ವಿಡಿಯೊಗಳು : ಮ್ಯಾನ್ಮಾರ್‌ನಲ್ಲಿ ಭೀಕರ ಸ್ಫೋಟಕ್ಕೆ ಧ್ವಂಸಗೊಂಡ ಕಟ್ಟಡ; ಆರು ಮಕ್ಕಳು ಸೇರಿ 45ಕ್ಕೂ ಹೆಚ್ಚು ಜನರು ಸಾವು

ಬ್ಯಾಂಕಾಕ್: ಈಶಾನ್ಯ ಮ್ಯಾನ್ಮಾರ್‌ನಲ್ಲಿ ಗಣಿಗಾರಿಕೆಗಾಗಿ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿದ್ದ ಕಟ್ಟಡವೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 45ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ಮತ್ತು ಸ್ವತಂತ್ರ ಮಾಧ್ಯಮಗಳು ವರದಿ ಮಾಡಿವೆ. ಚೀನಾ ಗಡಿಯಿಂದ ದಕ್ಷಿಣಕ್ಕೆ ಸುಮಾರು 3 ಕಿಲೋಮೀಟರ್ (2 ಮೈಲಿ) ದೂರದಲ್ಲಿರುವ ನಾಮ್‌ಕಾಮ್ ಉಪನಗರದ ‘ಕೌಂಗ್‌ಟುಪ್’ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆಯ … Continued

ಅಮೆರಿಕದಲ್ಲಿ ತನ್ನ ಇಮೇಜ್ ಬದಲಿಸಿಕೊಳ್ಳಲು ಅಮೆರಿಕ ಮಾಜಿ ಸಂಸದನ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡ ಪಾಕಿಸ್ತಾನ…!

ಅಮೆರಿಕದಲ್ಲಿ ತನ್ನ ರಾಜತಾಂತ್ರಿಕ ಪ್ರಭಾವವನ್ನು ಬಲಪಡಿಸಲು ಮತ್ತು ತನ್ನ ಆರ್ಥಿಕ ಹಾಗೂ ವ್ಯೂಹಾತ್ಮಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪಾಕಿಸ್ತಾನ ಸರ್ಕಾರವು ಅಮೆರಿಕದ ಪ್ರಖ್ಯಾತ ಲಾಬಿಯಿಂಗ್ ಸಂಸ್ಥೆಯಾದ ‘ಅರ್ವಿನ್ ಗ್ರೇವ್ಸ್ ಸ್ಟ್ರಾಟಜಿ ಗ್ರೂಪ್’ (Ervin Graves Strategy Group) ಅನ್ನು ನೇಮಕ ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸುದ್ದಿಯಾಗಿದ್ದ ಪಾಕಿಸ್ತಾನ, ಈಗ … Continued

ಗಾಜಾದ ಶೇ.70ರಷ್ಟು ಭಾಗ ವಶಪಡಿಸಿಕೊಳ್ಳಲು ಸೇನೆಗೆ ಇಸ್ರೇಲ್‌ ಪ್ರಧಾನಿ ಸೂಚನೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಇಡೀ ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳಲು ಇಸ್ರೇಲ್ ಸಿದ್ಧತೆ ನಡೆಸಿದೆ. ಗಾಜಾ ಪಟ್ಟಿಯ ಒಟ್ಟು ಭೂಪ್ರದೇಶದ ಪೈಕಿ ಶೇಕಡಾ 70 ರಷ್ಟನ್ನು ತನ್ನ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈಗಾಗಲೇ ಗಾಜಾದ ಬಹುತೇಕ ಜನಸಂಖ್ಯೆಯನ್ನು … Continued

ಇರಾನ್-ಅಮೆರಿಕ ಶಾಂತಿ ಒಪ್ಪಂದದ ಕರಡು ಸಿದ್ಧ: ಇದಕ್ಕೆ ಟ್ರಂಪ್ ಅಂಕಿತವೊಂದೇ ಬಾಕಿ

ವಾಷಿಂಗ್ಟನ್/ತೆಹ್ರಾನ್‌ : ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಇರಾನ್‌-ಅಮೆರಿಕ ಸೇನಾ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು ವಿಸ್ತರಿಸಲು ಹಾಗೂ ಇರಾನಿನ ವಿವಾದಿತ ಪರಮಾಣು ಯೋಜನೆಯ ಕುರಿತು ಪುನಃ ಮಾತುಕತೆ ಆರಂಭಿಸಲು ಉಭಯ ದೇಶಗಳು ಪ್ರಾಥಮಿಕ ಒಪ್ಪಂದವೊಂದನ್ನು ಮಾಡಿಕೊಂಡಿವೆ. ಆದರೆ, ಈ ಪ್ರಸ್ತಾವನೆಗೆ ಅಮೆರಿಕ ಅಧ್ಯಕ್ಷ … Continued

ಹೊಸದಾಗಿ ನೇಮಕಗೊಂಡಿದ್ದ ಹಮಾಸ್‌ ಸೇನಾ ಮುಖ್ಯಸ್ಥನನ್ನು ಹೊಡೆದುರುಳಿಸಿದ ಇಸ್ರೇಲ್‌

ಟೆಲ್‌ ಅವೀವ್‌ : ಸೋಮವಾರ ಉತ್ತರ ಗಾಜಾದಲ್ಲಿ ನಡೆದ ದಾಳಿಯಲ್ಲಿ ಹಮಾಸ್ ಮಿಲಿಟರಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಕಮಾಂಡರ್ ಮೊಹಮ್ಮದ್ ಒಡೆಹ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿದೆ. ಈ ಕುರಿತು ಇಸ್ರೇಲ್ ಸೇನೆ ಹಾಗೂ ಭದ್ರತಾ ಸಂಸ್ಥೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಸಿಎನ್‌ಎನ್ (CNN) ಸುದ್ದಿ ಸಂಸ್ಥೆ ಈ ವರದಿಯನ್ನು ಪ್ರಕಟಿಸಿದೆ. ಕೆಲ ದಿನಗಳ … Continued

ಶಾಂತಿ ಮಾತುಕತೆ ನಡುವೆಯೇ ಇರಾನಿನ ಕ್ಷಿಪಣಿ ನೆಲೆ, ಮೈನ್‌ ಲೇಯಿಂಗ್ ಬೋಟ್‌ಗಳ ಮೇಲೆ ಅಮೆರಿಕ ದಾಳಿ ; ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ

ತೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಮೂರು ತಿಂಗಳಿನಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಕತಾರ್ ರಾಜಧಾನಿ ದೋಹಾದಲ್ಲಿ ಉನ್ನತ ಮಟ್ಟದ ಶಾಂತಿ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕ ಸೇನೆಯು ದಕ್ಷಿಣ ಇರಾನ್ ಮೇಲೆ ಹೊಸದಾಗಿ ವಾಯುದಾಳಿ ನಡೆಸಿದೆ. ಇರಾನ್‌ನ ಪ್ರಮುಖ ಕ್ಷಿಪಣಿ ಉಡಾವಣಾ ನೆಲೆಗಳು ಹಾಗೂ ಪರ್ಷಿಯನ್ ಕೊಲ್ಲಿಯಲ್ಲಿ ಮೈನ್‌ಗಳನ್ನು (ಸಮುದ್ರ ಬಾಂಬ್) ಇಡಲು ಯತ್ನಿಸುತ್ತಿದ್ದ … Continued

ಮೈ ಜುಂ ಎನ್ನುವ ವಿಡಿಯೋ | ಆಕಾಶದಲ್ಲಿ ಪ್ಯಾರಾಗ್ಲೈಡರ್‌ಗೆ ಡಿಕ್ಕಿ ಹೊಡೆದ ವಿಮಾನ ; ಪವಾಡಸದೃಶವಾಗಿ ಪಾರಾದ ಮಹಿಳೆ !

ವಿಯೆನ್ನಾ: ಆಸ್ಟ್ರಿಯಾದ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಹಾರಾಟ ನಡೆಸುತ್ತಿದ್ದ ಪ್ಯಾರಾಗ್ಲೈಡರ್‌ಗೆ ಸಣ್ಣ ಪ್ರವಾಸಿ ವಿಮಾನವೊಂದು ನೇರವಾಗಿ ಢಿಕ್ಕಿ ಹೊಡೆದ ಅತ್ಯಂತ ಭಯಾನಕ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವಿಮಾನದ ರೆಕ್ಕೆ ಬಡಿದ ರಭಸಕ್ಕೆ ಪ್ಯಾರಾಗ್ಲೈಡರ್‌ನ ಕ್ಯಾನೋಪಿ (ಮೇಲ್ಛಾವಣಿ) ಎರಡು ಭಾಗಗಳಾಗಿ ಸೀಳಿದ್ದು, ಪ್ಯಾರಾಗ್ಲೈಡರ್ ಸವಾರಿ ಮಾಡುತ್ತಿದ್ದ ಮಹಿಳೆ ಕಿರುಚುತ್ತಾ ಆಕಾಶದಿಂದ ಕೆಳಗೆ ಬಂದು ಭೂಮಿ ಮೇಲೆ … Continued

ಜಾಗತಿಕ ತೈಲ ಬಿಕ್ಕಟ್ಟಿಗೆ ಮುಕ್ತಿ ? ಶಾಂತಿ ಒಪ್ಪಂದವಾದ 30 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ಹಡುಗು ಸಂಚಾರಕ್ಕೆ ಮುಕ್ತ ಎಂದ ಇರಾನ್ !

ವಾಷಿಂಗ್ಟನ್/ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೀಕರ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ಐತಿಹಾಸಿಕ ಒಪ್ಪಂದವೊಂದಕ್ಕೆ ಅತ್ಯಂತ ಹತ್ತಿರವಾಗಿದ್ದು, ಜಾಗತಿಕ ಮಟ್ಟದಲ್ಲಿ ಶಾಂತಿಯ ಭರವಸೆ ಮೂಡಿದೆ. ಈ ಮಹತ್ವದ ಒಪ್ಪಂದ ಜಾರಿಯಾದ 30 ದಿನಗಳ ಒಳಗಾಗಿ ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ವಾಣಿಜ್ಯ ಹಡಗುಗಳ ಸಂಚಾರವು … Continued

ವಿಡಿಯೋಗಳು | ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್‌ ತತ್ತರ ; ಕೀವ್‌ನಲ್ಲಿ ಮಹಾವಿನಾಶ ; ಈ ʼಒರೆಶ್ನಿಕ್ʼ ಕ್ಷಿಪಣಿ ಮಹಾಘಾತಕ ಯಾಕೆ ?

ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದ್ದು, ಇತ್ತೀಚಿನ ವಾರಗಳಲ್ಲೇ ಅತ್ಯಂತ ಭೀಕರ ಎನ್ನಲಾದ ದಾಳಿಗೆ ಉಕ್ರೇನ್ ರಾಜಧಾನಿ ಕೀವ್ ತತ್ತರಗೊಂಡಿದೆ. ರಷ್ಯಾ ಆಕ್ರಮಿತ ಪೂರ್ವ ಉಕ್ರೇನ್‌ ಮೇಲೆ ಇತ್ತೀಚೆಗೆ ನಡೆದ ದಾಳಿಗಳಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೀವ್ ನಗರದ ಮೇಲೆ ರಷ್ಯಾ ರಾಕೆಟ್ … Continued

ಶಾಂತಿ ಒಪ್ಪಂದದತ್ತ ಇರಾನ್‌-ಅಮೆರಿಕ ? ಹಾರ್ಮುಜ್ ಜಲಸಂಧಿ ಮುಕ್ತ-ಯುರೇನಿಯಂ ಸಂಗ್ರಹ ಹಸ್ತಾಂತರಕ್ಕೆ ಒಪ್ಪಿದ ಇರಾನ್‌-ವರದಿ

ವಾಷಿಂಗ್ಟನ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ತೀವ್ರ ಸಂಘರ್ಷಕ್ಕೆ  ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕದೊಂದಿಗೆ ಏರ್ಪಡುತ್ತಿರುವ ಹೊಸ ಶಾಂತಿ ಒಪ್ಪಂದದ ಭಾಗವಾಗಿ ತನ್ನಲ್ಲಿರುವ ಅತ್ಯಂತ ಹೆಚ್ಚು ಪುಷ್ಟೀಕರಿಸಿದ (Highly Enriched) ಯುರೇನಿಯಂ ಸಂಗ್ರಹವನ್ನು ಸಂಪೂರ್ಣವಾಗಿ ಬಿಟ್ಟುಕೊಡಲು ಇರಾನ್ ಒಪ್ಪಿಕೊಂಡಿದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. … Continued