ತೆಹ್ರಾನ್‌ ಮೇಲೆ ಅಮೆರಿಕ-ಇಸ್ರೇಲ್ ವಿನಾಶಕ ದಾಳಿ ; ಪಾಕ್‌ ನಂತ್ರ ಇರಾನಿನಲ್ಲೂ ಠುಸ್‌ ಆಯ್ತೆ ಚೀನಾದ ಹೈಟೆಕ್ ಕ್ಷಿಪಣಿ ನಿರೋಧಕ ವ್ಯವಸ್ಥೆ ?

ಅಮೆರಿಕ ಮತ್ತು ಇಸ್ರೇಲ್ ಸಂಘಟಿತವಾಗಿ ನಡೆಸಿದ ವಾಯುದಾಳಿಗಳಿಂದ ಇರಾನ್ ನಗರಗಳಲ್ಲಿ ಭಾರಿ ವಿನಾಶ ಸಂಭವಿಸಿದೆ. ಈ ಘಟನೆಯು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ(air defence system)ಯು ಶತ್ರುವಿನ ಕ್ಷಿಪಣಿಗಳನ್ನು ತಡೆಯುವಲ್ಲಿ ವಿಫಲವಾಗಿರುವುದನ್ನು ಎತ್ತಿ ತೋರಿಸಿದೆ. ಇರಾನ್ ತನ್ನ ಶಸ್ತ್ರಾಸ್ತ್ರಗಳ ಬಲ  ಹೆಚ್ಚಿಸಲು ಇತ್ತೀಚೆಗಷ್ಟೇ ಚೀನಾದಿಂದ ಖರೀದಿಸಿದ್ದ HQ-9B ವಾಯು ರಕ್ಷಣಾ ವ್ಯವಸ್ಥೆಯು ಶತ್ರು ದೇಶಗಳ ಕ್ಷಿಪಣಿಗಳನ್ನು … Continued

10ಕ್ಕೂ ಹೆಚ್ಚು ಇಂಟರ್‌ಸೆಪ್ಟರ್ ಕ್ಷಿಪಣಿಗಳಿಂದ ತಪ್ಪಿಸಿಕೊಂಡು ಮುನ್ನುಗ್ಗಿ ಗುರಿಗೆ ಅಪ್ಪಳಿಸಿದ ಇರಾನ್ ಕ್ಷಿಪಣಿ : ವೀಡಿಯೊ ವೈರಲ್‌

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಎರಡೂ ದೇಶಗಳು ಪರಸ್ಪರ ಕ್ಷಿಪಣಿ ದಾಳಿ ನಡೆಸುತ್ತಿವೆ. ಈ ನಡುವೆ, ಹತ್ತಕ್ಕೂ ಹೆಚ್ಚು ಪ್ರತಿರೋಧಕ (Interceptor) ಕ್ಷಿಪಣಿಗಳಿಂದ ತಪ್ಪಿಸಿಕೊಂಡು ಇರಾನ್‌ನ ಕ್ಷಿಪಣಿಯೊಂದು ಗುರಿ ತಲುಪುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಜೆರುಸಲೇಂನದ್ದು ಎಂದು ಹೇಳಲಾಗುತ್ತಿದ್ದು, ಪ್ರತಿರೋಧಕ ಕ್ಷಿಪಣಿಗಳ ಕಣ್ತಪ್ಪಿಸಿ ಇರಾನ್ ಕ್ಷಿಪಣಿಯು … Continued

ಖಮೇನಿ ಹತ್ಯೆಗೆ ಪಾಕಿಸ್ತಾನದಲ್ಲಿ ಆಕ್ರೋಶ ; ಅಮೆರಿಕ ಕಾನ್ಸುಲೇಟ್ ಕಚೇರಿಮೇಲೆ ದಾಳಿ ; ಹಿಂಸಾಚಾರದಲ್ಲಿ 21 ಮಂದಿ ಸಾವು

ಇಸ್ಲಾಮಾಬಾದ್‌ : ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಪಾಕಿಸ್ತಾನದಾದ್ಯಂತ ಭಾನುವಾರ ಪ್ರತಿಭಟನೆಗಳು ಭುಗಿಲೆದ್ದವು. ಹಲವಾರು ಶಿಯಾ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು, ಬೆಂಕಿ ಹಚ್ಚಿದ ಘಟನೆಗಳು ಮತ್ತು ಅಮೆರಿಕ ವಿರೋಧಿ ಪ್ರದರ್ಶನಗಳಿಗೆ ಕಾರಣವಾಯಿತು. ಹಲವಾರು ನಗರಗಳಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೆ ಕನಿಷ್ಠ 21 ಜನರು ಸಾವಿಗೀಡಾಗಿದ್ದಾರೆ ಎಂದು … Continued

ಇರಾನ್‌-ಅಮೆರಿಕ ಸಂಘರ್ಷ | ಇರಾನ್‌ನ 9 ಯುದ್ಧ ನೌಕೆಗಳು ನಾಶ, ನೌಕಾಪಡೆ ಕೇಂದ್ರ ಕಾರ್ಯಾಲಯ ಧ್ವಂಸ : ಡೊನಾಲ್ಡ್ ಟ್ರಂಪ್

ನವದೆಹಲಿ: ಅಮೆರಿಕದ ಸೇನೆಯು ಇರಾನಿನ ಒಂಬತ್ತು ನೌಕೆಗಳನ್ನು ಮುಳುಗಿಸಿದೆ ಮತ್ತು ಇರಾನ್ ನೌಕಾಪಡೆಯ ಕೇಂದ್ರ ಕಾರ್ಯಾಲಯವನ್ನು ಭಾಗಶಃ ಧ್ವಂಸಗೊಳಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ. ತಮ್ಮ ‘ಟ್ರುತ್ ಸೋಶಿಯಲ್’ (Truth Social) ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, “ನಾವು ಇರಾನ್‌ನ 9 ನೌಕಾ ಹಡಗುಗಳನ್ನು ನಾಶಪಡಿಸಿ ಮುಳುಗಿಸಿದ್ದೇವೆ ಎಂಬ ಮಾಹಿತಿ ನನಗೆ … Continued

ಇರಾನ್ ಮಧ್ಯಂತರ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ನೇಮಕ

ತೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ (Supreme Leader) ಅಲಿ ಖಮೇನಿ ಅವರ ನಿಧನದ ನಂತರ ಉಂಟಾಗಿರುವ ರಾಜಕೀಯ ಸ್ಥಿತ್ಯಂತರದ ನಡುವೆ, ಪ್ರಭಾವಿ ಧರ್ಮಗುರು ಅಲಿರೆಜಾ ಅರಾಫಿ ಅವರನ್ನು ಅಲಿ ಖಮೇನಿ (Ali Khamenei) ಸ್ಥಾನಕ್ಕೆ ಧರ್ಮಗುರು ಅಯತೊಲ್ಲಾ ಆಯ್ಕೆ ಮಾಡಲಾಗಿದ್ದು,  ಮಧ್ಯಂತರ ಪರಮೋಚ್ಛ ನಾಯಕ ಎಂದು ಘೋಷಣೆ ಮಾಡಿದೆ. ಇರಾನ್​ನ ಗಾರ್ಡಿಯನ್ ಕೌನ್ಸಿಲ್​ ಸದಸ್ಯರಾಗಿರುವ ಅಲಿರೆಜಾ … Continued

ಇರಾನ್ ಸುಪ್ರೀಂ ನಾಯಕ ಖಮೇನಿ ಸಾವಿನ ನಂತ್ರ ಉತ್ತರ ಪ್ರದೇಶ ಹಳ್ಳಿಗೂ ಇರಾನ್ ಆಡಳಿತಕ್ಕೂ ಇರುವ ನಂಟು ಮತ್ತೆ ಮುನ್ನೆಲೆಗೆ

ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಮಧ್ಯಪ್ರಾಚ್ಯದಲ್ಲಿ ಯುಧದ ಆತಂಕ ಎದುರಾಗಿದೆ. ಈ ಘಟನೆಯ ನಡುವೆಯೇ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ‘ಕಿಂತೂರ್’ ಎಂಬ ಪುಟ್ಟ ಗ್ರಾಮವೊಂದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ, ಖಮೇನಿಗೂ ಈ ಹಳ್ಳಿಗೂ ಇರುವ ಆಳವಾದ ಪೂರ್ವಜರ … Continued

ವೀಡಿಯೊ..| ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಕೊಂದ ನಿಖರ ದಾಳಿ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇಸ್ರೇಲಿ ರಕ್ಷಣಾ ಪಡೆಗಳು (IDF) ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೀಡಾಗಿದ್ದಾರೆ. ಖಮೇನಿಯವರ ಪ್ರಧಾನ ಕಚೇರಿಯ ಮೇಲೆ ನಡೆಸಿದ ಭೀಕರ ಬಾಂಬ್ ದಾಳಿಯ ದೃಶ್ಯಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿದೆ. ‘ಆಪರೇಷನ್ ರೋರಿಂಗ್ ಲಯನ್’ (Operation Roaring Lion) … Continued

ವೀಡಿಯೊ..| ಇರಾನ್‌ ಸರ್ವೋಚ್ಚ ನಾಯಕ ಖಮೇನಿ ನಿಧನದ ಸುದ್ದಿ ಹೇಳುವಾಗ ಬಿಕ್ಕಿ ಬಿಕ್ಕಿ ಅತ್ತ ಸುದ್ದಿ ವಾಚಕ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಹತ್ಯೆಗೀಡಾಗಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ನೀಡುವ ಸಂದರ್ಭದಲ್ಲಿ ಇರಾನ್ ದೂರದರ್ಶನದ ಸುದ್ದಿ ವಾಚಕ ಕಣ್ಣೀರಿಡುತ್ತ ಸುದ್ದಿಯನ್ನು ಪ್ರಕಟಿಸಿದ್ದಾರೆ. ನೇರ ಪ್ರಸಾರದಲ್ಲಿ ಈ ಸುದ್ದಿ ಹೇಳುತ್ತಿದ್ದಾಗ ವಾಚಕರು ಭಾವುಕರಾಗಿ ಅಕ್ಷರಶಃ ಗಳಗಳನೆ ಅತ್ತಿದ್ದಾರೆ. ಒಂದು ವೈರಲ್ ಕ್ಲಿಪ್‌ನಲ್ಲಿ, ಸುದ್ದಿ ವಾಚಕರೊಬ್ಬರು ತೀವ್ರವಾಗಿ ನಡುಗುತ್ತಾ, ಪದೇ ಪದೇ “ದೇವರು … Continued

ವೈಮಾನಿಕ ದಾಳಿಯಲ್ಲಿ ಇರಾನಿನ ಪ್ರಮುಖ ಐಆರ್‌ಜಿಸಿ (IRGC) ಕಮಾಂಡರ್ ಮೊಹಮ್ಮದ್ ಪಕ್ಪೋರ್ ಹತ್ಯೆ; ಇಸ್ರೇಲ್

ಟೆಲ್ ಅವಿವ್: ಇಸ್ರೇಲ್ ಪ್ರಕಾರ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಕಮಾಂಡರ್ ಮೊಹಮ್ಮದ್ ಪಕ್ಪೋರ್ ಶನಿವಾರ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಪಕ್ಪೋರ್ 260 ದಿನಗಳ ಕಾಲ ಐಆರ್‌ಜಿಸಿ ಕಮಾಂಡರ್ ಆಗಿದ್ದರು ಮತ್ತು ಈ ಹಿಂದೆ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ಕಮಾಂಡರ್ ಹುಸೇನ್ ಸಲಾಮಿ ಹತರಾದ ನಂತರ ಇವರನ್ನು ಆ … Continued

ವೀಡಿಯೊಗಳು : ಅಮೆರಿಕ-ಇಸ್ರೇಲ್‌ ದಾಳಿ ; ಇರಾನಿನಲ್ಲಿ 201 ಸಾವು, 700 ಕ್ಕೂ ಹೆಚ್ಚು ಮಂದಿಗೆ ಗಾಯ; ಯುಎಇ, ಕತಾರ್‌, ಸೌದಿ ಮೇಲೆ ಇರಾನ್‌ ದಾಳಿ

ಇರಾನಿನಾದ್ಯಂತ ಅಮೆರಿಕ-ಇಸ್ರೇಲ್ ದಾಳಿಗಳಲ್ಲಿ ಕನಿಷ್ಠ 201 ಜನರು ಸಾವಿಗೀಡಾಗಿದ್ದಾರೆ ಮತ್ತು 747 ಜನರು ಗಾಯಗೊಂಡಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಅನ್ನು ಉಲ್ಲೇಖಿಸಿ ಸರ್ಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. 24 ಪ್ರಾಂತ್ಯಗಳ ಮೇಲೆ ನಡೆದ ಈ ದಾಳಿಗಳು ವ್ಯಾಪಕ ಸಾವುನೋವುಗಳು ಮತ್ತು ಹಾನಿಯನ್ನುಂಟುಮಾಡಿವೆ ಎಂದು ವರದಿಗಳು … Continued