ಸರಕು ಹಡಗು -ತೈಲ ಟ್ಯಾಂಕರ್‌ ಹಡಗು ಡಿಕ್ಕಿ ; ಮತ್ತೆ ನಿಜವಾದ ‘ಆಧುನಿಕ ನಾಸ್ಟ್ರಾಡಾಮಸ್’ ಭವಿಷ್ಯವಾಣಿ : ಟ್ರಂಪ್‌ ಹತ್ಯೆ ಯತ್ನದ ಬಗ್ಗೆ ಹೇಳಿದ್ದ ಈತನಿಗಿದೆ ಭಾರತದ ನಂಟು…!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಪ್ರಯತ್ನವನ್ನು ಮೊದಲೇ ಊಹಿಸಿದ್ದ ಬ್ರಿಟನ್‌ನ ಅತೀಂದ್ರಿಯ ವ್ಯಕ್ತಿಯೊಬ್ಬರು ಮತ್ತೊಮ್ಮೆ ಭಯಾನಕ ಭವಿಷ್ಯವಾಣಿಯೊಂದರ ಮೂಲಕ ಗಮನ ಸೆಳೆದಿದ್ದು, ಅದು ಈಗ ನಿಜವಾಗಿದೆ. “ನ್ಯೂ ನಾಸ್ಟ್ರಾಡಾಮಸ್” ಅಥವಾ “ಪ್ರೊಫೆಟ್ ಆಫ್ ಡೂಮ್” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕ್ರೇಗ್ ಹ್ಯಾಮಿಲ್ಟನ್-ಪಾರ್ಕರ್, ಇಂಗ್ಲೆಂಡ್‌ನಲ್ಲಿ ಸರಕು ಹಡಗು ಡಿಕ್ಕಿ ಸಂಭವಿಸುವ ಕೆಲವೇ ದಿನಗಳ ಮೊದಲು … Continued

ತನ್ನ ಸಂಗಾತಿ ಸತ್ತ ನಂತರ ಎಬ್ಬಿಸಲು ಪ್ರಯತ್ನಿಸಿ, ತಬ್ಬಿಕೊಂಡು ದುಃಖಿಸಿದ ಭಾವುಕ ಆನೆಯ ಅಸಾಧಾರಣ ವೀಡಿಯೊ ವೈರಲ್‌ ; ಕಣ್ಣೀರು ತರಿಸುತ್ತೆ…!

ಸರ್ಕಸ್ ಆನೆಯೊಂದು ಬಹುಕಾಲದಿಂದ ತನ್ನ ಸಂಗಾತಿಯಾಗಿದ್ದ ಮತ್ತೊಂದು ಆನೆಯ ಸಾವಿಗೆ ದುಃಖಿಸುತ್ತಿರುವ ವೀಡಿಯೊ ವೈರಲ್ ಆದ ನಂತರ ಅದನ್ನು ನೋಡಿದ ಬಹುತೇಕರ ಕಣ್ಣಂಚಿನಲ್ಲಿ ನೀರು ಬಂದಿದೆ. ರಷ್ಯಾದ ಸರ್ಕಸ್‌ ಕಂಪನಿಯಲ್ಲಿ 25 ವರ್ಷಗಳಿಂದ ಜೊತೆಗಿದ್ದ ಜೆನ್ನಿ ಮತ್ತು ಮ್ಯಾಗ್ಡಾ ಎಂಬ ಎರಡು ಭಾರತೀಯ ಹೆಣ್ಣಾನೆಗಳು ಬೇರ್ಪಡಿಸಲಾಗದ ಅನುಬಂಧವನ್ನು ಹೊಂದಿದ್ದವು. ಸರ್ಕಸ್‌ ಕಂಪನಿಯಿಂದ ಪ್ರದರ್ಶನದಿಂದ ದೂರವಾಗಿ ನಿವೃತ್ತಿ … Continued

ವೀಡಿಯೊ…| ವೈಮಾನಿಕ ದಾಳಿಯಲ್ಲಿ ಐಸಿಸ್‌ ಭಯೋತ್ಪಾದಕ ಗುಂಪಿನ ನಂ.2 ನಾಯಕನ್ನು ಕೊಂದು ಹಾಕಿದ ಅಮೆರಿಕ

ನವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದಲ್ಲಿ, ಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ “ಅಬು ಖದೀಜಾ” ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ (ISIS)ನ ನಂ.2 ನಾಯಕನಾದ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿಯನ್ನು ಕೊಂದಿರುವುದಾಗಿ ಅಮೆರಿಕ ಘೋಷಿಸಿದೆ. ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ … Continued

ಅದ್ಭುತ ವೀಡಿಯೊ…| ಔಷಧದ ಅಂಗಡಿ ಹುಡುಕಿಕೊಂಡು ಬಂದು ತನ್ನ ಗಾಯಕ್ಕೆ ಬ್ಯಾಂಡೇಜ್‌ ಹಾಕಿಸಿಕೊಂಡ ಮಂಗ….!

ಅಪರೂಪ ಮತ್ತು ಹೃದಯಸ್ಪರ್ಶಿ ಘಟನೆಯೊಂದು ನಡೆದಿದ್ದು, ಗಾಯಗೊಂಡ ಕೋತಿ ಅಗತ್ಯ ಆರೈಕೆ ಮಾಡಿಸಿಕೊಳ್ಳಲು ಮೆಡಿಕಲ್ ಶಾಪ್ ಗೆ ಬಂದಿದೆ. ಈ ಘಟನೆ ಈ ತಿಂಗಳು ಬಾಂಗ್ಲಾದೇಶದ ಮೆಹರ್‌ಪುರ ಪಟ್ಟಣದಲ್ಲಿ ನಡೆದಿದ್ದು, ಆ ಪ್ರದೇಶದಲ್ಲಿನ ಅಲ್ಹೇರಾ ಫಾರ್ಮಸಿಯಲ್ಲಿ ಮಂಗ ತನ್ನ ಗಾಯಕ್ಕೆ ಸೂಕ್ತ ಬ್ಯಾಂಡೇಜ್‌ ಹಾಕಿಸಿಕೊಂಡ ಆರೈಕೆ ಮಾಡಿಸಿಕೊಂಡಿದೆ. ವೀಡಿಯೋದಲ್ಲಿ ಸೆರೆಯಾಗಿರುವ ಈ ಅಸಾಮಾನ್ಯ ದೃಶ್ಯ ಈಗ … Continued

ವೀಡಿಯೊ…| 178 ಜನರಿದ್ದ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ ; ರೆಕ್ಕೆ ಮೇಲೆ ನಿಂತು ಜೀವ ಉಳಿಸಿಕೊಂಡ ಪ್ರಯಾಣಿಕರು

ಡೆನ್ವರ್: ಡಲ್ಲಾಸ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವೊಂದು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ವಿಮಾನದಲ್ಲಿ ಆರು ಸಿಬ್ಬಂದಿ ಸೇರಿದಂತೆ 178 ಮಂದಿ ಇದ್ದರು. ಅಮೆರಿಕನ್ ಏರ್ಲೈನ್ಸ್‌ ಬೋಯಿಂಗ್ 737-800 ಕೊಲೊರಾಡೋ ಸ್ಪ್ರಿಂಗ್ಸ್‌ನಿಂದ ಹೊರಟಿತ್ತು. ಆಗ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ವಿಮಾನವನ್ನು ಡೆನ್ವರ್‌ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಏರ್‌ಲೈನ್ ವಕ್ತಾರರು … Continued

ಉಕ್ರೇನ್ ಸಂಘರ್ಷಕ್ಕೆ ಇತಿಶ್ರೀ ಹಾಡಲು ಪ್ರಯತ್ನಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ರಷ್ಯಾ ಅಧ್ಯಕ್ಷ

ಮಾಸ್ಕೋ/ನವದೆಹಲಿ: ಉಕ್ರೇನ್‌ನಲ್ಲಿ 30 ದಿನಗಳ ಕದನ ವಿರಾಮಕ್ಕಾಗಿ ವಾಷಿಂಗ್ಟನ್‌ನ ಯೋಜನೆಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಗುರುವಾರ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರು ಉಕ್ರೇನ್ ಸಂಘರ್ಷದ ಬಗ್ಗೆ ಗಮನ ಹರಿಸಿದ್ದಕ್ಕಾಗಿ “ಕೃತಜ್ಞತೆ” ಸಲ್ಲಿಸಿದ್ದಾರೆ. … Continued

ಬಾಂಗ್ಲಾದೇಶ ಸೇನಾ ಮುಖ್ಯಸ್ಥರ ಪದಚ್ಯುತಿಗೆ ಪಾಕಿಸ್ತಾನದಿಂದ ಯತ್ನ : ದಂಗೆ ವಿಫಲಗೊಳಿಸಿ ಸೇನಾ ಮುಖ್ಯಸ್ಥರನ್ನು ಕಾಪಾಡಿದ ಭಾರತ…!

ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಅವರನ್ನು ಪದಚ್ಯತಗೊಳಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಭಾರತ ಬಲವಾದ ಪೆಟ್ಟು ನೀಡಿದೆ…! ಜನರಲ್ ವಾಕರ್-ಉಜ್-ಝಮಾನ್ ಅವರನ್ನು ಪದಚ್ಯುತಗೊಳಿಸಲು ಪಾಕಿಸ್ತಾನ ಪ್ರೇರಿತ ಇತ್ತೀಚಿನ ದಂಗೆಯ ಪ್ರಯತ್ನವನ್ನು ಭಾರತದ ನೆರವಿನೊಂದಿಗೆ ಯಶಸ್ವಿಯಾಗಿ ವಿಫಲಗೊಳಿಸಲಾಗಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಆರಂಭಿಸಿದ ಈ ಸಂಚಿನ ಪ್ರಕಾರ, ಜನರಲ್ ವಾಕರ್-ಉಜ್-ಝಮಾನ್ ಅವರ ಬದಲಿಗೆ ಜಮಾತ್-ಎ-ಇಸ್ಲಾಮಿಗೆ ನಿಕಟವಾಗಿರುವ … Continued

ಹೃದಯಾಘಾತ, ಪಾರ್ಶ್ವವಾಯು ತಡೆಗೆ ಹೊಸ ಲಸಿಕೆ ಕಂಡುಹಿಡಿದ ಚೀನಾ….! ಏನಿದು ಭರವಸೆದಾಯಕ ಈ ನ್ಯಾನೊವಾಕ್ಸಿನ್..?

ಸ್ಟ್ರೋಕ್, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಕ್ಕೆ ಕಾರಣವಾಗುವ ಅಪಧಮನಿಗಳಲ್ಲಿ ಪ್ಲೇಕ್ ಅಥವಾ ಕೊಬ್ಬು ಸಂಗ್ರಹವಾಗುವುದನ್ನು ಅಥವಾ ರಚನೆಯಾಗುವುದನ್ನು ತಡೆಯಲು ಚೀನಾದ ವಿಜ್ಞಾನಿಗಳು ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ನ್ಯಾನೊವಾಕ್ಸಿನ್ ಅನ್ನು ನಾನ್ಜಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದೆ. ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಹೃದ್ರೋಗಗಳನ್ನು ತಡೆಗಟ್ಟುವಲ್ಲಿ ಇದು ಒಂದು … Continued

ಪಾಕಿಸ್ತಾನ ರೈಲು ಅಪಹರಣ: ಎಲ್ಲ ಒತ್ತೆಯಾಳುಗಳ ಬಿಡುಗಡೆ ; 33 ಬಿಎಲ್‌ಎ ಬಂಡುಕೋರರ ಹತ್ಯೆ, ; 28 ಯೋಧರು ಸಾವು

ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನದಲ್ಲಿ ರೈಲನ್ನು ಅಪಹರಿಸಿ 212 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎಲ್ಲಾ ಬಲೂಚ್ ದಂಗೆಕೋರರು ಕೊಲ್ಲಲ್ಪಟ್ಟಿದ್ದಾರೆ ಮತ್ತು ದಿನವಿಡೀ ತೀವ್ರವಾದ ಮಿಲಿಟರಿ ಕಾರ್ಯಾಚರಣೆಯ ನಂತರ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ, ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಪಾಕಿಸ್ತಾನ ಸೇನೆ ಬುಧವಾರ ಸಂಜೆ ತಿಳಿಸಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಯಿಂದ ಇಪ್ಪತ್ತೊಂದು ಪ್ರಯಾಣಿಕರು (ರಜೆ … Continued

ಪಾಕಿಸ್ತಾನದಲ್ಲಿ ಹೈಜಾಕ್ ಮಾಡಿದ ರೈಲಿನಿಂದ 150 ಒತ್ತೆಯಾಳುಗಳ ರಕ್ಷಣೆ ; 27 ಬಂಡುಕೋರರ ಹತ್ಯೆ

ಇಸ್ಲಾಮಾಬಾದ್‌ : ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನ್ ಪ್ರದೇಶದಲ್ಲಿ 400 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಕ್ಸ್‌ಪ್ರೆಸ್‌ ರೈಲನ್ನು ಸಶಸ್ತ್ರ ಬಂಡುಕೋರರು ಅಪಹರಿಸಿದ ನಂತರ ಈವರೆಗೆ 150 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಕನಿಷ್ಠ 27 ಬಂಡುಕೋರರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಗಳು ಸೂಚಿಸಿವೆ. ಬಂಡುಕೋರರೊಂದಿಗಿನ ಗುಂಡಿನ ಚಕಮಕಿಯ ನಂತರ ಭದ್ರತಾ … Continued