ಇರಾನ್‌ನ ನೂತನ ಸುಪ್ರೀಂ ಲೀಡರ್ ಆಗಿ ಮುಜ್ತಬಾ ಖಮೇನಿ ಅಧಿಕೃತವಾಗಿ ನೇಮಕ

ತೆಹ್ರಾನ್: ಇರಾನ್ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದರಲ್ಲಿ, ಇತ್ತೀಚೆಗೆ ನಿಧನರಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸ್ಥಾನಕ್ಕೆ ಪುತ್ರ ಮುಜ್ತಬಾ ಖಮೇನಿ ಅವರನ್ನು ನೂತನ ಉತ್ತರಾಧಿಕಾರಿಯನ್ನಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಸೋಮವಾರ ಮುಂಜಾನೆ ಇರಾನ್ ಸರ್ಕಾರಿ ಸ್ವಾಮ್ಯದ ದೂರದರ್ಶನವು ಈ ವಿಷಯ ಪ್ರಕಟಿಸಿದೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲಿ ಖಮೇನಿ ಅವರು ಮೃತಪಟ್ಟ … Continued

ಚಾಚಾ ಇತ್ತ ನೋಡಿ.. ; ಕತಾರ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ನೋಡಿ ಭಾರತ ಮೂಲದ ವ್ಯಕ್ತಿಯ ಆತಂಕದ ವಿಡಿಯೋ ವೈರಲ್

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆ ಆರಂಭಿಸಿ ಒಂಬತ್ತು ದಿನಗಳು ಕಳೆದಿದ್ದರೂ, ಇರಾನ್‌ನ ಪ್ರತಿದಾಳಿಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಧ್ಯೆ, ಅಮೆರಿಕದ ಸೇನಾ ನೆಲೆಗಳಿರುವ ಕತಾರ್ ಅಂತಹ ದೇಶಗಳಲ್ಲಿ ಯುದ್ಧದ ಭೀಕರತೆ ಹೇಗಿದೆ ಎಂಬುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ವತಂತ್ರವಾಗಿ ಖಚಿತಪಡಿಸದ ಈ ವಿಡಿಯೋದಲ್ಲಿ, ಹಿನ್ನೆಲೆಯಲ್ಲಿ … Continued

ನೇಪಾಳ ಚುನಾವಣೆ : ಜೆನ್‌ ಝಡ್‌ ಬೆಂಬಲಿತ ಬಾಲೇಂದ್ರ ಶಾ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿಗೆ ಭರ್ಜರಿ ಗೆಲುವು

ಕಠ್ಮಂಡು: ನೇಪಾಳದ ಸಂಸತ್ ಚುನಾವಣೆಯಲ್ಲಿ ಬಲಾಢ್ಯ ರಾಜಕೀಯ ಪಕ್ಷಗಳನ್ನು ಧೂಳೀಪಟ ಮಾಡಿರುವ ಬಾಲೇಂದ್ರ ಶಾ (ಬಾಲೆನ್) ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP), ದೇಶದ ಮುಂದಿನ ಸರ್ಕಾರವನ್ನು ರಚಿಸಲು ಸಜ್ಜಾಗಿದೆ. ರಾಪರ್ ಹಾಗೂ ರಾಜಕಾರಣಿ 35 ವರ್ಷದ ಬಾಲೇಂದ್ರ ಶಾ, ಝಾಪಾ-5 ಕ್ಷೇತ್ರದಲ್ಲಿ ನಾಲ್ಕು ಬಾರಿ ನೇಪಾಳದ ಪ್ರಧಾನಿಯಾಗಿದ್ದ ಸಿಪಿಎನ್-ಯುಎಂಎಲ್ ನಾಯಕ ಕೆ.ಪಿ. ಶರ್ಮಾ ಓಲಿ … Continued

ಇರಾನ್ ದಾಳಿಗೆ 300 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಅತ್ಯಾಧುನಿಕ ರಾಡಾರ್ ಸಿಸ್ಟಂ ನಾಶ…

ವಾಷಿಂಗ್ಟನ್/ದುಬೈ: ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕದ ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಅತ್ಯಗತ್ಯವಾಗಿದ್ದ 300 ಮಿಲಿಯನ್ ಡಾಲರ್ (ಅಂದಾಜು ₹2,500 ಕೋಟಿಗೂ ಅಧಿಕ) ಮೌಲ್ಯದ ಪ್ರಬಲ ರಾಡಾರ್ ವ್ಯವಸ್ಥೆಯನ್ನು ಇರಾನ್ ಧ್ವಂಸಗೊಳಿಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ. ಈ ಘಟನೆಯು ಈ ಭಾಗದಲ್ಲಿ ಭವಿಷ್ಯದ ದಾಳಿಗಳನ್ನು ಎದುರಿಸುವ ಅಮೆರಿಕದ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ನೀಡಿದೆ. ಜೋರ್ಡಾನ್‌ನ ಮುವಾಫಕ್ … Continued

ಗೂಗಲ್ ಸಿಇಒ ಸುಂದರಪಿಚೈ ವೇತನದಲ್ಲಿ ಭಾರಿ ಏರಿಕೆ : 63,61,79,82,000 ರೂ. ಪ್ಯಾಕೇಜ್ ಘೋಷಣೆ…!

ಕ್ಯಾಲಿಫೋರ್ನಿಯಾ: ಆಲ್ಫಾಬೆಟ್ ಇಂಕ್‌ನ (Alphabet Inc) ಒಡೆತನದ ಗೂಗಲ್ ಸಂಸ್ಥೆಯು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸುಂದರ ಪಿಚೈ ಅವರ ವೇತನವನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಬರೋಬ್ಬರಿ 692 ಮಿಲಿಯನ್ ಡಾಲರ್ (63,61,79,82,000 ರೂ.) ವರೆಗೆ ಅಂದರೆ ಸುಮಾರು 6,361 ಕೋಟಿ ರೂಪಾಯಿ ಹೆಚ್ಚಿಸಿದೆ. ಈ ಭಾರಿ ಮೊತ್ತದೊಂದಿಗೆ ಪಿಚೈ ಅವರು ವಿಶ್ವದ … Continued

ವೀಡಿಯೊ..| ತೆಹ್ರಾನ್ ಮೇಲೆ ಇಸ್ರೇಲ್ ವಾಯು ದಾಳಿ : ಯುದ್ಧ ವಿಮಾನದ ಕಾಕ್‌ಪಿಟ್‌ನಿಂದಲೇ ಲೈವ್ ದೃಶ್ಯ ಹಂಚಿಕೊಂಡ ಐಡಿಎಫ್

ಜೆರುಸಲೆಮ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಸಂಘರ್ಷ ಮತ್ತಷ್ಟು ಭೀಕರ ರೂಪ ಪಡೆದಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಂಚಲನ ಮೂಡಿಸಿದೆ. ಇಸ್ರೇಲಿ ಪೈಲಟ್‌ಗಳು ಇರಾನ್ ರಾಜಧಾನಿ ತೆಹ್ರಾನ್‌ನತ್ತ ಯುದ್ಧ ವಿಮಾನಗಳನ್ನು ಹಾರಿಸಿಕೊಂಡು ಹೋಗುತ್ತಿರುವ ‘ಕಾಕ್‌ಪಿಟ್’ ದೃಶ್ಯಗಳು ಇದರಲ್ಲಿವೆ. ಶನಿವಾರ ಮುಂಜಾನೆ ಇರಾನ್ … Continued

ದಾಳಿ ಮಾಡಿದ್ದಕ್ಕೆ ನೆರೆಯ ರಾಷ್ಟ್ರಗಳ ಕ್ಷಮೆ ಕೇಳಿದ ಇರಾನ್ ಅಧ್ಯಕ್ಷ ; ಆದರೆ ಒಂದು ಷರತ್ತು….

ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದ ಸಮಯದಲ್ಲಿ ನಡೆಸಲಾದ ದಾಳಿಗಳಿಗಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ತಮ್ಮ ನೆರೆಹೊರೆಯ ರಾಷ್ಟ್ರಗಳ ಕ್ಷಮೆಯಾಚಿಸಿದ್ದಾರೆ. “ಅವರು ಮೊದಲು ದಾಳಿ ಮಾಡದ ಹೊರತು ಅಥವಾ ಅವರ ನೆಲದಿಂದ ದಾಳಿ ನಡೆಯದ ಹೊರತು ಇರಾನ್‌ ಯಾವುದೇ ದಾಳಿ ನಡೆಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ಸರ್ಕಾರಿ ಸ್ವಾಮ್ಯದ ಟಿವಿಯಲ್ಲಿ ಮಾತನಾಡಿದ … Continued

ಆಗಸದಿಂದ ಮೃತ್ಯುವಾಗಿ ಬಂದು ಅಪ್ಪಳಿಸುವ ಈ ಭೀಕರ ಕ್ಷಿಪಣಿ ; ಇರಾನಿನ ಖಮೇನಿ ಹತ್ಯೆಗೆ ಇಸ್ರೇಲ್ ಬಳಸಿದ ‘ಬ್ಲೂ ಸ್ಪ್ಯಾರೋ’ ರಹಸ್ಯವೇನು ?

ಫೆಬ್ರವರಿ 28ರಂದು ತೆಹ್ರಾನ್ ಮೇಲೆ ನಡೆಸಿದ ದಾಳಿಯಲ್ಲಿ 37 ವರ್ಷಗಳ ಕಾಲ ಇರಾನ್ ಅನ್ನು ಆಳಿದ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಇಸ್ರೇಲ್ ಹತ್ಯೆ ಮಾಡಿದೆ. ಈ ಕಾರ್ಯಾಚರಣೆಗೆ ಬಳಸಲಾದ ಪ್ರಮುಖ ಅಸ್ತ್ರವೆಂದರೆ ‘ಬ್ಲೂ ಸ್ಪ್ಯಾರೋ’ (Blue Sparrow). ಇದು ‘ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್’ ಅಭಿವೃದ್ಧಿಪಡಿಸಿದ ಗಾಳಿಯಿಂದ ಉಡಾಯಿಸಲ್ಪಡುವ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ.  ಇರಾನ್‌ನ … Continued

ವೀಡಿಯೊ..| ಇಸ್ರೇಲಿನ 50 ಯುದ್ಧ ವಿಮಾನಗಳಿಂದ ವಾಯು ದಾಳಿ: ತೆಹ್ರಾನ್‌ನಲ್ಲಿದ್ದ ಖಮೇನಿ ಭೂಗತ ಬಂಕರ್ ಧ್ವಂಸ

ನವದೆಹಲಿ: ಇರಾನ್ ರಾಜಧಾನಿ ತೆಹ್ರಾನ್‌ನ ಹೃದಯಭಾಗದಲ್ಲಿರುವ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ನಿವಾಸದ ಅಡಿಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ಭೂಗತ ಬಂಕರ್ ಮೇಲೆ ಶುಕ್ರವಾರ ಮುಂಜಾನೆ ಇಸ್ರೇಲ್ ಯುದ್ಧ ವಿಮಾನಗಳು ಭೀಕರ ದಾಳಿ ನಡೆಸಿವೆ. ಇಸ್ರೇಲ್ ವಾಯುಪಡೆಯ ಸುಮಾರು 50 ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಮೊಸಾದ್ ಮತ್ತು ಮಿಲಿಟರಿ ಗುಪ್ತಚರ ಇಲಾಖೆಯ … Continued

ಟಿ20 ವಿಶ್ವಕಪ್‌ ವೇಳೆ ಪಾಕಿಸ್ತಾನಕ್ಕೆ ಮುಜುಗರ : ಹೋಟೆಲಿನ ಮಹಿಳಾ ಸಿಬ್ಬಂದಿ ಜೊತೆ ದುರ್ವರ್ತನೆ ; ಪಾಕ್‌ ಆಟಗಾರನಿಗೆ ದಂಡ

ಕ್ಯಾಂಡಿ (ಶ್ರೀಲಂಕಾ) :2026ರ ಟಿ20 ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮತ್ತೊಂದು ಮುಜುಗರ ಎದುರಾಗಿದೆ. ಕ್ಯಾಂಡಿಯ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಮಹಿಳಾ ಸಿಬ್ಬಂದಿಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪಾಕಿಸ್ತಾನದ ಆಟಗಾರನೊಬ್ಬನಿಗೆ ದಂಡ ವಿಧಿಸಲಾಗಿದೆ ಎಂದುವರದಿಯಾಗಿದೆ. ‘ಟೆಲಿಕಾಂ ಏಷ್ಯಾ ಸ್ಪೋರ್ಟ್’ ವರದಿಯ ಪ್ರಕಾರ, ಶ್ರೀಲಂಕಾ ವಿರುದ್ಧದ ಸೂಪರ್ 8 … Continued