ಇರಾಕಿನ ಬಾಗ್ದಾದಿನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆಯ ಅಪಹರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕದ ಖ್ಯಾತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ (Shelly Kittleson) ಅವರನ್ನು ಸಶಸ್ತ್ರ ದುಷ್ಕರ್ಮಿಗಳು ಹಾಡುಹಗಲೇ ಅಪಹರಿಸಿದ್ದಾರೆ. ಈ ಘಟನೆಯನ್ನು ಇರಾಕ್‌ನ ಆಂತರಿಕ ಸಚಿವಾಲಯ ಖಚಿತಪಡಿಸಿದ್ದು, ದೇಶಾದ್ಯಂತ ಬಿಗಿ ಭದ್ರತೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಬಾಗ್ದಾದ್‌ನ ಜನನಿಬಿಡ ರಸ್ತೆಯಲ್ಲಿ ಶೆಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಶಸ್ತ್ರಸಜ್ಜಿತ ವ್ಯಕ್ತಿಗಳು, … Continued

ವೀಡಿಯೊ | ಇರಾನಿನ ಇಸ್ಫಾಹಾನ್‌ ಬೃಹತ್ ಶಸ್ತ್ರಾಸ್ತ್ರ ಸಂಗ್ರಹಾಗಾರದ ಮೇಲೆ ಅಮೆರಿಕ ದಾಳಿ: ಶಕ್ತಿಶಾಲಿ ಬಂಕರ್ ಬಸ್ಟರ್ ಬಾಂಬ್ ಬಳಕೆ

ತೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕವು ಇರಾನ್‌ನ ಇಸ್ಫಾಹಾನ್ ನಗರದಲ್ಲಿರುವ ಬೃಹತ್ ಶಸ್ತ್ರಾಸ್ತ್ರ ಸಂಗ್ರಹಾಗಾರದ ಮೇಲೆ 2,000 ಪೌಂಡ್ (ಸುಮಾರು 907 ಕೆಜಿ) ತೂಕದ ‘ಬಂಕರ್-ಬಸ್ಟರ್’ ಬಾಂಬ್‌ಗಳ ಮೂಲಕ ದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಶಿಯಲ್’ ನಲ್ಲಿ ಈ ಸ್ಫೋಟದ ಭೀಕರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋಗಳಲ್ಲಿ ಕಂಡುಬಂದಂತೆ, ಮೊದಲು … Continued

ಇರಾನ್ ಮೇಲೆ ಪರಮಾಣು ಅಸ್ತ್ರ ಬಳಕೆ ಸಿದ್ಧತೆ ಬಗ್ಗೆ ಎಚ್ಚರಿಸಿ ವಿಶ್ವಸಂಸ್ಥೆಯ ರಾಜತಾಂತ್ರಿಕ ಅಧಿಕಾರಿ ರಾಜೀನಾಮೆ

ವಿಶ್ವಸಂಸ್ಥೆಯ ರಾಜತಾಂತ್ರಿಕರೊಬ್ಬರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ (ECOSOC) ವಿಶೇಷ ಸಲಹಾ ಸ್ಥಾನಮಾನ ಹೊಂದಿರುವ ಅಂತಾರಾಷ್ಟ್ರೀಯ ಸಂಸ್ಥೆ ‘ಪೇಟ್ರಿಯಾಟಿಕ್ ವಿಷನ್’ (PVA) ನ ಮುಖ್ಯ ಪ್ರತಿನಿಧಿ ಮೊಹಮದ್ ಸಫಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇರಾನ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಂಭವನೀಯ ಸನ್ನಿವೇಶಕ್ಕೆ ವಿಶ್ವಸಂಸ್ಥೆಯು ಸಿದ್ಧತೆ ನಡೆಸುತ್ತಿದೆ … Continued

ಮೈ ಜುಂ ಎನ್ನುವ ವೀಡಿಯೊ | ಆಗಸದಲ್ಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನ-ಸೇನಾ ಹೆಲಿಕಾಪ್ಟರ್ ಡಿಕ್ಕಿಯ ಭೀಕರ ದೃಶ್ಯ ವೈರಲ್‌

ವಾಷಿಂಗ್ಟನ್: ಕಳೆದ ವರ್ಷ ಅಮೆರಿಕದ ವಾಷಿಂಗ್ಟನ್‌ನ ರೋನಾಲ್ಡ್ ರೇಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ ವಿಮಾನ ಅಪಘಾತದ ಮೈಮನ ಜುಂ ಎನಿಸುವ ದೃಶ್ಯಗಳು ಈಗ ಬಿಡುಗಡೆಯಾಗಿವೆ. ಅಮೆರಿಕನ್ ಏರ್‌ಲೈನ್ಸ್‌ನ ಪ್ರಯಾಣಿಕರ ವಿಮಾನ ಮತ್ತು ಅಮೆರಿಕ ಭೂಸೇನೆಯ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡು ಆಕಾಶದಲ್ಲೇ ಪರಸ್ಪರ ಡಿಕ್ಕಿ ಹೊಡೆದ ಕ್ಷಣದ ವಿಡಿಯೋ ಇದೀಗ ಜಗತ್ತಿನಾದ್ಯಂತ … Continued

ವೀಡಿಯೊ| ಈಜಿಪ್ಟ್ ಸಚಿವರನ್ನು ಸ್ವಾಗತಿಸುವಾಗ ಆಯತಪ್ಪಿ ಬಿದ್ದ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್

ಇಸ್ಲಾಮಾಬಾದ್: ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಭಾನುವಾರ ಇಸ್ಲಾಮಾಬಾದ್‌ನಲ್ಲಿ ಈಜಿಪ್ಟ್‌ನ ವಿದೇಶಾಂಗ ಸಚಿವ ಬದರ್ ಅಬ್ದೆಲಟ್ಟಿ ಅವರನ್ನು ಸ್ವಾಗತಿಸುವ ವೇಳೆ ಕೆಂಪು ಹಾಸಿನ ಮೇಲೆ ಆಯತಪ್ಪಿ ಬಿದ್ದ ಘಟನೆ ನಡೆದಿದೆ. ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕುರಿತಾದ ಚರ್ಚೆಗಾಗಿ ಈಜಿಪ್ಟ್ ವಿದೇಶಾಂಗ ಸಚಿವ ಬದ್ರ್ ಅಬ್ದೆಲಾಟ್ಟಿ ಆಗಮಿಸಿದ್ದಾಗ ಈ ಘಟನೆ … Continued

ಹಾರ್ಮುಜ್ ಬಳಿ ದಾಳಿ, ಖಾರ್ಗ್ ವಶಕ್ಕೆ ಯೋಜನೆ: ಇರಾನ್‌ ವಿರುದ್ಧ ಭೂ ಕಾರ್ಯಾಚರಣೆಗೆ ಅಮೆರಿಕ ಭಾರೀ ಸಿದ್ಧತೆ

ವಾಷಿಂಗ್ಟನ್‌ : ಮಧ್ಯಪ್ರಾಚ್ಯದಲ್ಲಿ ಯುದ್ಧವು ಐದನೇ ವಾರಕ್ಕೆ ಕಾಲಿಡುತ್ತಿರುವ ಬೆನ್ನಲ್ಲೇ, ಇರಾನ್ ವಿರುದ್ಧ ವಾರಗಳ ಕಾಲ ನಡೆಯಬಹುದಾದ ಭೂಸೇನಾ ಕಾರ್ಯಾಚರಣೆಗೆ ಅಮೆರಿಕದ ರಕ್ಷಣಾ ಇಲಾಖೆ ‘ಪೆಂಟಗನ್’ ಭಾರಿ ಸಿದ್ಧತೆ ನಡೆಸುತ್ತಿದೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ವರದಿ ಪ್ರಕಾರ, ಇರಾನ್‌ನ ಪ್ರಮುಖ ತೈಲ ಕೇಂದ್ರವಾದ ಖಾರ್ಗ್ ದ್ವೀಪ (Kharg Island) ಮತ್ತು ಹಾರ್ಮುಜ್ ಜಲಸಂಧಿಯ … Continued

ನೇಪಾಳ ಮಾಜಿ ಪ್ರಧಾನಿ ಕೆ.ಪಿ. ಓಲಿ ಬಂಧನ: ಪ್ರಧಾನಿಯಾಗಿ ಬಾಲೇಂದ್ರ ಶಾ ಪದಗ್ರಹಣದ ಮರುದಿನವೇ ಕ್ರಮ

ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಶನಿವಾರ ಬೆಳಗ್ಗೆ ಭಾರಿ ಸಂಚಲನ ಉಂಟಾಗಿದ್ದು, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2025ರ ಸೆಪ್ಟೆಂಬರ್‌ನಲ್ಲಿ ನಡೆದ ‘ಜೆನ್-ಜಿ’ (Gen Z) ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ ಮತ್ತು ಆ ಸಂದರ್ಭದಲ್ಲಿ ನಡೆದ ಸಾವು-ನೋವುಗಳಿಗೆ ಕಾರಣರಾದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಗಾಯಕ-ರಾಜಕಾರಣಿ ಬಾಲೇಂದ್ರ ಶಾ ಅವರು … Continued

ಅಮೆರಿಕದಿಂದ ಭೂದಾಳಿಯ ಭೀತಿ : 10 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಸಜ್ಜುಗೊಳಿಸಿದ ಇರಾನ್….!

ತೆಹ್ರಾನ್: ಅಮೆರಿಕವು ತನ್ನ ದೇಶದ ಮೇಲೆ ಭೂಸೇನೆಯ ಮೂಲಕ ದಾಳಿ ಮಾಡಬಹುದೆಂಬ ಭೀತಿಯ ನಡುವೆ, ಇರಾನ್ ತನ್ನ ರಕ್ಷಣಾ ಪಡೆಯನ್ನು ಬೃಹತ್ ಮಟ್ಟದಲ್ಲಿ ಸಜ್ಜುಗೊಳಿಸಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಸೈನಿಕರು ಮತ್ತು ಹೋರಾಟಗಾರರು ಅಮೆರಿಕದ ಸಂಭಾವ್ಯ ಆಕ್ರಮಣವನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಇರಾನ್ ಹೇಳಿದೆ. ಅಮೆರಿಕವು ಭೂದಾಳಿ ನಡೆಸಲು ಮುಂದಾಗಬಹುದು ಎಂಬುದು ಇರಾನ್ ಜನರಲ್ಲಿ … Continued

ಹಾರ್ಮುಜ್ ಜಲಸಂಧಿ ಬಂದ್ ಮಾಡಿದ್ದ ಇರಾನ್ ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಇಸ್ರೇಲ್ ದಾಳಿಯಲ್ಲಿ ಸಾವು ; ವರದಿ

ಜೆರುಸಲೆಮ್: ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಅವರು ಪೋರ್ಟ್‌ ಅಬ್ಬಾಸ್‌ನಲ್ಲಿ ನಡೆದ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಹಾರ್ಮುಜ್ ಜಲಸಂಧಿಯ ಬಳಿ ಇರುವ ಪ್ರಮುಖ ಇರಾನಿನ ಬಂದರು ನಗರವಾದ ಪೋರ್ಟ್‌ ಅಬ್ಬಾಸ್‌ನಲ್ಲಿ ನಡೆದ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯ … Continued

ವೀಡಿಯೊ : ಎಲ್ಲರೂ ನೋಡನೋಡುತ್ತಿದ್ದಂತೆ ನದಿಗೆ ಬಿದ್ದು ಮುಳುಗಿದ ಬಸ್ ; 24 ಪ್ರಯಾಣಿಕರು ಸಾವು

ಢಾಕಾ: ಬಾಂಗ್ಲಾದೇಶದ ರಾಜಬರಿ ಜಿಲ್ಲೆಯಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 24 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪ್ರಯಾಣಿಕರಿದ್ದ ಬಸ್ಸೊಂದು ಫೆರ್ರಿ (ಸಾರಿಗೆ ದೋಣಿ) ಹತ್ತಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಪದ್ಮಾ ನದಿಗೆ ಬಿದ್ದು ಮುಳುಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಮಾರ್ಚ್ 25, ಬುಧವಾರ ಸಂಜೆ ಸುಮಾರು 5:15ರ ಸುಮಾರಿಗೆ ರಾಜಬರಿ … Continued