ಮುಗಿಯದ ಸಿಎಂ ಡಿ.ಕೆ. ಶಿವಕುಮಾರ ತಲೆನೋವು : ಹೈಕಮಾಂಡ್ ಕದ ತಟ್ಟಿದ ಸಚಿವರು, ಆಕಾಂಕ್ಷಿಗಳು !

ಬೆಂಗಳೂರು: ಕರ್ನಾಟಕದಲ್ಲಿ ನೂತನವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸಚಿವ ಸಂಪುಟದ ಖಾತೆ ಹಂಚಿಕೆ ಬೆನ್ನಲ್ಲೇ ಭಿನ್ನಮತ ಶಮನಗೊಳಿಸುವ ದೊಡ್ಡ ಸವಾಲು ಎದುರಾಗಿದೆ. ಕಳೆದ ವಾರವಷ್ಟೇ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಹಸನವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಶಿವಕುಮಾರ ಅವರಿಗೆ, ಇದೀಗ ಮತ್ತಷ್ಟು ಆಂತರಿಕ ಅಸಮಾಧಾನದ ಬಿಸಿ ತಟ್ಟುವ ಮುನ್ಸೂಚನೆಗಳು … Continued

ಎಚ್-1ಬಿ ವೀಸಾ ಮೇಲಿನ $1,00,000 ಶುಲ್ಕ ರದ್ದುಗೊಳಿಸಿದ ಅಮೆರಿಕದ ಫೆಡರಲ್ ಕೋರ್ಟ್: ಟ್ರಂಪ್ ಆಡಳಿತಕ್ಕೆ ಭಾರಿ ಹಿನ್ನಡೆ

ವಾಷಿಂಗ್ಟನ್ : ಅತ್ಯಂತ ನುರಿತ ವಿದೇಶಿ ಕಾರ್ಮಿಕರಿಗೆ ನೀಡಲಾಗುವ ಎಚ್-1ಬಿ (H-1B) ವೀಸಾಗಳ ಮೇಲೆ ಬರೋಬ್ಬರಿ 1,00,000 ಡಾಲರ್ (ಸುಮಾರು 85 ಲಕ್ಷ ರೂಪಾಯಿ) ಭಾರಿ ಮೊತ್ತದ ಶುಲ್ಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೈಗೊಂಡಿದ್ದ ವಿವಾದಾತ್ಮಕ ನಿರ್ಧಾರವನ್ನು ಅಮೆರಿಕದ ಫೆಡರಲ್ ನ್ಯಾಯಾಲಯವು ಸೋಮವಾರ ರದ್ದುಗೊಳಿಸಿದೆ. ಸರ್ಕಾರದ ಈ ಕ್ರಮವು ಸಂಸತ್ತಿನ … Continued

ವಿಚಿತ್ರ ಮದುವೆ…: ಹೆಂಡತಿಯನ್ನು ಕೈಬಿಟ್ಟು ಅತ್ತೆಯನ್ನೇ ವರಿಸಿದ ಅಳಿಯ ! ವಿಲಕ್ಷಣ ಮದುವೆಯ ವಿಡಿಯೋ ವೈರಲ್

ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಿಂದ ಇತ್ತೀಚೆಗೆ ವರದಿಯಾಗಿರುವ ಅತ್ಯಂತ ವಿಲಕ್ಷಣ ಹಾಗೂ ಅಚ್ಚರಿಯ ವಿವಾದವೊಂದು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರೀತಿ, ಸಂಬಂಧಗಳ ಎಲ್ಲ ಕಲ್ಪನೆಗಳನ್ನೂ ಮೀರಿ ನಿಂತಿರುವ ಈ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೈಬಿಟ್ಟು ಸ್ವತಃ ತನ್ನ ಅತ್ತೆಯನ್ನೇ ವಿವಾಹವಾಗಿದ್ದಾನೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ … Continued

ʼಸುಶಿಕ್ಷಿತರಲ್ಲೇ ಹೆಚ್ಚು ಕುಸಿತʼ : ಭಾರತದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣದ ಬಗ್ಗೆ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಆತಂಕ !

ನವದೆಹಲಿ: ಭಾರತದಲ್ಲಿ ಜನನ ಪ್ರಮಾಣವು ಜನಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಅಗತ್ಯವಿರುವ ಕನಿಷ್ಠ ಮಟ್ಟಕ್ಕಿಂತ (Replacement Level) ಕೆಳಗೆ ಕುಸಿದಿದೆ ಎಂದು ಸ್ಪೇಸ್‌ಎಕ್ಸ್ ಸಿಇಒ ಹಾಗೂ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಭಾರತದ ಜನನ ಪ್ರಮಾಣವು ಮರುಸ್ಥಾಪನೆ ಅಥವಾ … Continued

ಸೋಶಿಯಲ್ ಮೀಡಿಯಾದಲ್ಲಿ ಮನೆಯಲ್ಲಿದ್ದ ಒಡವೆ ಪ್ರದರ್ಶಿಸಿದ ಯೂಟ್ಯೂಬರ್ ; ಮನೆ ಹೊಕ್ಕು ಚಿನ್ನಾಭರಣ ಕದ್ದೊಯ್ದ ಕಳ್ಳರು !

ಶಿವಪುರಿ :  ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಗಳಿಸಲು ತಮ್ಮ ಮನೆಯ ಒಳಾಂಗಣ, ಮನೆಯೊಳಗಿನ ವಸ್ತುಗಳು ಹಾಗೂ ಸಂಪತ್ತನ್ನು ಪ್ರದರ್ಶಿಸುವವರಿಗೆ ಮಧ್ಯಪ್ರದೇಶದ ಈ ಘಟನೆ ಒಂದು ದೊಡ್ಡ ಎಚ್ಚರಿಕೆ ಗಂಟೆಯಾಗಿದೆ. ಯೂಟ್ಯೂಬರ್ ಒಬ್ಬರು ತಮ್ಮ ಮನೆಯ ಒಳಗಿನ ದೃಶ್ಯ ಹಾಗೂ ಒಡವೆ-ನಗದನ್ನು ವೀಡಿಯೊ ಮಾಡಿ ಶೇರ್ ಮಾಡಿದ ಕೆಲವೇ ದಿನಗಳಲ್ಲಿ, ಕಳ್ಳರು ಅವರ ಮನೆಗೇ … Continued

2 ತಾಸು ಹುಡುಕಿದ್ರೂ ಏನೂ ಸಿಗದ ಪೊಲೀಸರಿಗೆ ಕುಕ್ಕರ್ ಸೀಟಿಯಿಂದ ಪತ್ತೆಯಾಯ್ತು ಗಾಂಜಾ…!

ತಿರುವನಂತಪುರಂ: ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿ ಸುಮಾರು ಎರಡು ಗಂಟೆಗಳ ಕಾಲ ಜಾಲಾಡಿದರೂ ಪೊಲೀಸರಿಗೆ ಏನೂ ಪತ್ತೆಯಾಗಲಿಲ್ಲ. ಇನ್ನೇನು ಕಾರ್ಯಾಚರಣೆ ಮುಗಿಸಬೇಕು ಎನ್ನುವಷ್ಟರಲ್ಲಿ ಅಡುಗೆ ಮನೆಯಲ್ಲಿದ್ದ ಪ್ರೆಶರ್ ಕುಕ್ಕರ್ ಮಾಡಿದ ಸದ್ದು ಪೊಲೀಸರಿಗೆ ಪ್ರಕರಣ ಭೇದಿಸಲು ನೆರವಾದಪ್ರಸಂಗ ಕೇರಳದಲ್ಲಿ ನಡೆದಿದೆ. ಕುಕ್ಕರ್ ತೆರೆದು ನೋಡಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಗಮನಿಸಿದ … Continued

ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಭೀಕರ ದುರಂತ: ಎಂಟು ಕಾರ್ಮಿಕರ ಸಾವು, ಹಲವರಿಗೆ ಗಾಯ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಸೋಮವಾರ ಭೀಕರ ಅವಘಡ ಸಂಭವಿಸಿದೆ. ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಬೃಹತ್ ಪಾತ್ರೆ (ಲಾಡಲ್) ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಮೃತಪಟ್ಟಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಕ್ಕಿನ ಕಾರ್ಖಾನೆಯ ಎಸ್‌ಎಂಎಸ್-೨ (SMS-2) ಮತ್ತು ಎಸ್‌ಟಿಸಿ-೩ (STC-3) ಹೀಟ್ ಫೆಸಿಲಿಟಿ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ. ಅತ್ಯಂತ ಹೆಚ್ಚಿನ ತಾಪಮಾನದಲ್ಲಿದ್ದ ಕರಗಿದ … Continued

ವಿಡಿಯೋ | ಕಾರವಾರದಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ ಕರಾವಳಿಯಲ್ಲಿ ಹೊತ್ತಿಕೊಂಡ ಬೆಂಕಿ

ಮಸ್ಕತ್ (ಓಮನ್): ಕಾರವಾರದಿಂದ ಹೊರಟಿದ್ದ ಓಮನ್ ಕರಾವಳಿಯ ಸಮುದ್ರ ಪ್ರದೇಶದಲ್ಲಿ ಹೋಗುತ್ತಿದ್ದ  ‘ಮಾರಿವೆಕ್ಸ್’ (Marivex) ಎಂಬ ತೈಲ ಸಾಗಣೆ ಹಡಗಿನಲ್ಲಿ (ಆಯಿಲ್ ಟ್ಯಾಂಕರ್) ಸೋಮವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದುವರದಿಯಾಗಿದೆ.  ಅದೃಷ್ಟವಶಾತ್, ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಇರಾನ್ ಮತ್ತು ಇಸ್ರೇಲ್ ಗಳು ಕದನ ವಿರಾಮವನ್ನು ಉಲ್ಲಂಘಿಸಿ ಮತ್ತೆ … Continued

ದೀದಿ ಪಕ್ಷದಲ್ಲಿ ‘ಮಹಾಬಂಡಾಯ’ | ಸ್ಪೀಕರ್‌ಗೆ 20 ಟಿಎಂಸಿ ಸಂಸದರ ಪತ್ರ ; ಪ್ರತ್ಯೇಕ ಪಕ್ಷ ರಚಿಸುವ ಸಾಧ್ಯತೆ ; ಎನ್‌ಡಿಎ ಒಕ್ಕೂಟ ಸೇರಲು ಸಜ್ಜು !

ನವದೆಹಲಿ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಭಾರಿ ರಾಜಕೀಯ ಭೂಕಂಪ ಸಂಭವಿಸಿದೆ.  ಟಿಎಂಸಿ ಪಕ್ಷದ 20ಕ್ಕೂ ಹೆಚ್ಚು ಲೋಕಸಭಾ ಸದಸ್ಯರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಲೋಕಸಭೆಯಲ್ಲಿ ಟಿಎಂಸಿಯ ಪ್ರತ್ಯೇಕ ಬಣವೊಂದು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದ್ದು, ಸೂಕ್ತ ಸಮಯದಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದೊಳಗಿನ ಭಿನ್ನಮತ … Continued

ತಲೆಮರೆಸಿಕೊಂಡಿದ್ದ ಟಿಎಂಸಿ ನಾಯಕ ಜಹಾಂಗೀರ್ ಖಾನ್ ನೇಪಾಳ ಗಡಿ ಬಳಿ ಅರೆಸ್ಟ್

ಕೋಲ್ಕತ್ತಾ : ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ (TMC) ನಾಯಕ ಜಹಾಂಗೀರ್ ಖಾನ್ ಅವರನ್ನು ರಾಜ್ಯ ಪೊಲೀಸ್ ವಿಶೇಷ ಕಾರ್ಯಪಡೆ (STF) ಇಂದು, ಸೋಮವಾರ ಮುಂಜಾನೆ ನೇಪಾಳ ಗಡಿ ಪ್ರದೇಶದ ಬಳಿ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ. ಎಸ್‌ಟಿಎಫ್ ತಂಡವು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಅವರ ಚಲನವಲನಗಳನ್ನು ಪತ್ತೆಹಚ್ಚಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ … Continued