ತಂದೆ-ತಾಯಿ, ತಂಗಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟಿದ್ದ ಯುವಕ

ವಿಜಯನಗರ: ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಹೆತ್ತ ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿ, ಮನೆಯೊಳಗೆ ಹೂತು ಹಾಕಿರುವ ಅಮಾನುಷ ಕೃತ್ಯ ವಿಜಯನಗರ ಜಿಲ್ಲೆಯ ಕೋಟೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೊಡ್ಡಕಿಟ್ಟದಹಳ್ಳಿ ಮೂಲದ ಅಕ್ಷಯಕುಮಾರ ಎಂಬಾತನೇ ಈ ಪೈಶಾಚಿಕ ಕೃತ್ಯ ಎಸಗಿದ ಆರೋಪಿ. ಈತ ತನ್ನ ತಂದೆ ಭೀಮರಾಜ, ತಾಯಿ … Continued

ಬೆಂಗಳೂರು : ಬಾಡಿಗೆ ಮನೆಯಲ್ಲಿ ನಾಲ್ವರು ವಲಸೆ ಕಾರ್ಮಿಕರು ಶವವಾಗಿ ಪತ್ತೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮುತ್ಸಂದ್ರ ಗ್ರಾಮದ ಸಮೀಪದ ಬಾಡಿಗೆ ಮನೆಯಲ್ಲಿದ್ದ ಅಸ್ಸಾಂನ ನಾಲ್ವರು ವಲಸೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಉಸಿರುಗಟ್ಟಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಜಯಂತ್ ಸಿಂಧೆ, ನಿರೇಂದ್ರನಾಥ್, ಡಾಕ್ಟರ್ ಟೈಡ್ ಮತ್ತು ಧನಂಜಯ ಟೈಡ್ ಎಂದು ಗುರುತಿಸಲಾಗಿದ್ದು, ಎಲ್ಲರೂ 20ರ ಹರೆಯದವರು ಎನ್ನಲಾಗಿದೆ. ಮನೆಯಲ್ಲಿ … Continued

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಪ್ರಮಾಣ ವಚನ

ಮುಂಬೈ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (NCP) ನಾಯಕ ಅಜಿತ್ ಪವಾರ್ ಅವರ ನಿಧನದ ನಂತರ, ಅವರ ಪತ್ನಿ ಸುನೇತ್ರಾ ಪವಾರ್ ಅವರು ಇಂದು, ಶನಿವಾರ (ಜ.೩೧) ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ಅವರು ಮಹಾರಾಷ್ಟ್ರದ ಇತಿಹಾಸದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ … Continued

ನಮಗೆ ನಾಚಿಕೆಯಾಗ್ತಿದೆ…: ಪ್ರಪಂಚದಾದ್ಯಂತ ‘ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ವಿದೇಶಗಳಲ್ಲಿ ಹಣಕ್ಕಾಗಿ ಕೈಚಾಚಲು ನಮಗೆ ನಾಚಿಕೆಯಾಗುತ್ತಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ನಲ್ಲಿ ನಡೆದ ಪ್ರಮುಖ ರಫ್ತುದಾರರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಹದಗೆಟ್ಟ ಆರ್ಥಿಕತೆಯನ್ನು ನಿಭಾಯಿಸಲು ತಾನು ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು … Continued

ವೀಡಿಯೊ | ಕಾಡಿನ ಬಾಯಾರಿಕೆ : ನೀರಿನ ಹೊಂಡದ ಬಳಿ ಸಿಂಹ-ಆನೆ ಮುಖಾಮುಖಿ ; ಮುಂದೇನಾಯ್ತು ನೋಡಿ…

ವನ್ಯಲೋಕ ಎನ್ನುವುದು ಬಣ್ಣಿಸಲಾಗದ ವಿಸ್ಮಯಗಳ ಗೂಡು. ಅಲ್ಲಿ ಹಸಿವು ಎಷ್ಟು ಸತ್ಯವೋ, ಬಾಯಾರಿಕೆಯೂ ಅಷ್ಟೇ ದೊಡ್ಡ ಸತ್ಯ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನಿಸರ್ಗದ ವಿಚಿತ್ರ ಸ್ನೇಹ ಮತ್ತು ಶೌರ್ಯದ ಮುಖಾಮುಖಿಯನ್ನು ನಮಗೆ ಪರಿಚಯಿಸುತ್ತಿದೆ. ಆಫ್ರಿಕಾದ ಸುಡುಬಿಸಿಲಿನ ನಡುವೆ ಒಂದು ನೀರಿನ ಹೊಂಡ. ಅಲ್ಲಿಗೆ ಸುಸ್ತಾಗಿ ಬಂದ ಸಿಂಹಿಣಿಯೊಂದು ಹೊಂಡದ ಮರೆಯಲ್ಲಿ ಅಡಗಿ … Continued

‘ಎಚ್ಚರಿಕೆ ಗಂಟೆ ‘: 2050ರ ವೇಳೆಗೆ ವಿಶ್ವದ ಅರ್ಧದಷ್ಟು ಜನರಿಗೆ ‘ಶಾಖದ ಅಲೆ’ ಗಂಡಾಂತರ…! ಭಾರತದ ಮೇಲೂ ಕೆಟ್ಟ ಪರಿಣಾಮ

ಲಂಡನ್: ಜಾಗತಿಕ ತಾಪಮಾನ ಏರಿಕೆಯು ಅಪಾಯಕಾರಿ ಮಟ್ಟವನ್ನು ತಲುಪುತ್ತಿದ್ದು, ಮುಂದಿನ ಕೆಲವು ದಶಕಗಳಲ್ಲಿ ಭೂಮಿಯ ಅರ್ಧದಷ್ಟು ಜನಸಂಖ್ಯೆ ಎಂದರೆ ಸುಮಾರು 379 ಕೋಟಿ ಜನರು ತೀವ್ರತರವಾದ ಶಾಖದ ಅಲೆಗಳಿಗೆ (Extreme Heat) ತುತ್ತಾಗಲಿದ್ದಾರೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನೆ ಎಚ್ಚರಿಸಿದೆ. ಸಂಶೋಧನೆಯ ಪ್ರಕಾರ ಕೈಗಾರಿಕಾ ಪೂರ್ವ ಯುಗಕ್ಕೆ ಹೋಲಿಸಿದರೆ ಜಾಗತಿಕ ತಾಪಮಾನವು 2 ಡಿಗ್ರಿ … Continued

ಕೇವಲ 400 ಮೀಟರ್‌ ದೂರ ಕರೆದೊಯ್ದಿಕ್ಕೆ ವಿದೇಶಿ ಮಹಿಳೆಯಿಂದ 18,000 ರೂ.ಬಾಡಿಗೆ ವಸೂಲಿ ಮಾಡಿದ ಟ್ಯಾಕ್ಸಿ ಚಾಲಕ…!

ಮುಂಬೈ: ವಿಮಾನ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿರುವ ಹೋಟೆಲ್‌ಗೆ ಕರೆದೊಯ್ಯಲು ಅಮೆರಿಕದ ಪ್ರಜೆಯೊಬ್ಬರಿಂದ ಬರೋಬ್ಬರಿ 18,000 ರೂಪಾಯಿ ($200) ವಸೂಲಿ ಮಾಡಿದ್ದ ಟ್ಯಾಕ್ಸಿ ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಜನವರಿ 12 ರಂದು ಈ ಘಟನೆ ನಡೆದಿದ್ದು, ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್-2ಕ್ಕೆ ಬಂದಿಳಿದ ಅಮೆರಿಕದ ಮಹಿಳೆಯೊಬ್ಬರು ಹತ್ತಿರದ ‘ಹಿಲ್ಟನ್ ಹೋಟೆಲ್’ಗೆ ಹೋಗಲು ಟ್ಯಾಕ್ಸಿ … Continued

ಮಗನನ್ನು ರಕ್ಷಿಸಲು ಕುಡಗೋಲಿನಿಂದ ಚಿರತೆಯನ್ನೇ ಬಡಿದು ಕೊಂದ 60 ವರ್ಷದ ವೃದ್ಧ…!

ಗಿರ್ ಸೋಮನಾಥ: ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ಗಂಗ್ಡಾ ಗ್ರಾಮದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ಭೀಕರ ಘಟನೆಯೊಂದು ಸಂಭವಿಸಿದೆ. ದಾಳಿ ಮಾಡಲು ನುಗ್ಗಿ ಬಂದ ಚಿರತೆಗೆ ಹೆದರದ ವೃದ್ಧರೊಬ್ಬರು, ತಮ್ಮ ಮಗನ ಪ್ರಾಣ ಉಳಿಸಲು ಅದ್ಭುತ ಶೌರ್ಯ ತೋರಿ ಚಿರತೆಯನ್ನೇ ಸಾಯಿಸಿದ್ದಾರೆ….! ಸ್ಥಳೀಯ ಮೂಲಗಳ ಪ್ರಕಾರ, ಈ ಘಟನೆಯು ಬುಧವಾರ ಸಂಜೆ ಗಿರ್ ಸೋಮನಾಥ್‌ನ ಉನಾ ಎಂಬ … Continued

ಆಸ್ಟ್ರೇಲಿಯಾಕ್ಕೆ ತಮ್ಮ ಸಾಕು ನಾಯಿ ಕರೆದೊಯ್ಯಲು 190 ದಿನ ಕಾಯ್ದು, 15 ಲಕ್ಷ ರೂ. ಖರ್ಚು ಮಾಡಿದ ಭಾರತೀಯ ದಂಪತಿ….!

ಹೈದರಾಬಾದ್: ಅನೇಕ ಸಾಕುಪ್ರಾಣಿ ಪ್ರೇಮಿಗಳಿಗೆ ತಮ್ಮ ಪ್ರಾಣಿಗಳು ಕೇವಲ ಪ್ರಾಣಿಗಳಲ್ಲ, ಮನೆಯ ಸದಸ್ಯರು. ಇದಕ್ಕೆ ಸಾಕ್ಷಿಯೆಂಬಂತೆ ಭಾರತೀಯ ದಂಪತಿಯೊಬ್ಬರು ತಮ್ಮ ನೆಚ್ಚಿನ ನಾಯಿಯನ್ನು ವಿದೇಶಕ್ಕೆ ಕರೆದೊಯ್ಯಲು ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ‘ಕಹಾನಿ ಆಫ್ ಟೇಲ್ಸ್’ (Kahaani of Tales) ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಈಗ … Continued

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸಾಧ್ಯತೆ

ಮುಂಬೈ: ಎನ್‌ಸಿಪಿ (NCP) ನಾಯಕ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ ತೆರವಾಗಿದ್ದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅವರ ಪತ್ನಿ ಹಾಗೂ ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಅವರು ಶನಿವಾರ (ಜನವರಿ 31) ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಸಂಜೆ ಸುನೇತ್ರಾ ಪವಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರೆ ಮಹಾರಾಷ್ಟ್ರದ … Continued