ಆಪರೇಷನ್ ಸಿಂಧೂರ್‌ ; ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ದಾಳಿ ; ಹ್ಯಾಮರ್, ಸ್ಕಲ್ಪ್ ಶಸ್ತ್ರಾಸ್ತ್ರಗಳ ಬಳಕೆ

 ನವದೆಹಲಿ: ಬುಧವಾರ ಬೆಳಗಿನ ಜಾವ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ದಾದ್ಯಂತ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆಪರೇಷನ್ ಸಿಂಧೂರ್ ಎಂಬ ಸಂಕೇತನಾಮ ಹೊಂದಿರುವ ಈ ಕಾರ್ಯಾಚರಣೆಯಲ್ಲಿ ವಾಯು, ನೌಕಾ ಮತ್ತು ಭೂ ಸೇನೆಗಳ ತ್ರಿವಳಿಗಳ ನಿಯೋಜನೆ ಸೇರಿತ್ತು. 2019 ರಲ್ಲಿ ಬಾಲಕೋಟ್ ಕಾರ್ಯಾಚರಣೆಯ ನಂತರ ಭಾರತ ನಡೆಸಿದ … Continued

ವೀಡಿಯೊಗಳು..| ಆಪರೇಶನ್‌ ಸಿಂಧೂರ್‌ : ಪಾಕಿಸ್ತಾನ, ಪಿಒಕೆಯ 9 ಭಯೋತ್ಪಾಕರ ನೆಲೆ ಮೇಲೆ ಭಾರತ ಸೇನೆಯಿಂದ ಕ್ಷಿಪಣಿ ದಾಳಿ, 80ಕ್ಕೂ ಹೆಚ್ಚು ಉಗ್ರರು ಸಾವು..?

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆ. ಇದಕ್ಕೆ ʼಆಪರೇಷನ್ ಸಿಂಧೂರ್ʼ (‌Operation Sindoor) ಎಂದು ಹೆಸರಿಡಲಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕರ ತಾಣಗಳ ಮೇಲೆ ಬುಧವಾರ ಬೆಳಗಿನ ಜಾವ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದೆ ಎಂದು ರಕ್ಷಣಾ ಸಚಿವಾಲಯ … Continued

ಮದುವೆಯಲ್ಲಿ ತಂದೂರಿ ರೊಟ್ಟಿ ವಿಚಾರಕ್ಕೆ ಹೊಡೆದಾಟ : ಇಬ್ಬರು ಹುಡುಗರ ಕೊಲೆ, 6 ಜನರ ಬಂಧನ

ಅಮೇಥಿ: ಅಮೇಥಿ ಜಿಲ್ಲೆಯಲ್ಲಿ ಮದುವೆಯ ಹಬ್ಬದ ಸಂದರ್ಭದಲ್ಲಿ ತಂದೂರಿ ರೊಟ್ಟಿ ನೀಡುವ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುಗಿ, ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಸಾವುಗಳಿಗೆ ಸಂಬಂಧಿಸಿದಂತೆ ಇದುವರೆಗೆ ಆರು ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೇ 3 ರ ರಾತ್ರಿ ಸರೈ … Continued

ಕೂದಲು ಹಿಡಿದು ಜಗ್ಗಾಡಿ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಗ್ರಂಥಪಾಲಕಿ ; ವೀಡಿಯೊ ವೈರಲ್

ಪ್ರಾಂಶುಪಾಲರು ಮತ್ತು ಗ್ರಂಥಪಾಲಕರ ನಡುವೆ ವಾಗ್ವಾದದ ನಂತರ ಇಬ್ಬರ ಮಧ್ಯೆ ಹೊಡೆದಾಟಕ್ಕೆ ಕಾರಣವಾದ ಘಟನೆ ಮಧ್ಯಪ್ರದೇಶದ ಶಾಲೆಯೊಂದರಲ್ಲಿ ನಡೆದಿದೆ. ಅವರ ಜಗಳದ ವೀಡಿಯೊ ವೈರಲ್‌ ಆದ ನಂತರ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ. ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಭೋಪಾಲ್‌ನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿರುವ ಏಕಲವ್ಯ ಆದರ್ಶ ಶಾಲೆಯಲ್ಲಿ ಈ … Continued

ವೀಡಿಯೊ | ಭಾರತ ಪಾಕ್‌ ಮೇಲೆ ದಾಳಿ ಮಾಡಿದ್ರೆ ನೀವು ಭಾರತದ ಸೇನೆ ಬೆಂಬಲಿಸಿ ; ಪಾಕಿಸ್ತಾನ ಪಶ್ತೂನ್‌ ಮುಸ್ಲಿಮರಿಗೆ ಕರೆ ನೀಡಿದ ಧರ್ಮಗುರು..!

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಇಸ್ಲಾಮಿಕ್ ಧರ್ಮಗುರುವಿನ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಪಶ್ತೂನ್ ಸಮುದಾಯವು ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯ ಪ್ರವಾಸಿಗರು ಸಾವಿಗೀಡಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಉದ್ವಿಗ್ನತೆಯ … Continued

ಭಾರತ-ಪಾಕ್‌ ಮಧ್ಯೆ ಉದ್ವಿಗ್ನತೆ ; ಮೇ 7ರಂದು ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನಕ್ಕೆ ರಾಜ್ಯಗಳಿಗೆ ಕೇಂದ್ರದ ಸೂಚನೆ..! 1971ರಲ್ಲೂ ನಡೆದಿತ್ತು…!

ನವದೆಹಲಿ: ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉಂಟಾಗಿದ್ದು, “ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ಪರಿಣಾಮಕಾರಿ ನಾಗರಿಕ ರಕ್ಷಣೆ”ಗಾಗಿ ಮೇ 7 ರಂದು ರಾಜ್ಯಗಳಿಗೆ ಭದ್ರತಾ ಅಣಕು ಕಸರತ್ತುಗಳನ್ನು ನಡೆಸುವಂತೆ ಕೇಂದ್ರ ಸರ್ಕಾರವು ಸೂಚಿಸಿದೆ. ಕೇಂದ್ರದ ಆದೇಶದ ಸಮಯವು ನಿರ್ಣಾಯಕವಾಗಿದೆ. ಕೊನೆಯ ಬಾರಿಗೆ ಇಂತಹ ಸಮರಾಭ್ಯಾಸವನ್ನು … Continued

“ಕೆಲವು ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಂದ ಭಾರತದ ಹಿತಾಸಕ್ತಿಗೆ ವಿರುದ್ಧ ಕೆಲಸ “: ಕೇಂದ್ರಕ್ಕೆ ತಿಳಿಸಿದ ಸದನ ಸಮಿತಿ

ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ “ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಲಾದ ಕೆಲವು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ವೇದಿಕೆಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಕುರಿತು ಕೇಂದ್ರದಿಂದ ವಿವರಗಳನ್ನು ಸಂಸತ್ತಿನ ಸಮಿತಿ ಕೇಳಿದೆ. “ದೇಶದಲ್ಲಿನ ಕೆಲವು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು … Continued

1 ಕೋಟಿ ರೂ. ಹಣ ಕೊಡು, ಇಲ್ಲದಿದ್ದರೆ….; ಕ್ರಿಕೆಟರ್‌ ಮೊಹಮ್ಮದ್ ಶಮಿಗೆ ಕೊಲೆ ಬೆದರಿಕೆ

ನವದೆಹಲಿ: ಭಾರತದ ವೇಗಿ ಮೊಹಮ್ಮದ್ ಶಮಿ ಅವರಿಗೆ ಭಾನುವಾರ ಇ ಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆದೇಶದ ಮೇರೆಗೆ ಸೋಮವಾರ ಎಫ್‌ಐಆರ್ ದಾಖಲಾಗಿದ್ದು, ಶಮಿ ಪರವಾಗಿ ಅವರ ಸಹೋದರ ಹಸೀಬ್ ಈ ದೂರು ದಾಖಲಿಸಿದ್ದಾರೆ ಮತ್ತು … Continued

ಪಹಲ್ಗಾಮ್ ದಾಳಿ | ಪ್ರಧಾನಿ ಮೋದಿಗೆ ಫೋನ್‌ ಮಾಡಿದ ರಷ್ಯಾ ಅಧ್ಯಕ್ಷ ಪುತಿನ್ ; ಭಾರತಕ್ಕೆ ʼಸಂಪೂರ್ಣ ಬೆಂಬಲʼ ; ಪಾಕಿಸ್ತಾನಕ್ಕೆ ಕೊಟ್ರು ಶಾಕ್‌…

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ, ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಅಮಾಯಕರ … Continued

ಪಹಲ್ಗಾಮ್ ಹತ್ಯಾಕಾಂಡದ ನಂತರ ಭಯೋತ್ಪಾದಕರ ಅಡಗುತಾಣ ಪತ್ತೆ, 5 ಸ್ಫೋಟಕ ಸಾಧನಗಳು ವಶಕ್ಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಯೋತ್ಪಾದಕರು ಬಳಸುತ್ತಿದ್ದ ಭೂಗತ ಅಡಗುತಾಣವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿದ್ದಾರೆ. ಸುಮಾರು ಎರಡು ವಾರಗಳ ಹಿಂದೆ ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಯಲ್ಲಿ 26 ನಾಗರಿಕರು ಸಾವಿಗೀಡಾದ ನಂತರ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಪೂಂಚ್‌ನ ಸುರನ್‌ಕೋಟ್‌ನಲ್ಲಿ ಭಾನುವಾರ ಸಂಜೆ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ … Continued