ಆಲ್ಬೇನಿಯಾ ಎಐ (AI)ಯ ಮಾನವರೂಪಿ ಸಚಿವೆ ‘ಡಯೆಲ್ಲಾ’ 83 ‘ಮಕ್ಕಳ ಗರ್ಭಿಣಿ…! ಪ್ರಧಾನಿಯ ಅಚ್ಚರಿ ಘೋಷಣೆ

ಆಲ್ಬೇನಿಯಾ ದೇಶದ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಯಾದ ಮಾನವರೂಪಿ ಸಚಿವೆ, ‘ಡಯೆಲ್ಲಾ’ (Diella) ಗರ್ಭಿಣಿಯಾಗಿದ್ದಾಳೆ ಎಂದು ಪ್ರಧಾನ ಮಂತ್ರಿ ಎಡಿ ರಾಮಾ ಅವರು ಘೋಷಿಸಿದ್ದಾರೆ. ಹಾಗೂ ಸಂಸತ್ತಿನ ಪ್ರತಿ ಸದಸ್ಯರಿಗೂ ಒಬ್ಬರಂತೆ ಒಟ್ಟು 83 ‘ಮಕ್ಕಳಿಗೆ ಜನ್ಮನೀಡುವ ನಿರೀಕ್ಷೆಯಿದೆ ಎಂದು ಬಹಿರಂಗಪಡಿಸಿದ್ದಾರೆ. ಬರ್ಲಿನ್‌ನಲ್ಲಿ ನಡೆದ ಗ್ಲೋಬಲ್ ಡೈಲಾಗ್ (BGD) ಸಭೆಯಲ್ಲಿ ಮಾತನಾಡಿದ ರಾಮಾ ಅವರು, … Continued

ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್‌ ಖಾನ್‌ ರನ್ನು ಭಯೋತ್ಪಾದಕ ಎಂದು ಕರೆದ ಪಾಕಿಸ್ತಾನ…! ಕಾರಣ..?

ರಿಯಾದ್: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಬಲೂಚಿಸ್ತಾನದ ಬಗ್ಗೆ ನೀಡಿದ ಹೇಳಿಕೆ ಪಾಕಿಸ್ತಾನದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ವರದಿಗಳ ಪ್ರಕಾರ, ಪಾಕಿಸ್ತಾನ ಸರ್ಕಾರವು ನಟನಿಗೆ ಭಯೋತ್ಪಾದಕ ಎಂಬರ್ಥದಲ್ಲಿ ಹಣೆಪಟ್ಟಿ ಕಟ್ಟಲಾಗಿದೆ. ಪಾಕಿಸ್ತಾನವು ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದನಾ ವಿರೋಧಿ ಕಾಯ್ದೆಯ (1997) 4 ನೇ ಶೆಡ್ಯೂಲ್‌ ಅಡಿಯಲ್ಲಿ ಇರಿಸಿದೆ ಎಂದು ಆರೋಪಿಸಲಾಗಿದೆ. ಈ ಶೆಡ್ಯೂಲ್‌ … Continued

ಪೊಲೀಸ್‌ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ; ಅಂಗೈನಲ್ಲಿ ಡೆತ್‌ ನೋಟ್‌ ಬರೆದಿಟ್ಟು ವೈದ್ಯೆ ಆತ್ಮಹತ್ಯೆ

ಮುಂಬೈ: ಪೊಲೀಸ್‌ ಅಧಿಕಾರಿಗಳ ಮೇಲೆ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಹೊರಿಸಿ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಸತಾರಾದ ಹೋಟೇಲ್‌ನಲ್ಲಿ ನಡೆದಿದೆ. ಅವರು ತಮ್ಮ ಕೈಯಲ್ಲಿ ಆತ್ಮಹತ್ಯಾ ಪತ್ರ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಡ್ ಜಿಲ್ಲೆಯ ಮೂಲದ ಮತ್ತು ಫಲ್ಟನ್ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ನಿಯೋಜಿತರಾಗಿದ್ದ … Continued

ಹೈದರಾಬಾದ್-ಬೆಂಗಳೂರು ಬಸ್ಸಿನಲ್ಲಿ ಬೆಂಕಿ ; 19 ಜನರು ಸಾವು

ಕರ್ನೂಲ್ (ಆಂಧ್ರಪ್ರದೇಶ): ಶುಕ್ರವಾರ ಮುಂಜಾನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಐಷಾರಾಮಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು 19 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್‌ನಲ್ಲಿ 43 ಜನರಿದ್ದರು. ಕರ್ನೂಲ್ ಜಿಲ್ಲೆಯ ಉಲ್ಲಿಂದಕೊಂಡ ಬಳಿ ಬಸ್ ಅಪಘಾತ ಸಂಭವಿಸಿದೆ. ಬಸ್ ಮಧ್ಯರಾತ್ರಿ ಸುಮಾರಿಗೆ ಹೈದರಾಬಾದಿನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತು … Continued

ಕರ್ನಾಟಕದ 12 ಪ್ರಮುಖ ನದಿಗಳ ನೀರು ಕುಡಿಯಲು ಯೋಗ್ಯವಲ್ಲ: ಮಾಲಿನ್ಯ ನಿಯಂತ್ರಣ ಮಂಡಳಿ ಆಘಾತಕಾರಿ ವರದಿ ಬಹಿರಂಗ

 ಬೆಂಗಳೂರು : ಕರ್ನಾಟಕದಾದ್ಯಂತ ನದಿಗಳ ಪರಿಸ್ಥಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಪಿಸಿಬಿ) ರಾಜ್ಯಾದ್ಯಂತ 12 ಪ್ರಮುಖ ನದಿಗಳ ನೀರು ಕುಡಿಯಲು ಅಪಾಯಕಾರಿ ಎಂದು ತೋರಿಸುವ ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಈ ನದಿಗಳ ಉದ್ದಕ್ಕೂ 32 ಬಿಂದುಗಳಿಂದ ಸಂಗ್ರಹಿಸಲಾದ ಮಾದರಿಗಳು ರಾಜ್ಯದ ಯಾವುದೇ ನದಿಯೂ ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ … Continued

“ಸಿದ್ದರಾಮಯ್ಯ ರಾಜಕೀಯ ಜೀವನದ ಕೊನೆ ಹಂತದಲ್ಲಿದ್ದಾರೆ ಎಂದ ಪುತ್ರ ; ಸಂಭಾವ್ಯ ಉತ್ತರಾಧಿಕಾರಿ ಯಾರೆಂದು ಹೇಳಿದ ಯತೀಂದ್ರ : ರಾಜಕೀಯದಲ್ಲಿ ಸಂಚಲನ…!

ಬೆಂಗಳೂರು/ಬೆಳಗಾವಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಿರಂತರ ಊಹಾಪೋಹಗಳು ಕೇಳಿಬರುತ್ತಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ ಮತ್ತು ಸಚಿವ ಸತೀಶ ಜಾರಕಿಹೊಳಿ ಅವರಂತಹವರಿಗೆ ‘ಮಾರ್ಗದರ್ಶಕರಾಗಿ’ರಬೇಕು ಎಂದು ಯತೀಂದ್ರ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ … Continued

ಜನವರಿಯಿಂದ ವಾಟ್ಸಾಪ್‌ನಲ್ಲಿ ಸಾಮಾನ್ಯ ಬಳಕೆಯ ಎಐ (AI) ಚಾಟ್‌ಬಾಟ್‌ ಗಳಿಗೆ ನಿಷೇಧ…!

ಮೆಟಾ ಪ್ಲಾಟ್‌ಫಾರ್ಮ್ಸ್ ಒಡೆತನದ ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸಾಪ್ (WhatsApp) ತನ್ನ ಪಾಲಿಸಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ನು ಮುಂದೆ ಸಾಮಾನ್ಯ ಉದ್ದೇಶದ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್‌ಗಳನ್ನು ತನ್ನ ವೇದಿಕೆಯ ಮೇಲೆ ನಿಷೇಧಿಸಲು ಅದು ನಿರ್ಧರಿಸಿದೆ. ಈ ಹೊಸ ನಿಯಮವು ಜನವರಿ 15, 2026 ರಿಂದ ಜಾರಿಗೆ ಬರಲಿದೆ. ವಾಟ್ಸಾಪ್ ತನ್ನ … Continued

ಹಿಂದಿ ಸಿನೆಮಾದ ಖ್ಯಾತ ಹಾಸ್ಯನಟ ಅಸ್ರಾನಿ ನಿಧನ

ಮುಂಬೈ: ಅಸ್ರಾನಿ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಬಾಲಿವುಡ್‌ ಹಿರಿಯ ನಟ ಗೋವರ್ಧನ್ ಅಸ್ರಾನಿ ಸೋಮವಾರ ಸಂಜೆ (ಅಕ್ಟೋಬರ್‌ 20) ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದಾಗಿ ಐದು ದಿನಗಳ ಕಾಲ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ತಮ್ಮ ಅಭಿಮಾನಿಗಳಿಗೆ ಇನ್​ಸ್ಟಾಗ್ರಾಂನಲ್ಲಿ ದೀಪಾವಳಿಯ (Deepavali) ಶುಭಾಶಯಗಳನ್ನು ಕೋರಿದ್ದರು. ಅದಾದ … Continued

ಅಯೋಧ್ಯೆ ದೀಪೋತ್ಸವ : ಬೆಳಗಿದ 26.17 ಲಕ್ಷ ದೀಪಗಳು, 2,128 ಜನರಿಂದ ಆರತಿ ; ಎರಡು ವಿಶ್ವ ದಾಖಲೆ ಸೃಷ್ಟಿ

ಅಯೋಧ್ಯೆ: ಸರಯೂ ನದಿಯ ತಟದಲ್ಲಿ ಭಾನುವಾರ ನಡೆದ ದೀಪೋತ್ಸವದ ಸಂಭ್ರಮದಲ್ಲಿ ದೀಪಾವಳಿ ಹಬ್ಬವು ಮತ್ತೊಮ್ಮೆ ದಾಖಲೆ ಸೃಷ್ಟಿಸುವ ವೈಭವಕ್ಕೆ ಸಾಕ್ಷಿಯಾಯಿತು. ಅಯೋಧ್ಯೆಯ ರಾಮ್ ಕಿ ಪೈಡಿ ಮತ್ತು 56 ಘಾಟ್‌ಗಳಲ್ಲಿ ಒಟ್ಟಿಗೆ ಬರೋಬ್ಬರಿ 26.17 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. ಜೊತೆಗೆ, 2,128 ಮಂದಿ ಏಕಕಾಲದಲ್ಲಿ ‘ಮಹಾ ಆರತಿ’ ಮಾಡುವ ಮೂಲಕ, ಈ ಬಾರಿಯ ದೀಪೋತ್ಸವದಲ್ಲಿ ಎರಡು … Continued

ಕೇಂದ್ರದ 2027ರ ಜನಗಣತಿ ಪ್ರಕ್ರಿಯೆಗೆ ಚಾಲನೆ: ನವೆಂಬರ್ 1 ರಿಂದ 7ರ ವರೆಗೆ ಸ್ವಯಂ ಮಾಹಿತಿ ಸಲ್ಲಿಕೆಗೆ ಅವಕಾಶ

ನವದೆಹಲಿ: ಕೇಂದ್ರ ಸರ್ಕಾರವು 2027ರ ಜನಗಣತಿ (Census) ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿ, ನಾಗರಿಕರು ತಮ್ಮ ವೈಯಕ್ತಿಕ ಮಾಹಿತಿಯನ್ನು 2025ರ ನವೆಂಬರ್ 1 ರಿಂದ 7ರವರೆಗೆ ಡಿಜಿಟಲ್ ಮೂಲಕ ‘ಸ್ವಯಂ-ನಮೂದು’ (Self-enumeration) ವಿಂಡೋದಲ್ಲಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದೆ. ಜನಗಣತಿ-2027ರ ಮೊದಲ ಹಂತವಾದ ಮನೆ ಪಟ್ಟಿ ಮತ್ತು ವಸತಿ ಗಣತಿ (Houselisting and … Continued