ಕಾಶ್ಮೀರದ ಕಥುವಾದಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರ ಹೊಂಚುದಾಳಿ : 4 ಸೈನಿಕರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ದೂರದ ಮಚೇಡಿ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಸೇನಾ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಕಥುವಾದಿಂದ ಸುಮಾರು 150 ಕಿ.ಮೀ ದೂರದಲ್ಲಿ ದಾಳಿ ನಡೆಸಿದಾಗ ಸೇನಾ ವಾಹನಗಳು ಮಚೇಡಿ-ಕಿಂಡ್ಲಿ-ಮಲ್ಹಾರ ರಸ್ತೆಯಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದವು. … Continued

ವೀಡಿಯೊ..| ಕುಲ್ಗಾಂ ಎನ್‌ಕೌಂಟರ್‌ನಲ್ಲಿ ಸತ್ತ ನಾಲ್ವರು ಭಯೋತ್ಪಾದಕರು ಕಪಾಟಿನ ಹಿಂದೆ ನಿರ್ಮಿಸಿದ ರಹಸ್ಯ ‘ಬಂಕರ್’ನಲ್ಲಿ ಅಡಗಿದ್ದರು..!

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ಅವಳಿ ಎನ್‌ಕೌಂಟರ್‌ಗಳಲ್ಲಿ ಹತರಾದ ಆರು ಭಯೋತ್ಪಾದಕರ ಪೈಕಿ ನಾಲ್ವರು ಚಿನಿಗಾಮ್ ಫ್ರಿಸಲ್ ಪ್ರದೇಶದಲ್ಲಿನ ಕಪಾಟಿನ ಹಿಂದೆ ನಿರ್ಮಿಸಿದ್ದ ರಹಸ್ಯ ಬಂಕರ್‌ನಲ್ಲಿ ವಾಸಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಅವರಿಗೆ ಆಶ್ರಯ ನೀಡುವಲ್ಲಿ ಸ್ಥಳೀಯ ನಿವಾಸಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. … Continued

T20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಿಸಿಸಿಐ ನೀಡಿದ 125 ಕೋಟಿ ರೂ. ಬಹುಮಾನದ ಹಂಚಿಕೆ ಹೇಗೆ ? ಯಾರಿಗೆ ಎಷ್ಟು ಸಿಗಲಿದೆ? ವಿವರ ಇಲ್ಲಿದೆ

 ನವದೆಹಲಿ: ಟಿ20 ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ 15 ಸದಸ್ಯರ ಭಾತರದ ತಂಡವು ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆದ T20 ವಿಶ್ವಕಪ್ 2024 ಪಂದ್ಯಾವಳಿಯಲ್ಲಿ ಕಪ್‌ ಗೆದ್ದ ನಂತರ ಬಿಸಿಸಿಐ ಅವರಿಗೆ 125 ಕೋಟಿ ರೂ.ಗಳ ನಗದು ಬಹುಮಾನ ಘೋಷಿಸಿತು. ಒಟ್ಟು 42 ಜನರ … Continued

ಮುಂಬೈನಲ್ಲಿ 6 ತಾಸಿನಲ್ಲಿ 30 ಸೆಂ.ಮೀ.ಗೂ ಅಧಿಕ ಮಳೆ : ರೈಲು ಸೇವೆಗಳಿಗೆ ತೊಂದರೆ, ಶಾಲಾ- ಕಾಲೇಜುಗಳು ಬಂದ್‌, 65 ಜನರ ರಕ್ಷಣೆ

ಮುಂಬೈ: ಕಳೆದ 24 ಗಂಟೆಗಳಲ್ಲಿ ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ವ್ಯಾಪಕವಾದ ಪ್ರದೇಶ ಜಲಾವೃತವಾಗಿದ್ದು, ಉಪನಗರ ರೈಲು ಸಂಚಾರಕ್ಕೆ ತೊಂದರೆಯಾಗಿದೆ ಸೋಮವಾರ ನಸುಕಿನ 1 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗಿನ ಆರು ಗಂಟೆಗಳ ಅವಧಿಯಲ್ಲಿ ಮುಂಬೈ ನಗರದ ಕೆಲವು ಪ್ರದೇಶಗಳಲ್ಲಿ 30 ಸೆಂ.ಮೀ.ಗೂ ಅಧಿಕ ಮಳೆ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ … Continued

ಪ್ಯಾಕ್ ಮಾಡಿದ ಆಹಾರಗಳ ಮೇಲೆ ದಪ‍್ಪ ಅಕ್ಷರದಲ್ಲಿ ಸಕ್ಕರೆ, ಉಪ್ಪು ಮಾಹಿತಿ ನಮೂದು ಕಡ್ಡಾಯ

ನವದೆಹಲಿ: ಪ್ಯಾಕಿಂಗ್‌ ಮಾಡಿದ ಆಹಾರ ಪದಾರ್ಥಗಳಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ಕುರಿತ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸುವುದಕ್ಕೆ ಸಂಬಂಧಿಸಿದಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಕರಡು ಅಧಿಸೂಚನೆ ಪ್ರಕಟಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳು 2020ಕ್ಕೆ ತಿದ್ದುಪಡಿ ತರುವ ನಿರ್ಧಾರವನ್ನು ಪ್ರಾಧಿಕಾರದ 44ನೇ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಗ್ರಾಹಕರು ಸೇವಿಸುವ ಆಹಾರದಲ್ಲಿನ … Continued

ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ಆಕೆಯನ್ನು ಕಾಪಾಡಿದ ಬೀದಿ ನಾಯಿ…!

ಮುಂಬೈ : ಮುಂಬೈನ ವಸಾಯಿಯ ತುಂಗರೇಶ್ವರ ಗಲ್ಲಿಯಲ್ಲಿ ವ್ಯಕ್ತಿಯೊಬ್ಬ 32 ವರ್ಷದ ಅಕೌಂಟೆಂಟ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಬೀದಿ ನಾಯಿಯೊಂದು ಮಹಿಳೆಯ ರಕ್ಷಣೆಗೆ ಬಂದಿದ್ದು, ಬೀದಿ ನಾಯಿ ಬೊಗಳಿ ವ್ಯಕ್ತಿಯನ್ನು ಹೆದರಿಸಿ ಓಡಿಸಿ ಮಹಿಳೆಯನ್ನು ಪಾರು ಮಾಡಿದ ಘಟನೆ ಇತ್ತೀಚಿಗೆ ನಡೆದಿದೆ ಎಂದು ವರದಿಯಾಗಿದೆ. ಆಪಾದಿತ ದಾಳಿಕೋರ ಸುಮಾರು ಏಳು ಅಡಿ ಎತ್ತರದ ಸಂದೀಪ ಖೋತ್ … Continued

ಮಹಿಳಾ ಆಯೋಗದ ಅಧ್ಯಕ್ಷರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ ; ಸಂಸದೆ ಮಹುವಾ ವಿರುದ್ಧ ಪ್ರಕರಣ ದಾಖಲು

ನವದೆಹಲಿ : ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರೇಖಾ ಶರ್ಮಾ ಅವರ ದೂರಿನ ಆಧಾರದ ಮೇಲೆ, ಹೊಸ ಕ್ರಿಮಿನಲ್ ಕೋಡ್ ಭಾರತೀಯ ನ್ಯಾಯ ಸಂಹಿತಾ, ಸೆಕ್ಷನ್ 79 (ಮಹಿಳೆಯರ ನಮ್ರತೆಯನ್ನು ಅವಮಾನಿಸುವ … Continued

ಇದು ವಿಶ್ವದ ಅತ್ಯಂತ ದುಬಾರಿ ಕೀಟ ; ಇದರ ಬೆಲೆ ಐಷಾರಾಮಿ ಕಾರಿನ ಬೆಲೆಗೆ ಸಮ…! ಇಷ್ಟೊಂದು ದುಬಾರಿ ಯಾಕೆಂದರೆ…

ಒಂದು ಕೀಟದ ಬೆಲೆ ₹ 75 ಲಕ್ಷ ರೂ.ವರೆಗೆ ಇದೆ ಎಂದು ತಿಳಿದಿದೆಯೇ? ವಿಶ್ವದ ಅತ್ಯಂತ ದುಬಾರಿ ಕೀಟಗಳಲ್ಲಿ ಸಾರಂಗ ಜೀರುಂಡೆಗಳು (stag beetles) ಕೂಡ ಒಂದು. ಅದರ ವಿಶೇಷತೆ ಏನು? ಸಾರಂಗ ಜೀರುಂಡೆ ಇಷ್ಟೊಂದು ದುಬಾರಿಯಾಗಲು ಕಾರಣವೇನು.? ಯಾಕೆಂದರೆ ಇದು ಸಾಕಷ್ಟು ಅಪರೂಪ, ಮತ್ತು ಅದೃಷ್ಟ ತರುತ್ತದೆ ಎಂದು ನಂಬಲಾಗಿದೆ. ಸಾರಂಗ ಜೀರುಂಡೆ (stag … Continued

ವೀಡಿಯೊ…| ರೈಲು ಬಂದ್ರೂ ಕ್ಯಾರೇ ಎನ್ನದೆ ರೈಲ್ವೆ ಹಳಿಗಳ ಮೇಲೆ ದೈತ್ಯ ಗೂಳಿಗಳ ಕಾದಾಟ ; ಮುಂದಾಗಿದ್ದು…

ರಸ್ತೆಯಲ್ಲಿ ಗೂಳಿ ಕಾಳಗದ ಹಲವು ವಿಡಿಯೋಗಳು ವೈರಲ್ ಆಗಿದ್ದು, ಹಲವು ವೀಡಿಯೊಗಳಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಗೂಳಿ ಕಾಳಗದಿಂದ ಹಲವು ಬಾರಿ ಕಾರು, ಬೈಕ್‌ಗಳು ಹಾನಿಗೊಳಗಾಗಿವೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ರೈಲ್ವೇ ಹಳಿ ಮೇಲೆಯೇ ಕಾದಾಟ ಮಾಡುತ್ತಿದ್ದ ಎರಡು ಹೋರಿಗಳನ್ನು ಗೇಟ್‌ನಲ್ಲಿದ್ದ ರೈಲ್ವೇಮನ್ ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೊನೆಗೆ ಲೋಕೋ … Continued

ಮಹಿಳಾ ಏಷ್ಯಾ ಕಪ್ 2024 : ಭಾರತದ ಮಹಿಳೆಯರ ಕ್ರಿಕೆಟ್‌ ತಂಡ ಪ್ರಕಟ

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯಲಿರುವ ಮಹಿಳಾ ಏಷ್ಯಾ ಕಪ್ 2024 ಪಂದ್ಯಾವಳಿಗಾಗಿ ತಂಡವನ್ನು ಪ್ರಕಟಿಸಿದೆ. ಎರಡು ವರ್ಷಗಳ ಹಿಂದೆ ಭಾರತದ ತಂಡವನ್ನು ಏಷ್ಯಾ ಕಪ್ ಪ್ರಶಸ್ತಿಗೆ ಮುನ್ನಡೆಸಿದ್ದ ಹರ್ಮನ್‌ಪ್ರೀತ್ ಕೌರ್, ಈ ಆವೃತ್ತಿಯ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧಾನ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. ಅಂತಿಮ … Continued