ಮೈ ಜುಂ ಎನ್ನುವ ವೀಡಿಯೊ..| ಬೈಕ್‌ ಸವಾರನನ್ನು ನುಂಗಿದ ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ ಸೃಷ್ಟಿಯಾದ ದೊಡ್ಡ ಕುಳಿ, ಬೌನ್ಸ್‌ ಆಗಿ ಪಾರಾದ ಕಾರು…!

ಆಘಾತಕಾರಿ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಬೈಕು ಸಿಂಕ್‌ ಹೋಲ್‌ಗೆ ಕಣ್ಮರೆಯಾಗುವ ಭಯಾನಕ ದೃಶ್ಯ ಈ ವೀಡಿಯೊದಲ್ಲಿ ಸೆರೆಯಾಗಿದೆ. . ಈ ಭೀಕರ ಅಪಘಾತವು ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದ್ದು, ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ದೊಡ್ಡ ಕುಳಿ ಮೋಟಾರ್ಸೈಕ್ಲಿಸ್ಟ್‌ ಅನ್ನು ನುಂಗಿದ ಘಟನೆ ನಡೆದು 18 ಗಂಟೆಗಳ ನಂತರ ತೀವ್ರವಾಗಿ ಗಾಯಗೊಂಡಿದ್ದ ಸವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ. … Continued

ತನ್ನ ಸಂಗಾತಿ ಸತ್ತ ನಂತರ ಎಬ್ಬಿಸಲು ಪ್ರಯತ್ನಿಸಿ, ತಬ್ಬಿಕೊಂಡು ದುಃಖಿಸಿದ ಭಾವುಕ ಆನೆಯ ಅಸಾಧಾರಣ ವೀಡಿಯೊ ವೈರಲ್‌ ; ಕಣ್ಣೀರು ತರಿಸುತ್ತೆ…!

ಸರ್ಕಸ್ ಆನೆಯೊಂದು ಬಹುಕಾಲದಿಂದ ತನ್ನ ಸಂಗಾತಿಯಾಗಿದ್ದ ಮತ್ತೊಂದು ಆನೆಯ ಸಾವಿಗೆ ದುಃಖಿಸುತ್ತಿರುವ ವೀಡಿಯೊ ವೈರಲ್ ಆದ ನಂತರ ಅದನ್ನು ನೋಡಿದ ಬಹುತೇಕರ ಕಣ್ಣಂಚಿನಲ್ಲಿ ನೀರು ಬಂದಿದೆ. ರಷ್ಯಾದ ಸರ್ಕಸ್‌ ಕಂಪನಿಯಲ್ಲಿ 25 ವರ್ಷಗಳಿಂದ ಜೊತೆಗಿದ್ದ ಜೆನ್ನಿ ಮತ್ತು ಮ್ಯಾಗ್ಡಾ ಎಂಬ ಎರಡು ಭಾರತೀಯ ಹೆಣ್ಣಾನೆಗಳು ಬೇರ್ಪಡಿಸಲಾಗದ ಅನುಬಂಧವನ್ನು ಹೊಂದಿದ್ದವು. ಸರ್ಕಸ್‌ ಕಂಪನಿಯಿಂದ ಪ್ರದರ್ಶನದಿಂದ ದೂರವಾಗಿ ನಿವೃತ್ತಿ … Continued

ಅದ್ಭುತ ವೀಡಿಯೊ…| ಔಷಧದ ಅಂಗಡಿ ಹುಡುಕಿಕೊಂಡು ಬಂದು ತನ್ನ ಗಾಯಕ್ಕೆ ಬ್ಯಾಂಡೇಜ್‌ ಹಾಕಿಸಿಕೊಂಡ ಮಂಗ….!

ಅಪರೂಪ ಮತ್ತು ಹೃದಯಸ್ಪರ್ಶಿ ಘಟನೆಯೊಂದು ನಡೆದಿದ್ದು, ಗಾಯಗೊಂಡ ಕೋತಿ ಅಗತ್ಯ ಆರೈಕೆ ಮಾಡಿಸಿಕೊಳ್ಳಲು ಮೆಡಿಕಲ್ ಶಾಪ್ ಗೆ ಬಂದಿದೆ. ಈ ಘಟನೆ ಈ ತಿಂಗಳು ಬಾಂಗ್ಲಾದೇಶದ ಮೆಹರ್‌ಪುರ ಪಟ್ಟಣದಲ್ಲಿ ನಡೆದಿದ್ದು, ಆ ಪ್ರದೇಶದಲ್ಲಿನ ಅಲ್ಹೇರಾ ಫಾರ್ಮಸಿಯಲ್ಲಿ ಮಂಗ ತನ್ನ ಗಾಯಕ್ಕೆ ಸೂಕ್ತ ಬ್ಯಾಂಡೇಜ್‌ ಹಾಕಿಸಿಕೊಂಡ ಆರೈಕೆ ಮಾಡಿಸಿಕೊಂಡಿದೆ. ವೀಡಿಯೋದಲ್ಲಿ ಸೆರೆಯಾಗಿರುವ ಈ ಅಸಾಮಾನ್ಯ ದೃಶ್ಯ ಈಗ … Continued

ಬಾಹ್ಯಾಕಾಶದಲ್ಲಿ 2 ಉಪಗ್ರಹಗಳ ಡಿ-ಡಾಕಿಂಗ್‌ ನ ʼಅದ್ಭುತ ವೀಡಿಯೊʼ ಹಂಚಿಕೊಂಡ ಇಸ್ರೋ : ಹೀಗೆ ಮಾಡಿದ 4ನೇ ದೇಶ ಭಾರತ-ವೀಕ್ಷಿಸಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಗುರುವಾರ ಬಾಹ್ಯಾಕಾಶ ಡಾಕಿಂಗ್ ಪ್ರಯೋಗ (ಸ್ಪೇಡೆಕ್ಸ್) ಉಪಗ್ರಹಗಳ ಡಿ-ಡಾಕಿಂಗ್ ಅನ್ನು ಪೂರ್ಣಗೊಳಿಸಿದೆ. ಬಾಹ್ಯಾಕಾಶ ಸಂಸ್ಥೆಯು ಸ್ಪೇಡೆಕ್ಸ್ ಡಿ-ಡಾಕಿಂಗ್‌ನ ಅದ್ಭುತ ದೃಶ್ಯಗಳನ್ನು ಸಹ ಹಂಚಿಕೊಂಡಿದೆ. ದೃಶ್ಯಗಳನ್ನು SDX-1 ಮತ್ತು SDX-2 ಎರಡರಿಂದಲೂ ಸೆರೆಹಿಡಿಯಲಾಗಿದೆ. ಈ ಕುಶಲತೆಯು ಚಂದ್ರಯಾನ-4 ಮತ್ತು ಗಗನಯಾನ ಸೇರಿದಂತೆ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳಿಗೆ ದಾರಿ ಮಾಡಿಕೊಟ್ಟಿದೆ. … Continued

ವೀಡಿಯೊ…| ಸತ್ತ ಹೆಬ್ಬಾವನ್ನು ಹಿಡಿದುಕೊಂಡು ಸ್ಕಿಪ್ಪಿಂಗ್‌ ಆಡಿದ ಮಕ್ಕಳು : ತನಿಖೆಗೆ ಆದೇಶ

ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್ ಆಟವಾಡಲು ಹಗ್ಗವಾಗಿ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಂಟ್ರಲ್ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ರಾಕ್‌ಹ್ಯಾಂಪ್ಟನ್‌ನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದಷ್ಟು ದೂರ ಇರುವ ವೂರಬಿಂದಾದ ಈ ವೀಡಿಯೊದಲ್ಲಿ ಮಕ್ಕಳು ಸತ್ತ ಹಾವನ್ನು ಸ್ಕಿಪ್ಪಿಂಗ್‌ ಹಗ್ಗವಾಗಿ ಬಳಿಸಿಕೊಂಡು ಸ್ಕಿಪ್ಪಿಂಗ್‌ ಆಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. “ಅದನ್ನು ನನಗೆ ತೋರಿಸು, ಅದು ಏನೆಂದು ನನಗೆ … Continued

ವೀಡಿಯೊ..| ದ್ವಿಚಕ್ರ ವಾಹನಕ್ಕೆ ವೇಗವಾಗಿ ಡಿಕ್ಕಿ ಹೊಡೆದ ಕಾರು ; ಗಾಳಿಯಲ್ಲಿ ಎಸೆಯಲ್ಪಟ್ಟ ಬೈಕ್‌ ಸವಾರರು

ಆಘಾತಕಾರಿ ಘಟನೆಯೊಂದರಲ್ಲಿ, ಪುಣೆಯ ವಕಾಡ್ ಪ್ರದೇಶದ ಜನನಿಬಿಡ ಮುಂಬೈ-ಪುಣೆ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಇಬ್ಬರು ವ್ಯಕ್ತಿಗಳು ಗಾಳಿಯಲ್ಲಿ ಹಾರಿಹೋಗಿ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮತ್ತೊಂದು ಕಾರಿನ ಡ್ಯಾಶ್ ಕ್ಯಾಮ್‌ನಲ್ಲಿ ಈ ಘಟನೆ ಸೆರೆಯಾಗಿದೆ. ದೃಶ್ಯಾವಳಿಗಳ ಪ್ರಕಾರ, ವಕಾಡ್ ಪ್ರದೇಶದ … Continued

ಕುಡಿದ ಅಮಲಿನಲ್ಲಿ ವಧುವಿನ ಬದಲು ಗೆಳೆಯನ ಕೊರಳಿಗೆ ಮಾಲೆ ಹಾಕಿದ ವರ…! ಕೋಪದಿಂದ ಮದುವೆ ರದ್ದುಗೊಳಿಸಿದ ವಧು…!!

ಬರೇಲಿ : ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಮಾಲೆಯನ್ನು ವಧುವಿನ ಕೊರಳಿಗೆ ಹಾಕುವ ಬದಲು ತನ್ನ ಸ್ನೇಹಿತನ ಕೊರಳಿಗೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಈ ವಿಲಕ್ಷಣ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವರ ಕುಡಿದಿದ್ದನ್ನು ಕಂಡು ಕೋಪಗೊಂಡ ವಧು, ಆತನನ್ನು ಮದುವೆಯಾಗಲು ನಿರಾಕರಿಸಿ ಮದುವೆಯನ್ನು ರದ್ದುಗೊಳಿಸಿದ್ದಾಳೆ. … Continued

ಐಐಟಿ, ಎನ್‌ಐಟಿಗೆ ಪ್ರವೇಶ ಪಡೆಯುವ ಕುರಿತು ತಂದೆ-ಮಗನ ಅಗ್ರಿಮೆಂಟ್ ಭಾರಿ ವೈರಲ್‌ ; ಆದರೆ ಅಲ್ಲೊಂದು ಟ್ವಿಸ್ಟ್…

ನವದೆಹಲಿ: ಐಐಟಿ, ಎನ್‌ಐಟಿ, ಐಐಐಟಿ ಇತ್ಯಾದಿಗಳಿಗೆ ಪ್ರವೇಶ ಪಡೆಯುವುದುಅನೇಕ ವಿದ್ಯಾರ್ಥಿಗಳ ಕನಸಾಗಿದೆ. ಹೀಗಾಗಿ ಉತ್ತಮ ಶಿಕ್ಷಣ ಮತ್ತು ಅತ್ಯುತ್ತಮ ಅಂಕ ಪಡೆಯಲು ಪೋಷಕರು ತಮ್ಮ ಮಕ್ಕಳ ಮೇಲೆ ಕೆಲವೊಮ್ಮೆ ನಿಬಂಧನೆಗಳನ್ನು ವಿಧಿಸುವುದೂ ಉಂಟು. ಇಂಥದ್ದೇ ವಿದ್ಯಮಾನದಲ್ಲಿ ದೆಹಲಿಯ ಹುಡುಗನ ಮುಂದೆ ಆತನ ತಂದೆ ವಿಭಿನ್ನವಾದ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ತಂದೆಯೊಬ್ಬರು ತಮ್ಮ ಮಗ ಐಐಟಿಗೆ ಪ್ರವೇಶ ಪಡೆದರೆ … Continued

ವೀಡಿಯೊ…| ಕೋರ್ಟ್‌ ಆವರಣದಲ್ಲಿಯೇ ಬಡಿದಾಡಿಕೊಂಡ ಅತ್ತೆ-ಸೊಸೆ, ಸಂಬಂಧಿಕರು…! ವಿಡಿಯೋ ವೈರಲ್‌

ನ್ಯಾಯಾಲಯದ ವಿಚಾರಣೆಗೆಂದು ಬಂದಿದ್ದ ಅತ್ತೆ-ಸೊಸೆ ನಡುವೆ ಮಾರಾಮಾರಿ ನಡೆದ ಘಟನೆ ನಾಸಿಕ್‌ನಲ್ಲಿ ಗುರುವಾರ( ಫೆ.20) ಮಧ್ಯಾಹ್ನ ನಡೆದಿದೆ. ನ್ಯಾಯಾಲಯದ ಪ್ರವೇಶದ್ವಾರದಲ್ಲಿ ನಡೆದ ಹೊಡೆದಾಟವು ಅಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ. ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿದ್ದಾರೆ. ತೀವ್ರ ವಾಗ್ವಾದ ನಡೆದ ನಂತರ ಎರಡೂ ಕಡೆಯವರ ನಡುವೆ ದೊಡ್ಡ ಮಾರಾಮಾರಿಯೇ ನಡೆಯಿತು. ವೀಡಿಯೋದಲ್ಲಿ, ಕುಟುಂಬದ ಸದಸ್ಯರು … Continued

ವೀಡಿಯೊ…| ಬೃಹತ್‌ ತಿಮಿಂಗಿಲ ತನ್ನ ಮಗನನ್ನು ನುಂಗಿದ ಭಯಾನಕ ಕ್ಷಣ ವೀಡಿಯೊ ಮಾಡುತ್ತಿದ್ದ ತಂದೆ…! ಮುಂದಾಗಿದ್ದು ಮಾತ್ರ…..ವೀಕ್ಷಿಸಿ

ಚಿಲಿಯ ಬಹಿಯಾ ಎಲ್ ಅಗುಯಿಲಾ ಎಂಬಲ್ಲಿ 24 ವರ್ಷದ ವ್ಯಕ್ತಿ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ ಬೃಹತ್‌ ಹಂಪ್‌ಬ್ಯಾಕ್ ತಿಮಿಂಗಿಲವು ಆತನನ್ನು ಹಳದಿ ಬಣ್ಣದ ದೋಣಿ ಸಮೇತವಾಗಿ ನುಂಗಿದ್ದು, ನಂತರ ಹೊರಕ್ಕೆ ಉಗುಳಿದ ಅಪರೂಪದ ಘಟನೆ ನಡೆದಿದೆ. ಚಿಲಿಯ ದಕ್ಷಿಣದ ಪ್ಯಾಟಗೋನಿಯಾ ಪ್ರದೇಶದ ಮೆಗೆಲ್ಲನ್ ಜಲಸಂಧಿಯ ಸ್ಯಾನ್ ಇಸಿಡ್ರೊ ಲೈಟ್‌ಹೌಸ್ ಬಳಿ ಶನಿವಾರ ಈ ಘಟನೆ … Continued