ನತ ನಾಯಕರ ಸಾವು, ಸಾರ್ವಜನಿಕವಾಗಿ ಕಾಣಿಸದ ಸುಪ್ರೀಂ ಲೀಡರ್ : ಹಾಗಾದ್ರೆ ಈಗ ಇರಾನ್ ಮುನ್ನಡೆಸುತ್ತಿರೋದು ಯಾರು?

ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಆರಂಭವಾಗಿ ಮೂರು ವಾರಗಳು ಕಳೆದಿವೆ. ಆದರೆ ಈಗ ಇರಾನ್ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಕೇವಲ ಯುದ್ಧರಂಗದ ಕ್ಷಿಪಣಿಗಳಲ್ಲ, ಬದಲಾಗಿ ದೇಶದ ‘ಅಧಿಕಾರ ಕೇಂದ್ರ’ ಯಾರ ಬಳಿಯಿದೆ ಎಂಬುದು. ಇರಾನಿನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಮತ್ತು ಅವರ ನಂತರದ ಪ್ರಭಾವಿ ನಾಯಕ ಅಲಿ ಲಾರಿಜಾನಿ ಅವರ … Continued

ಇನ್ಮುಂದೆ ಎಟಿಎಂನಿಂದ ಹಣ ತೆಗೆಯುವ ವೇಗದಲ್ಲೇ ಗ್ಯಾಸ್ ಸಿಲಿಂಡರ್ ಕೂಡ ಬರುತ್ತೆ…! ದೇಶದ ಮೊದಲ ‘ಎಲ್‌ಪಿಜಿ ಎಟಿಎಂ’ ಆರಂಭ

 ಗುರುಗ್ರಾಮ: ಬ್ಯಾಂಕ್ ಎಟಿಎಂನಿಂದ ಹಣ ತೆಗೆಯುವಷ್ಟೇ ಈಗ ಗ್ಯಾಸ್ ಸಿಲಿಂಡರ್ ಸಹ ಪಡೆಯುವುದು ಸುಲಭವಾಗಿದೆ ! ಯಾಕೆಂದರೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಹರಿಯಾಣದ ಗುರುಗ್ರಾಮದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಭಾರತದ ಮೊಟ್ಟಮೊದಲ ‘ಎಲ್‌ಪಿಜಿ ಎಟಿಎಂ’ ಅನ್ನು ಪ್ರಾರಂಭಿಸಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಭಾರತದ ಹಲವು ಭಾಗಗಳಲ್ಲಿ ಅಡುಗೆ ಅನಿಲ ಪೂರೈಕೆ ಕಷ್ಟಕರವಾಗಬಹುದಾದ ಸಮಯದಲ್ಲಿ ಈ … Continued

ಕಚ್ಚಾ ತೈಲದಿಂದ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರೀ ಕಂಪನ; ಒಂದೇ ದಿನದಲ್ಲಿ ₹12 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು !

ಮುಂಬೈ: ಕಳೆದ ಕೆಲವು ದಿನಗಳ ಕಾಲ ಏರಿಕೆ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಗುರುವಾರ ಭಾರಿ ಕುಸಿತಕ್ಕೆ ಸಾಕ್ಷಿಯಾದವು. ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ತೈಲ ಮತ್ತು ಎಲ್‌ಎನ್‌ಜಿ (LNG) ಘಟಕಗಳ ಮೇಲೆ ನಡೆದ ದಾಳಿಗಳು … Continued

ವಿಮಾನ ಪ್ರಯಾಣಿಕರಿಗೆ ರಿಲೀಫ್‌ : ಸೀಟು ಆಯ್ಕೆ ಶುಲ್ಕಕ್ಕೆ ಬ್ರೇಕ್ ; ಇನ್ಮುಂದೆ 60%ರಷ್ಟು ಸೀಟುಗಳಿಗೆ ಈ ಶುಲ್ಕವಿಲ್ಲ

ನವದೆಹಲಿ: ವಿಮಾನ ಪ್ರಯಾಣಿಕರ ದೀರ್ಘಕಾಲದ ದೂರುಗಳಿಗೆ ಕಿವಿಗೊಟ್ಟಿರುವ ಕೇಂದ್ರ ಸರ್ಕಾರವು ವಿಮಾನಯಾನ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದೆ. ಇನ್ಮುಂದೆ ಯಾವುದೇ ವಿಮಾನದಲ್ಲಿನ ಒಟ್ಟು ಸೀಟುಗಳ ಪೈಕಿ ಕನಿಷ್ಠ ಶೇಕಡಾ 60 ರಷ್ಟು ಸೀಟುಗಳನ್ನು ಉಚಿತವಾಗಿ (ಯಾವುದೇ ಹೆಚ್ಚುವರಿ ಆಯ್ಕೆ ಶುಲ್ಕವಿಲ್ಲದೆ) ಪ್ರಯಾಣಿಕರಿಗೆ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ವಿಮಾನಯಾನ … Continued

ವಾಯು ದಾಳಿಯಲ್ಲಿ ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ, ಕಮಾಂಡರ್ ಗುಲಾಮ್ರೆಜಾ ಸೊಲೈಮಾನಿ ಸಾವು : ಇಸ್ರೇಲ್ ಹೇಳಿಕೆ

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಮಂಗಳವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಉನ್ನತ ಕಮಾಂಡರ್ ಘೋಲಮ್ರೆಜಾ ಸೊಲೈಮನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಆದರೆ, ಇರಾನ್ ಈ ವರದಿಯನ್ನು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.  ಇರಾನ್ ರಾಜಧಾನಿ ತೆಹ್ರಾನ್ ಸೇರಿದಂತೆ … Continued