“ಕಾಂಗ್ರೆಸ್ ಅನ್ನು ಎಂದಿಗೂ ಹತ್ತಿರ ಸೇರಿಸಲ್ಲ” : ವಿಜಯ ಸರ್ಕಾರಕ್ಕೆ ಬೆಂಬಲಿಸಿದ ‘ಕಾಂಗ್ರೆಸ್‌’ ವಿರುದ್ಧ ಡಿಎಂಕೆ ತೀವ್ರ ವಾಗ್ದಾಳಿ

ಚೆನ್ನೈ: ತಮಿಳುನಾಡಿನಲ್ಲಿ ಮುಖ್ಯಮಂತ್ರಿ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಲ್ಪಸಂಖ್ಯಾತ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿದ ಬೆನ್ನಲ್ಲೇ, ಡಿಎಂಕೆ (DMK) ನಾಯಕ ಮತ್ತು ಪಕ್ಷದ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಇನ್ನು ಮುಂದೆ “ಕಾಂಗ್ರೆಸ್ ಅನ್ನು ಎಂದಿಗೂ ನಂಬಬಾರದು” ಎಂದು … Continued

ಅಧ್ಯಕ್ಷ ಟ್ರಂಪ್ ಒಳಗಿದ್ದಾಗಲೇ ವೈಟ್ ಹೌಸ್ ಬಳಿ ಗುಂಡಿನ ದಾಳಿ: ಭದ್ರತಾ ಸಿಬ್ಬಂದಿ ಗುಂಡಿಗೆ ದಾಳಿಕೋರ ಸಾವು

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭದ್ರತಾ ವಲಯದ ಬಳಿ ಶನಿವಾರ ಸಂಜೆ ಭೀಕರ ಗುಂಡಿನ ಚಕಮಕಿ ನಡೆದಿದೆ. ವೈಟ್ ಹೌಸ್ ಭದ್ರತಾ ತಪಾಸಣಾ ಕೇಂದ್ರದ (ಸೆಕ್ಯೂರಿಟಿ ಚೆಕ್‌ಪಾಯಿಂಟ್) ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಯೊಬ್ಬ, ಅಧಿಕಾರಿಗಳು ನಡೆಸಿದ ಪ್ರತಿದಾಳಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಅಮೆರಿಕ ಸೀಕ್ರೆಟ್ ಸರ್ವಿಸ್ ತಿಳಿಸಿದೆ.  ಕಳೆದ ಒಂದು ತಿಂಗಳ ಅವಧಿಯಲ್ಲಿ … Continued

ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನ ಶೇ. 60ರಷ್ಟು ಹೆಚ್ಚಳ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರವು ಶನಿವಾರ (ಮೇ 23) ಕಾರ್ಮಿಕರ ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ವ್ಯವಸ್ಥೆಯಡಿ ಬೆಂಗಳೂರಿನ ಕಾರ್ಮಿಕರು ಇನ್ಮುಂದೆ ಮಾಸಿಕ ಕನಿಷ್ಠ 23,376 ರೂಪಾಯಿ ವೇತನ ಪಡೆಯಲಿದ್ದಾರೆ. ಈ ನಿರ್ಧಾರವನ್ನು ಪ್ರಕಟಿಸಿದ ಕಾರ್ಮಿಕ ಖಾತೆ ಸಚಿವ ಸಂತೋಷ ಲಾಡ್ ಅವರು, “ಈ ಕ್ರಮವು ಕಾರ್ಮಿಕರ … Continued

ತ್ವಿಷಾ ಶರ್ಮಾ ಸಾವಿನ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಸ್ವಯಂಪ್ರೇರಿತ ದೂರು ದಾಖಲು

ನವದೆಹಲಿ: ಯುವತಿ ತ್ವಿಷಾ ಶರ್ಮಾ ಅವರ ಶಂಕಾಸ್ಪದ ವರದಕ್ಷಿಣೆ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮಾಧ್ಯಮ ವರದಿಗಳು ಮತ್ತು ಘಟನೆಯ ಗಂಭೀರತೆಯನ್ನು ಆಧರಿಸಿ ಸುಪ್ರೀಂ ಕೋರ್ಟ್ ಶನಿವಾರ ಸ್ವಯಂಪ್ರೇರಿತವಾಗಿ (Suo Motu) ಪ್ರಕರಣವನ್ನು ದಾಖಲಿಸಿಕೊಂಡಿದೆ.  ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ … Continued

ಧಗಧಗಿಸುವ ಜ್ವಾಲಾಮುಖಿ ಬಾಯಿಯ ಅಂಚಿನಲ್ಲೇ 700 ವರ್ಷಗಳಿಂದ ಇದೆ ಭಗವಾನ್ ಗಣೇಶನ ಮೂರ್ತಿ ! ಇದು ಎಲ್ಲಿದೆ ಗೊತ್ತಾ ?

ಇಂಡೋನೇಷ್ಯಾದ ಸಜೀವ ‘ಮೌಂಟ್ ಬ್ರೋಮೋ’ ಜ್ವಾಲಾಮುಖಿಯ ಅಂಚಿನಲ್ಲಿ ಭಗವಾನ್ ಗಣೇಶನ 700 ವರ್ಷಗಳಷ್ಟು ಹಳೆಯದಾದ ಅಪರೂಪದ ಮೂರ್ತಿಯೊಂದು ನೆಲೆ ನಿಂತಿದೆ. ಸ್ಥಳೀಯರಿಂದ ಅತ್ಯಂತ ಭಕ್ತಿ-ಗೌರವಗಳಿಂದ ಪೂಜಿಸಲ್ಪಡುವ ಈ ಪವಿತ್ರ ತಾಣವು ಆಧ್ಯಾತ್ಮಿಕ ರಹಸ್ಯಗಳು ಹಾಗೂ ಪ್ರಾಚೀನ ಆಚರಣೆಗಳಿಂದ ಆವೃತವಾಗಿದೆ. ಈ ಗಣೇಶನೇ ಜ್ವಾಲಾಮುಖಿಯ ವಿನಾಶಕಾರಿ ಸ್ಫೋಟಗಳಿಂದ ಸುತ್ತಮುತ್ತಲಿನ ಹಳ್ಳಿಗಳನ್ನು ರಕ್ಷಿಸುತ್ತಾನೆ ಎಂಬ ಬಲವಾದ ನಂಬಿಕೆ ಅಲ್ಲಿನ … Continued

ಸಮುದ್ರದ ಒಳಗೆ ಚೀನಾದ ಎಐ(AI) ಕ್ರಾಂತಿ ! ಸಮುದ್ರದಾಳದಲ್ಲಿ 2000 ಸರ್ವರ್‌ಗಳ ಹಸಿರು ಎಐ ಡೇಟಾ ಸೆಂಟರ್ ಆರಂಭಿಸಿದ ಚೀನಾ !!

ಬೀಜಿಂಗ್: ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಉಂಟಾಗುತ್ತಿರುವ ವಿದ್ಯುತ್ ಅಭಾವದ ಸಮಸ್ಯೆಗೆ ಚೀನಾ ವಿಶಿಷ್ಟ ಪರ್ಯಾಯವೊಂದನ್ನು ಕಂಡುಕೊಂಡಿದೆ. ಸಮುದ್ರದ ಆಳದಲ್ಲಿ ಸೀಲ್ ಮಾಡಲಾದ ಸರ್ವರ್ ಮಾಡ್ಯೂಲ್‌ಗಳನ್ನು ಇರಿಸಿ, ಅಲ್ಲಿನ ತಂಪಾದ ನೀರನ್ನೇ ಬಳಸಿ ನಿಷ್ಕ್ರಿಯ ಕೂಲಿಂಗ್ (Passive Cooling) ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ವಾಣಿಜ್ಯ ಬಳಕೆಯ ನೀರಿನ ಅಡಿಯ (underwater) … Continued

ಅಡಕೆ ತೋಟಗಳಿಗೆ ರಾಸಾಯನಿಕ ಸಿಂಪಡಣೆ : ಜೇನು ಸಂಕುಲಗಳು ನಾಶ

ಶಿರಸಿ: ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ತವರೂರಾದ ಮಲೆನಾಡಿನಲ್ಲಿ ಪ್ರಕೃತಿ ಮತ್ತು ಕೃಷಿ ಒಂದಕ್ಕೊಂದು ಪೂರಕವಾಗಿ ಸಾಗುತ್ತಾ ಬಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಿರಸಿ ಸುತ್ತಮುತ್ತಲಿನ ಅನೇಕ ಕಡೆ ಜೇನುನೊಣಗಳ ಸಾಮೂಹಿಕ ಸಾವಿನ ಘಟನೆಗಳು ಕೃಷಿ ಮತ್ತು ಈ ಸೂಕ್ಷ್ಮ ಪರಿಸರ ವ್ಯವಸ್ಥೆಯ ಸಮತೋಲನ ಬಿಗಡಾಯಿಸುತ್ತಿರುವುದಕ್ಕೆ ಮುನ್ಸೂಚನೆಯಂತೆ ಕಂಡುಬರುತ್ತಿದೆ. ಅಡಕೆ ಮುಗುಳು (ಹೂಗೊಂಚಲು) ಉದುರದಂತೆ ತಡೆಯಲು ಮತ್ತು … Continued

10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಮತ್ತು ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ತೈಲ ಕಂಪನಿಗಳು ಶನಿವಾರ ದೇಶಾದ್ಯಂತ ಇಂಧನ ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿವೆ. ಈ ತಿಂಗಳಲ್ಲೇ ನಡೆದಿರುವ ಮೂರನೇ ಬೆಲೆ ಏರಿಕೆ ಇದಾಗಿದ್ದು, ಲೀಟರ್ ಪೆಟ್ರೋಲ್ ದರದಲ್ಲಿ 87 ಪೈಸೆ ಹಾಗೂ ಡೀಸೆಲ್ ದರದಲ್ಲಿ … Continued

ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂ.18ರಂದು ಚುನಾವಣೆ ; ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸಿಗುವುದೇ 3ನೇ 2ರಷ್ಟು ಬಹುಮತ ?

ನವದೆಹಲಿ: ಜೂನ್ ಮತ್ತು ಜುಲೈ ತಿಂಗಳಿನಲ್ಲಿ ತೆರವಾಗಲಿರುವ 10 ರಾಜ್ಯಗಳ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಮತದಾನ ಮುಗಿದ ತಕ್ಷಣ ಅಂದೇ ಸಂಜೆ ಮತ ಎಣಿಕೆ ಕಾರ್ಯವೂ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ಪ್ರಸಕ್ತ ಸಾಲಿನ ಜೂನ್ 21 ರಿಂದ ಜುಲೈ 19 … Continued

ಹುಲಿ ದಾಳಿಗೆ ನಾಲ್ವರು ಮಹಿಳೆಯರು ಸಾವು

ಮುಂಬೈ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಶುಕ್ರವಾರ (ಮೇ 22)  ಅತ್ಯಂತ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಅರಣ್ಯ ಪ್ರದೇಶಕ್ಕೆ ತೇಂದು ಎಲೆಗಳನ್ನು ಸಂಗ್ರಹಿಸಲು ಹೋಗಿದ್ದ 13 ಮಹಿಳೆಯರ ಗುಂಪಿನ ಮೇಲೆ ಹುಲಿ ದಾಳಿ ನಡೆಸಿದ್ದು, ನಾಲ್ವರು ಮಹಿಳೆಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಸಿಂದೇವಾಹಿ ತಹಸಿಲ್‌ನ ಗುಂಜೆವಾಹಿ ಗ್ರಾಮದ ನಿವಾಸಿಗಳಾದ … Continued