ಬೆಚ್ಚಿಬೀಳಿಸುವ ವೀಡಿಯೊ…| ಕಾರಿಗೆ ಬೈಕ್ ಡಿಕ್ಕಿ ಹೊಡೆದ ನಂತರ ಗಾಳಿಯಲ್ಲಿ ಎಸೆಯಲ್ಪಟ್ಟ ಬೈಕ್‌ ಸವಾರ….!

ಲಕ್ನೋ : ಲಕ್ನೋದ ಇಂದಿರಾ ನಗರದಲ್ಲಿ ಸಂಭವಿಸಿದ ಬೆಚ್ಚಿಬೀಳುವ ಘಟನೆಯೊಂದರ ಸಿಸಿಟಿವಿ ದೃಶ್ಯಾವಳಿಗಳುವೈರಲ್ ಆಗಿದ್ದು, ಕಾರು ಹಾಗೂ ಮೋಟರ್‌ ಸೈಕಲ್‌ ಡಿಕ್ಕಿಯ ಸಮಯದಲ್ಲಿ ಮೋಟಾರ್‌ ಸೈಕ್ಲಿಸ್ಟ್‌ ಗಾಳಿಯಲ್ಲಿ ಹಾರಿಬಿದ್ದ ದೃಶ್ಯ ಸೆರೆಯಾಗಿದೆ. ಲಕ್ನೋದ ಇಂದಿರಾ ನಗರದ ಸೆಕ್ಟರ್ 13 ರಲ್ಲಿನ ತಿರುವಿನಲ್ಲಿ ರಾಪಿಡೊ ಚಾಲಕನು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ನಂತರ ಗಾಳಿಯಲ್ಲಿ ಚಿಮ್ಮಿ ನಂತರ … Continued

ಇದು ಪೈಸೆ ವಾಲಿ ಕಾರ್‌ | ಒಂದು ರೂಪಾಯಿ ನಾಣ್ಯದಿಂದಲೇ ಕಾರನ್ನು ಅಲಂಕರಿಸಿದ ವ್ಯಕ್ತಿ ; ವೀಡಿಯೊ ವೈರಲ್

ಈಗಿನ ಕಾಲಘಟ್ಟದಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಏನಾದರೂ ವಿಚಿತ್ರವಾದದ್ದನ್ನು ಮಾಡಲು ಯೋಚಿಸುತ್ತಾರೆ. ಈಗ ಇದೇ ತರಹ ಕಾರಿಗೆ ಸಂಬಂಧಿಸಿದ ವಿಡಿಯೋವೊಂದು ಹೊರಬಿದ್ದಿದೆ. ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ಸಂಪೂರ್ಣ ಕಾರನ್ನು ಒಂದು ರೂ. ನಾಣ್ಯಗಳಿಂದ ಅಲಂಕರಿಸಿದ್ದಾರೆ. ಒಂದು ರೂಪಾಯಿ ನಾಣ್ಯದಿಂದ ಅಲಂಕರಿಸಲಾದ ಈ ಕಾರಿನ ವಿನ್ಯಾಸವನ್ನು ನೋಡಿದ ಜನರು ಅಚ್ಚರಿಪಟ್ಟಿದ್ದಾರೆ, ಇದಕ್ಕೆ ಕಾರಣ ನಾಣ್ಯಗಳನ್ನು … Continued

ವೀಡಿಯೊ…| ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌‌ ಸ್ಫೋಟ; ಆಸ್ಪತ್ರೆಗೆ ದಾಖಲು ; ಆಘಾತಕಾರಿ ದೃಶ್ಯ ವೈರಲ್‌

ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಸ್ಥಳೀಯ ದಿನಸಿ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಪ್ಯಾಂಟಿನ ಹಿಂದಿನ ಜೇಬಿನಲ್ಲಿದ್ದ ಸ್ಮಾರ್ಟ್‌ಫೋನ್ ಸ್ಫೋಟಗೊಂಡಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರೆಜಿಲ್‌ನ ಅನಾಪೊಲಿಸ್‌ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಆಕೆ ತನ್ನ ಪತಿಯೊಂದಿಗೆ ದಿನಸಿ ಅಂಗಡಿಗೆ ಬಂದಿದ್ದರು. ಇದ್ದಕ್ಕಿದ್ದಂತೆ, ಅವರ ಪ್ಯಾಂಟ್‌ನಿಂದ ಹೊಗೆ ಹೊರಹೊಮ್ಮಲು ಪ್ರಾರಂಭಿಸಿತು, ನಂತರ ಅವರು ಬೆನ್ನಿನ ಕೆಳಭಾಗದಿಂದ ಜ್ವಾಲೆಯು … Continued

ವೀಡಿಯೊ…| ಮಹಾ ಕುಂಭಮೇಳಕ್ಕೆ ಹೋಗಲು ರೈಲು ಹತ್ತಲು ಸಾಧ್ಯವಾಗದ್ದಕ್ಕೆ ರೈಲಿನ ಕಿಟಿಕಿಯನ್ನೇ ಒಡೆದು ಹಾಕಿದ ಪ್ರಯಾಣಿಕರು…

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುತ್ತಿರುವ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದೆ ಸ್ವತಂತ್ರ ಸೇನಾನಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಗಾಜಿನ ಕಿಟಕಿಗಳನ್ನು ಒಡೆದ ಘಟನೆ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ರೈಲು ಹತ್ತಲಾಗದೆ ಹತಾಶೆಗೊಂಡ ಪ್ರಯಾಣಿಕರು ರೈಲಿಗೆ ಕಲ್ಲು ಎಸೆದು ಎಸಿ ಕಂಪಾರ್ಟ್‌ಮೆಂಟ್‌ಗಳ ಗಾಜುಗಳನ್ನು … Continued

ಸ್ಮರಣೆ ಶಕ್ತಿ ಕಳೆದುಕೊಂಡು 15 ವರ್ಷದಿಂದ ಕಾಣೆಯಾಗಿದ್ದ ವ್ಯಕ್ತಿಗೆ ಮತ್ತೆ ನೆನಪಿನ ಶಕ್ತಿ ಬರುವಂತೆ ಮಾಡಿದ ‘ಮಹಾ ಕುಂಭ’ ಪದ…!! ಮನೆ ಸೇರಿದ ವ್ಯಕ್ತಿ

ಜಾರ್ಖಂಡ್‌ನ ಕೊಡರ್ಮಾದಲ್ಲಿ ನಡೆದ ಅಸಾಧಾರಣ ವಿದ್ಯಮಾನವೊಂದರಲ್ಲಿ, 15 ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಅವರ ಕುಟುಂಬದವರು ಇತ್ತೀಚೆಗೆ ಮರಣ ಪ್ರಮಾಣಪತ್ರ (death certificate) ಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಪತ್ತೆಯಾಗಿದ್ದಾರೆ…! ಆಶ್ಚರ್ಯಕರ ಎಂಬಂತೆ, ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿಗೆ “ಮಹಾ ಕುಂಭ” ಪದ ಕೇಳಿದ ನಂತರ ಅವರ ನೆನಪಿನ ಶಕ್ತಿ ಮರಳಿದೆ. ಇದು ಅಧಿಕಾರಿಗಳಿಗೆ ಅವರ … Continued

ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಟ್ರಾಫಿಕ್ ನಿಯಮ ಪದೇ ಪದೇ ಉಲ್ಲಂಘಿಸಿ ಕಿರುಕುಳ ನೀಡಿದ ಗಂಡ….!

ಪತಿ ಪತ್ನಿಯರ ಜಗಳ ವಿಕೋಪಕ್ಕೆ ಹೋಗಿ ಪತ್ನಿ ನಂತರ ತನ್ನ ತವರು ಮನೆಗೆ ಹೋಗಿದ್ದಳು. ಜಗಳ ವಿಕೋಪಕ್ಕೆ ಹೋದ ನಂತರ ಅವರಿಬ್ಬರ ಸಂಬಂಧ ಹಳಸಿ ಅದು ವಿಚ್ಛೇದನದ ವರೆಗೆ ಬಂದು ನಿಂತಿತು. ವಿಚ್ಛೇದನ ಪ್ರಕರಣ ನ್ಯಾಯಾಲಯದ ಮುಂದೆ ಇದ್ದು, ಈ ವೇಳೆ ಪತಿ ಮಹಾಶಯ ತನ್ನ ಪತ್ನಿಗೆ ಕಿರುಕುಳ ನೀಡಲು ಅಸಾಮಾನ್ಯ ಮಾರ್ವನ್ನು ಅನುಸರಿಸಿದ್ದಾನೆ. ಪತ್ನಿಯ … Continued

ವೀಡಿಯೊ…| ನೃತ್ಯಗಾರರ ಜೊತೆ ಅದ್ಭುತವಾಗಿ ಯಾಂಗ್ಕೊ ನೃತ್ಯ ಪ್ರದರ್ಶಿಸಿದ ಮಾನವರೂಪಿ ರೋಬೋಟ್‌ಗಳ ಗುಂಪು…!

ನೃತ್ಯ ಮಾಡುವ ರೋಬೋಟ್‌ಗಳನ್ನು ಪರಿಚಯಿಸುವ ಮೂಲಕ ಹೊಸ ತನದಲ್ಲಿ ಚೀನಾ ಒಂದು ಹೆಜ್ಜೆ ಮುಂದೆ ಇಟ್ಟಿದೆ. ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಟಿವಿ ಕಾರ್ಯಕ್ರಮಗಳಲ್ಲಿ ಒಂದಾದ ಇತ್ತೀಚಿನ ಸ್ಪ್ರಿಂಗ್ ಫೆಸ್ಟಿವಲ್ ಗಾಲಾದಲ್ಲಿ ಇತರ ನೃತ್ಯಗಾರರ ಜೊತೆಗೆ ಅನೇಕ ರೋಬೋಟ್‌ಗಳು ಅದ್ಭುತವಾಗಿ ಮತ್ತು ನಿಖರವಾಗಿ ಹೆಜ್ಜೆ ಹಾಕುವ ಮೂಲಕ ವಿಶ್ವದ ಗಮನ ಸೆಳೆದಿವೆ. ಈ ನೃತ್ಯ ಕಾರ್ಯಕ್ರಮದಲ್ಲಿ … Continued

ಇದು ವಿಚಿತ್ರವಾದರೂ ಸತ್ಯ ; ಈ ವ್ಯಕ್ತಿ 63 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲ…!

ಒಬ್ಬ ವ್ಯಕ್ತಿಗೆ ಪ್ರತಿದಿನ ಸುಮಾರು 6-8 ಗಂಟೆಗಳ ನಿದ್ರೆಯ ಅಗತ್ಯವಿರುತ್ತದೆ. ಚೆನ್ನಾಗಿ ನಿದ್ರೆ ಮಾಡದಿದ್ದರೆ ಕೆಲಸ ಮಾಡುವುದು ತುಂಬಾ ಕಷ್ಟವಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ 60 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲವಂತೆ…! ಈ ವ್ಯಕ್ತಿ 1962 ರಿಂದ ನಿದ್ದೆ ಮಾಡಿಲ್ಲ ಎಂದು ಹೇಳಿಕೊಳ್ಳುವ ವಿಯೆಟ್ನಾಂ ವ್ಯಕ್ತಿಯ ಕುರಿತಾದ ವೀಡಿಯೊವೊಂದು ಇಂಟರ್ನೆಟ್ ಅನ್ನು ಬಿರುಗಾಳಿ ಎಬ್ಬಿಸಿದೆ. 80 ವರ್ಷದ … Continued

ವೀಡಿಯೊ..| ನೀರಿನ ತೊರೆಯಿಂದ ಒಂದೇ ಕೈಯಲ್ಲಿ ಹೆಬ್ಬಾವನ್ನು ಹೊರಗೆಳೆದ ಭೂಪ…!

ಹಾವುಗಳು, ವಿಶೇಷವಾಗಿ ಹೆಬ್ಬಾವುಗಳು, ಭಯಾನಕ ಮತ್ತು ಕುತೂಹಲಕಾರಿ ಜೀವಿಗಳು. ಆದರೆ ಹೆಚ್ಚಿನ ಜನರು ಹೆಬ್ಬಾವನ್ನು ಕಂಡರೆ ಬೆದರುತ್ತಾರೆ. ಆದರೆ ಇತ್ತೀಚಿನ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ಗಮನ ಸೆಳೆದಿದ್ದು ಅದರಲ್ಲಿ ವ್ಯಕ್ತಿಯೊಬ್ಬರು ದೈತ್ಯ ಹೆಬ್ಬಾವನ್ನು ಕಾಲುವೆಯಿಂದ ಒಂದೇ ಕೈಯೊಂದ ಹಿಡಿದು ಮೇಲಕ್ಕೆತ್ತುತ್ತಿರುವುದು ಕಂಡುಬಂದಿದೆ. ವೀಡಿಯೊ ತುಣುಕಿನಲ್ಲಿ, ಬೃಹತ್‌ ಹೆಬ್ಬಾವು ನೀರಿನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು, ಆಗ ವ್ಯಕ್ತಿಯೊಬ್ಬ ಶಾಂತವಾಗಿ … Continued

“ಕ್ಷಮಿಸಿ, ಅದು…” : ಅರುಣಾಚಲ ಪ್ರದೇಶ, ಈಶಾನ್ಯ ರಾಜ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡ ಚೀನಾದ ಡೀಪ್‌ ಸೀಕ್ ಎಐ

ಆರಿಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚೀನಾದ ಡೀಪ್‌ಸೀಕ್‌ ಎಐ (DeepsSeek AI) ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಚಾಟ್‌ ಜಿಪಿಟಿ (GPT) ಯಂತಹ AI ಚಾಟ್‌ಬಾಟ್ ದೈತ್ಯರ ವಿರುದ್ಧ ಇದು ಸ್ಪರ್ಧೆಗೆ ಇಳಿದಿದೆ. ಓಪನ್​ ಎಐ, ಗೂಗಲ್, ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳು ಹೊಸ ಸ್ಪರ್ಧೆಗೆ ಸಜ್ಜಾಗಬೇಕಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅದು ಕಡಿಮೆ ಬೆಲೆಯ ಕಾರಣಕ್ಕೆ ಜನಪ್ರಿಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ … Continued