ನಾಗಾಲ್ಯಾಂಡ್ ರಾಜ್ಯಪಾಲ ಎಲ್‌. ಗಣೇಶನ್ ನಿಧನ

ಕೊಹಿಮಾ/ಚೆನ್ನೈ : ನಾಗಾಲ್ಯಾಂಡ್ ರಾಜ್ಯಪಾಲ ಎಲ್‌. ಗಣೇಶನ್ ಶುಕ್ರವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು ಎಂದು ಕೊಹಿಮಾದ ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಆರೆಸ್ಸೆಸ್ ಮೂಲದವರಾದ ತಮಿಳುನಾಡಿನ ಖ್ಯಾತ ಬಿಜೆಪಿ ನಾಯಕ ಗಣೇಶನ್ ಅವರು 2021 ಮತ್ತು 2025 ರ ನಡುವೆ ಮಣಿಪುರ, ಪಶ್ಚಿಮ ಬಂಗಾಳ ಮತ್ತು ನಾಗಾಲ್ಯಾಂಡ್ … Continued

ದೆಹಲಿಯ ಹುಮಾಯೂನ್ ಸಮಾಧಿ ಬಳಿ ದರ್ಗಾದ ಛಾವಣಿ ಕುಸಿದು 5 ಮಂದಿ ಸಾವು

ನವದೆಹಲಿ: ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಹುಮಾಯೂನ್ ಸಮಾಧಿ ಸಂಕೀರ್ಣದ ಬಳಿಯ ದರ್ಗಾದ ಛಾವಣಿ ಕುಸಿದು ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ದೆಹಲಿ ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಘಟನೆಯ ನಂತರ ಒಟ್ಟು ಒಂಬತ್ತು ಜನರನ್ನು ಏಮ್ಸ್‌ಗೆ ಸಾಗಿಸಲಾಯಿತು, ಅವರಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಸುದ್ದಿಸಂಸ್ಥೆ ಪ್ರಕಾರ, ಮೃತಪಟ್ಟ ಐವರಲ್ಲಿ ಮೂವರು … Continued

5%, 18% ಎರಡು ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಪ್ರಸ್ತಾಪಿಸಿದ ಸರ್ಕಾರ; ಹಾನಿಕಾರಕ ವಸ್ತುಗಳಿಗೆ 40% ಜಿಎಸ್‌ಟಿ ಸಾಧ್ಯತೆ: ಮೂಲಗಳು

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಗೆ ಕೇವಲ ಎರಡು ಸ್ಲ್ಯಾಬ್‌ಗಳಾದ 5% ಮತ್ತು 18% ಮಾತ್ರ ಉಳಿಸಿಕೊಳ್ಳಲು ಕೇಂದ್ರವು ಪ್ರಸ್ತಾಪಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ. ಈ ಪ್ರಸ್ತಾವನೆಯಡಿಯಲ್ಲಿ, 28% ರಲ್ಲಿರುವ ಶೇಕಡಾ 90 ರಷ್ಟು ವಸ್ತುಗಳನ್ನು 18%ರ ಸ್ಲ್ಯಾಬ್‌ಗೆ ತರಲಾಗುತ್ತದೆ, ಶೇಕಡಾ 12 ರಷ್ಟು ಸ್ಲ್ಯಾಬ್‌ನಲ್ಲಿರುವ ಶೇಕಡಾ 99 ರಷ್ಟು … Continued

ವೀಡಿಯೊ..| ರೈಲಿನ ಹವಾನಿಯಂತ್ರಣದ ಬಗ್ಗೆ ದೂರು ನೀಡಿದ್ರೆ ತಪಾಸಣೆ ವೇಳೆ ಎಸಿ ಡಕ್ಟ್‌ನಲ್ಲಿ ಮದ್ಯದ ಬಾಟಲಿಗಳು ಪತ್ತೆ…!

ನವದೆಹಲಿ: ಲಕ್ನೋ-ಬರೌನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ದಿನನಿತ್ಯದ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆಗೆ ಹೋದಾಗ ಎಸಿ-2 ಟೈರ್ ಕೋಚ್‌ನ ಎಸಿ ಡಕ್ಟ್‌ನಲ್ಲಿ ಅಡಗಿಸಿಟ್ಟಿದ್ದ ನೂರಾರು ವಿಸ್ಕಿ ಬಾಟಲಿಗಳು ಪತ್ತೆಯಾಗಿವೆ. ಪ್ರಯಾಣಿಕರು ಕೂಲಿಂಗ್ ವ್ಯವಸ್ಥೆಯಲ್ಲಿನ ತೊಂದರೆ ಇರುವ ವರದಿ ಮಾಡಿದಾಗ ಇದು ಬೆಳಕಿಗೆ ಬಂದಿದೆ. ದೂರಿನ ನಂತರ ತಾಂತ್ರಿಕ ತಪಾಸಣೆ ನಡೆಸಿದಾಗ 32 … Continued

ಬಿಹಾರ ಮತದಾರರ ಪಟ್ಟಿಯಿಂದ ತೆಗೆಯಲಿರುವ 65 ಲಕ್ಷ ಮಂದಿ ವಿವರ ಪ್ರಕಟಿಸಿ, ಕಾರಣ ತಿಳಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ

ನವದೆಹಲಿ: ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಅಭಿಯಾನದ ನಂತರ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾದ ಸುಮಾರು 65 ಲಕ್ಷ ಮತದಾರರ ಜಿಲ್ಲಾವಾರು ಪಟ್ಟಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಆಗಸ್ಟ್ 14) ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಹಾಗೆಯೇ ಅವರನ್ನು ಮತದಾರರ ಪಟ್ಟಿಯಿಂದ ತೆಗೆದು … Continued

ಪತಿ ಹತ್ಯೆ ಪ್ರಕರಣದಲ್ಲಿ ನ್ಯಾಯ ಕೊಡಿಸಿದ್ದಕ್ಕಾಗಿ ಸಿಎಂ ಯೋಗಿಗೆ ಧನ್ಯವಾದ ಹೇಳಿದ ಶಾಸಕಿಗೆ ಸಮಾಜವಾದಿ ಪಕ್ಷದಿಂದಲೇ ಗೇಟ್‌ಪಾಸ್‌…!

ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕಿ ಪೂಜಾ ಪಾಲ್ ಅವರನ್ನು ವಿಭಿನ್ನ ಕಾರಣಕ್ಕೆ ಪಕ್ಷದಿಂದ ಉಚ್ಚಾಟಿಸಲಾಗಿದೆ. ತಮ್ಮ ಪತಿಯ ಕೊಲೆ ಪ್ರಕರಣದಲ್ಲಿ “ನ್ಯಾಯ ಒದಗಿಸಿದ್ದಕ್ಕಾಗಿ” ಹಾಗೂ ಅಪರಾಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಜಾರಿಗೆ ತಂದಿದ್ದಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಧನ್ಯವಾದ ಅರ್ಪಿಸಿ ಶ್ಲಾಘಿಸಿದ ಶಾಸಕಿ ಪೂಜಾ ಪಾಲ್ ಅವರನ್ನು ಗಂಟೆಗಳ … Continued

ವೀಡಿಯೊಗಳು..| ಕಾಶ್ಮೀರ : ಕಿಶ್ತ್ವಾರದಲ್ಲಿ ಮೇಘಸ್ಫೋಟ: ಪ್ರವಾಹಕ್ಕೆ 40 ಮಂದಿ ಸಾವು, 200 ಕ್ಕೂ ಹೆಚ್ಚು ಜನರು ನಾಪತ್ತೆ

ಕಾಶ್ಮೀರ : ಗುರುವಾರ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಚೋಸಿತಿ ಗ್ರಾಮದಲ್ಲಿ ಸಂಭವಿಸಿದ ಭಾರಿ ಮೇಘಸ್ಫೋಟದಲ್ಲಿ ಇಬ್ಬರು ಸಿಐಎಸ್‌ಎಫ್ ಯೋಧರು ಸೇರಿದಂತೆ ಕನಿಷ್ಠ 40 ಜನರು ಸಾವಿಗೀಡಾಗಿದ್ದಾರೆ ಮತ್ತು 220 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಭಾರಿ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿ ದೊಡ್ಡ ಪ್ರಮಾಣದ ವಿನಾಶ ಸಂಭವಿಸಿದೆ. ದಿಢೀರ್‌ ಪ್ರವಾಹದಿಂದ 120 … Continued

ಉದ್ಯಮಿಗೆ 60 ಕೋಟಿ ರೂಪಾಯಿ ವಂಚನೆ ಆರೋಪ: ನಟಿ ಶಿಲ್ಪಾ ಶೆಟ್ಟಿ ದಂಪತಿಯ ವಿರುದ್ಧ ಪ್ರಕರಣ ದಾಖಲು

ಮುಂಬೈ: ಉದ್ಯಮಿಯೊಬ್ಬರಿಗೆ 60 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ ಕುಂದ್ರಾ ವಿರುದ್ಧ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಮತ್ತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ ಕುಂದ್ರಾ ದಂಪತಿ ವಿರುದ್ಧ … Continued

ಸಾನಿಯಾ ಚಾಂದೋಕ್ ಜೊತೆ ಸಚಿನ್‌ ತೆಂಡೂಲ್ಕರ್‌ ಪುತ್ರನ ನಿಶ್ಚಿತಾರ್ಥ; ಸಾನಿಯಾ ಚಾಂದೋಕ್‌ ಯಾರು?

ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ ತೆಂಡೂಲ್ಕರ್ ಅವರು ಸಾನಿಯಾ ಚಾಂದೋಕ್ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ಹಲವು ವರದಿಗಳು ತಿಳಿಸಿವೆ. ಆದಾಗ್ಯೂ, ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರ ಕುಟುಂಬಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಇಂಡಿಯಾ ಟುಡೇ ವರದಿಯ ಪ್ರಕಾರ, … Continued

ಪ್ರಧಾನಿ ಮೋದಿ ಚೀನಾ ಪ್ರವಾಸಕ್ಕೂ ಮುನ್ನ ಚೀನಾದ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ಸಾಧ್ಯತೆ

ನವದೆಹಲಿ: ಮಾಧ್ಯಮ ವರದಿಗಳ ಪ್ರಕಾರ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಚರ್ಚೆ ನಡೆಸಲು ಈ ವಾರ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ವಿಶೇಷ ಪ್ರತಿನಿಧಿ ಕಾರ್ಯವಿಧಾನದ ಅಡಿಯಲ್ಲಿ ದೀರ್ಘಕಾಲದ ಗಡಿ ಸಮಸ್ಯೆಗಳ ಮೇಲೆ ಈ ಸಭೆ ಗಮನಹರಿಸುವ ನಿರೀಕ್ಷೆಯಿದೆ. 2018 ರ ನಂತರ ಚೀನಾಕ್ಕೆ … Continued