ಹೃದಯಸ್ಪರ್ಶಿ ವೀಡಿಯೊ | ತಾಯಿ ಪ್ರೀತಿಗೆ ಎಣೆಯುಂಟೇ : ಪ್ರಜ್ಞೆಯೇ ಇಲ್ಲದ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಪಶು ಆಸ್ಪತ್ರೆಗೆ ಹೊತ್ತೊಯ್ದ ತಾಯಿ ನಾಯಿ ; ವೀಕ್ಷಿಸಿ

ಬೆರಗುಗೊಳಿಸುವ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಟರ್ಕಿಯಲ್ಲಿ ಹೆಣ್ಣು ನಾಯಿಯೊಂದು ತನ್ನ ಪ್ರಜ್ಞಾಹೀನ ಮರಿಯನ್ನು ಹತ್ತಿರದ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಕೊಂಡೊಯ್ದ ಅಪರೂಪದ ವಿದ್ಯಮಾನ ನಡೆದಿದೆ. ಜನವರಿ 13 ರಂದು ಟರ್ಕಿಯ ಬೇಲಿಕ್ಡುಜು ಆಲ್ಫಾ ವೆಟರ್ನರಿ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದ್ದು, ತಾಯಿ ನಾಯಿ ತನ್ನ ನಿರ್ಜೀವವಾದ ನಾಯಿಮರಿಯನ್ನು ಬಾಯಿಯಲ್ಲಿ ಕಚ್ಚಿಹಿಡಿದುಕೊಂಡು ಸಹಾಯಕ್ಕಾಗಿ ನೇರವಾಗಿ ಪಶು ಚಿಕಿತ್ಸಾಲಯಕ್ಕೆ ಧಾವಿಸುತ್ತಿರುವುದು ಕಂಡುಬಂದಿದೆ. … Continued

ವೀಡಿಯೊ…| ಸೈಫ್ ಅಲಿ ಖಾನಗೆ ಇರಿತದ ಘಟನೆ : ಹೊರಬಿದ್ದ ಆರೋಪಿಯ ಮೊದಲ ವೀಡಿಯೊ ; ವೀಕ್ಷಿಸಿ

ಮುಂಬೈ: ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಅವರು ತಮ್ಮ ಮುಂಬೈ ನಿವಾಸದಲ್ಲಿ ದರೋಡೆಕೋರನಿಂದ ಇರಿಯಲ್ಪಟ್ಟ ಕೆಲವೇ ಗಂಟೆಗಳ ನಂತರ, ಆರೋಪಿಯ ಮೊದಲ ಫೋಟೋ ಹೊರಬಿದ್ದಿದೆ. ಬುಧವಾರ ರಾತ್ರಿ ಬಾಲಿವುಡ್ ಸೂಪರ್‌ಸ್ಟಾರ್ ಮೇಲೆ ದಾಳಿ ಮಾಡಿದ ಆರೋಪಿಯ ಸಿಸಿಟಿವಿ ವೀಡಿಯೊದಲ್ಲಿ ಆರೋಪಿಯ ಮುಖ ಸ್ಪಷ್ಟವಾಗಿ ಕಾಣುತ್ತದೆ. ವಿಡಿಯೋದಲ್ಲಿ ಆತ ಜನವರಿ 16ರ ಮುಂಜಾನೆ 2:33ಕ್ಕೆ ಕಟ್ಟಡದ … Continued

ವೀಡಿಯೊ..| ನಡುರಸ್ತೆಯಲ್ಲೇ ಆಟೋ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿ ; ವೀಡಿಯೊ ವೈರಲ್‌ ಆದ ನಂತರ ದೂರು ದಾಖಲಿಸಿದ ಚಾಲಕ

ಲಕ್ನೋ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪ್ರಯಾಣ ದರದ ಬಗ್ಗೆ ಉಂಟಾದ ಜಗಳದ ನಂತರ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಥಳಿಸಿದ ವೀಡಿಯೊ ವೈರಲ್ ಆಗಿದೆ. ಪ್ರಿಯಾಂಶಿ ಪಾಂಡೆ ಎಂಬ ಯುವತಿ ಆಟೋ ಡ್ರೈವರ್ ವಿಮಲೇಶಕುಮಾರ ಶುಕ್ಲಾ ಎಂಬವರನ್ನು ಬೈಯುತ್ತ ಸೀಟಿನಿಂದ ಎಳೆಯಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಕೈಮುಗಿದು ಬೇಡಿಕೊಂಡರೂ ಆಕೆ ಆತನಿಗೆ ಥಳಿಸುತ್ತಿರುವುದನ್ನು ವೀಡಿಯೊ ತೋರಿಸಿದೆ. ಆಟೋ … Continued

ವೀಡಿಯೊ…| ಬೆಂಗಳೂರು : ಕಂಠಪೂರ್ತಿ ಕುಡಿದು ಬಂದು ಮದುಮಗನ ರಂಪಾಟ ; ಮದುವೆಯನ್ನೇ ರದ್ದು ಮಾಡಿದ ವಧುವಿನ ತಾಯಿ…!

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅದ್ಧೂರಿ ವಿವಾಹವೊಂದು ದಿಢೀರ್ ಸ್ಥಗಿತವಾದ ಘಟನೆ ವರದಿಯಾಗಿದ್ದು, ಅಚ್ಚರಿ ಎಂದರೆ ತಾಳಿಕಟ್ಟುವ ಕೆಲವೇ ಹೊತ್ತಿನ ಮೊದಲು ವಧು ಹಾಗೂ ವಧುವಿನ ತಾಯಿ ಮದುವೆಯನ್ನು ರದ್ದುಗೊಳಿಸಿದ್ದಾರೆ…! ಮದುವೆ ಸಮಾರಂಭದಲ್ಲಿ ವರ ಕುಡಿದು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮದುವೆಯಲ್ಲಿ ರಂಪಾಟ ಮಾಡಿದ್ದಾನೆ. ಮದುವೆ ವಿಧಿವಿಧಾನಗಳು ನಡೆಯುತ್ತಿದ್ದಾಗ ವರನ ಕಡೆಯವರು ಅನುಚಿತವಾಗಿ ವರ್ತಿಸಿ ಆರತಿ ತಾಳಿ … Continued

ವೀಡಿಯೊ…| 10 ರೂ.ಗಳ ವಿಷಯಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಬಸ್ ಕಂಡಕ್ಟರ್…!

ಜೈಪುರ : 75 ವರ್ಷದ ನಿವೃತ್ತ ಐಎಎಸ್‌ (IAS) ಅಧಿಕಾರಿಯೊಬ್ಬರು ಜೈಪುರದಲ್ಲಿ ಬಸ್ ಕಂಡಕ್ಟರ್‌ ಗೆ 10 ರೂಪಾಯಿ ಹೆಚ್ಚುವರಿ ಹಣ ನೀಡಲು ನಿರಾಕರಿಸಿದ ಆರೋಪದ ಮೇಲೆ ಅವರ ಮೇಲೆ ನಿರ್ವಾಹಕ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಘಟನೆ ಶುಕ್ರವಾರ ನಡೆದಿದ್ದು, ನಿವೃತ್ತ ಐಎಎಸ್‌ (IAS) … Continued

ವೀಡಿಯೊ..| ಶಾಪಿಂಗ್ ಮಾಲ್‌ ಗೆ ನುಗ್ಗಿದ ಮಂಗ, ಮಹಿಳೆ ಮೇಲೆ ದಾಳಿ; ಹಿಡಿಯಲು ಹೋದವರಿಗೆ ಚಳ್ಳೆ ಹಣ್ಣು ತಿನ್ನಿಸಿದ ವಾನರ..

ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯ ಮಾಲ್‌ನಲ್ಲಿ ಕೋತಿಯೊಂದು ಮಹಿಳಾ ಗ್ರಾಹಕರೊಬ್ಬರ ಮೇಲೆ ದಾಳಿ ಮಾಡಿದ ನಂತರ ಗೊಂದಲ ಉಂಟಾದ ಘಟನೆ ವರದಿಯಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಝಾನ್ಸಿಯ ಸಿಟಿ ಕಾರ್ ಮಾಲ್‌ನಲ್ಲಿರುವ ಅಂಗಡಿಯೊಳಗೆ ಮಂಗವೊಂದು ಓಡಾಡುತ್ತಿರುವುದು ಕಂಡುಬಂದಿದೆ. ಮಂಗವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅದರಿಂದ ತಪ್ಪಿಸಿಕೊಳ್ಳುತ್ತ ಮಂಗವು ಎಲ್ಲೆಂದರಲ್ಲಿ ಓಡಾಡಿದೆ. ಇದ್ದಕ್ಕಿದ್ದಂತೆ ಕೋತಿ ಭಯದಿಂದ ಕುಳಿತಿದ್ದ … Continued

ವೀಡಿಯೊ : ಕೋಲು ಹಿಡಿದು ರೈಲು ಹಳಿ ಮೇಲಿಂದ ಸಿಂಹವನ್ನು ಓಡಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ…!

ಗುಜರಾತಿನ ಭಾವನಗರದಲ್ಲಿ ರೈಲ್ವೆ ಹಳಿ ಮೇಲೆ ಬರುತ್ತಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಯಾವುದೇ ಭಯ ಅಥವಾ ಅಂಜಿಕೆ ಇಲ್ಲದೆ ಒಬ್ಬಂಟಿಯಾಗಿ ಓಡಿಸಿದ್ದಾರೆ. ಘಟನೆಯ ವೀಡಿಯೊ ಆಗಿದ್ದು, ಲಿಲಿಯಾ ನಿಲ್ದಾಣದ ಬಳಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಸಿಂಹವು ರೈಲ್ವೆ ಟ್ರ್ಯಾಕ್ ದಾಟುತ್ತಿರುವಾಗ ಮತ್ತು ನಂತರ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಸಿಬ್ಬಂದಿಯನ್ನು ನೋಡುತ್ತ ಹೋಗುವುದನ್ನು ವೀಡಿಯೊ … Continued

ವೀಡಿಯೊ…| ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸಿದ ಮಂಗ…! ಬೆರಗಾದ ಇಂಟರ್ನೆಟ್‌….

ಭಾರತದಲ್ಲಿ ಗಾಳಿಪಟ ಹಾರಿಸುವ ಹಬ್ಬವನ್ನು ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತದೆ ಮತ್ತು ಗುಜರಾತ್ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಉತ್ತರಾಯಣ ಎಂದು ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಮತ್ತು ಗಾಳಿಪಟಗಳನ್ನು ಹಾರಿಸುತ್ತಾರೆ. ಆದರೆ, ಕೋತಿಯೊಂದು ಕಟ್ಟಡದ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ … Continued

ಒಬ್ಬನೇ ಹುಡುಗನಿಗಾಗಿ ನಡುರಸ್ತೆಯಲ್ಲೇ ಬಡಿದಾಡಿಕೊಂಡ ಇಬ್ಬರು ಹುಡುಗಿಯರು…!

ಲಕ್ನೋ: ತಮ್ಮ ಶಾಲೆಯಲ್ಲಿ ಓದುತ್ತಿರುವ ಒಂದೇ ಹುಡುಗನನ್ನು ತಾವಿಬ್ಬರೂ ಇಷ್ಟಪಡುತ್ತಿದ್ದೇವೆ ಎಂದು ತಿಳಿದ ನಂತರ ಇಬ್ಬರು ಹದಿಹರೆಯದ ಹುಡುಗಿಯರು ಜನನಿಬಿಡ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಂಗಳವಾರ ಸಿಂಘ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಮೀನಗರ್ ಸರಾಯ್ ಟೌನ್‌ನಲ್ಲಿ ನಡೆದ ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಈ … Continued

ವೀಡಿಯೊ..| ಈ ಮಂಗ ಚಪಾತಿ ಮಾಡುತ್ತದೆ…ಪಾತ್ರೆ ತೊಳೆಯುತ್ತದೆ…ಮಸಾಲೆ ರುಬ್ಬುತ್ತದೆ…!

ರಾಯ್ಬರೇಲಿ : ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯಲ್ಲಿ ರಾಣಿ ಎಂಬ ಮಂಗನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಕೋತಿ ರೊಟ್ಟಿ ಮಾಡುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಮನೆಕೆಲಸಗಳನ್ನು ಮಾಡುತ್ತದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಮನೆಯ ಕೆಲಸಗಳನ್ನು ಮಾಡುತ್ತಿರುವ ಕೋತಿಯನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ರಾಣಿ ಸಾಮಾಜಿಕ ಜಾಲತಾಣಗಳಲ್ಲಿ … Continued