ಬೇರೆ ಕಂಪನಿಗೆ ಹೋಗದಂತೆ ತಡೆಯಲು ಭಾರತದ ಮೂಲದ ಈ ವ್ಯಕ್ತಿಗೆ ಸುಮಾರು 850 ಕೋಟಿ ರೂ. ಆಫರ್‌ ನೀಡಿ ಉಳಿಸಿಕೊಂಡಿತ್ತಂತೆ ಗೂಗಲ್‌..! ಯಾರು ಗೊತ್ತೆ..?

ನವದೆಹಲಿ: ಒಂದು ದಶಕದ ಹಿಂದೆ, ಈಗ X ಎಂದು ಕರೆಯಲ್ಪಡುವ ಈ ಹಿಂದಿನ ಟ್ವಿಟರ್‌ ಕಂಪನಿಗೆ ಸೇರದಂತೆ ತಡೆಯಲು ಗೂಗಲ್ ಕಂಪನಿಯು ಭಾರತೀಯ-ಅಮೇರಿಕನ್ ಉದ್ಯಮಿಯೊಬ್ಬರಿಗೆ 100 ಮಿಲಿಯನ್ ಡಾಲರ್‌ (ಈಗ ಸುಮಾರು 854 ಕೋಟಿ ರೂ.) ಗಳಷ್ಟು ಪಾವತಿಸಿದ ವಿಷಯ ಈಗ ಬಹಿರಂಗವಾಗಿದೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ, ಯೂಟ್ಯೂಬ್ … Continued

ಬೆಚ್ಚಿಬೀಳಿಸುವ ವೀಡಿಯೊ…| ಮಲಗಿದ್ದ ವ್ಯಕ್ತಿಯ ಮೈಮೇಲೆ ಹರಿದಹೋದ ಬೃಹತ್‌ ಕಾಳಿಂಗ ಸರ್ಪ; ಆದ್ರೂ ಆತ ಶಾಂತವಾಗಿ ಮಲಗಿದ್ದ…!

ಡೆಹ್ರಡೂನ್‍: ಹಾವೆಂದರೆ ಸಾಕು ಎಲ್ಲರೂ ಬೆಚ್ಚಿಬೀಳುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಮೇಲೆ ಬೃಹತ್‌ ಕಾಳಿಂಗ ಸರ್ಪ ಹರಿದು ಹೋದರೂ ತಲೆಕೆಡಿಸಿಕೊಳ್ಳದೆ ಶಾಂತವಾಗಿ ಮಲಗಿರುವ ವೀಡಿಯೊವೊಂದು ವೈರಲ್‌ ಆಗಿದೆ. ಹಾಸಿಗೆಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ಎಚ್ಚರದಲ್ಲಿದ್ದಾಗಲೇ ಆತನ ಮೈಮೇಲೆ ಕಾಳಿಂಗ ಸರ್ಪ (King Cobra) ತೆವಳಿಕೊಂಡು ಹೋಗಿದೆ. ಮೈ ಮೇಲೆ ಹಾವು ಹರಿಯುತ್ತಿರುವುದು ಆತನಿಗೆ ಗೊತ್ತಿದ್ದರೂ … Continued

ಭಾರತದ ವಿರುದ್ಧ ತನ್ನ ಸೇನಾ ಕಾರ್ಯಾಚರಣೆ ಫೋಟೊ ಎಂದು ಪಾಕ್‌ ಸೇನಾ ಮುಖ್ಯಸ್ಥರಿಗೆ ‘ಚೀನಾ ಸೇನೆ ಕವಾಯತು ಚಿತ್ರ’ ಗಿಫ್ಟ್‌ ನೀಡಿ ಅಪಹಾಸ್ಯಕ್ಕೀಡಾದ ಪಾಕ್ ಪ್ರಧಾನಿ…!

ನವದೆಹಲಿ: ಅಪಹಾಸ್ಯದ ಮತ್ತೊಂದು ವಿದ್ಯಮಾನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ಆಪರೇಶನ್‌ ಸಿಂಧೂರಕ್ಕೆ ಪ್ರತೀಕಾರವಾಗಿ ತಾನು ಭಾರತದ ವಿರುದ್ಧ ನಡೆಸಿದ ಆಪರೇಷನ್ ಬನ್ಯಾನ್ ಅಲ್-ಮಾರ್ಸಸ್ ಕಾರ್ಯಾಚರಣೆ ಚಿತ್ರವೆಂದು ಹೇಳಿಕೊಂಡು ಪಾಕ್‌ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ವರ್ಣಚಿತ್ರವೊಂದನ್ನು ಉಡುಗೊರೆಯಾಗಿ ನೀಡಿ ವ್ಯಾಪಕವಾಗಿ ನಗೆಪಾಟಲಿಗೀಡಾಗಿದ್ದಾರೆ. ಯಾಕೆಂದರೆ ಭಾರತದ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಫೋಟೋ … Continued

ವೀಡಿಯೊ…| ನಂಬಲಸಾಧ್ಯ : ಸ್ಕೂಟರ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಬೃಹತ್‌ ಬೀದಿ ಗೂಳಿ…!

ಉತ್ತರಾಖಂಡದ ಋಷಿಕೇಶದಲ್ಲಿ ಬೀದಿ ಗೂಳಿಯೊಂದು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ರೈಡ್‌ ಮಾಡಿಕೊಂಡು (ಎಳೆದುಕೊಂಡು) ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ನೋಡಿದವರಿಗೆ ನಗುವನ್ನು ತರಿಸಿತು. ಬಳಕೆದಾರರು ಆ ಪ್ರಾಣಿಯು ದ್ವಿಚಕ್ರ ವಾಹನವನ್ನು “ಟೆಸ್ಟ್‌ ರೈಡ್‌ʼ ಗೆ ಕೊಂಡೊಯ್ಯಲು ಬಯಸಿದೆ ಎಂದು ತಮಾಷೆ ಮಾಡಿದ್ದಾರೆ. ಗೂಳಿಯು ಸ್ಕೂಟರ್ … Continued

1947ರಲ್ಲಿ ಭಾರತ ತೊರೆದು ಪಾಕಿಸ್ತಾನಕ್ಕೆ ಹೋಗುವವರಿಗೆ ‘ಪಡಿತರ ಚೀಟಿ’ ಯ ಸೂಚನೆ ಈಗ ವೈರಲ್‌…!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಅಲ್ಪಾವಧಿಯ ವೀಸಾಗಳನ್ನು ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ದೇಶವನ್ನು ತೊರೆಯುವಂತೆ ಆದೇಶಿಸಿತು. ಆದಾಗ್ಯೂ, ಪಾಕಿಸ್ತಾನದ ಕೆಲವು ವ್ಯಕ್ತಿಗಳು ಭಾರತದಲ್ಲಿ ಹಲವು ವರ್ಷಗಳಿಂದ ಅಥವಾ ದಶಕಗಳಿಂದಲೂ ಇರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಗೊಂದಲದ ನಡುವೆಯೇ, ದೆಹಲಿ ಪಡಿತರ ಇಲಾಖೆಯಿಂದ 1947ರ ಸೂಚನೆಯು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ … Continued

16 ವರ್ಷದೊಳಗಿನ ಮಕ್ಕಳಿಗಾಗಿ ಇನ್​ಸ್ಟಾಗ್ರಾಂ​ನಲ್ಲಿ ಹೊಸ ನಿಯಮ….

ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಮುಂದೆ 16 ವರ್ಷದೊಳಗಿನ ಮಕ್ಕಳಿಗೆ ಲೈವ್ ಮಾಡಲು ಇದರಲ್ಲಿ ಅವಕಾಶ ಇರುವುದಿಲ್ಲ. ಮೆಟಾ ಶೀಘ್ರದಲ್ಲೇ 16 ವರ್ಷದೊಳಗಿನ ಮಕ್ಕಳು ಇನ್‌ಸ್ಟಾಗ್ರಾಮ್‌(Instagram)ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವುದನ್ನು ತಡೆಯಲಿದೆ. ಇದಕ್ಕೆ ಅವರ ತಂದೆ-ತಾಯಿಗಳು ಅನುಮತಿ ಬೇಕಾಗುತ್ತದೆ. ಹೊಸ ಸುರಕ್ಷತಾ ನಿಯಮವು ಆನ್‌ಲೈನ್‌ನಲ್ಲಿ 16 ವರ್ಷದೊಳಗಿನ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು … Continued

ಕಾಲೇಜಿಗೆ ಹೋಗಲು 3,200 ಕಿ.ಮೀ. ದೂರ ವಿಮಾನದಲ್ಲಿ ಪ್ರಯಾಣಿಸುವ ಕಾನೂನು ವಿದ್ಯಾರ್ಥಿನಿ…!

ಹೆಚ್ಚಿನ ಜನರು ತಮ್ಮ ಅಧ್ಯಯನ ಅಥವಾ ಉದ್ಯೋಗಕ್ಕಾಗಿ ನಗರ ಅಥವಾ ವಿವಿಧ ದೇಶಗಳಿಗೆ ಸ್ಥಳಾಂತರಗೊಳ್ಳುತ್ತಾರೆ. ಆದರೆ 30 ವರ್ಷದ ಕಾನೂನು ವಿದ್ಯಾರ್ಥಿನಿ ನ್ಯಾಟ್ ಸೆಡಿಲ್ಲೊ ಎಂಬ ಮಹಿಳೆ ಮಾತ್ರ ಇದಕ್ಕೆ ಅಪವಾದವಾಗಿದ್ದಾರೆ. ಯಾಕೆಂದರೆ ಅವರು ತಮ್ಮ ತರಗತಿಗಳಿಗೆ ಹಾಜರಾಗಲು ಪ್ರತಿ ವಾರ ಮೆಕ್ಸಿಕೋ ನಗರದಿಂದ ನ್ಯೂಯಾರ್ಕ್ ನಗರಕ್ಕೆ 3,200 ಕಿಮೀ ವಿಮಾನದಲ್ಲಿ ಹೋಗುತ್ತಾರೆ. ದಿ ನ್ಯೂಯಾರ್ಕ್ … Continued

ವೀಡಿಯೊ…| ವಿದ್ಯಾರ್ಥಿ ಕೈಯಿಂದ ಪರೀಕ್ಷಾ ಹಾಲ್ ಟಿಕೆಟ್ ಕಸಿದುಕೊಂಡು ಹೋದ ಹದ್ದು..! ಮುಂದಾಗಿದ್ದು ಅನಿರೀಕ್ಷಿತ..

ಬೇಟೆಗಾರ ಪಕ್ಷಿಗಳಾದ ಹದ್ದುಗಳು ಕೇವಲ ನುರಿತ ಬೇಟೆಗಾರರು ಮಾತ್ರವಲ್ಲದೆ, ಅವುಗಳ ಗುಟ್ಟಾಗಿ ಕದಿಯುವ ತಂತ್ರಗಳಿಗೂ ಹೆಸರುವಾಸಿಯಾಗಿವೆ. ಆಹಾರವನ್ನು ಮನುಷ್ಯರಿಂದಲೂ ಕಸಿದುಕೊಳ್ಳಲು ತಿಳಿದಿರುವ ಹದ್ದುಗಳು ತಮ್ಮ ತೀಕ್ಷ್ಣವಾದ ಡೈವಿಂಗ್ ಕೌಶಲ್ಯ ಮತ್ತು ನಂಬಲಾಗದ ವೇಗವನ್ನು ಬಳಸಿಕೊಂಡು ತಮಗೆ ಬೇಕಾದುದನ್ನು ಕಸಿದುಕೊಳ್ಳುತ್ತವೆ. ಆದರೆ ಇಲ್ಲೊಂದು ವಿಚಿತ್ರ ಮತ್ತು ಅನಿರೀಕ್ಷಿತ ಘಟನೆಯೊಂದರಲ್ಲಿ, ಕೇರಳದ ಕಾಸರಗೋಡಿನಲ್ಲಿ ಹದ್ದು ವ್ಯಕ್ತಿಯ ಪರೀಕ್ಷೆಯ ದಿನವನ್ನು … Continued

ವೀಡಿಯೊ..| ಹೌತಿ ಬಂಡುಕೋರರ ಮೇಲೆ ಅಮೆರಿಕದ ಮಾರಣಾಂತಿಕ ವಾಯು ದಾಳಿಯ ವೀಡಿಯೊ ಹಂಚಿಕೊಂಡ ಅಧ್ಯಕ್ಷ ಟ್ರಂಪ್

ಹೌತಿ ಬಂಡುಕೋರರ ಮೇಲೆ ಅಮೆರಿಕ ವಾಯಪಡೆಯ ಮಾರಣಾಂತಿಕ ದಾಳಿಯ ವೀಡಿಯೊವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಅವರು ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಗುಂಪಿನ ಮೇಲೆ ದೊಡ್ಡ ಪ್ರಮಾಣದ ದಾಳಿಗೆ ಆದೇಶಿಸಿದ ಕೆಲವು ದಿನಗಳ ನಂತರ ಈ ವೀಡಿಯೊ ಹಂಚಿಕೊಂಡಿದ್ದಾರೆ. ಟ್ರಂಪ್ ಹಂಚಿಕೊಂಡ ಕಪ್ಪು-ಬಿಳುಪು ವೀಡಿಯೊ ತುಣುಕಿನಲ್ಲಿ ಮಿಲಿಟರಿ ಡ್ರೋನ್‌ಗಳು ಅಥವಾ ಇತರ ವಿಮಾನಗಳಿಂದ ಚಿತ್ರೀಕರಿಸಲಾದ … Continued

ಬೆಂಗಳೂರು | ಕೆಲಸ ಸಿಗದ ನಿರಾಸೆಯಲ್ಲಿ ತನ್ನದೇ ಶ್ರದ್ಧಾಂಜಲಿ ಪೋಸ್ಟ್ ಹಂಚಿಕೊಂಡ ಯುವಕ…!

ಬೆಂಗಳೂರು : ಬೆಂಗಳೂರಿನಲ್ಲಿ ಯುವಕನೊಬ್ಬ ಮಾಡಿದ ವಿಚಿತ್ರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಉದ್ಯೋಗ ಸಿಗದೆ ಹತಾಶನಾದ ಈ ಯುವಕ ಲಿಂಕ್ಡ್ ಇನ್ ನಲ್ಲಿ ತನ್ನದೇ ಶ್ರದ್ಧಾಂಜಲಿ (obituary) ಪೋಸ್ಟ್ ಹಾಕಿಕೊಂಡಿದ್ದಾನೆ. ಕೆಲಸದ ಹುಡುಕಾಟದ ವೇಳೆ ತಾನು ಪಟ್ಟ ಕಷ್ಟ ಹಾಗೂ ನಿರುದ್ಯೋಗಿಗಳ ಕರಾಳತೆ ಬಿಚ್ಚಿಟ್ಟಿದ್ದಾನೆ. ಈ ಪೋಸ್ಟ್ ಗೆ ನೆಟ್ಟಿಗರು ನಾನಾ … Continued