ಕಾಸರಗೋಡು | ಮಗಳ ಮೇಲೆಯೇ ಆ್ಯಸಿಡ್ ಎರಚಿ ಪರಾರಿಯಾದ ಅಪ್ಪ…!

ಕಾಸರಗೋಡು : ಹೆಂಡತಿ ಜೊತೆ ಜಗಳಕ್ಕೆ ಸ್ವಂತ ಮಗಳ ಮೇಲೆ ಅಪ್ಪನೇ ಆ್ಯಸಿಡ್ ಎರಚಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ 10:30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಮತ್ತೊಬ್ಬ ಬಾಲಕಿಗೂ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ. ಆ್ಯಸಿಡ್ ಎರಚಿದ ಆರೋಪಿ ದಕ್ಷಿಣ ಕನ್ನಡ … Continued

ದಸರಾ ಉದ್ಘಾಟನೆಗೆ ಬಾನು ಮುಷ್ತಾಕಗೆ ಆಹ್ವಾನ : ಹೈಕೋರ್ಟ್‌ ಮೆಟ್ಟಿಲೇರಿದ ಪ್ರತಾಪ ಸಿಂಹ

ಬೆಂಗಳೂರು : ಈ ವರ್ಷದ ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಷ್ತಾಕ್‌ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಬಾನು ಮುಷ್ತಾಕ್‌ ಅವರಿಗೆ ನೀಡಿರುವ ಆಹ್ವಾನವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪ್ರತಾಪ ಸಿಂಹ ಸಲ್ಲಿಸಿದ್ದಾರೆ ಎಂದು ಬಾರ್‌ … Continued

‘ಬೀಡಿಸ್-ಬಿಹಾರ’ ಪೋಸ್ಟ್ ವಿವಾದ : ರಾಜೀನಾಮೆ ನೀಡಿದ ಕೇರಳ ಕಾಂಗ್ರೆಸ್ ಘಟಕದ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥ

ನವದೆಹಲಿ: ವಿವಾದಾತ್ಮಕ ಪೋಸ್ಟ್‌ ಒಂದು ವಿವಿಧ ರಾಜಕೀಯ ನಾಯಕರಿಂದ ಟೀಕೆಗೆ ಗುರಿಯಾದ ನಂತರ ಕಾಂಗ್ರೆಸ್‌ನ ಕೇರಳ ಘಟಕದ ಸಾಮಾಜಿಕ ಮಾಧ್ಯಮ ಮುಖ್ಯಸ್ಥರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕೇರಳದ ತ್ರಿತಾಲ ಕ್ಷೇತ್ರದ ಎರಡು ಬಾರಿ ಶಾಸಕರಾಗಿರುವ ಮತ್ತು ಈವರೆಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸೆಲ್‌ನ ಮುಖ್ಯಸ್ಥರಾಗಿರುವ ವಿಟಿ … Continued

ಖ್ಯಾತ ಬಾಲಿವುಡ್‌ ನಟ ಆಶಿಶ್ ವಾರಂಗ್ ನಿಧನ

ಮುಂಬೈ; ಬಾಲಿವುಡ್‌ನಲ್ಲಿ ಸ್ಮರಣೀಯ ಪೋಷಕ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಹಿರಿಯ ನಟ ಆಶಿಶ್ ವಾರಂಗ್ ಶುಕ್ರವಾರ (ಸೆಪ್ಟೆಂಬರ್ 5) ತಮ್ಮ 55 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಸಾವಿಗೆ ಅಧಿಕೃತವಾಗಿ ಕಾರಣವನ್ನು ದೃಢಪಡಿಸಲಾಗಿಲ್ಲವಾದರೂ, ಅವರು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಗಳು ಸೂಚಿಸುತ್ತವೆ. ಆಶಿಶ್ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲು, ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ರಾಷ್ಟ್ರಕ್ಕೆ … Continued

ನಾನು ಎಂದಿಗೂ ಪ್ರಧಾನಿ ಮೋದಿ ಸ್ನೇಹಿತ, ಭಾರತ-ಅಮೆರಿಕಾ ನಡುವೆ ವಿಶೇಷ ಬಾಂಧವ್ಯವಿದೆ, ಚಿಂತೆಯ ಅಗತ್ಯವಿಲ್ಲ: ಮೆತ್ತಗಾದ ಟ್ರಂಪ್

ನವದೆಹಲಿ: ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ “ಚೀನಾ ಕಡೆಗೆ ಭಾರತ ಹೋಯಿತು” ಎಂಬ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ ಮತ್ತು ಅದೇ ಸಂಭವಿಸಿದೆ ಎಂದು ತಾನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯ ಸಮಯದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟ್ರಂಪ್, ಇತ್ತೀಚಿನ ವಾರಗಳಲ್ಲಿ ರಷ್ಯಾದ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕಾಗಿ ಭಾರತದ ವಿರುದ್ಧದ ತಮ್ಮ … Continued

5.2 ಕೆ.ಜಿ ತೂಕದ ‘ಛೋಟಾ ಭೀಮ’ನ ಜನನ…ಇದು ಅಪರೂಪದ ಹೆರಿಗೆ

ಜಬಲ್ಪುರ : ಮಧ್ಯಪ್ರದೇಶದ ಜಬಲ್ಪುರದಲ್ಲಿ ಶುಭಾಂಗಿ ಯಾದವ್ ಎಂಬ ಮಹಿಳೆ ಬರೋಬ್ಬರಿ 5.2 ಕೆಜಿ ತೂಕದ ಆರೋಗ್ಯವಂತ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯವಾಗಿ ನವಜಾತ ಶಿಶು 2.8ರಿಂದ 3.2 ಕೆಜಿ ತೂಕವಿರುತ್ತವೆ. ಆದರೆ ಈ ಮಹಿಳೆ 5.2 ಕೆಜಿ ತೂಕದ ಮಗುವಿಗೆ ಜನ್ಮಕೊಟ್ಟಿದ್ದಾರೆ. ಕುಟುಂಬದವರೆಲ್ಲರೂ ಇದು ಗಣೇಶನ ಆಶೀರ್ವಾದ ಎಂದು ಹೇಳುತ್ತಿದ್ದಾರೆ. ನವಜಾತ ಶಿಶುವಿನ … Continued

ಬಾಲಕಿಗೆ 40 ದಿನಗಳಲ್ಲಿ 13 ಬಾರಿ ಕಚ್ಚಿದ ಅದೇ ಹಾವು…! ಇದು ಹಾವಿನ ಕೋಪವೋ ಅಥವಾ….

ಕಳೆದ 40 ದಿನಗಳ ಅವಧಿಯಲ್ಲಿ ಕಪ್ಪು ಬಣ್ಣದ ಹಾವೊಂದು ತನಗೆ 13 ಬಾರಿ ಕಚ್ಚಿದೆ ಎಂದು 15 ವರ್ಷದ ಬಾಲಕಿಯೊಬ್ಬಳು ದೂರು ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ (Uttar Pradesh)ದ ಕೌಶಂಬಿ ಜಿಲ್ಲೆಯ ಬಸ್ತಿ ಭೈಸಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದಿದೆ. ಬಾಲಕಿ ಪ್ರಕಾರ, ಒಂದೇ ಕಪ್ಪು ಹಾವು 40 ದಿನಗಳ ಅವಧಿಯಲ್ಲಿ 13 … Continued

60 ಕೋಟಿ ವಂಚನೆ ಪ್ರಕರಣ: ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್

ಮುಂಬೈ :  60 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಿದ್ದಾರೆ ಎಂದು ವರದಿಯಾಗಿದೆ. ಈ ವಂಚನೆಯು ದಂಪತಿಯ ಪ್ರಸ್ತುತ ಕಾರ್ಯನಿರ್ವಹಿಸದ ಸಂಸ್ಥೆಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ಒಪ್ಪಂದಕ್ಕೆ … Continued

“ನಾವು ಭಾರತ, ರಷ್ಯಾವನ್ನು ಕರಾಳ ಚೀನಾಕ್ಕೆ ಕಳೆದುಕೊಂಡಿದ್ದೇವೆ” : ಹೊಸ ಪೋಸ್ಟ್‌ ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು, ಶುಕ್ರವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ “ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಕರಾಳ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ” ಎಂದು ಹೇಳಿದ್ದಾರೆ. ನಂತರ ಮೂರೂ ದೇಶಗಳಿಗೆ “ಸಮೃದ್ಧ” ಭವಿಷ್ಯವನ್ನು ಹಾರೈಸಿದ್ದಾರೆ. ವಾರದ ಆರಂಭದಲ್ಲಿ ಚೀನಾದ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಟಿಯಾಂಜಿನ್ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಹಲವಾರು ವಿಶ್ವ ನಾಯಕರಲ್ಲಿ … Continued

ಶಿರಸಿ : ಏರ್‌ ಗನ್‌ ನಿಂದ ಗುಂಡು ಹಾರಿ ಬಾಲಕ ಸಾವು

ಶಿರಸಿ: ಎರಡು ಮಕ್ಕಳು ಆಟವಾಡುತ್ತಿದ್ದಾಗ ಆಕಸ್ಮಾತ್‌ ಆಗಿ ಏರ್ ಗನ್ ಗುಂಡು ಹಾರಿ ಒಂಬತ್ತು ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಟ್ಟ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಪಗಿ ಸಮೀಪದ ಸೋಮನಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ. ಸೋಮನಳ್ಳಿಯ ರಾಘವೇಂದ್ರ ಹೆಗಡೆ ಎಂಬವರ ಮನೆಯಲ್ಲಿ ಕೆಲಸ ಮಾಡಲು ಬಸಪ್ಪ ಉಂಡಿಯರ್ ಕುಟುಂಬ … Continued