ನೇಪಾಳ ಪ್ರವಾಹ ದುರಂತ: ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆ ಶಂಕೆ, ರಕ್ಷಣಾ ಕಾರ್ಯಕ್ಕೆ ಸದ್ಗುರು ಸಜ್ಜು

ನವದೆಹಲಿ/ಕಠ್ಮಂಡು: ನೇಪಾಳದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದಲ್ಲಿ (ಫ್ಲ್ಯಾಶ್ ಫ್ಲಡ್) ಸದ್ಗುರು ಅವರ ಇಶಾ ಫೌಂಡೇಶನ್‌ಗೆ ಸೇರಿದ ಕನಿಷ್ಠ 77 ಯಾತ್ರಿಕರು ನಾಪತ್ತೆಯಾಗಿದ್ದಾರೆ ಎಂಬ ಶಂಕೆ ಇದೆ. ಕೈಲಾಸ-ಮಾನಸಸರೋವರ ಯಾತ್ರೆ ಮುಗಿಸಿ ಟಿಬೆಟ್‌ನಿಂದ ಹಿಂದಿರುಗುತ್ತಿದ್ದ ವೇಳೆ ಅವರು ವಲಸೆ (ಇಮಿಗ್ರೇಶನ್) ಕಚೇರಿಯಲ್ಲಿ ಇದ್ದಾಗ ಈ ದುರಂತ ಸಂಭವಿಸಿದೆ ಎಂದು ಸದ್ಗುರು ಸಾಮಾಜಿಕ ಜಾಲತಾಣದಲ್ಲಿ … Continued

ಆಪರೇಷನ್ ಸಿಂಧೂರ : ಪಾಕ್ ಪರಮಾಣು ನೆಲೆ ಮೇಲೆ ಭಾರತ ದಾಳಿ ಮಾಡಿತ್ತೇ? ಮಾಜಿ ಸಿಡಿಎಸ್‌ ಹೇಳಿದ್ದೇನು..?

ನವದೆಹಲಿ: ಭಾರತವು ಕಳೆದ ವರ್ಷದ ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಸ್ಕಾರ್ದು ವಾಯುನೆಲೆ ಮೇಲೆ ದಾಳಿ ನಡೆಸಲು ಯೋಜಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಉಂಟಾದ ಪ್ರತಿಕೂಲ ಹವಾಮಾನದ ಕಾರಣ ಆ ಕಾರ್ಯಾಚರಣೆಯನ್ನು ಕೈಬಿಡಬೇಕಾಯಿತು ಎಂದು ಭಾರತದ ಮಾಜಿ ರಕ್ಷಣಾ ಸಿಬ್ಬಂದಿ (CDS) ಮುಖ್ಯಸ್ಥ ಜನರಲ್ ಅನಿಲ ಚೌಹಾಣ ಬಹಿರಂಗಪಡಿಸಿದ್ದಾರೆ. ನವದೆಹಲಿಯ ವಿವೇಕಾನಂದ … Continued

ಇರಾನ್‌ಗೆ ಹೊಡೆತ ನೀಡಲು ಅಮೆರಿಕ ಕ್ರಮ ; 4 ಭಾರತೀಯ ಕಂಪನಿಗಳು, 3 ಭಾರತೀಯರ ಮೇಲೆ ನಿರ್ಬಂಧ

ವಾಷಿಂಗ್ಟನ್ : ಇರಾನ್‌ನ ತೈಲ ಮತ್ತು ಪೆಟ್ರೋಕೆಮಿಕಲ್‌ ವ್ಯಾಪಾರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಅಮೆರಿಕವು ಭಾರತ ಮೂಲದ ನಾಲ್ಕು ಕಂಪನಿಗಳು ಹಾಗೂ ಮೂವರು ಭಾರತೀಯ ಪ್ರಜೆಗಳ ವಿರುದ್ಧ ನಿರ್ಬಂಧಗಳನ್ನು (Sanctions) ವಿಧಿಸಿದೆ. ಇರಾನ್‌ ಆಡಳಿತಕ್ಕೆ ಹಣಕಾಸು ಒದಗಿಸುವ ಆದಾಯ ಮೂಲಗಳನ್ನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕ ಆರಂಭಿಸಿರುವ “ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್” (Operation … Continued

ಆಸ್ಪತ್ರೆಯಿಂದ ₹4 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಸಿಸಿಟಿವಿಯಲ್ಲಿ ಬಯಲಾಯ್ತು ‘ನಾಲ್ಕು ಕಾಲಿನ ಕಳ್ಳ’ನ ಕರಾಮತ್ತು !

ಮಂದಸೌರ್ : ಸರ್ಕಾರಿ ಆಸ್ಪತ್ರೆಯಿಂದ ಸುಮಾರು ₹4 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ತಾವು ಹುಡುಕುತ್ತಿದ್ದ “ಕಳ್ಳ” ಮನುಷ್ಯನಲ್ಲ, ಬದಲಿಗೆ ಅಲೆಮಾರಿ ನಾಯಿಯೆಂಬುದು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಕ್ಷಣಕಾಲ ಪೊಲೀಸರೇ ದಂಗಾಗಿದ್ದಾರೆ. ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲಾ ಆಸ್ಪತ್ರೆಯಲ್ಲಿ … Continued

ಮೋದಿ 3.0 ಸಚಿವ ಸಂಪುಟಕ್ಕೆ ಶೀಘ್ರ ಮೇಜರ್ ಸರ್ಜರಿ ? 12 ಖಾಲಿ ಸ್ಥಾನಗಳಿಗೆ ಯಾರಿಗೆ ಅವಕಾಶ, ಯಾರಿಗೆ ಕೊಕ್‌ ?

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಕೆಲದಿನಗಳ ಹಿಂದೆ ತನ್ನ ನೂತನ ರಾಷ್ಟ್ರೀಯ ಪದಾಧಿಕಾರಿಗಳನ್ನು ಘೋಷಿಸಿದ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. 2029ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಜೊತೆಗೆ ಮುಂಬರುವ ವಿವಿಧ ರಾಜ್ಯ ವಿಧಾನಸಭೆ ಚುನಾವಣೆಗಳ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡು … Continued

ಮಾಸ್ಕೋದಲ್ಲಿ ಅಮೆರಿಕ ಸೇನಾ ವಿಮಾನ ಲ್ಯಾಂಡಿಂಗ್‌ ; ʼತನಗೆ ಗೊತ್ತೆ ಇಲ್ಲ’ ಎಂದ ರಷ್ಯಾ ; ಈ ರಹಸ್ಯ ಹಾರಾಟದ ಮರ್ಮವೇನು?

ಮಾಸ್ಕೋ: ಅಮೆರಿಕ ವಾಯುಪಡೆಯ ಬೋಯಿಂಗ್ C-17A ಗ್ಲೋಬ್‌ಮಾಸ್ಟರ್ III (Globemaster III) ಎಂಬ ಭಾರೀ ಸೇನಾ ಸರಕು ಸಾಗಣೆ ವಿಮಾನ ಸೋಮವಾರ ಬೆಳಿಗ್ಗೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಇಳಿದಿರುವುದು ಜಾಗತಿಕ ಮಟ್ಟದಲ್ಲಿ ಕುತೂಹಲ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ವಿಮಾನದ ಆಗಮನದ ಕುರಿತು ರಷ್ಯಾ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಹೇಳಿರುವುದು ಮತ್ತಷ್ಟು ಚರ್ಚೆಗೆ … Continued

ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಕಡ್ಡಾಯ ಆಚರಣೆಯಲ್ಲ’: ಅಲಹಾಬಾದ್ ಹೈಕೋರ್ಟ್

ಲಕ್ನೋ : ಶಾಲೆ ನಿಗದಿಪಡಿಸಿರುವ ಸಮವಸ್ತ್ರದ ಜೊತೆಗೆ ಹಿಜಾಬ್‌ (ತಲೆ ಸ್ಕಾರ್ಫ್‌) ಧರಿಸಲು ಅನುಮತಿ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ತಿರಸ್ಕರಿಸಿದೆ. ಹಿಜಾಬ್‌ ಧರಿಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಮತ್ತು ಕಡ್ಡಾಯ ಆಚರಣೆ ಎಂಬುದನ್ನು ಸಾಬೀತುಪಡಿಸುವ ಸಮರ್ಪಕ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆಗಸ್ಟ್‌ 21ರಂದು ನ್ಯಾಯಮೂರ್ತಿಗಳಾದ … Continued

2026ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕೇರಳದ 19ರ ಹರೆಯದ ಕಾಜಿಯಾ

ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಜೀ ಸ್ಟುಡಿಯೋಸ್‌ನಲ್ಲಿ ಭಾನುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ಅವರು ಪ್ರತಿಷ್ಠಿತ ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟವನ್ನು ತಮ್ಮದಾಗಿಸಿಕೊಂಡರು. ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಸಿದ್ದ 52 ಫೈನಲಿಸ್ಟ್‌ಗಳನ್ನು ಹಿಂದಿಕ್ಕಿ ಕಾಜಿಯಾ ಈ ಗೌರವಕ್ಕೆ ಪಾತ್ರರಾದರು. ಸಮಾರಂಭದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2025ರ ವಿಜೇತೆ … Continued

ಕಾಡಿಗೆ ಬಿಟ್ಟು ಬಂದರೂ ಮತ್ತೆ ಅದೇ ಅರಳಿಮರದ ಜಾಗಕ್ಕೆ ಬಂದ ನಾಗಿಣಿ; ಅದನ್ನು ನೋಡಲು ಜನರ ದಂಡು

ಧಾರ: ಮಧ್ಯಪ್ರದೇಶದ ಧಾರ ಜಿಲ್ಲೆಯ ಗಂಧವಾನಿ ಪ್ರದೇಶದ ಸಣ್ಣ ಗ್ರಾಮವಾದ ಸಾಲಿ ಒಂದು ನಾಗಿಣಿ(ಹೆಣ್ಣು ನಾಗರ ಹಾವು)ಯ ಕಾರಣದಿಂದ ರಾಜ್ಯಾದ್ಯಂತ ಚರ್ಚೆಯ ಕೇಂದ್ರಬಿಂದುವಾಗಿದೆ. ಗ್ರಾಮದ ರಸ್ತೆ ಬದಿಯ ಒಂದೇ ಸ್ಥಳದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ನಾಗಿಣಿ ಗ್ರಾಮಸ್ಥರಲ್ಲಿ ಆಶ್ಚರ್ಯ, ಕುತೂಹಲ ಮತ್ತು ಭಕ್ತಿಭಾವ ಮೂಡಿಸಿದೆ. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆ ರಕ್ಷಿಸಿ ಕಾಡಿಗೆ ಬಿಟ್ಟ … Continued

ಗಂಡನ ಕೊಂದು, ದೇಹ ಕತ್ತರಿಸಿ, ಕರುಳು ಹೊರತೆಗೆದು ಚೀಲದಲ್ಲಿ ತುಂಬುತ್ತಿದ್ದ ಪತ್ನಿ; ಮನೆ ಮಾಲೀಕ ಕಂಡಾಗ ಕಟ್ಟಡದಿಂದ ಜಿಗಿದಳು…

ಕುರುಕ್ಷೇತ್ರ  :  ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ತನ್ನ ಪತಿಯನ್ನು ಕ್ರೂರವಾಗಿ ಹತ್ಯೆ ಮಾಡಿ, ಆತನ ಹೊಟ್ಟೆಯನ್ನು ಬಗೆದು ಕರುಳುಗಳನ್ನು ಹೊರತೆಗೆದಿರುವ ಆರೋಪಿತ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಬಳಿಕ ಘಟನೆ ಬಹಿರಂಗವಾಗುತ್ತಿದ್ದಂತೆ ಆತಂಕಗೊಂಡ ಆಕೆ ಬಾಡಿಗೆ ಮನೆಯ ಮಹಡಿಯಿಂದ ಜಿಗಿದಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಮೃತ ವ್ಯಕ್ತಿಯನ್ನು … Continued